ಹೊಸ ಹೋಟೆಲ್ ಆರಂಭಿಸಿದ ಮೈಕಲ್ ಅಜಯ್; ಬಿಗ್ ಬಾಸ್ ಮಂದಿಯ ಬೆಂಬಲ
ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ಮೈಕಲ್ ಅಜಯ್ ಫುಡ್ ಟ್ರಕ್ ಹೊಂದಿದ್ದಾರೆ. ಇಲ್ಲಿ ವಿವಿಧ ರೀತಿಯ ಬರ್ಗರ್ನ ಅವರು ತಯಾರಿಸುತ್ತಾರೆ. ಮನೆಯಲ್ಲೇ ತಯಾರಿಸಿದ ಕೆಚಪ್ಗಳನ್ನು ಈ ಬರ್ಗರ್ ತಯಾರಿಸಲು ಬಳಕೆ ಮಾಡುತ್ತಾರೆ ಅನ್ನೋದು ವಿಶೇಷ.
‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿಸಿ ಸಾಕಷ್ಟು ಜನಪ್ರಿಯತೆ ಪಡೆದರು ಮೈಕಲ್ ಅಜಯ್ ಅವರು. ‘ಬಿಗ್ ಬಾಸ್’ಗೆ ಎಂಟ್ರಿ ಪಡೆಯುವುದಕ್ಕೂ ಮೊದಲು ಅವರು ಮಾಡೆಲ್ ಆಗಿದ್ದರು. ಈಗ ಅವರು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಈಗ ಅವರು ಹೋಟೆಲ್ ಒಂದನ್ನು ಆರಂಭಿಸುತ್ತಿದ್ದಾರೆ. ಅದರ ಉದ್ಘಾಟನೆ ನಡೆಯುತ್ತಿದೆ. ಇದಕ್ಕೆ ಬಿಗ್ ಬಾಸ್ನ ವಿನಯ್ ಗೌಡ, ಕಾರ್ತಿಕ್ ಮಹೇಶ್ ಮೊದಲಾದವರು ಭಾಗಿ ಆಗುತ್ತಿದ್ದಾರೆ.
ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ಮೈಕಲ್ ಅವರು ಫುಡ್ ಟ್ರಕ್ ಹೊಂದಿದ್ದಾರೆ. ಇಲ್ಲಿ ವಿವಿಧ ರೀತಿಯ ಬರ್ಗರ್ನ ಅವರು ತಯಾರಿಸುತ್ತಾರೆ. ಮನೆಯಲ್ಲೇ ತಯಾರಿಸಿದ ಕೆಚಪ್ಗಳನ್ನು ಈ ಬರ್ಗರ್ ತಯಾರಿಸಲು ಬಳಕೆ ಮಾಡುತ್ತಾರೆ ಅನ್ನೋದು ವಿಶೇಷ. ಮೈಕಲ್ ಅವರು ಫಿಟ್ನೆಸ್ ಫ್ರೀಕ್. ಈ ಕಾರಣದಿಂದಲೇ ಅವರು ತಯಾರಿಸೋ ಬರ್ಗರ್ನಲ್ಲಿ ಮೈದಾ ಬಳಕೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಈ ಬರ್ಗರ್ ಸಂಪೂರ್ಣ ಆರೋಗ್ಯಕರ ಅನ್ನೋದು ಅವರ ಹೇಳಿಕೆ.
View this post on Instagram
ಈಗ ಇದೇ ಫುಡ್ಟ್ರಕ್ ಸಮೀಪ್ ಬರ್ಗರ್ ಶಾಪ್ ಒಂದನ್ನು ಓಪನ್ ಮಾಡುತ್ತಿದ್ದಾರೆ. ಇದಕ್ಕೆ ಅವರು BYOB ಎಂದು ಹೆಸರು ಇಟ್ಟಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಈ ಶಾಪ್ ಓಪನ್ ಇರಲಿದೆ. ಇದರ ಉದ್ಘಾಟನೆ ಇಂದು (ಜೂನ್ 28) ಸಂಜೆ 5 ಗಂಟೆಗೆ ನಡೆಯಲಿದೆ. ವಿನಯ್ ಗೌಡ, ಕಾರ್ತಿಕ್ ಮಹೇಶ್, ಸ್ನೇಹಿತ್, ನೀತು ಮೊದಲಾದವರು ಈ ಹೋಟೆಲ್ ಉದ್ಘಾಟನೆಗೆ ಆಗಮಿಸಲಿದ್ದಾರೆ. ಅವರ ಬೆಂಬಲ ಸಿಗುತ್ತಿರುವುದರಿಂದ ಮೈಕಲ್ ಖುಷಿಯಾಗಿದ್ದಾರೆ.
ಇದನ್ನೂ ಓದಿ: ಸಿನಿಮಾದಲ್ಲಿ ಒಟ್ಟಾಗಿ ನಟಿಸಲಿದ್ದಾರೆ ವಿನಯ್-ಮೈಕಲ್
ಮೈಕಲ್ ಅವರು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ‘ಡೆಡ್ಲಿ ಸೋಮ’ ಖ್ಯಾತಿಯ ಆದಿತ್ಯ ಅವರು ‘ಕಿಲ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಮೈಕಲ್ ಅಜಯ್ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ಇನ್ನೂ ಹಲವು ಆಫರ್ಗಳು ಅವರನ್ನು ಹುಡುಕಿ ಬರುತ್ತಿವೆ. ಅಳೆದು ತೂಗಿ ಅವರು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:22 pm, Fri, 28 June 24