ಕೊವಿಡ್​ ಇಳಿಮುಖ ಆಗುತ್ತಿದ್ದಂತೆಯೇ ವಿದೇಶಕ್ಕೆ ಹಾರಿದ ರಜನಿಕಾಂತ್​; ಕಾರಣ ಏನು?

|

Updated on: Jun 19, 2021 | 4:39 PM

ದೇಶದಲ್ಲಿ ಕೊವಿಡ್​ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಹಾಗಿದ್ದರೂ ಕೂಡ ರಜನಿಕಾಂತ್​ ಈ ಸಮಯದಲ್ಲಿ ರಿಸ್ಕ್​ ತೆಗೆದುಕೊಂಡು ಅಮೆರಿಕಕ್ಕೆ ಹೋಗಿದ್ದಾರೆ. ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ಅವರ ಫೋಟೋ, ವಿಡಿಯೋ ವೈರಲ್​ ಆಗಿದೆ.

ಕೊವಿಡ್​ ಇಳಿಮುಖ ಆಗುತ್ತಿದ್ದಂತೆಯೇ ವಿದೇಶಕ್ಕೆ ಹಾರಿದ ರಜನಿಕಾಂತ್​; ಕಾರಣ ಏನು?
ರಜನಿಕಾಂತ್​
Follow us on

ಭಾರತೀಯ ಚಿತ್ರರಂಗದ ಸೂಪರ್​ ಸ್ಟಾರ್​ ರಜನಿಕಾಂತ್​ ಅವರು ಶನಿವಾರ (ಜೂ.19) ಮುಂಜಾನೆ ಸದ್ದಿಲ್ಲದೇ ವಿದೇಶಕ್ಕೆ ಹಾರಿದ್ದಾರೆ. ಇಷ್ಟು ದಿನಗಳ ಕಾಲ ದೇಶದಲ್ಲಿ ಕೊರೊನಾ ಎರಡನೇ ಅಲೆ ತಾಂಡವ ಆಡುತ್ತಿತ್ತು. ಈಗ ನಿಧಾನಕ್ಕೆ ಪರಿಸ್ಥಿತಿ ಸುಧಾರಿಸುತ್ತಿದೆ. ಈ ಸಂದರ್ಭದಲ್ಲಿ ರಜನಿಕಾಂತ್ ಅಮೆರಿಕಕ್ಕೆ ತೆರಳಿದ್ದಾರೆ. ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಕೆಲವು ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ರಜನಿಕಾಂತ್​ ಜೊತೆ ಅವರ ಪತ್ನಿ ಲತಾ ಕೂಡ ಅಮೆರಿಕದ ವಿಮಾನ ಹತ್ತಿದ್ದಾರೆ.

ಅಷ್ಟಕ್ಕೂ ರಜನಿಕಾಂತ್​ ಹೀಗೆ ಏಕಾಏಕಿ ಅಮೆರಿಕಕ್ಕೆ ತೆರಳಿರುವುದು ಏಕೆ? ಯಾವುದೇ ಸಿನಿಮಾ ಶೂಟಿಂಗ್​ ಸಲುವಾಗಿ ಅವರು ಅಲ್ಲಿಗೆ ಹೋಗಿಲ್ಲ. ಬದಲಿಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಹೋಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಆರೋಗ್ಯ ತಪಾಸಣೆ ಎಂದ ಮಾತ್ರಕ್ಕೆ ಅಭಿಮಾನಿಗಳು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಕೂಡ ಇಲ್ಲ. ಅವರು ಚೆನ್ನಾಗಿಯೇ ಇದ್ದಾರೆ. ಸಹಜವಾಗಿ ಕೆಲವು ಚೆಕಪ್​ ಮತ್ತು ಟೆಸ್ಟ್​ ಮಾಡಿಸಿಕೊಳ್ಳಲು ಅವರು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ದೇಶದಲ್ಲಿ ಕೊವಿಡ್​ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಹಾಗಿದ್ದರೂ ಕೂಡ ರಜನಿಕಾಂತ್​ ಈ ಸಮಯದಲ್ಲಿ ರಿಸ್ಕ್​ ತೆಗೆದುಕೊಂಡು ಆರೋಗ್ಯ ತಪಾಸಣೆಗಾಗಿ ಅಮೆರಿಕಕ್ಕೆ ಹೋಗಿದ್ದಾರೆ ಎಂದರೆ ಏನೋ ಸಮಸ್ಯೆ ಖಂಡಿತಾ ಇರಬೇಕು ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕೊರೊನಾ ವೈರಸ್​ ಎರಡನೇ ಅಲೆ ಜೋರಾದ ನಂತರದಲ್ಲಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ರಜನಿಕಾಂತ್​ ನಟಿಸುತ್ತಿದ್ದ ‘ಅಣ್ಣಾಥೆ’ ಸಿನಿಮಾದ ಕೆಲಸಗಳಿಗೆ ಕೊರೊನಾ ವೈರಸ್​ ಕಾರಣದಿಂದ ಬ್ರೇಕ್​ ಹಾಕಲಾಗಿದೆ. ರಾಜಕೀಯದ ಚಟುವಟಿಕೆಗಳಿಂದಲೂ ಅವರು ಸದ್ಯಕ್ಕೆ ಹಿಂದೆ ಸರಿದಿದ್ದಾರೆ. ರಜನಿಕಾಂತ್​ ಅಳಿಯ, ನಟ ಧನುಷ್​ ಅವರು ತಮ್ಮ ಹಾಲಿವುಡ್​ ಸಿನಿಮಾ ಶೂಟಿಂಗ್​ ಸಲುವಾಗಿ ಈ ಮೊದಲೇ ಕುಟುಂಬ ಸಮೇತ ಅಮೆರಿಕಕ್ಕೆ ತೆರಳಿದ್ದರು. ರಜನಿಕಾಂತ್​ ಅವರ ಆರೋಗ್ಯ ತಪಾಸಣೆ ವೇಳೆ ಅವರು ಜೊತೆಗಿರಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಜು.8ರಂದು ಅವರು ಭಾರತಕ್ಕೆ ವಾಪಸ್​ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:

Rajinikanth: ನಿವೃತ್ತಿ ಬಗ್ಗೆ ಕೊನೆಗೂ ಮೌನ ಮುರಿದ ರಜನಿಕಾಂತ್​; ಅವರ ಕೊನೆಯ ಚಿತ್ರ ಯಾವುದು?

ಅಣ್ಣಾಥೆ ಶೂಟಿಂಗ್ ಮುಗಿದ ಬೆನ್ನಲ್ಲೇ ಕೊವಿಡ್ ಎರಡನೇ ಡೋಸ್ ಲಸಿಕೆ ಪಡೆದ ರಜನಿಕಾಂತ್