AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಒಂದಾಗ್ತಾರೆ ರೆಹಮಾನ್-ಸೈರಾ; ದೊಡ್ಡ ಸೂಚನೆ ಕೊಟ್ಟ ವಕೀಲೆ

ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಅವರ ವಿಚ್ಛೇದನದ ನಂತರ, ಮಕ್ಕಳ ಕಸ್ಟಡಿ ಮತ್ತು ಜೀವನಾಂಶದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆದರೆ, ವಕೀಲೆ ವಂದನಾ ಶಾ ಅವರು ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಎಂದು ಹೇಳಿದ್ದಾರೆ.

ಮತ್ತೆ ಒಂದಾಗ್ತಾರೆ ರೆಹಮಾನ್-ಸೈರಾ; ದೊಡ್ಡ ಸೂಚನೆ ಕೊಟ್ಟ ವಕೀಲೆ
‘ನಾವು ಊಹಿಸದ ಅಂತ್ಯ ಸಿಕ್ಕಿದೆ’; ವಿಚ್ಛೇದನದ ಬಗ್ಗೆ ಎಆರ್ ರೆಹಮಾನ್ ಮಾತು
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Nov 29, 2024 | 7:30 PM

ಎಆರ್ ರೆಹಮಾನ್ ಹಾಗೂ ಸೈರಾ ಬಾನು ವಿಚ್ಛೇದನದ ಬಳಿಕ ಸಾಕಷ್ಟು ವಿಚಾರಗಳು ಸುದ್ದಿ ಆಗುತ್ತಿವೆ. ಸೈರಾ ಅವರು ಎಷ್ಟು ಕೋಟಿ ರೂಪಾಯಿ ಜೀವನಾಂಶ ಪಡೆದರು ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಆದರೆ, ಈ ವಿಚಾರದಲ್ಲಿ ಯಾವುದೇ ನಿರ್ಧಾರ ಆಗಿಲ್ಲ ಎಂದು ದಂಪತಿಗಳು ಹೇಳಿದ್ದರು. ಈ ಬೆನ್ನಲ್ಲೇ ಮಕ್ಕಳ ಕಸ್ಟಡಿ ಯಾರ ಕೈ ಸೇರುತ್ತದೆ ಎಂಬ ವಿಚಾರದಲ್ಲಿ ಚರ್ಚೆಗಳು ಆರಂಭ ಆಗಿವೆ. ಇದಕ್ಕೆ ಉತ್ತರ ನೀಡುವ ಕೆಲಸವನ್ನು ಇವರ ವಕೀಲೆ ಮಾಡಿದ್ದಾರೆ. ಜೊತೆಗೆ ಇವರು ಮತ್ತೆ ಒಂದಾಗುವ ಸೂಚನೆಯನ್ನೂ ನೀಡಿದ್ದಾರೆ.

ರೆಹಮಾನ್ ಹಾಗೂ ಸೈರಾ ಬಾನು ಪರ ವಂದನಾ ಶಾ ಅವರು ವಕೀಲೆ ಆಗಿದ್ದಾರೆ. ವಿಚ್ಛೇದನದ ಕೆಲಸಗಳನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಈಗ ಮಕ್ಕಳ ಹಕ್ಕಿನ ಬಗ್ಗೆ ಅವರು ಮಾತನಾಡಿದ್ದಾರೆ. ರೆಹಮಾನ್ ಹಾಗೂ ಸೈರಾಗೆ ಮೂವರು ಮಕ್ಕಳು. ತಂದೆ ಹಾಗೂ ತಾಯಿ ಇಬ್ಬರ ಜೊತೆಯೂ ಇವರು ವಾಸ ಮಾಡುತ್ತಾರೆ ಎನ್ನುವ ವಿಚಾರ ರಿವೀಲ್ ಆಗಿದೆ.

‘ಸದ್ಯ ನಾವು ಏನನ್ನೂ ನಿರ್ಧಾರ ಮಾಡಿಲ್ಲ. ಅದನ್ನು ಇನ್ಮೇಲೆ ನಿರ್ಧರಿಸಬೇಕು. ಮಕ್ಕಳಲ್ಲಿ ವಯಸ್ಕರು ಇದ್ದಾರೆ. ಅವರು ತಮ್ಮ ಆಯ್ಕೆಯನ್ನು ಮಾಡಿಕೊಳ್ಳುವ ಹಕ್ಕು ಇದೆ’ ಎಂದು ವಂದನಾ ಶಾ ಅವರು ಹೇಳಿದ್ದಾಗಿ ಅವರದಿ ಆಗಿದೆ. ರೆಹಮಾನ್ ಹಾಗೂ ಸೈರಾ ದಂಪತಿಗೆ ಮೂವರು ಮಕ್ಕಳು.

ಇದನ್ನೂ ಓದಿ:ಎಆರ್ ರೆಹಮಾನ್ ಹಾಗೂ ಸೈರಾ ಬಾನು ವಿಚ್ಛೇದನಕ್ಕೆ ಕೊನೆಗೂ ಸಿಕ್ಕಿತು ಕಾರಣ

ಈ ದಂಪತಿ ಒಂದಾಗುವ ಸೂಚನೆಯನ್ನು ಕೂಡ ನೀಡಿದ್ದಾರೆ ವಂದನಾ. ‘ಸಮನ್ವಯ ಸಾಧ್ಯವಿಲ್ಲ ಎಂದು ನಾನು ಹೇಳಿಲ್ಲ. ನಾನು ಯಾವಾಗಲೂ ಪ್ರೀತಿ ಮತ್ತು ಪ್ರಣಯದ ಬಗ್ಗೆ ಮಾತನಾಡುತ್ತೇನೆ. ಜಂಟಿ ಹೇಳಿಕೆಯು ಪ್ರತ್ಯೇಕತೆಯ ಬಗ್ಗೆ ಹೇಳುತ್ತದೆ. ಇದು ಸುದೀರ್ಘ ವಿವಾಹವಾಗಿದೆ ಮತ್ತು ಈ ನಿರ್ಧಾರಕ್ಕೆ ಬರಲು ಸಾಕಷ್ಟು ಚಿಂತನೆ ನಡೆರುತ್ತದೆ, ಆದರೆ ನಾನು ಎಲ್ಲಿಯೂ ಸಮನ್ವಯ ಸಾಧ್ಯವಿಲ್ಲ ಎಂದು ಹೇಳಿಲ್ಲ’ ಎಂದು ಅವರು ಹೇಳಿದ್ದಾರೆ.

ಸದ್ಯ ವದಂನಾ ನೀಡಿರುವ ಹೇಳಿಕೆಯಿಂದ ಅವರು ಮತ್ತೆ ಒಂದಾಗುವ ಸಾಧ್ಯತೆ ಇದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಬಾಲಿವುಡ್ನಲ್ಲಿ ಆಮಿರ್ ಖಾನ್ ಹಾಗೂ ಕಿರಣ್ ರಾವ್ ಅವರು ಬೇರೆ ಆಗಿದ್ದಾರೆ. ಆದರೆ, ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇವರು ಹಾಗೆ ಕಾಣಿಸಿಕೊಳ್ಳಲಿ ಎಂಬುದು ಅನೇಕರ ಅಭಿಪ್ರಾಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