ಎಆರ್ ರೆಹಮಾನ್ ಹಾಗೂ ಸೈರಾ ಬಾನು ವಿಚ್ಛೇದನಕ್ಕೆ ಕೊನೆಗೂ ಸಿಕ್ಕಿತು ಕಾರಣ

ಎಆರ್ ರೆಹಮಾನ್ ಅವರು ಸಿಕ್ಕಾಪಟ್ಟೆ ಬ್ಯುಸಿ ಇರುವ ಸಂಗೀತ ಸಂಯೋಜಕ. ವರ್ಷದ ಎಲ್ಲಾ ದಿನಗಳು ಅವರು ಬ್ಯುಸಿ ಆಗಿಯೇ ಇರಬೇಕಾದ ಪರಿಸ್ಥಿತಿ ಇರುತ್ತದೆ. ಅವರು ತಂಡದ ಜೊತೆ ಕಾನ್ಸರ್ಟ್ ನಡೆಸುತ್ತಾರೆ. ಒಂದೊಮ್ಮೆ ಕಾನ್ಸರ್ಟ್ ಇಲ್ಲ ಎಂದಾದರೆ ಹಾಡಿನ ಕಂಪೋಸ್​ನಲ್ಲಿ ಬ್ಯುಸಿ ಆಗುತ್ತಾರೆ. ಈ ಕಾರಣಕ್ಕೆ ಅವರು ನಿದ್ರಿಸೋದು ಮುಂಜಾನೆ ವೇಳೆಗೆ.

ಎಆರ್ ರೆಹಮಾನ್ ಹಾಗೂ ಸೈರಾ ಬಾನು ವಿಚ್ಛೇದನಕ್ಕೆ ಕೊನೆಗೂ ಸಿಕ್ಕಿತು ಕಾರಣ
ರೆಹಮಾನ್ -ಸೈರಾ
Follow us
ರಾಜೇಶ್ ದುಗ್ಗುಮನೆ
|

Updated on: Nov 20, 2024 | 12:59 PM

ಸಂಗೀತ ಸಂಯೋಜಕ ಎಆರ್ ರೆಹಮಾನ್ ಹಾಗೂ ಅವರ ಪತ್ನಿ ಸೈರಾ ಬಾನು ವಿಚ್ಛೇದನ ಘೋಷಣೆ ಮಾಡಿದ್ದಾರೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಈ ಘೋಷಣೆ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರು ಅನೇಕ ಬಾರಿ ಪತ್ನಿ ಜೊತೆ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈಗ ಇವರ ವಿಚ್ಛೇದನಕ್ಕೆ ಕಾರಣ ಏನು ಎಂಬ ಬಗ್ಗೆ ಕೆಲವು ಸುದ್ದಿಗಳು ಹರಿದಾಡಿವೆ. ಆ ಬಗ್ಗೆ ಇಲ್ಲಿದೆ ವಿವರ.

ಎಆರ್ ರೆಹಮಾನ್ ಅವರು ಸಿಕ್ಕಾಪಟ್ಟೆ ಬ್ಯುಸಿ ಇರುವ ಸಂಗೀತ ಸಂಯೋಜಕ. ವರ್ಷದ ಎಲ್ಲಾ ದಿನಗಳು ಅವರು ಬ್ಯುಸಿ ಆಗಿಯೇ ಇರಬೇಕಾದ ಪರಿಸ್ಥಿತಿ ಇರುತ್ತದೆ. ಅವರು ತಂಡದ ಜೊತೆ ಕಾನ್ಸರ್ಟ್ ನಡೆಸುತ್ತಾರೆ. ಒಂದೊಮ್ಮೆ ಕಾನ್ಸರ್ಟ್ ಇಲ್ಲ ಎಂದಾದರೆ ಹಾಡಿನ ಕಂಪೋಸ್​ನಲ್ಲಿ ಬ್ಯುಸಿ ಆಗುತ್ತಾರೆ. ಈ ಕಾರಣಕ್ಕೆ ಅವರು ನಿದ್ರಿಸೋದು ಮುಂಜಾನೆ ವೇಳೆಗೆ. ಅವರು ನಿದ್ದೆಯಿಂದ ಎದ್ದೇಳುವಾಗ ಮಧ್ಯಾಹ್ನ ಆಗುತ್ತದೆ. ಇದು ಅವರ ದಿನಚರಿ. ಈ ಕಾರಣಕ್ಕೆ ಕುಟುಂಬಕ್ಕೆ ಅವರು ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದು ವಿಚ್ಛೇದನಕ್ಕೆ ಕಾರಣ ಆಗಿರಬಹುದು ಎಂಬುದು ಕೆಲವರ ವಾದ.

ಸೈರಾ ಬಾನು ಅವರು ವಿಚ್ಛೇದನಕ್ಕೆ ಕಾರಣ ಏನು ಎಂಬ ಬಗ್ಗೆ ಮಾತನಾಡಿದ್ದಾರೆ ಎಂದು ವರದಿ ಆಗಿದೆ. ‘ಸಂಬಂಧದಲ್ಲಿನ ಭಾವನಾತ್ಮಕ ಒತ್ತಡದಿಂದಾಗಿ ವಿಚ್ಛೇದನ ಪಡೆದಿರುವುದಾಗಿ’ ಸೈರಾ ಹೇಳಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ದಂಪತಿ ಕಡೆಯಿಂದ ಸ್ಪಷ್ಟ ಹೇಳಿಕೆ ಬಂದಿಲ್ಲ.

ರೆಹಮಾನ್ ಅವರಿಗೆ ಈಗಲೂ ಮಾಜಿ ಪತ್ನಿ ಮೇಲೆ ಗೌರವ ಹಾಗೆಯೇ ಇದೆ ಎನ್ನಲಾಗಿದೆ. ಇವರು ಬರೋಬ್ಬರಿ 29 ವರ್ಷಗಳ ಕಾಲ ಒಟ್ಟಾಗಿ ಸಂಸಾರ ನಡೆಸಿದ್ದರು. ಕಳೆದ ವರ್ಷ ಕಸ್ತೂರಿ ಶಂಕರ್ ಅವರು ಸೈರಾ ಬಾನು ಬಗ್ಗೆ ಟೀಕೆ ಮಾಡಿದ್ದರು. ಅವರಿಗೆ ತಮಿಳು ಬರುವುದಿಲ್ಲ ಎಂದಿದ್ದರು. ಈ ಸಂದರ್ಭದಲ್ಲಿ ಅವರು ಸೈರಾ ಪರ ಮಾತನಾಡಿದ್ದರು.

ಇದನ್ನೂ ಓದಿ: ‘ನಾವು ಊಹಿಸದ ಅಂತ್ಯ ಸಿಕ್ಕಿದೆ’; ವಿಚ್ಛೇದನದ ಬಗ್ಗೆ ಎಆರ್ ರೆಹಮಾನ್ ಮಾತು

1995ರಲ್ಲಿ ಸೈರಾ ಹಾಗೂ ರೆಹಮಾನ್ ವಿವಾಹ ನಡೆದಿತ್ತು. ಇನ್ನೇನು ಅವರು 30 ವರ್ಷಗಳ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಆದರೆ, ಅದಕ್ಕೂ ಮೊದಲೇ ಇವರು ಬೇರೆ ಆಗಿದ್ದಾರೆ. ಇದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮೌನ ಮುರಿದಿರೋ ರೆಹಮಾನ್ ಅವರು ಈ ನಿರ್ಧಾರದಿಂದ ಬೇಸರ ಆಗಿದೆ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