ನಟಿ ಅನುಪಮಾ ಪರಮೇಶ್ವರನ್ (Anupama Parameshwaran) ಪಕ್ಕದಮನೆ ಹುಡುಗಿ ರೀತಿಯ ಪಾತ್ರ ಮಾಡಿ ಗಮನ ಸೆಳೆದವರು. ಈ ರೀತಿ ಪಾತ್ರಗಳ ಮೂಲಕ ಅವರು ಸಾಕಷ್ಟು ಇಷ್ಟವಾಗಿದ್ದಾರೆ. ಇತ್ತೀಚೆಗೆ ಅವರು ಬೋಲ್ಡ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳೋಕೆ ಆರಂಭಿಸಿದ್ದಾರೆ. ‘ರೌಡಿ ಬಾಯ್ಸ್’ ಚಿತ್ರದಲ್ಲಿ ಲಿಪ್ ಲಾಕ್ ದೃಶ್ಯಗಳು ಇದ್ದವು. ಆದರೆ, ಈ ಸಿನಿಮಾ ಅಷ್ಟು ಗಮನ ಸೆಳೆಯಲಿಲ್ಲ. ಈಗ ಅವರು ‘ಟಿಲ್ಲು ಸ್ಕ್ವೇರ್’ ಚಿತ್ರದಲ್ಲಿ ಮತ್ತೆ ಹಾಟ್ ಅವತಾರ ತಾಳಿದ್ದಾರೆ. ಈ ಬಾರಿಯಾದರೂ ಅನುಪಮಾಗೆ ಯಶಸ್ಸು ಸಿಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.
‘ಟಿಲ್ಲು ಸ್ಕ್ವೇರ್’ ಚಿತ್ರದಲ್ಲಿ ಸಿದ್ದು ಜೊನ್ನಲಗಡ್ಡ ಹಾಗೂ ಅನುಪಮಾ ಪರಮೇಶ್ವರನ್ ಅವರು ನಟಿಸಿದ್ದಾರೆ. ಇದು 2022ರಲ್ಲಿ ಬಂದ ‘ಡಿಜೆ ಟಿಲ್ಲು’ ಚಿತ್ರದ ಸೀಕ್ವೆಲ್. ಮೊದಲ ಭಾಗದಲ್ಲಿ ಸಿದ್ದುಗೆ ಜೊತೆಯಾಗಿ ನೇಹಾ ಶೆಟ್ಟಿ ನಟಿಸಿದ್ದರು. ಈ ಬಾರಿ ಅನುಪಮಾ ಪರಮೇಶ್ವರನ್ ಅವರ ಆಗಮನ ಆಗಿದೆ. ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ನಟಿ ಅನುಪಮಾ ಪರಮೇಶ್ವರನ್ ಮನೆಯಲ್ಲಿ ಅದ್ದೂರಿಯಾಗಿದೆ ದೀಪಾವಳಿ ಹಬ್ಬ
ಮಾರ್ಚ್ 29ರಂದು ‘ಟಿಲ್ಲು ಸ್ಕ್ವೇರ್’ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಅನುಪಮಾ ಅವರ ಲಿಪ್ ಲಾಕ್ ದೃಶ್ಯಗಳ ಮೂಲಕ ಗಮನ ಸೆಳೆದಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಇತ್ತೀಚೆಗಷ್ಟೇ ಅವರ ನಟನೆಯ ‘ಈಗಲ್’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ. ಈ ಬೆನ್ನಲ್ಲೇ ಅವರ ಮತ್ತೊಂದು ಸಿನಿಮಾ ರಿಲೀಸ್ಗೆ ರೆಡಿ ಇದೆ. ‘ಟಿಲ್ಲು ಸ್ಕ್ವೇರ್’ ಚಿತ್ರವನ್ನು ಮಲ್ಲಿಕ್ ರಾಮ್ ನಿರ್ದೇಶನ ಮಾಡಿದ್ದು, ಸೂರ್ಯದೇವರ ನಾಗ ವಂಶಿ ಅವರು ನಿರ್ಮಾಣ ಮಾಡಿದ್ದಾರೆ.
ಅನುಪಮಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2015ರಲ್ಲಿ. ಅವರ ನಟನೆಯ ಮೊದಲ ಸಿನಿಮಾ ‘ಪ್ರೇಮಂ’. ಈ ಚಿತ್ರ ಸೂಪರ್ ಹಿಟ್ ಆಯಿತು. ಅಲ್ಲಿಂದ ಅನುಪಮಾ ಖ್ಯಾತಿ ಹೆಚ್ಚಿತು. ಅವರಿಗೆ ಪಕ್ಕದ ಮನೆ ಹುಡುಗಿ ರೀತಿಯ ಪಾತ್ರಗಳೇ ಹೆಚ್ಚು ಹುಡುಕಿ ಬಂದವು. ಅವರು ಕನ್ನಡದಲ್ಲೂ ನಟಿಸಿದ್ದಾರೆ. ಪುನೀತ್ ರಾಜ್ಕುಮಾರ್ ನಟನೆಯ ‘ನಟಸಾರ್ವಭೌಮ’ ಚಿತ್ರದಲ್ಲಿ ಅನುಪಮಾ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಸ್ಯಾಂಡಲ್ವುಡ್ ಮಂದಿಗೂ ಪರಿಚಯ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