ಸುಶಾಂತ್​ ಪ್ರೇಯಸಿಯನ್ನು 2 ಬಾರಿ ಮಂಚಕ್ಕೆ ಕರೆದಿದ್ದ ಚಿತ್ರರಂಗದ ಕಾಮುಕರು! ಅಂಕಿತಾ ಬಾಯ್ಬಿಟ್ಟ ಕಹಿ ಸತ್ಯ

Ankita Lokhande: ಸುಶಾಂತ್​ ಸಿಂಗ್​ ರಜಪೂತ್​ ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಅವರು ಕೆಲವು ಶಾಕಿಂಗ್​ ಸತ್ಯಗಳನ್ನು ಬಾಯಿ ಬಿಟ್ಟಿದ್ದಾರೆ. ಕಾಸ್ಟಿಂಗ್​ ಕೌಚ್​ ಅನುಭವದ ಬಗ್ಗೆ ಅವರು ಮಾತನಾಡಿದ್ದಾರೆ.

ಸುಶಾಂತ್​ ಪ್ರೇಯಸಿಯನ್ನು 2 ಬಾರಿ ಮಂಚಕ್ಕೆ ಕರೆದಿದ್ದ ಚಿತ್ರರಂಗದ ಕಾಮುಕರು! ಅಂಕಿತಾ ಬಾಯ್ಬಿಟ್ಟ ಕಹಿ ಸತ್ಯ
ಅಂಕಿತಾ ಲೋಖಂಡೆ - ಸುಶಾಂತ್​ ಸಿಂಗ್​ ರಜಪೂತ್
Edited By:

Updated on: Mar 24, 2021 | 3:27 PM

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್​ ಒಂದು ಪಿಡುಗು. ಈ ಬಗ್ಗೆ ಅನೇಕ ನಟಿಯರು ತಮ್ಮ ಕಹಿ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಈಗಿನದ್ದು ನಟಿ ಅಂಕಿತಾ ಲೋಖಂಡೆ ಅವರ ಸರದಿ. ಬಣ್ಣದ ಲೋಕದಲ್ಲಿ ತಾವು ಎದುರಿಸಿದ ಕಾಸ್ಟಿಂಗ್​ ಕೌಚ್​ ಸಮಸ್ಯೆಯ ಕುರಿತು ಅಂಕಿತಾ ಈಗ ಹೇಳಿಕೊಂಡಿದ್ದಾರೆ. ಅಚ್ಚರಿ ಎಂದರೆ ಅವರಿಗೆ ಮೊದಲ ಬಾರಿ ಇಂಥ ಕಹಿ ಅನುಭವ ಆಗಿದ್ದು 19ನೇ ವಯಸ್ಸಿನಲ್ಲಿ!

ನಟಿಯಾಗಿ ಮಿಂಚಬೇಕು ಎಂದುಕೊಂಡಿದ್ದ ಅಂಕಿತಾ ಅವರು 19ನೇ ವಯಸ್ಸಿನಲ್ಲಿ ಅನೇಕ ಆಡಿಷನ್​ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಗ ದಕ್ಷಿಣ ಭಾರತದ ಒಂದು ಸಿನಿಮಾಗೆ ಅವರು ಆಡಿಷನ್​ ನೀಡಿದ್ದರು. ಆ ಸಂದರ್ಭದಲ್ಲಿ ರಾಜಿ ಆಗಬೇಕು ಎಂದು ಹೇಳಲಾಗಿತ್ತಂತೆ. ಆ ಬಗ್ಗೆ ಅಂಕಿತಾ ಈಗ ಸಂದರ್ಶನವೊಂದರಲ್ಲಿ ವಿವರವಾಗಿ ಮಾತನಾಡಿದ್ದಾರೆ.

