ಸಿಎಂ ಹೇಳಿಕೆಯಿಂದ ಬದಲಾಯ್ತು ಖ್ಯಾತ ಗಾಯಕನ ಸಾವು ಪ್ರಕರಣ

Zubeen Garg: ಈಶಾನ್ಯ ಭಾರತದ ಜನಪ್ರಿಯ ಮತ್ತು ಅಪಾರ ಜನ ಪ್ರೀತಿ ಗಳಿಸಿದ್ದ ಸೆಲೆಬ್ರಿಟಿ ಆಗಿದ್ದರು. ಕರ್ನಾಟಕದಲ್ಲಿ ಪುನೀತ್ ರಾಜ್​​ಕುಮಾರ್ ಅವರ ಅಗಲಿಕೆಯಿಂದ ಉಂಟಾಗಿದ್ದ ಸ್ಥಿತಿಯೇ ಅಸ್ಸಾಂನಲ್ಲಿ ಜುಬೀನ್ ಗರ್ಗ್ ನಿಧನದಿಂದ ಉಂಟಾಗಿತ್ತು. ಜುಬೀನ್ ಗರ್ಗ್ ಸಾವಿನ ನೋವಿನ ನಡುವೆ ಅವರ ಸಾವಿನ ಬಗ್ಗೆ ಅನುಮಾನಗಳು ಸಹ ವ್ಯಕ್ತವಾಗಿತ್ತು. ಇದೀಗ ಸ್ವತಃ ಅಸ್ಸಾಂ ಸಿಎಂ ಹಿಮಂತ್ ಬಿಸ್ವ ಶರ್ಮಾ ಅವರು ಜುಬೀನ್ ಅವರದ್ದು ಕೊಲೆ ಎಂದು ಹೇಳಿದ್ದು, ಪ್ರಕರಣಕ್ಕೆ ದೊಡ್ಡ ತಿರುವನ್ನು ನೀಡಿದ್ದಾರೆ.

ಸಿಎಂ ಹೇಳಿಕೆಯಿಂದ ಬದಲಾಯ್ತು ಖ್ಯಾತ ಗಾಯಕನ ಸಾವು ಪ್ರಕರಣ
Zubeen Garg

Updated on: Nov 25, 2025 | 7:35 PM

ಗಾಯಕ ಜುಬೀನ್ ಗರ್ಗ್ (Zubeen Garg) ನಿಧನ ಹೊಂದಿ ಎರಡು ತಿಂಗಳಾಯ್ತು. ಜುಬೀನ್ ಗರ್ಗ್ ಅಸ್ಸಾಂ ರಾಜ್ಯದ ಭಾರಿ ದೊಡ್ಡ ಸೆಲೆಬ್ರಿಟಿ ಆಗಿದ್ದರು. ಜುಬೀನ್ ಗರ್ಗ್ ನಿಧನ ಅಸ್ಸಾಂ ಮಾತ್ರವಲ್ಲದೆ ಈಶಾನ್ಯ ಭಾರತದ ಜನಪ್ರಿಯ ಮತ್ತು ಅಪಾರ ಜನ ಪ್ರೀತಿ ಗಳಿಸಿದ್ದ ಸೆಲೆಬ್ರಿಟಿ ಆಗಿದ್ದರು. ಕರ್ನಾಟಕದಲ್ಲಿ ಪುನೀತ್ ರಾಜ್​​ಕುಮಾರ್ ಅವರ ಅಗಲಿಕೆಯಿಂದ ಉಂಟಾಗಿದ್ದ ಸ್ಥಿತಿಯೇ ಅಸ್ಸಾಂನಲ್ಲಿ ಜುಬೀನ್ ಗರ್ಗ್ ನಿಧನದಿಂದ ಉಂಟಾಗಿತ್ತು. ಜುಬೀನ್ ಗರ್ಗ್ ಸಾವಿನ ನೋವಿನ ನಡುವೆ ಅವರ ಸಾವಿನ ಬಗ್ಗೆ ಅನುಮಾನಗಳು ಸಹ ವ್ಯಕ್ತವಾಗಿತ್ತು. ಇದೀಗ ಸ್ವತಃ ಅಸ್ಸಾಂ ಸಿಎಂ ಹಿಮಂತ್ ಬಿಸ್ವ ಶರ್ಮಾ ಅವರು ಜುಬೀನ್ ಅವರದ್ದು ಕೊಲೆ ಎಂದು ಹೇಳಿದ್ದು, ಪ್ರಕರಣಕ್ಕೆ ದೊಡ್ಡ ತಿರುವನ್ನು ನೀಡಿದ್ದಾರೆ.

