ರೆಹಮಾನ್ ಹೆಸರು ನೀಡಿದ್ದು ಹಿಂದೂ ಜ್ಯೋತಿಷಿ; ಇಲ್ಲಿದೆ ಇವರ ಹೆಸರು, ಧರ್ಮ ಬದಲಾವಣೆಗೆ ಕಾರಣ

|

Updated on: Jan 06, 2024 | 8:00 AM

ಮುಸ್ಲಿಂ ಧರ್ಮ ಸ್ವೀಕರಿಸಲು ಅವರಿಗೆ ಹಲವು ವಿಚಾರಗಳು ಪ್ರಭಾವ ಬೀರಿದ್ದವು. ರೆಹಮಾನ್ ತಂದೆಗೆ ಕ್ಯಾನ್ಸರ್ ಇತ್ತು. ಅವರ ಕೊನೆಯ ದಿನಗಳಲ್ಲಿ ಸೂಫಿ ಒಬ್ಬರು ಸೇವೆ ಮಾಡಿದ್ದರು. ಅವರಿಂದ ರೆಹಮಾನ್ ಪ್ರಭಾವಗೊಂಡಿದ್ದರು.

ರೆಹಮಾನ್ ಹೆಸರು ನೀಡಿದ್ದು ಹಿಂದೂ ಜ್ಯೋತಿಷಿ; ಇಲ್ಲಿದೆ ಇವರ ಹೆಸರು, ಧರ್ಮ ಬದಲಾವಣೆಗೆ ಕಾರಣ
ರೆಹಮಾನ್
Follow us on

ಖ್ಯಾತ ಸಂಗೀತ ಸಂಯೋಜಕ, ಗಾಯಕ ಎಆರ್​ ರೆಹಮಾನ್ (AR Rahman) ಅವರಿಗೆ ಇಂದು (ಜನವರಿ 6) ಜನ್ಮದಿನದ ಸಂಭ್ರಮ. ಅವರು ನೀಡಿದ ಹಾಡುಗಳನ್ನು ಇಂದು ನೆನಪು ಮಾಡಿಕೊಳ್ಳಲಾಗುತ್ತಿದೆ. ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಎರಡೆರಡು ಆಸ್ಕರ್ ಪ್ರಶಸ್ತಿ ಗೆದ್ದ ಖ್ಯಾತಿ ಅವರಿಗೆ ಇದೆ. ಏಷ್ಯಾದಲ್ಲೇ ಆಸ್ಕರ್ ಗೆದ್ದ ಮೊದಲಿಗೆ ಎನ್ನುವ ಖ್ಯಾತಿ ಅವರಿಗೆ ಇದೆ. ಆರಂಭದಲ್ಲಿ ದಿಲೀಪ್ ಕುಮಾರ್ ಆಗಿದ್ದ ಅವರು ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರು. ಎಆರ್ ರೆಹಮಾನ್ ಎಂದು ಹೆಸರು ಬದಲಾಯಿಸಿಕೊಂಡರು. ಇದಕ್ಕೆ ಕಾರಣ ಏನು ಎಂಬುದನ್ನು ಅವರು 2000ನೇ ಇಸ್ವಿಯಲ್ಲಿ ಹೇಳಿದ್ದರು. ಅವರು ಈಗ ಈ ಬಗ್ಗೆ ಮಾತನಾಡೋಕೆ ಇಷ್ಟಪಡುವುದಿಲ್ಲ.

ಮುಸ್ಲಿಂ ಧರ್ಮ ಸ್ವೀಕರಿಸಲು ಅವರಿಗೆ ಹಲವು ವಿಚಾರಗಳು ಪ್ರಭಾವ ಬೀರಿದ್ದವು. ರೆಹಮಾನ್ ತಂದೆಗೆ ಕ್ಯಾನ್ಸರ್ ಇತ್ತು. ಅವರ ಕೊನೆಯ ದಿನಗಳಲ್ಲಿ ಸೂಫಿ ಒಬ್ಬರು ಸೇವೆ ಮಾಡಿದ್ದರು. ಅವರಿಂದ ರೆಹಮಾನ್ ಪ್ರಭಾವಗೊಂಡಿದ್ದರು. ‘ಓರ್ವ ಸೂಫಿ ಇದ್ದರು. ಅವರು ನಮ್ಮ ತಂದೆಯ ಸೇವೆ ಮಾಡಿದ್ದರು. ನಾವು 7-8 ವರ್ಷ ಬಿಟ್ಟು ಮತ್ತೆ ಅವರನ್ನು ಭೇಟಿ ಮಾಡಿದೆವು. ಆಗ ನಾವು ಮತ್ತೊಂದು ಆಧ್ಯಾತ್ಮಿಕ ದಾರಿ ತುಳಿಯಲು ನಿರ್ಧರಿಸಿದೆವು. ಇದರಿಂದ ನಮಗೆ ಶಾಂತಿ ಸಿಕ್ಕಿತು’ ಎಂದು ಹೇಳಿದ್ದರು ಅವರು.

