DD National ‘ಸ್ವರಾಜ್’ ವಿಶೇಷ ಸರಣಿ ವೀಕ್ಷಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ: ದೇಶ ಭಕ್ತರ ಕಥೆ ವೀಕ್ಷಿಸಿ ಪುಳಕಿತನಾದೆ! ನೀವೂ ನೋಡೀ ಎಂದರು

| Updated By: ಸಾಧು ಶ್ರೀನಾಥ್​

Updated on: Aug 18, 2022 | 5:40 PM

Pralhad Joshi: 75 ಸಂಚಿಕೆಯ ಈ ವಿಶೇಷ ಸರಣಿಯನ್ನು ತಾವೆಲ್ಲರೂ ಖಂಡಿತವಾಗಿಯೂ ನೋಡಲೇ ಬೇಕು. ಪ್ರತಿ ಸಂಚಿಕೆಯೂ ನಮ್ಮ ವೀರ ಹಾಗೂ ಸ್ಪೂರ್ತಿಯ ಚಿಲುಮೆಯಂತಿದ್ದ ಹಲವು ನಾಯಕರ ಇತಿಹಾಸವನ್ನು ತಿಳಿಸುತ್ತದೆ ಹಾಗೂ ದೇಶಭಕ್ತಿಯನ್ನು ಮತ್ತಷ್ಟು ಜಾಗೃತಗೊಳಿಸುತ್ತದೆ. ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ @DDNational ನಲ್ಲಿ ಈ ಸರಣಿ ಪ್ರಸಾರವಾಗಲಿದೆ.

DD National ಸ್ವರಾಜ್ ವಿಶೇಷ ಸರಣಿ ವೀಕ್ಷಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ: ದೇಶ ಭಕ್ತರ ಕಥೆ ವೀಕ್ಷಿಸಿ ಪುಳಕಿತನಾದೆ! ನೀವೂ ನೋಡೀ ಎಂದರು
'ಸ್ವರಾಜ್' ವಿಶೇಷ ಸರಣಿ ವೀಕ್ಷಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ದೇಶ ಭಕ್ತರ ಕಥೆ ವೀಕ್ಷಿಸಿ ಪುಳಕಿತನಾದೆ! ನೀವೂ ನೋಡೀ ಎಂದರು
Follow us on

ನವದೆಹಲಿ: ‘ಸ್ವರಾಜ್‌-ಭಾರತ್ ಕೆ ಸ್ವತಂತ್ರ ಸಂಗ್ರಾಮ ಕಿ ಸಮಗ್ರ ಗಾಥಾ’ (Swaraj Bharat ke Swatantrata sangram ki samagra gatha) ಎಂಬ ಸ್ವಾತಂತ್ರ್ಯ ಹೋರಾಟಗಾರರ (Freedom Fighters) ಕುರಿತಾದ ವಿಶಿಷ್ಟ ಸರಣಿ ನಿರ್ಮಾಣ/ ಪ್ರದರ್ಶನದ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ. ದೆಹಲಿಯ ಸಂಸತ್ ಭವನದ GMC ಬಾಲಯೋಗಿ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದ್ದ ಈ ವಿಶಿಷ್ಟ ಸರಣಿ ಪ್ರದರ್ಶನವನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ಸ್ವರಾಜ್ ಸಂಚಿಕೆ ವೀಕ್ಷಣೆ ವೀಕ್ಷಿಸಿದ ಬಳಿಕ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi ) ತಮ್ಮ ಭಾವನಾತ್ಮಕ ಅನಿಸಿಕೆ ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವರು, ಸಂಸದರು ಈ ಸಂಚಿಕೆ ವೀಕ್ಷಿಸಿದರು. ಪ್ರಧಾನಿ ಮೋದಿ ಜೊತೆ ದೇಶ ಭಕ್ತರ ಕಥೆ ವೀಕ್ಷಿಸಿ ಪುಳಕಿತನಾದೆ. ಉಲ್ಲಾಳದ ರಾಣಿ ಅಬ್ಬಕ್ಕ, ಕೆಳದಿಯ ಶಿವಪ್ಪ ನಾಯಕ್‌ ಮತ್ತು ಕೆಳದಿ ಚೆನ್ನಮ್ಮ ಅವರ ಸಂಕಲ್ಪ, ಹೋರಾಟ ಮತ್ತು ಸಮರ್ಪಣೆ ಕುರಿತು ಸಂಚಿಕೆ ಪ್ರದರ್ಶಿಸಲಾಯಿತು. ಈ ವಿಶೇಷ ಸರಣಿಯನ್ನು ತಾವೆಲ್ಲರೂ ನೋಡಲೇಬೇಕೆಂದು ಸಚಿವ ಜೋಶಿ ಟ್ವೀಟ್ (Joshi Tweet) ಮಾಡಿದ್ದಾರೆ.

