ಇತ್ತೀಚೆಗೆ ‘ಕಡಲಿಕ್ಕ ನೆರಮಿಲೈ’ ಚಿತ್ರದ ಆಡಿಯೋ ಲಾಂಚ್ ಅದ್ದೂರಿಯಾಗಿ ನಡೆದಿದೆ. ಜಯರಾಮ್ ರವಿ ಹಾಗೂ ನಿತ್ಯಾ ಮೆನನ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಕೃತಿಕಾ ಉದಯನಿಧಿ ಅವರು ನಿರ್ದೇಶನ ಮಾಡಿದ್ದಾರೆ. ಎಆರ್ ರೆಹಮಾನ್ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಆಡಿಯೋ ಲಾಂಚ್ಗೆ ತಮಿಳು ಚಿತ್ರರಂಗದ ಅನೇಕರು ಬಂದಿದ್ದರು. ಅನಿರುದ್ಧ್ ರವಿಚಂದರ್ ಕೂಡ ಇಲ್ಲಿ ಇದ್ದರು. ಅವರಿಗೆ ರೆಹಮಾನ್ ಫ್ರೆಂಡ್ಲಿ ಅಡ್ವೈಸ್ ಕೊಟ್ಟಿದ್ದಾರೆ.
ಅನಿರುದ್ಧ್ ಅವರು ಚಿತ್ರರಂಗದ ಬೇಡಿಕೆಯ ಸಂಗೀತ ಸಂಯೋಜಕ. ಮಾಸ್ ಸಿನಿಮಾಗಳಿಗೆ ಅನಿರುದ್ಧ್ ಅವರು ಮ್ಯೂಸಿಕ್ ಕಂಪೋಸ್ ಮಾಡುತ್ತಾರೆ. ‘ಜೈಲರ್’, ‘ಜವಾನ್’ ಮೊದಲಾದ ಹಿಟ್ ಚಿತ್ರಗಳಿಗೆ ರೆಹಮಾನ್ ಅವರೇ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಆದರೆ, ಕ್ಲಾಸಿಕ್ ಚಿತ್ರಗಳಿಗೆ ಇವರು ಮ್ಯೂಸಿಕ್ ಕೊಟ್ಟಿಲ್ಲ. ಹೀಗಾಗಿ, ಅಡ್ವೈಸ್ ಕೊಟ್ಟಿದ್ದಾರೆ ರೆಹಮಾನ್.
‘ನಿಮ್ಮ ಸಂಗೀತ ಅಸಾಧಾರಣವಾಗಿದೆ. ಜನಸಾಮಾನ್ಯರೊಂದಿಗೆ ಪ್ರತಿಧ್ವನಿಸುತ್ತಿದೆ. ನೀವು ಹೆಚ್ಚು ಶಾಸ್ತ್ರೀಯ ಮತ್ತು ರಾಗ-ಆಧಾರಿತ ಸಂಯೋಜನೆಗಳನ್ನು ಅನ್ವೇಷಿಸಲು ಪ್ರಯತ್ನಿಸಿ. ಇವುಗಳಿಗೆ ಹೆಚ್ಚು ಆಯುಷ್ಯ ಮತ್ತು ಸಾಂಸ್ಕೃತಿಕ ಮಹತ್ವವನ್ನು ಇದೆ. ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ನಿಮ್ಮ ಸಂಗೀತವನ್ನು ಉತ್ಕೃಷ್ಟಗೊಳಿಸುವುದಲ್ಲದೆ, ಮುಂದಿನ ಪೀಳಿಗೆ ಸ್ಫೂರ್ತಿ ಮತ್ತು ಶಿಕ್ಷಣವನ್ನು ನೀಡುತ್ತೀರಿ’ ಎಂದು ಹೇಳಿದ್ದಾರೆ.
ಅನಿರುದ್ಧ್ ಅವರು ಒಂದೇ ಜಾನರ್ನ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಹೀಗೆ ಮುಂದುವರಿದರೆ ಒಂದು ದಿನ ಅವರಿಗೆ ಬೇಡಿಕೆ ಕಡಿಮೆ ಆಗಬಹುದು ಎಂಬುದು ರೆಹಮಾನ್ ಅವರ ಮುಂದಾಲೋಚನೆ. ಈ ಕಾರಣಕ್ಕೆ ರೆಹಮಾನ್ ಅವರು ಅನಿರುದ್ಧ್ಗೆ ಈ ಕಿವಿಮಾತು ಹೇಳಿದ್ದಾರೆ.
ರೆಹಮಾನ್ ಅವರು ಎಲ್ಲ ರೀತಿಯ ಸಂಗೀತವನ್ನು ಸಂಯೋಜನೆ ಮಾಡುತ್ತಾರೆ. ಈ ಕಾರಣಕ್ಕೆ ಹಲವು ವರ್ಷಗಳಿಂದ ಅವರಿಗ ಇರೋ ಬೇಡಿಕೆ ಕಡಿಮೆ ಆಗಿಲ್ಲ. ಅನಿರುದ್ಧ್ ಅವರು ರೆಹಮಾನ್ ಮಾತನ್ನು ಸ್ವೀಕರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಮತ್ತೆ ಒಂದಾಗ್ತಾರೆ ರೆಹಮಾನ್-ಸೈರಾ; ದೊಡ್ಡ ಸೂಚನೆ ಕೊಟ್ಟ ವಕೀಲೆ
‘ಕಡಲಿಕ್ಕ ನೆರಮಿಲ್ಲೈ’ ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಕಾಣುತ್ತಿದೆ. ಈ ಚಿತ್ರಕ್ಕೆ ಎಆರ್ ರೆಹಮಾನ್ ಅವರ ಸಂಗೀತವೇ ಹೈಲೈಟ್ ಆಗುವ ಸಾಧ್ಯತೆ ಇದೆ. ರೆಹಮಾನ್ ಅವರ ಸಂಗೀತ ಸಂಯೋಜನೆಗೆ ಈಗಾಗಲೇ ಆಸ್ಕರ್ ಕೂಡ ಸಿಕ್ಕಿದೆ. ಅವರು ಇತ್ತೀಚೆಗೆ ವಿಚ್ಛೇದನ ಪಡೆದಿದ್ದಾರೆ. ಪತ್ನಿ ಸೈರಾ ಬಾನು ಅವರಿಂದ ರೆಹಮಾನ್ ದೂರ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.