Honganasu: ಪ್ರೀತಿ ರಿಜೆಕ್ಟ್ ಮಾಡಿದ್ರೂ ರಿಷಿ ಮೇಲೆ ವಸುಗೆ ಅತಿಯಾದ ಕಾಳಜಿ

Honganasu Serial Update: ಬೆಳಗ್ಗೆ ಕಾಲೇಜಿಗೆ ಬಂದ ರಿಷಿಯನ್ನು ವಿದ್ಯಾರ್ಥಿಗಳು ಅದ್ದೂರಿಯಾಗಿ ಸ್ವಾಗತ ಮಾಡಿದರು. ಕೈಯಲ್ಲಿ ಹೂವು ಹಿಡಿದು ರಿಷಿಗೆ ವೆಲ್ ಕಮ್ ಮಾಡಿದರು. ಇದೆಲ್ಲ ವಸುಧರಾ ಮಾಡಿದ ಪ್ಲಾನ್.

Honganasu: ಪ್ರೀತಿ ರಿಜೆಕ್ಟ್ ಮಾಡಿದ್ರೂ ರಿಷಿ ಮೇಲೆ ವಸುಗೆ ಅತಿಯಾದ ಕಾಳಜಿ
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 16, 2022 | 4:11 PM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ರಿಷಿ ಬೇಗ ಗುಣಮುಖರಾಗಲಿ ಎಂದು ಪೂಜೆ ಮಾಡಿಸಿ ಪ್ರಸಾದ ತೆಗೆದುಕೊಂಡು ಬಂದಳು ವಸುಧರಾ. ಆದರೆ ವಸುಧರಾಳನ್ನು ಮನೆಯೊಳಗೆ ಸೇರಿಸದೆ ಸರಿಯಾಗಿ ಬೈದು ವಾಪಾಸ್ ಕಳುಹಿಸಿದಳು ದೇವಯಾನಿ. ಅಳುತ್ತಾ ಮನೆಯಿಂದ ಹೊರಟಳು ವಸುಧರಾ. ಬಳಿಕ ತಾನು ತಂದಿದ್ದ ಪ್ರಸಾದವನ್ನು ಗೌತಮ್‌ಗೆ ಕೊಟ್ಟು ರಿಷಿಗೆ ಕೊಡುವಂತೆ ಹೇಳಿದಳು ವಸು.

ಗೆಳೆಯ ರಿಷಿಯ ಸೇವೆ ಮಾಡುತ್ತಿದ್ದಾನೆ ಗೌತಮ್. ರಿಷಿಗೆ ತಾನೇ ಊಟ ಮಾಡಿಸಬೇಕೆಂದು ಮಾಡಿಸಿದ ಗೌತಮ್. ರಿಷಿ ಬೇಡ ಬೇಡ ಎಂದು ಹಠ ಮಾಡಿದರೂ ಬಿಡದೆ ಊಟ ಮಾಡಿಸಿದ. ಅದೆ ಗ್ಯಾಪ್​ನಲ್ಲಿ ವಸುಧರಾ ಕೊಟ್ಟ ಪ್ರಸಾದವನ್ನು ನೀಡಿದ. ಇದನ್ನು ಯಾರು ಕೊಟ್ಟಿದ್ದು, ದೊಡ್ಡಮ್ಮ ದೇವಸ್ಥಾನಕ್ಕೆ ಹೋಗಿದ್ರಾ ಎಂದು ಕೇಳಿದ ರಿಷಿ. ವಸುಧರಾ ಕೊಟ್ಟ ಪ್ರಸಾದ ಎಂದು ಬಾಯ್ಬಿಟ್ಟಿಲ್ಲ ಗೌತಮ್. ಆದರೆ ರಿಷಿಗೆ ಅನುಮಾನ ಬಂದು, ದೊಡ್ಡಮ್ಮ ದೇವಸ್ಥಾನಕ್ಕೆ ಹೋಗಿದ್ರೆ ಅವರೇ ಬಂದು ಕೊಡುತ್ತಿದ್ದರು. ಇದನ್ನ ಕೊಟ್ಟಿದ್ದು ಯಾರು ಅಂತ ಗೊತ್ತಾಯಿತು ಬಿಡು ಎಂದ. ರಿಷಿ ಫೋನ್​ನಿಂದ ವಸುಗೆ ವಿಡಿಯೋ ಕಾಲ್ ಮಾಡಿದ ಗೌತಮ್. ವಸುಧರಾ ಫೋನ್ ರಿಸೀವ್ ಮಾಡುತ್ತಿದ್ದಂತೆ ಗೌತಮ್ ಮೇಲೆ ಕೂಗಾಡಿದ ರಿಷಿ. ಫೋನ್ ಯಾಕೆ ಮಾಡಿದ್ದು ಎಂದು ಕಾಲ್ ಕಟ್ ಮಾಡಿದ. ಇಬ್ಬರ ಕಿತ್ತಾಟದ ನಡುವೆಯೂ ರಿಷಿಯನ್ನು ನೋಡಿ ಖುಷಿ ಪಟ್ಟಳು ವಸುಧರಾ.

