
ಅನುಷ್ಕಾ ಶರ್ಮಾ (Anushka Sharma) ಹಾಗೂ ವಿರಾಟ್ ಕೊಹ್ಲಿ ಸದ್ಯ ಲಂಡನ್‌ನಲ್ಲಿ ಸೆಟಲ್ ಆಗಿದ್ದಾರೆ. ಈ ಮೊದಲು ಅವರು ಕ್ರಿಕೆಟ್ ಸರಣಿಗಳನ್ನು ಪೂರ್ಣಗೊಳಿಸಿ ಲಂಡನ್ ವಿಮಾನ ಏರುತ್ತಿದ್ದರು. ಈ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ದವು. ಕಳೆದ ವರ್ಷ ಅವರು ಈ ನಿರ್ಧಾರ ತೆಗೆದುಕೊಂಡಿದ್ದರು. ಇದರ ಹಿಂದಿನ ಕಾರಣ ಏನು ಎಂಬುದನ್ನು ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೆನೆ ಅವರು ವಿವರಿಸಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಯೂಟ್ಯೂಬ್ ಚಾನೆಲ್ನ ಶ್ರೀರಾಮ್ ಅವರು ನಡೆಸುತ್ತಾರೆ. ಇದಕ್ಕೆ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಅವರನ್ನು ಕರೆದಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ ಡಾಕ್ಟರ್ ಶ್ರೀರಾಮ್. ಅನುಷ್ಕಾ ಶರ್ಮಾ ಜೊತೆಗೆ ತಾವು ಆಡಿದ ಮಾತುಗಳನ್ನು ಶ್ರೀರಾಮ್ ಅವರು ನೆನಪಿಸಿಕೊಂಡಿದ್ದಾರೆ.
‘ನಾನು ನಿಮಗೆ ಒಂದು ವಿಚಾರ ಹೇಳಬೇಕು. ಅನುಷ್ಕಾ ಶರ್ಮಾ ಜೊತೆ ನಾನು ಚರ್ಚೆ ಮಾಡಿದ್ದೆ. ಅವರು ಲಂಡನ್ಗೆ ಹೋದರು. ಅವರ ಯಶಸ್ಸನ್ನು ಎಂಜಾಯ್ ಮಾಡಲು ಇಲ್ಲಿ ಸಾಧ್ಯವಿಲ್ಲ. ಅವರು ಏನೇ ಮಾಡಿದರೂ ಚರ್ಚೆ ಆಗುತ್ತದೆ’ ಎಂದಿದ್ದಾರೆ ಶ್ರೀರಾಮ್.
ಈ ನಿರ್ಧಾರ ತೆಗೆದುಕೊಳ್ಳುವುದರ ಹಿಂದೆ ಮಕ್ಕಳು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಅನುಷ್ಕಾ ಶರ್ಮಾ ಮಕ್ಕಳಾದ ವಮಿಕಾ ಹಾಗೂ ಅಕಾಯ್ ಬೆಳೆದು ದೊಡ್ಡವರಾಗುತ್ತಿದ್ದಾರೆ. ಅವರನ್ನು ಶಾಲೆಗೆ ಸೇರಿಸುವ ವರ್ಷಗಳು ಹತ್ತಿರ ಬರುತ್ತಿವೆ. ಭಾರತದಲ್ಲಿ ಅವರನ್ನು ಶಾಲೆಗೆ ಸೇರಿಸಿದರೆ ಅವುಗಳ ಮೇಲೆ ಇದರ ಪ್ರಭಾವ ಇರುತ್ತದೆ. ಈ ಭಯ ಅವರನ್ನು ಕಾಡಿದೆ.
‘ನಾನು ಎಲ್ಲರ ಜೊತೆ ಬೆರೆಯುತ್ತೇನೆ. ಹಾಗಿದ್ದರೂ ಕೆಲವೊಮ್ಮೆ ಪರಿಸ್ಥಿತಿ ಚಾಲೆಂಜಿಂಗ್ ಆಗಿ ಇರುತ್ತದೆ. ಎಲ್ಲರಿಗೂ ಅವರದ್ದೇ ಆದ ಸಮಯ ಬೇಕು. ಅನುಷ್ಕಾ ಹಾಗೂ ಕೊಹ್ಲಿ ತಮ್ಮ ಮಕ್ಕಳನ್ನು ಸಾಮಾನ್ಯರಂತೆ ಬೆಳೆಸಲು ಪ್ರಯತ್ನಿಸುತ್ತಾರೆ’ ಎಂದಿದ್ದಾರೆ ಶ್ರೀರಾಮ್.
ಇದನ್ನೂ ಓದಿ: ಮಾಧುರಿ ದೀಕ್ಷಿತ್ನ ಮದುವೆ ಆದ ಡಾಕ್ಟರ್ಗೆ ಎದುರಾದ ಸಮಸ್ಯೆ ಒಂದೆರಡಲ್ಲ
ಅನುಷ್ಕಾ ಹಾಗೂ ವಿರಾಟ್ ಮೊದಲ ಬಾರಿಗೆ ಭೇಟಿ ಆಗಿದ್ದು 2013ರಲ್ಲಿ. ಇವರ ಮಧ್ಯೆ ಪ್ರೀತಿ ಮೂಡಿತು. 2017ರಲ್ಲಿ ಇವರು ಮದುವೆ ಆದರು. ಈಗ ಇವರಿಗೆ ಇಬ್ಬರು ಮಕ್ಕಳು. ಆದರೆ, ಭಾರತದಲ್ಲಿ ಖಾಸಗಿತನಕ್ಕೆ ಸಾಕಷ್ಟು ತೊಂದರೆ ಆಗಬಹುದು ಎನ್ನುವ ಭಯ ಕಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.