‘ನಾನು ತುಂಬ ಬುದ್ಧಿವಂತಳಾಗಿದ್ದೆ. ಆಗ ನನಗೆ 19 ಅಥವಾ 20 ವರ್ಷ ವಯಸ್ಸು. ರಾಜಿ ಆಗಬೇಕು ಎಂದರು. ನಿರ್ಮಾಪಕರ​​ ಜೊತೆ ನಾನು ಯಾವ ರೀತಿ ರಾಜಿ ಆಗಬೇಕು? ಪಾರ್ಟಿ ಅಥವಾ ಡಿನ್ನರ್​ಗೆ ಬರಬೇಕಾ ಎಂದು ನೇರವಾಗಿ ಪ್ರಶ್ನಿಸಿದೆ. ಅವರು ಲೈಂಗಿಕವಾಗಿ ನನ್ನನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದಾಗ ನೇರವಾಗಿ ವಿರೋಧಿಸಿದೆ. ನಿಮ್ಮ ಪ್ರೊಡ್ಯೂಸರ್​ಗೆ ಜೊತೆಯಲ್ಲಿ ಮಲಗಲು ಒಬ್ಬಳು ಹುಡುಗಿ ಬೇಕಾಗಿದೆ ಅನಿಸುತ್ತದೆ. ಕೆಲಸ ಮಾಡಲು ಪ್ರತಿಭಾವಂತ ಹುಡುಗಿ ಬೇಕಾಗಿಲ್ಲ ಅಂತ ಹೇಳಿ ಅಲ್ಲಿಂದ ಹೊರಟು ಬಂದೆ’ ಎಂದಿದ್ದಾರೆ ಅಂಕಿತಾ.

ನಂತರ ಅವರು ಹಿಂದಿ ಕಿರುತೆರೆಯ ‘ಪವಿತ್ರ ರಿಷ್ತಾ’ ಧಾರಾವಾಹಿ ಮೂಲಕ ದೊಡ್ಡ ಹೆಸರು ಗಳಿಸಿದರು. ಸುಶಾಂತ್​ ಸಿಂಗ್​ ರಜಪೂತ್​ ಜೊತೆ ತೆರೆಹಂಚಿಕೊಂಡಿದ್ದೂ ಅಲ್ಲದೆ ಪ್ರೀತಿಸಲು ಶುರು ಮಾಡಿದರು. ಬಳಿಕ ಅಂಕಿತಾಗೆ ಸಿನಿಮಾ ಅವಕಾಶ ಬರಲು ಶುರು ಆಯಿತು. ಆಗ ಬಾಲಿವುಡ್​ನ ದೊಡ್ಡ ನಟನಿಂದ ಅವರಿಗೆ ಕಾಸ್ಟಿಂಗ್​ ಕೌಚ್​ ಆಹ್ವಾನ ಬಂತು!

‘ಮತ್ತೆ ನಾನು ಸಿನಿಮಾಗಳಿಗೆ ಮರಳಿ ಬಂದಾಗ ಕಾಸ್ಟಿಂಗ್​ ಕೌಚ್​ ಅನುಭವಾಯಿತು. ಅವನೊಬ್ಬ ದೊಡ್ಡ ನಟ. ಅವನ ಹೆಸರು ಹೇಳಲು ನಾನು ಇಷ್ಟಪಡುವುದಿಲ್ಲ. ಅವನು ಕೈ ಕುಲುಕಿದಾಗಲೇ ನನಗೆ ಅದು ಅರ್ಥವಾಯಿತು. ಕೂಡಲೇ ನಾನು ಕೈ ಹಿಂತೆಗೆದುಕೊಂಡೆ. ನನಗೆ ಅವರಿಂದ ಸಹಾಯ ಆಗುವುದಿಲ್ಲ ಎಂಬುದು ತಿಳಿಯಿತು. ಯಾಕೆಂದರೆ ಅವರದ್ದು ಕೊಡು-ಕೊಳ್ಳುವಿಕೆಯ ವ್ಯವಹಾರ ಆಗಿತ್ತು. ಇದು ನನ್ನಂಥವಳಿಗೆ ಅಲ್ಲ ಅಂದುಕೊಂಡು ಅಲ್ಲಿಂದ ಹೊರಟುಬಂದೆ’ ಎಂದು ಅಂಕಿತಾ ಹೇಳಿದ್ದಾರೆ. ಆ ದೊಡ್ಡ ನಟ ಯಾರು ಇರಬಹುದು ಎಂಬ ಕೌತುಕದ ಪ್ರಶ್ನೆ ಈಗ ಎಲ್ಲರ ಮನದಲ್ಲೂ ಮೂಡಿದೆ.

ಇದನ್ನೂ ಓದಿ: ನನ್ನ ಮನೆ ಸಾಲದ ಕಂತುಗಳನ್ನು ಸುಶಾಂತ್ ಕಟ್ಟಿಲ್ಲ, ನಾನೇ ಕಟ್ತಿರೋದು: ಅಂಕಿತಾ ಲೊಖಂಡೆ

ಸುಶಾಂತ್​ ಸಹೋದರಿ ಮೀತು ಸಿಂಗ್ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಮಾಡಿದ ಬಾಂಬೆ ಹೈಕೋರ್ಟ್​

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us