ಸೆಲೆಬ್ರಿಟಿಗಳ ರೇವ್​ ಪಾರ್ಟಿಯಲ್ಲಿ ಆರು ಮಂದಿ ಅರೆಸ್ಟ್​; ಸಿಕ್ಕ ಮಾದಕ ವಸ್ತುಗಳು ಏನು?

| Updated By: ಮದನ್​ ಕುಮಾರ್​

Updated on: May 20, 2024 | 7:55 PM

ಜಿ.ಆರ್. ಫಾರ್ಮ್ ಹೌಸ್​ನಲ್ಲಿ ನಡೆದ ರೇವ್​ ಪಾರ್ಟಿಯಲ್ಲಿ ಅಂದಾಜು 101 ಮಂದಿ ಭಾಗಿ ಆಗಿದ್ದರು. 71 ಯುವಕರು ಮತ್ತು 30 ಯುವತಿಯರು ಪಾರ್ಟಿ ಮಾಡಿದ್ದಾರೆ. ಸಿನಿಮಾ ನಟಿ ಹೇಮಾ ಸೇರಿದಂತೆ ಕಿರುತೆರೆ ನಟ-ನಟಿಯರು ಹಾಗೂ ಮಾಡಲ್​ಗಳು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. 6 ಜನರನ್ನು ಅರೆಸ್ಟ್​ ಮಾಡಲಾಗಿದ್ದು, ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಸೆಲೆಬ್ರಿಟಿಗಳ ರೇವ್​ ಪಾರ್ಟಿಯಲ್ಲಿ ಆರು ಮಂದಿ ಅರೆಸ್ಟ್​; ಸಿಕ್ಕ ಮಾದಕ ವಸ್ತುಗಳು ಏನು?
ರೇವ್​ ಪಾರ್ಟಿ ನಡೆದ ಸ್ಥಳ
Follow us on

ಬೆಂಗಳೂರಿನ ಜಿ.ಆರ್. ಫಾರ್ಮ್ ಹೌಸ್​ನಲ್ಲಿ ರೇವ್ ಪಾರ್ಟಿ (Bangalore Rave Party) ಮಾಡಿದ ಆರೋಪದಲ್ಲಿ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಐವರು ಆರೋಪಿಗಳ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪಾರ್ಟಿಗೆ ತಂದಿದ್ದ 15.56 ಗ್ರಾಂ ಎಂಡಿಎಂಎ, 6.2 ಗ್ರಾಂ ಕೊಕೈನ್, 6 ಗ್ರಾಂ ಹೈಡ್ರೋ ಗಾಂಜಾ, 5 ಮೊಬೈಲ್, 2 ವಾಹನಗಳನ್ನು ಸೀಜ್ ಮಾಡಲಾಗಿದೆ. ‘ಸನ್ ಸೆಟ್ ಟು ಸನ್ ರೈಸ್ ವಿಕ್ಟರಿ’ ಎಂದು ಪಾರ್ಟಿ (Rave Party) ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಮಾದಕ ವಸ್ತು (Drugs) ಬಳಕೆ ಆದ ಬಗ್ಗೆ ಮಾಹಿತಿ ತಿಳಿದು ಸಿಸಿಬಿ ಟೀಂ ದಾಳಿ ನಡೆಸಿತು.

ಅರೆಸ್ಟ್ ಆದ ಐವರನ್ನು ಹೊರತುಪಡಿಸಿ ಉಳಿದ ಎಲ್ಲರನ್ನೂ ಸಿಸಿಬಿ ಪೊಲೀಸರು ಬಿಟ್ಟು ಕಳಿಸಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿದ್ದವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ, ವಿಳಾಸ, ಫೋನ್ ನಂಬರ್ ದಾಖಲಿಸಿಕೊಂಡು ಮನೆಗೆ ಕಳಿಸಲಾಗಿದೆ. ಸೂಚನೆ ನೀಡಿದಾಗ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಎಲ್ಲರ ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ. ಅರೆಸ್ಟ್ ಆಗಿರುವ ಐವರ ವಿಚಾರಣೆ ಮುಂದುವರಿದಿದೆ.

ಇದನ್ನೂ ಓದಿ: ‘ರೇವ್​ ಪಾರ್ಟಿಯಲ್ಲಿ ನಾನು ಇರಲಿಲ್ಲ’: ಸ್ಪಷ್ಟನೆ ನೀಡಿದ ‘ಜೇಮ್ಸ್​’ ಸಿನಿಮಾ ನಟ ಶ್ರೀಕಾಂತ್

ಈ ಪಾರ್ಟಿಯಲ್ಲಿ ಅಂದಾಜು 101 ಜನರು ಭಾಗಿ ಆಗಿದ್ದರು ಎನ್ನಲಾಗಿದೆ. ಈ 101 ಜನರಲ್ಲಿ ಬೆಂಗಳೂರಿನವರು ಯಾರೂ ಇಲ್ಲ. ಎಲ್ಲರು ಹೊರರಾಜ್ಯದವರು ಎನ್ನುವುದು ಪೊಲೀಸರ ವಿಚಾರಣೆಯಲ್ಲಿ ಪತ್ತೆ ಆಗಿದೆ. ರೇವ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಎಲ್ಲರೂ ಆಂಧ್ರ ಪ್ರದೇಶ ಹಾಗೂ ಪಾಂಡಿಚೆರಿ ಮೂಲದವರಾಗಿದ್ದು, ಬರ್ತ್​ಡೇ ಪಾರ್ಟಿ ಆಯೋಜನೆ ಮಾಡಿದ್ದ ವಾಸು ಹೈದರಾಬಾದ್​ನವರು ಎನ್ನಲಾಗಿದೆ.

ಇದನ್ನೂ ಓದಿ: ರೇವ್​ ಪಾರ್ಟಿ ಸ್ಥಳದಲ್ಲೇ ವಿಡಿಯೋ ಮಾಡಿ ‘ಹೈದರಾಬಾದ್​ನಲ್ಲಿ ಇದೀನಿ’ ಅಂತ ಸುಳ್ಳು ಹೇಳಿದ ನಟಿ ಹೇಮಾ

ಫಾರ್ಮ್​ ಹೌಸ್ ಮಾಲೀಕ ಗೋಪಾಲ್ ರೆಡ್ಡಿ ಮಾತ್ರ ಬೆಂಗಳೂರಿನ ಉದ್ಯಮಿ. ಬೆಂಗಳೂರಲ್ಲಿ ಅವರು ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ನಿರ್ಮಾಣ ಕಂಪನಿ ಹೊಂದಿದ್ದಾರೆ. ಪಾರ್ಟಿ ಮಾಡಿದ 101 ಜನರ ಪೈಕಿ 71 ಯುವಕರು ಹಾಗೂ 30 ಯುವತಿಯರು ಇದ್ದಾರೆ. ತೆಲುಗು ಸಿನಿಮಾರಂಗದ ನಟಿ ಹೇಮಾ ಸೇರಿ ಕಿರುತೆರೆ ಕಲಾವಿದರು, ಮಾಡಲ್​ಗಳು ಭಾಗಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.