ಪವನ್ ಕಲ್ಯಾಣ್ ಭವಿಷ್ಯದ ಬಗ್ಗೆ ಶಾಕಿಂಗ್ ವಿಚಾರ ಬಹಿರಂಗಪಡಿಸಿದ ಜ್ಯೋತಿಷಿಗಳು
ಯುಗಾದಿ ಹಬ್ಬಕ್ಕೆ ಜ್ಯೋತಿಷಿಗಳು ಪವನ್ ಕಲ್ಯಾಣ್ ಕುಂಡಲಿ ನೋಡಿ ಭವಿಷ್ಯ ನುಡಿದಿದ್ದಾರೆ. ಅವರ ಜಾತಕದ ಪ್ರಕಾರ ಪವನ್ ಕಲ್ಯಾಣ್ಗೆ ಸಿನಿಮಾ ರಂಗದಲ್ಲಿ ಈ ವರ್ಷ ಯಶಸ್ಸು ಸಿಗಲಿದೆ.
ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಕೊರೊನಾ ಎರಡನೇ ಅಲೆ, ಚಿತ್ರಮಂದಿರಗಳಲ್ಲಿ ಆಸನ ಮಿತಿ ಮತ್ತಿತ್ಯಾದಿ ಅಡೆತಡೆಗಳನ್ನು ಮೆಟ್ಟಿನಿಂತು ಸಿನಿಮಾ ಮುನ್ನುಗ್ಗುತ್ತಿದೆ. ಹೀಗಿರುವಾಗಲೇ ಪವನ್ ಕಲ್ಯಾಣ್ ಭವಿಷ್ಯದ ಬಗ್ಗೆ ಜ್ಯೋತಿಷಿಗಳು ಕೆಲ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಈ ವರ್ಷ ಸಿನಿಮಾ ರಂಗದಲ್ಲಿ ಪವನ್ ಮಿಂಚಿದರೂ, ರಾಜಕೀಯದಲ್ಲಿ ಅವರಿಗೆ ಯಶಸ್ಸು ಸಿಗುವುದು ಅನುಮಾನ ಎಂದು ಹೇಳಲಾಗಿದೆ. ಯುಗಾದಿ ಹಬ್ಬಕ್ಕೆ ಜ್ಯೋತಿಷಿಗಳು ಪವನ್ ಕಲ್ಯಾಣ್ ಕುಂಡಲಿ ನೋಡಿ ಭವಿಷ್ಯ ನುಡಿದಿದ್ದಾರೆ. ಅವರ ಜಾತಕದ ಪ್ರಕಾರ ಪವನ್ ಕಲ್ಯಾಣ್ಗೆ ಸಿನಿಮಾ ರಂಗದಲ್ಲಿ ಈ ವರ್ಷ ಯಶಸ್ಸು ಸಿಗಲಿದೆ. ಈಗಾಗಲೇ ಅವರ ಖ್ಯಾತಿ ದೇಶಾದ್ಯಂತ ಹಬ್ಬಿದ್ದು, ಇದು ದುಪ್ಪಟ್ಟು ಆಗಲಿದೆ ಎಂದು ಅಭಿಪ್ರಾಯಪಡಲಾಗಿದೆ.
ಆದರೆ, ರಾಜಕೀಯದಲ್ಲಿ ಅವರಿಗೆ ಅಂದುಕೊಂಡಮಟ್ಟದಲ್ಲಿ ಯಶಸ್ಸು ಸಿಗುವುದು ಸಾಧ್ಯವಿಲ್ಲವಂತೆ. ಪವನ್ ಕಲ್ಯಾಣ್ಗೆ ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಸಿಗಬೇಕು ಎಂದರೆ ಇನ್ನೂ ಹಲವು ವರ್ಷಗಳಕಾಲ ಅವರು ಶ್ರಮವಹಿಸಬೇಕು. ಅದಾದ ನಂತರವೇ ರಾಜಕೀಯ ವಲಯದಲ್ಲಿ ಅವರ ವರ್ಚಸ್ಸು ಬೆಳೆಯಲು ಸಾಧ್ಯ. ಸದ್ಯಕ್ಕಂತೂ ರಾಜಕೀಯ ವಲಯದಲ್ಲಿ ಅವರಿಗೆ ಯಶಸ್ಸು ಕೈ ಹಿಡಿಯುವುದಿಲ್ಲ ಎಂದು ಜ್ಯೋತಿಷಿಗಳು ಹೇಳಿದ್ದಾರೆ.
ಒಂದೊಮ್ಮೆ ಪವನ್ ಕಲ್ಯಾಣ್ ರಾಜಕೀಯದಲ್ಲಿ ಯಶಸ್ಸು ಕಂಡರೆ ಕೇವಲ ರಾಜ್ಯ ನಾಯಕನಾಗಿ ಉಳಿಯುವುದಿಲ್ಲವಂತೆ. ರಾಷ್ಟ್ರ ರಾಜಕಾರಣದಲ್ಲಿ ಅವರ ಪ್ರಭಾವ ಹೆಚ್ಚಿರಲಿದೆ. ಇದಕ್ಕೆ ಅವರು ತುಂಬಾನೇ ತಾಳ್ಮೆಯಿಂದ ಕಾಯಬೇಕು ಎಂಬುದು ಜ್ಯೋತಿಷಿಗಳ ಭವಿಷ್ಯ.
ಇತ್ತೀಚೆಗೆ ಪವನ್ ಕಲ್ಯಾಣ್ ಕ್ವಾರಂಟೈನ್ ಆಗಿದ್ದಾರೆ. ಪವನ್ ಕಲ್ಯಾಣ್ ಸಿನಿಮಾ ಪ್ರಚಾರಕ್ಕಾಗಿ ಸಾಕಷ್ಟು ಸುತ್ತಾಟ ನಡೆಸಿದ್ದರು. ಪರಿಣಾಮ ಪವನ್ ಕಲ್ಯಾಣ್ ಅವರ ಜತೆ ಇದ್ದ ಸಿಬ್ಬಂದಿಗೆ ಕೊವಿಡ್ ಪಾಸಿಟಿವ್ ವರದಿ ಬಂದಿದೆ. ಇದು ಪವನ್ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಮುಂಜಾಗೃತಾ ಕ್ರಮವಾಗಿ ಅವರು ಕ್ವಾರಂಟೈನ್ ಆಗಿದ್ದಾರೆ.
ಇದನ್ನೂ ಓದಿ: ಪವನ್ ಕಲ್ಯಾಣ್ ಗೆಂದು ಕೈ ಕತ್ತರಿಸಿಕೊಂಡ ಅಭಿಮಾನಿ