ಕಳೆದ ಕೆಲವು ದಿನಗಳಿಂದ ಆಯೇಶಾ ಖಾನ್ (Ayesha Khan) ಸುದ್ದಿಯಲ್ಲಿದ್ದಾರೆ. ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 17’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು. ಇದರಿಂದ ಅವರ ಜನಪ್ರಿಯತೆ ಹೆಚ್ಚಾಗಿದೆ. ಆಯೇಶಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಮುನಾವರ್ ಫಾರೂಕಿ ವಿರುದ್ಧ ಆಯೇಶಾ ಖಾನ್ ಗಂಭೀರ ಹಾಗೂ ಆಘಾತಕಾರಿ ಆರೋಪ ಮಾಡಿದ್ದರು. ಮುನಾವರ್ ಜೊತೆ ಪ್ರೀತಿಯಲ್ಲಿ ಇದ್ದಿದ್ದಾಗಿ ಅವರು ಹೇಳಿಕೊಂಡಿದ್ದರು. ಆಯೇಶಾ ಖಾನ್ ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟಯ ದಿನ ಸಾಕಷ್ಟು ಚರ್ಚೆಗೆ ಒಳಗಾದರು. ಅವರು ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ. ತಮಗಾದ ಕಹಿ ಅನುಭವಗಳ ಬಗ್ಗೆ ಅವರು ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಬಂದ ನಂತರ ಆಯೇಶಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಯೇಶಾ ಖಾನ್ ಕೆಲವು ಆಘಾತಕಾರಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಮ್ಮೆ ತಮ್ಮ ತಂದೆಯ ವಯಸ್ಸಿನ ವ್ಯಕ್ತಿಯೊಬ್ಬರು ತಮ್ಮ ದೇಹದ ಬಗ್ಗೆ ತುಂಬಾ ಕೊಳಕು ಕಾಮೆಂಟ್‌ಗಳನ್ನು ಮಾಡಿದ್ದರು ಎಂದು ಆಯೇಶಾ ಖಾನ್ ಹೇಳಿದ್ದಾರೆ. ‘ನಾನು ನಮ್ಮ ಮನೆಯ ಅಪಾರ್ಟ್ಮೆಂಟ್ ಕಟ್ಟಡದ ಕೆಳಗೆ ನಡೆದುಕೊಂಡು ಹೋಗುತ್ತಿದ್ದಾಗ ನನ್ನ ತಂದೆಯ ವಯಸ್ಸಿನ ವ್ಯಕ್ತಿಯೊಬ್ಬರು ನನ್ನ ದೇಹದ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಲು ಪ್ರಾರಂಭಿಸಿದರು’ ಎಂದು ಕಹಿ ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ.
‘ಒಮ್ಮೆ ನಾನು ಜುಹು ಬೀಚ್‌ಗೆ ಹೋದಾಗ ಕೆಲವರು ನನ್ನನ್ನು ತುಂಬಾ ವಿಚಿತ್ರವಾಗಿ ನೋಡುತ್ತಿದ್ದರು. ಆ ನಂತರ ನಡುಗುತ್ತಲೇ ಅಲ್ಲಿಂದ ಹೊರಟೆ. ನಾನು ಮಾರ್ಕೆಟಿಂಗ್ ಏಜೆನ್ಸಿಯಿಂದ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ. ಫೋಟೋಶೂಟ್ ಮಾಡಲು ಅವರು ನನಗೆ ಕೆಲವು ಬಟ್ಟೆಗಳನ್ನು ನೀಡಿದರು. ನಾನು ಖಂಡಿತವಾಗಿಯೂ ಹೆಚ್ಚು ಉತ್ಸುಕನಾಗಿದ್ದೆ’ ಎಂದಿದ್ದಾರೆ ಆಯೇಶಾ. ಆದರೆ ನಂತರ ನಡೆದ ಘಟನೆ ಅವರನ್ನು ಬೆಚ್ಚಿ ಬೀಳಿಸಿತ್ತು.
‘ಆ ಸಮಯದಲ್ಲಿ ಅವರು ನನಗೆ ಕಪ್ಪು ನೆಟೆಡ್ ಡ್ರೆಸ್ ಕೊಟ್ಟರು. ಒಳಗೆ ಏನಾದರೂ ಹಾಕಲು ಕೊಡುತ್ತಾರೆ ಎಂದು ಕಾಯುತ್ತಿದ್ದೆ ಆದರೆ, ಹಾಗಲ್ಲ. ನೆಟೆಡ್ ಡ್ರೆಸ್ ಮಾತ್ರ ಹಾಕಬೇಕಿತ್ತು. ಅದಕ್ಕಾಗಿ ನಾನು ಆಫರ್ ನಿರಾಕರಿಸಿದೆ. ಹೆಚ್ಚು ಆಕರ್ಷಕವಾಗಿ ಕಾಣಲು ನೀವು ಈ ರೀತಿಯ ಬಟ್ಟೆಯನ್ನೇ ಧರಿಸಬೇಕು ಎಂದು ಅವರು ಹೇಳಿದ್ದರು. ಜೊತೆಗೆ ಈ ಹಿಂದೆ ಅನೇಕ ದೊಡ್ಡ ನಟಿಯರು ಇದೇ ರೀತಿಯ ಬಟ್ಟೆಗಳನ್ನು ಧರಿಸಿದ್ದರು ಎಂದು ನನ್ನ ಮನ ಒಲಿಸಲು ಬಂದಿದ್ದರು. ನಾನು ಆಫರ್ ರಿಜೆಕ್ಟ್ ಮಾಡಿದೆ’ ಎಂದಿದ್ದಾರೆ ಆಯೇಶಾ.
ಇದನ್ನೂ ಓದಿ: ಬಿಗ್ಬಾಸ್ ವಿಜೇತ ಮುನಾವರ್ ಫಾರೂಖಿ ಬಂಧನ
ಆಯೇಶಾ ಖಾನ್ ಅವರ ಈ ಮಾತು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆಯೇಶಾ ಖಾನ್ ಈ ರೀತಿಯ ವಿಚಾರಗಳಲ್ಲಿ ಮೌನ ಮುರಿದಿದ್ದು ಕಡಿಮೆ. ಇದೇ ಮೊದಲ ಬಾರಿಗೆ ಅವರು ಈ ಬಗ್ಗೆ ಮಾತನಾಡಿದ್ದಾರೆ. ಆಯೇಶಾ ಖಾನ್ ಅಪಾರ ಸಂಪತ್ತಿನ ಒಡತಿ. ಆಯೇಶಾ ಖಾನ್ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