AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನಲ್ಲಿ ಮತ್ತೊಂದು ಆಫರ್ ಗಿಟ್ಟಿಸಿಕೊಂಡ ಶ್ರೀಲೀಲಾ; ರಶ್ಮಿಕಾ ಹೀರೋಗೆ ನಾಯಕಿ

ಕನ್ನಡದ ನಟಿ ಶ್ರೀಲೀಲಾ ಅವರಿಗೆ ಬಾಲಿವುಡ್‌ನಿಂದ ಮತ್ತೊಂದು ದೊಡ್ಡ ಆಫರ್ ಸಿಕ್ಕಿದೆ. ಬಾಲಿವುಡ್ ಸ್ಟಾರ್ ಹೀರೋ ಚಿತ್ರದಲ್ಲಿ ನಾಯಕಿಯಾಗಿ ಅವರು ನಟಿಸುವ ಸಾಧ್ಯತೆಯಿದೆ. ಇದು ರಶ್ಮಿಕಾ ಮಂದಣ್ಣ ಅವರ ಬಾಲಿವುಡ್‌ನ ಯಶಸ್ಸಿನಂತೆ ಶ್ರೀಲೀಲಾ ಅವರ ಭವಿಷ್ಯಕ್ಕೂ ಹೊಸ ಅವಕಾಶಗಳನ್ನು ತೆರೆಯಬಹುದು .

ಬಾಲಿವುಡ್​ನಲ್ಲಿ ಮತ್ತೊಂದು ಆಫರ್ ಗಿಟ್ಟಿಸಿಕೊಂಡ ಶ್ರೀಲೀಲಾ; ರಶ್ಮಿಕಾ ಹೀರೋಗೆ ನಾಯಕಿ
ಶ್ರೀಲೀಲಾ-ರಶ್ಮಿಕಾ
ರಾಜೇಶ್ ದುಗ್ಗುಮನೆ
|

Updated on: Apr 26, 2025 | 8:31 PM

Share

ಕನ್ನಡದ ನಟಿ ಶ್ರೀಲೀಲಾ (Sree Leela) ಅವರು ಟಾಲಿವುಡ್​ನಲ್ಲಿ ಆಳ್ವಿಕೆ ನಡೆಸಿ, ಬಾಲಿವುಡ್​ನತ್ತ ಮುಖ ಮಾಡಿದ್ದಾರೆ. ಅವರು ಅಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಈಗ ಅವರಿಗೆ ಬಾಲಿವುಡ್​ನಿಂದ ಮತ್ತೊಂದು ಬಂಪರ್ ಆಫರ್ ಬಂದಿದೆ. ಹಿಂದಿಯ ಸ್ಟಾರ್ ಹೀರೋ ಜೊತೆ ನಟಿಸೋ ಆಫರ್ ಅವರಿಗೆ ಸಿಕ್ಕಿದೆ. ಇದನ್ನು ಅವರು ಖುಷಿಯಿಂದ ಒಪ್ಪಿಕೊಂಡು ನಟಿಸುತ್ತಿದ್ದಾರೆ ಎಂದು ವರದಿ ಆಗಿದೆ. ರಶ್ಮಿಕಾ ಮಂದಣ್ಣ ರೀತಿ ಅವರು ಮುಂದೆ ಬಾಲಿವುಡ್​ನಲ್ಲೇ ಸೆಟಲ್ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

‘ಡ್ರೀಮ್ ಗರ್ಲ್’ ಖ್ಯಾತಿಯ ರಾಜ್ ಶಾಂಡಿಲ್ಯ ಅವರು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದಕ್ಕೆ ಸಿದ್ದಾರ್ಥ್ ಮಲ್ಹೋತ್ರ ಅವರು ಹೀರೋ. ಈ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ. ಶ್ರೀಲೀಲಾ ಹಾಗೂ ಅನನ್ಯಾ ಪಾಂಡೆ ಜೊತೆ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ. ಈ ಮೂಲಕ ಶ್ರೀಲೀಲಾಗೆ ದೊಡ್ಡ ಆಫರ್​ ಒಂದು ಸಿಕ್ಕಂತೆ ಆಗಿದೆ.

