ನಟ ಶಾರುಖ್ ಖಾನ್ ಸತತ 4 ವರ್ಷಗಳ ಬಳಿಕ ‘ಪಠಾಣ್’ (Pathaan) ಚಿತ್ರದ ಮೂಲಕ ತೆರೆಗೆ ಬರಲು ಸಜ್ಜಾಗಿದ್ದಾರೆ. ಹೀಗಾಗಿ ಬಾಲಿವುಡ್ ಅಂಗಳದಲ್ಲಿ ಮತ್ತು ಶಾರುಖ್ ಖಾನ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ‘ಪಠಾಣ್’ ಚಿತ್ರದ ಮೊದಲ ಹಾಡು ‘ಬೇಷರಂ ರಂಗ್..’ (Besharam Rang) ಡಿ. 12ರಂದು ಬಿಡುಗಡೆಯಾಗಿದೆ. ನಟಿ ದೀಪಿಕಾ ಪಡುಕೋಣೆ ಮೈ ಚಳಿ ಬಿಟ್ಟು ಹೆಜ್ಜೆ ಹಾಕಿದ್ದಾರೆ. ಇಬ್ಬರ ಕೆಮಿಸ್ಟ್ರಿಯನ್ನು ಕೆಲವರು ಮೆಚ್ಚಿಕೊಂಡಿದ್ದಾರೆ. ಆದರೆ ಈ ಹಾಡು ಬಿಡುಗಡೆಯಾಗುತ್ತಿದಂತೆ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ. ಎಲ್ಲದರಲ್ಲಿಯೂ ತಪ್ಪು ಹುಡುಕುವ ಕೆಲ ನೆಟ್ಟಿಗರು ಮಾತ್ರ ‘ಬೇಷರಂ ರಂಗ್..’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಬಿಕಿನಿಯನ್ನು ಧರಿಸಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಟ ಶಾರುಖ್ ಖಾನ್ ಕೂಡ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ (Ramya Divya Spandana) ಕೂಡ ಈ ಕುರಿತಾಗಿ ಟ್ವೀಟ್ ಮಾಡಿದ್ದಾರೆ.
ನಟಿ ರಮ್ಯಾ ಅವರು ಸದ್ಯ ಬಹಳ ಚರ್ಚೆಗೆ ಗ್ರಾಸವಾಗಿರುವ ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದ ‘ಬೇಷರಂ ರಂಗ್..’ ಹಾಡು ಮತ್ತು ನಟಿ ದೀಪಿಕಾ ಪಡುಕೋಣೆ ಧರಿಸಿರುವ ಬಟ್ಟೆ ಕುರಿತಾಗಿ ಅವರು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ‘ಹೆಣ್ಣುಮಕ್ಕಳು ಸದಾ ಒಂದಿಲ್ಲೊಂದು ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಸಮಂತಾ ತನ್ನ ವಿಚ್ಛೇದನಕ್ಕಾಗಿ, ಸಾಯಿ ಪಲ್ಲವಿ ಅವರ ಅಭಿಪ್ರಾಯಕ್ಕಾಗಿ, ರಶ್ಮಿಕಾ ಮಂದಣ್ಣ ಅವರ ಬ್ರೇಕಪ್ನಿಂದ ಮತ್ತು ಈಗ ದೀಪಿಕಾ ಪಡುಕೋಣೆ ಅವರ ಬಟ್ಟೆಯಿಂದ, ಹೀಗೆ ಇತರೆ ಅನೇಕ ಮಹಿಳೆಯರನ್ನು ಎಲ್ಲದಕ್ಕೂ ಟ್ರೋಲ್ ಮಾಡಲಾಗುತ್ತಿದೆ. ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕು. ಮಹಿಳೆಯರು ದುರ್ಗೆಯ ಮೂರ್ತರೂಪವಾಗಿದ್ದಾರೆ. ಸ್ತ್ರೀ ದ್ವೇಷವು ನಾವು ಹೋರಾಡಬೇಕಾದ ದುಷ್ಟತನವಾಗಿದೆ’ ಎಂದು ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Samantha trolled for her divorce, Sai Pallavi for her opinion,Rashmika for her separation, Deepika for her clothes and many, many other women for pretty much EVERYTHING. Freedom of choice is our basic right. Women are the embodiment of Maa Durga- misogyny is an evil we must fight
— Ramya/Divya Spandana (@divyaspandana) December 16, 2022
ಸದ್ಯ ಎಲ್ಲೆಡೆ ‘ಪಠಾಣ್’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ಕೇಸರಿ ಬಣ್ಣದ ಬಟ್ಟೆ ಬಗ್ಗೆ ಪ್ರತಿಭಟನೆಗಳು, ವಿರೋಧಗಳು ವ್ಯಕ್ತವಾಗುತ್ತಿದ್ದು ರಮ್ಯಾ ಕೂಡ ರಿಯಾಕ್ಟ್ ಮಾಡಿದ್ದು, ಬಾರಿ ವೈರಲ್ ಆಗುತ್ತಿದೆ. ರಮ್ಯಾ ಅವರು ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಸದ್ಯ ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಮತ್ತೆ ಸ್ಯಾಂಡಲ್ವುಡ್ಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Prakash Raj: ‘ಬೇಷರಂ ರಂಗ್’ ವಿವಾದ; ‘ಇದನ್ನೆಲ್ಲ ಎಲ್ಲಿಯವರೆಗೆ ಸಹಿಸಬೇಕು’ ಅಂತ ಪ್ರಶ್ನೆ ಮಾಡಿದ ಪ್ರಕಾಶ್ ರಾಜ್
ಅವರ ನಿರ್ಮಾಣದಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ಮೂಡಿಬರುತ್ತಿದ್ದು, ರಾಜ್ ಬಿ. ಶೆಟ್ಟಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸಿರಿ ರವಿಕುಮಾರ್ ಅವರು ನಾಯಕಿ ಆಗಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಕೂಡ ಮುಗಿದಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.