ಬಿಗ್ ಬಾಸ್ನಲ್ಲಿ ಸಹ ಸ್ಪರ್ಧಿಯ ಪತ್ನಿಯ ಹೊಗಳಿ ಕೆನ್ನೆಗೆ ಏಟು ತಿಂದ ಸ್ಪರ್ಧಿ
‘ಬಿಗ್ ಬಾಸ್’ ಶೋ ಆರಂಭ ಆಯಿತು ಎನ್ನುವಾಗ ವಿವಾದಗಳು ಹುಟ್ಟಿಕೊಳ್ಳುತ್ತವೆ. ಈ ಬಾರಿ ಈಗ ‘ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ 3’ ವಿವಾದಗಳ ಕೇಂದ್ರ ಬಿಂದು ಆಗಿದೆ. ಅರ್ಮಾನ್ ಮಲಿಕ್ ಅವರು ಸಹ ಸ್ಪರ್ಧಿಗೆ ಹೊಡೆದಿದ್ದಾರೆ. ಅದೂ ಪತ್ನಿಯ ವಿಚಾರಕ್ಕೆ.
ಬಿಗ್ ಬಾಸ್’ ರಿಯಾಲಿಟಿ ಶೋ ಆರಂಭ ಆದಾಗಲೆಲ್ಲ ವಿವಾದಗಳು ಹುಟ್ಟಿಕೊಳ್ಳುತ್ತವೆ. ಈಗ ‘ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ 3’ರಲ್ಲಿ ವಿವಾದ ಒಂದು ಹುಟ್ಟಿಕೊಂಡಿದೆ. ಸ್ಪರ್ಧಿ ಅರ್ಮಾನ್ ಮಲಿಕ್ ಅವರು ಸಹ ಸ್ಪರ್ಧಿ ವಿಶಾಲೆ ಪಾಂಡೆ ಕೆನ್ನೆಗೆ ಬಾರಿಸಿದ್ದಾರೆ. ಆದಾಗ್ಯೂ ಅವರನ್ನು ಹೊರ ಹಾಕಿಲ್ಲ. ಈ ವಿಚಾರ ಸೊಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಆಗುತ್ತಿದೆ. ಯಾವುದೇ ಸ್ಪರ್ಧಿಯು ಹಲ್ಲೆ ಮಾಡಿದರೆ ಅಂಥವರನ್ನು ಮುಲಾಜಿಲ್ಲದೆ ಹೊರಕ್ಕೆ ಕಳುಹಿಸಲಾಗುತ್ತದೆ. ಆದರೆ, ಅರ್ಮಾನ್ ಮಲಿಕ್ ವಿಚಾರದಲ್ಲಿ ಆ ರೀತಿ ಆಗಿಲ್ಲ.
ಈ ಕಿರಿಕ್ ಆರಂಭ ಆಗಿದ್ದು ಪತ್ನಿಯ ವಿಚಾರಕ್ಕೆ. ವಿಶಾಲ್ ಅವರು ಅರ್ಮಾನ್ ಮಲಿಕ್ ಪತ್ನಿ ಸುಂದರವಾಗಿದ್ದಾರೆ ಎಂದರು. ಇದಕ್ಕೆ ಸಿಟ್ಟಾದ ಅರ್ಮಾನ್ ಅವರು ವಿಶಾಲ್ ಮೇಲೆ ಕಿಡಿಕಾರಿದರು. ಆಗ ವಿಶಾಲ್ ‘ಅತ್ತಿಗೆ ಚೆನ್ನಾಗಿದ್ದಾಳೆ’ ಎಂದರು. ಆಗ ಶುರುವಾಯಿತು ಜಗಳ. ನಂತರ ಇದು ಮಿತಿ ಮೀರಿದೆ. ಈ ವೇಳೆ ಅರ್ಮಾನ್ ಅವರು ವಿಶಾಲ್ ಕೆನ್ನೆಗೆ ಬಾರಿಸಿದ್ದಾರೆ. ಇದನ್ನು ಬಿಗ್ ಬಾಸ್ ಮಂದಿ ಸಮರ್ಥಿಸಿಕೊಂಡಿದ್ದಾರೆ. ‘ನಾನು ಆ ಅರ್ಥದಲ್ಲಿ ಹೇಳಿಲ್ಲ’ ಎಂದಿದ್ದಾರೆ ವಿಶಾಲ್.
View this post on Instagram
‘ಅರ್ಮಾನ್ ಅವರನ್ನು ಹೊರ ಹಾಕಿ’
ಈ ಘಟನೆ ಬಗ್ಗೆ ವಿಶಾಲ್ ಸಹೋದರಿ ನೇಹಾ ಮಾತನಾಡಿದ್ದಾರೆ. ‘ಅರ್ಮಾನ್ ಅವರನ್ನು ಎಲಿಮಿನೇಟ್ ಆಗಬೇಕು. ಇಲ್ಲದಿದ್ದರೆ ತಪ್ಪು ಸಂದೇಶ ರವಾನೆ ಆಗುತ್ತದೆ. ಮುಂದಿನ ಸೀಸನ್ಗಳಲ್ಲಿ ಸ್ಪರ್ಧಿಗಳು ಹಿಂಸೆ ಮಾಡಲು ಬಯಸುತ್ತಾರೆ. ವಿಶಾಲ್ ಅವರು ಸ್ಟ್ರಾಂಗ್ ಆಗಿದ್ದು ಶೋ ಗೆಲ್ಲಲಿ’ ಎಂದು ನೇಹಾ ಆಶಿಸಿದ್ದಾರೆ.
ಇದನ್ನೂ ಓದಿ: ಹೊಸ ಹೋಟೆಲ್ ಆರಂಭಿಸಿದ ಮೈಕಲ್ ಅಜಯ್; ಬಿಗ್ ಬಾಸ್ ಮಂದಿಯ ಬೆಂಬಲ
ಬದಲಾದ ನಿರೂಪಕ
ಬಿಗ್ ಬಾಸ್ನ ಪ್ರತಿ ಬಾರಿ ಸಲ್ಮಾನ್ ಖಾನ್ ಅವರು ನಡೆಸಿಕೊಡುತ್ತಿದ್ದರು. ಈ ಬಾರಿ ಅನಿಲ್ ಕಪೂರ್ ಅವರು ಶೋನ ನಡೆಸಿಕೊಡುತ್ತಿದ್ದಾರೆ. ಅವರು ವೀಕೆಂಡ್ ಎಪಿಸೋಡ್ಗಳನ್ನು ನಿರೂಪಣೆ ಮಾಡುತ್ತಿದ್ದಾರೆ. ಅನೇಕರು ‘ಸಲ್ಮಾನ್ ಖಾನ್ ಅವರೇ ಮರಳಿ ಬರಲಿ’ ಎನ್ನುವ ಬೇಡಿಕೆ ಇಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.