‘ಡ್ರೀಮ್ ಗರ್ಲ್​’ ಚಿತ್ರಕ್ಕೆ ಕಾರ್ತಿಕ್ ಆರ್ಯನ್ ಹೀರೋ. ಪಕ್ಕಾ ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಈ ರೀತಿಯ ಸಿನಿಮಾಗಳ ಮೂಲಕ ನಿರ್ದೇಶಕ ರಾಜ್ ಅವರು ಫೇಮಸ್ ಆಗಿದ್ದಾರೆ. ಈಗ ಬರಲಿರೋ ಸಿನಿಮಾದಲ್ಲೂ ಭರ್ಜರಿ ಕಾಮಿಡಿ ಇರಲಿದೆ. ಈ ಚಿತ್ರಕ್ಕೆ ಇಬ್ಬರು ನಾಯಕಿಯರು. ಈ ಕಾರಣಕ್ಕೆ ಶ್ರೀಲೀಲಾ ಹಾಗೂ ಅನನ್ಯಾ ಪಾಂಡೆ ಜೊತೆ ಮಾತುಕತೆ ನಡೆಯುತ್ತಿವೆ.

ಇದನ್ನೂ ಓದಿ
Image
ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನ ಖುಷಿ ಸುದ್ದಿ ಕೊಟ್ಟ ಸೋನಾಕ್ಷಿ-ಜಹೀರ್
Image
ಶ್ರೀನಿಧಿ ಶೆಟ್ಟಿ ಹಾಗೂ ಯಶ್ ಬಗ್ಗೆ ತಪ್ಪು ತಿಳಿದುಕೊಂಡಿದ್ದ ಫ್ಯಾನ್ಸ್
Image
‘ಉಗ್ರ ಸಿಕ್ಕಿದ್ದ, ಕುರಾನ್ ಓದಿಲ್ಲ ಎಂದು ಕಿರುಕುಳ ನೀಡಿದ್ದ’; ನಟಿ ಏಕ್ತಾ
Image
‘ಕೆಜಿಎಫ್ 2’ ಜೋಡಿನ ಬಾಲಿವುಡ್​ನಲ್ಲಿ ಒಟ್ಟಿಗೆ ತರಲು ನಡೆದಿತ್ತು ಪ್ಲ್ಯಾನ್

ಇದನ್ನೂ ಓದಿ: ಮತ್ತೊಂದು ತೆಲುಗು ಸಿನಿಮಾ ಅವಕಾಶ ಕಳೆದುಕೊಂಡ ನಟಿ ಶ್ರೀಲೀಲಾ?

ಶ್ರೀಲೀಲಾ ಅವರು ಬಾಲಿವುಡ್​ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಈಗಾಗಲೇ ಕಾರ್ತಿಕ್ ಆರ್ಯನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ‘ಆಶಿಕಿ 3’ ಚಿತ್ರಕ್ಕೆ ಅವರು ನಾಯಕಿ. ಈ ಸಿನಿಮಾದ ಶೂಟ್ ನಡೆಯುತ್ತಿದೆ. ಅವರನ್ನು ಇತ್ತೀಚೆಗೆ ಸಿನಿಮಾ ಒಂದರಿಂದ ಹೊರಕ್ಕೆ ಇಡಲಾದ ಬಗ್ಗೆ ವರದಿ ಆಗಿತ್ತು.  ಹೀಗಿರುವಾಗಲೇ ಅವರಿಗೆ ಮತ್ತೆ ಬೇಡಿಕೆ ಬಂದಿದೆ. ಅಂದಹಾಗೆ, ರಶ್ಮಿಕಾ ಹಾಗೂ ಸಿದ್ದಾರ್ಥ್ ಈ ಮೊದಲು ‘ಮಿಷನ್ ಮಜ್ನು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.

ರಶ್ಮಿಕಾ ರೀತಿಯೇ..

ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ಸದ್ದು ಮಾಡಿದವರು. ಆ ಬಳಿಕ ಅವರಿಗೆ ಟಾಲಿವುಡ್​ನಲ್ಲಿ ಆಫರ್ ಬಂತು. ನಂತರ ಅವರು ಬಾಲಿವುಡ್​ನಲ್ಲಿ ಸಿನಿಮಾ ಮಾಡಿದರು. ಈಗ ಅವರು ಬಾಲಿವುಡ್​ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಶ್ರೀಲೀಲಾ ಕೂಡ ಇಂಥದ್ದೇ ಆಫರ್ ಪಡೆದುಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.