ಸಚಿವ ಜೋಶಿ ಟ್ವೀಟ್ ಸಾರಾಂಶ ಇಲ್ಲಿದೆ:

75 ಸಂಚಿಕೆಯ ಈ ವಿಶೇಷ ಸರಣಿಯನ್ನು ತಾವೆಲ್ಲರೂ ಖಂಡಿತವಾಗಿಯೂ ನೋಡಲೇ ಬೇಕು. ಪ್ರತಿ ಸಂಚಿಕೆಯೂ ನಮ್ಮ ವೀರ ಹಾಗೂ ಸ್ಪೂರ್ತಿಯ ಚಿಲುಮೆಯಂತಿದ್ದ ಹಲವು ನಾಯಕರ ಇತಿಹಾಸವನ್ನು ತಿಳಿಸುತ್ತದೆ ಹಾಗೂ ದೇಶಭಕ್ತಿಯನ್ನು ಮತ್ತಷ್ಟು ಜಾಗೃತಗೊಳಿಸುತ್ತದೆ.
ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ @DDNational ನಲ್ಲಿ ಈ ಸರಣಿ ಪ್ರಸಾರವಾಗಲಿದೆ.

75 ಸಂಚಿಕೆಯ ಈ ವಿಶೇಷ ಸರಣಿಯನ್ನು ತಾವೆಲ್ಲರೂ ಖಂಡಿತವಾಗಿಯೂ ನೋಡಲೇ ಬೇಕು. ಪ್ರತಿ ಸಂಚಿಕೆಯೂ ನಮ್ಮ ವೀರ ಹಾಗೂ ಸ್ಪೂರ್ತಿಯ ಚಿಲುಮೆಯಂತಿದ್ದ ಹಲವು ನಾಯಕರ ಇತಿಹಾಸವನ್ನು ತಿಳಿಸುತ್ತದೆ ಹಾಗೂ ದೇಶಭಕ್ತಿಯನ್ನು ಮತ್ತಷ್ಟು ಜಾಗೃತಗೊಳಿಸುತ್ತದೆ.
ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ @DDNational ನಲ್ಲಿ ಈ ಸರಣಿ ಪ್ರಸಾರವಾಗಲಿದೆ.

ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕುರಿತು ದೂರದರ್ಶನ ನಿರ್ಮಾಣ ಮಾಡಿರುವ ವಿಶಿಷ್ಟ ಸರಣಿ ʼಸ್ವರಾಜ್‌-ಭಾರತ್ ಕೆ ಸ್ವತಂತ್ರ ಸಂಗ್ರಾಮ ಕಿ ಸಮಗ್ರ ಗಾಥಾʼದ ವಿಶೇಷ ಪ್ರದರ್ಶನವನ್ನು ಜಿಎಮ್‌ಸಿ ಬಾಲಯೋಗಿ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು. ಪ್ರಧಾನಿ ಮೋದಿ ಅವರೊಂದಿಗೆ ಈ ವಿಶೇಷ ಕಾರ್ಯಕ್ರಮದಲ್ಲಿ ವೀರ ದೇಶ ಭಕ್ತರ ಕಥೆಯನ್ನು ವೀಕ್ಷಿಸಿ ಪುಳಕಿತನಾದೆ.

ಇದನ್ನೂ ಓದಿ:

‘ಸ್ವರಾಜ್​’ ಸರಣಿ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ; ಕ್ಯಾಬಿನೆಟ್ ಸಚಿವರ ಸಾಥ್

Published On - 5:18 pm, Thu, 18 August 22