‘ನನ್ನ ತಾಯಿ ಹಿಂದೂ ಧರ್ಮವನ್ನು ಪರಿಪಾಲಿಸುತ್ತಿದ್ದರು. ಅವರು ಆಧ್ಯಾತ್ಮಿಕವಾಗಿ ಸಾಕಷ್ಟು ಒಲವು ಹೊಂದಿದ್ದರು. ನಾವು ವಾಸ ಮಾಡುತ್ತಿದ್ದುದು ಹಬಿಬುಲ್ಲಾ ರಸ್ತೆಯಲ್ಲಿ. ನಮ್ಮ ಮನೆಯ ಗೋಡೆಯ ಮೇಲೆ ಹಿಂದೂ ದೇವರುಗಳು ರಾರಾಜಿಸುತ್ತಿದ್ದವು. ಇದರ ಜೊತೆ ಮದರ್ ಮೇರಿ ಫೋಟೋ ಕೂಡ ಇತ್ತು. ಇದರ ಜೊತೆ ಮೆಕ್ಕಾ, ಮದೀನಾದ ಫೋಟೋಗಳು ಇದ್ದವು’ ಎಂದಿದ್ದಾರೆ ಅವರು.

‘ನನ್ನ ತಾಯಿ ಎಆರ್ ಎಂಬುದನ್ನು ಆಯ್ಕೆ ಮಾಡಿದರು. ಎಆರ್​ ಎಂದರೆ ಅಲ್ಲಾಹ್ ರಖಾ ಎಂದು. ಅಮ್ಮನ  ಕನಸಿನಲ್ಲಿ ಈ ಹೆಸರು ಬಂದಿತ್ತು. ನನ್ನ ಕುಟುಂಬದ ಇತರರು ರೆಹಮಾನ್ ಎನ್ನುವ ಹೆಸರನ್ನು ಆಯ್ಕೆ ಮಾಡಿದರು’ ಎಂದಿದ್ದರು ರೆಹಮಾನ್.

ಇದನ್ನೂ ಓದಿ: ಆಸ್ಕರ್ ಗೆದ್ದ ಜೈ ಹೋ ಹಾಡು ಕಂಪೋಸ್ ಮಾಡಿದ್ದು ಎಆರ್ ರೆಹಮಾನ್ ಅಲ್ಲ, ಮತ್ತಿನ್ಯಾರು?

ದಿಲೀಪ್ ಕುಮಾರ್ ಎನ್ನುವ ಹೆಸರು ರೆಹಮಾನ್​ಗೆ ಇಷ್ಟವಿರಲಿಲ್ಲವಂತೆ. ‘ನಾನು ನನ್ನ ಮೂಲ ಹೆಸರನ್ನು ಇಷ್ಟಪಡುತ್ತಿರಲಿಲ್ಲ. ನನಗೆ ಇರುವ ವರ್ಚಸ್ಸಿಗೆ ಆ ಹೆಸರು ಸೂಕ್ತ ಅಲ್ಲ ಎನಿಸುತ್ತಿತ್ತು’ ಎಂದಿದ್ದರು ರೆಹಮಾನ್.  ರೆಹಮಾನ್ ಅನ್ನೋ ಹೆಸರನ್ನು ಕುಟುಂಬದವರು ಆಯ್ಕೆ ಮಾಡಲು ಒಂದು ಕಾರಣ ಇತ್ತು. ರೆಹಮಾನ್ ಕುಟುಂಬದವರು ಹಿಂದೂ ಆಗಿದ್ದಾಗಲೇ ಜ್ಯೋತಿಷಿ ಬಳಿ ತೆರಳಿದ್ದರಂತೆ. ದಿಲೀಪ್ ಕುಮಾರ್ ಬದಲು ‘ಅಬ್ದುಲ್ ರೆಹಮಾನ್ ಅಥವಾ ಅಬ್ದುಲ್ ರಹೀಮ್ ಎಂದು ನಾಮಕರಣ ಮಾಡಲು ಅವರು ಸೂಚಿಸಿದ್ದರಂತೆ. ಈ ಹೆಸರು ದಿಲೀಪ್​ ಕುಮಾರ್​ಗೆ ಇಷ್ಟ ಆಗಿತ್ತು. ಹೀಗಾಗಿ ಅವರು ರೆಹಮಾನ್ ಎಂದು ಹೆಸರು ಬದಲಿಸಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