ಜುಬೀನ್ ಅವರು ಸೆಪ್ಟೆಂಬರ್ 09 ರಂದು ಸಿಂಗಪುರದ ಸೇಂಟ್ ಜೋನ್ಸ್ ದ್ವೀಪದಲ್ಲಿ ಲೈಫ್ ಜಾಕೆಟ್ ಇಲ್ಲದೆ ಈಜಲು ತೆರಳಿದ್ದಾಗ ಮುಳುಗಿ ಸಾವನ್ನಪ್ಪಿದ್ದರು. ಆದರೆ ಜುಬೀನ್ ಅವರಿಗೆ ವಿಷ ಉಣಿಸಿ ಸಾಯಿಸಲಾಗಿದೆ ಎಂಬ ಅನುಮಾನಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದವು. ಅದರಲ್ಲೂ ಜುಬೀನ್ ಅವರ ಮ್ಯಾನೇಜರ್ ಮತ್ತು ಪತ್ನಿಯ ಮೇಲೆ ಅನುಮಾನಗಳು ವ್ಯಕ್ತವಾದವು. ಆರಂಭದಲ್ಲಿ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಾಯ್ತು. ಬಳಿಕ ಜನರ ಒತ್ತಾಯದ ಮೇರೆಗೆ ಭಾರತದಲ್ಲಿ ಜುಬೀನ್ ಅವರ ಮರಣೋತ್ತರ ಪರೀಕ್ಷೆ ಮಾಡಲಾಯ್ತು. ಆದರೆ ಅವರು ವಿಷದಿಂದ ಸತ್ತಿಲ್ಲ ಎಂಬುದು ಅದರಿಂದ ಖಾತ್ರಿ ಆಗಿತ್ತು. ಆದರೂ ಸಹ ಜುಬೀನ್ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಲೇ ಇದ್ದವು.

ಇದನ್ನೂ ಓದಿ:ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಭಾರತದ ಖ್ಯಾತ ಗಾಯಕ ನಿಧನ

ಇದೀಗ ಅಸ್ಸಾಂ ಸಿಎಂ ಹಿಮಂತ್ ಬಿಸ್ವ ಶರ್ಮಾ ಅವರು ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದು, ಜುಬೀನ್ ಅವರ ಸಾವು ಅಪಘಾತ ಅಲ್ಲ ಅದೊಂದು ಪೂರ್ವ ಯೋಜಿತ ಕೊಲೆ ಎಂದು ಹೇಳಿದ್ದಾರೆ. ಜುಬೀನ್ ಗರ್ಗ್ ಅವರ ಸಾವಿನ ಕುರಿತು ವಿಶೇಷ ತನಿಖೆಗೆ ಆದೇಶಿಸಲಾಗಿದ್ದು ಸೆಕ್ಷನ್ 61, 105 ಮತ್ತು 106ಗಳ ಅಡಿಯಲ್ಲಿ ಎಫ್​​ಐಆರ್ ದಾಖಲಿಸಲಾಗಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಅಸ್ಸಾಂ ಪೊಲೀಸರು ಪ್ರಕರಣದ ತನಿಖೆ ಶುರು ಮಾಡಿದಾಗಲೆ ಇದು ಅಪಘಾತವಲ್ಲ ಇದೊಂದು ಕೊಲೆ ಎಂಬುದು ಅವರಿಗೆ ತಿಳಿದು ಬಿಟ್ಟಿತ್ತು ಎಂದು ಹಿಮಂತ್ ಬಿಸ್ವ ಶರ್ಮಾ ಹೇಳಿದ್ದಾರೆ.

ಜುಬೀನ್ ಗರ್ಗ್ ಅವರು ನಾರ್ತ್ ಈಸ್ಟ್ ಇಂಡಿಯಾ ಫೆಸ್ಟ್​​ನಲ್ಲಿ ಭಾಗವಹಿಸಲು ಸಿಂಗಪುರಕ್ಕೆ ತೆರಳಿದ್ದರು. ಖಾಸಗಿ ಯಾಚ್​​​ನಲ್ಲಿ ಸೇಂಟ್ ಜೋನ್ಸ್ ದ್ವೀಪಕ್ಕೆ ತೆರಳಿದ್ದ ಗರ್ಗ್ ಅವರು ಸಮುದ್ರದಲ್ಲಿ ಈಜುವ ಸಮಯದಲ್ಲಿ ಮುಳುಗಿದ್ದರು. ಆ ವೇಳೆ ಅವರು ಜಾಕೆಟ್ ಧರಿಸಿರಲಿಲ್ಲ. ಗರ್ಗ್ ಸಾವಿನ ಬಳಿಕ ಸುಮಾರು 60 ಪ್ರಕರಣಗಳು ಅವರ ಸಾವಿನ ಕುರಿತು ದಾಖಲಾಗಿದ್ದವು. ಅಸ್ಸಾಂ ಸರ್ಕಾರವು ಎಸ್​​ಐಟಿ ರಚಿಸಿ ತನಿಖೆಗೆ ಆದೇಶಿಸಿತ್ತು. ಸಿಐಡಿ ಸಹ ಪ್ರಕರಣದ ತನಿಖೆ ನಡೆಸಿತು. ಬಳಿಕ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಮತ್ತೊಂದು ವಿಶೇಷ ತಂಡವನ್ನು ರಚಿಸಲಾಯ್ತು. ಇವುಗಳ ಜೊತೆಗೆ ಸಿಂಗಪುರ ಪೊಲೀಸರು ಸಹ ಈ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ನಡೆಸಿದರು. ಇದೀಗ ಇದು ಅಪಘಾತ ಅಥವಾ ಆಕಸ್ಮಿಕ ಸಾವಲ್ಲ ಬದಲಿಗೆ ಕೊಲೆ ಎಂದು ಸ್ವತಃ ಅಸ್ಸಾಂ ಸಿಎಂ ಹೇಳಿದ್ದು, ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