ಇದನ್ನೂ ಓದಿ: Honganasu: ರಿಷಿ ನೋಡಲು ಬಿಡದೇ ವಸುಧರಾಳನ್ನು ಮನೆಯಿಂದ ಹೊರ ನೂಕಿದ ದೇವಯಾನಿ

ಬೆಳಗ್ಗೆ ಕಾಲೇಜಿಗೆ ಬಂದ ರಿಷಿಯನ್ನು ವಿದ್ಯಾರ್ಥಿಗಳು ಅದ್ದೂರಿಯಾಗಿ ಸ್ವಾಗತ ಮಾಡಿದರು. ಕೈಯಲ್ಲಿ ಹೂವು ಹಿಡಿದು ರಿಷಿಗೆ ವೆಲ್ ಕಮ್ ಮಾಡಿದರು. ಇದೆಲ್ಲ ವಸುಧರಾ ಮಾಡಿದ ಪ್ಲಾನ್ ಎಂದು ಗೊತ್ತಾದ ಬಳಿಕ ಇದ್ಯಾವುದು ಬೇಡ ಎಂದು ನೇರವಾಗಿ ತನ್ನ ಚೇಂಬರ್‌ಗೆ ಹೊರಟು ಹೋದ ರಿಷಿ. ಅಷ್ಟಕ್ಕೆ ಸುಮ್ಮನಾಗದ ವಸುಧರಾ ತರಗತಿಯ ಬೋರ್ಡ್ ಮೇಲೂ ಹೂವಿನಿಂದ ವೆಲ್ ಕಮ್ ರಿಷಿ ಎಂದು ಬರೆದಿದ್ದಳು. ಅದನ್ನು ನೋಡಿ ಮತ್ತಷ್ಟು ಕೋಪ ಮಾಡಿಕೊಂಡ ರಿಷಿ. ಅಕ್ಷರ ಬರೆಯುವ ಬೋರ್ಡ್ ಮೇಲೆ ಹೀಗೆಲ್ಲ ಮಾಡಬಾರದು ಎಂದು ಎಲ್ಲವನ್ನೂ ಕಿತ್ತು ಬಿಸಾಕಿದ.

ಇದನ್ನೂ ಓದಿ: Honganasu: ಜಗತಿಗೆ ಅನುಮಾನ ಮೂಡಿಸಿದ ವಸುಧರಾ ಮಾತು; ರಿಷಿ ಮುಂದಿನ ನಿಲುವೇನು?

ಕಾಲೇಜು ಆವರಣದಲ್ಲಿ ಊಟ ಮಾಡದೆ ಒಬ್ಬಳೇ ಕುಳಿತಿದ್ದ ವಸು ನೋಡಿ ಊಟ ಆಯಿತಾ ಎಂದು ಮೆಸೇಜ್ ಮಾಡಿದ ರಿಷಿ. ವಸು ಮೆಸೇಜ್ ಓಪನ್ ಮಾಡಿ ನೋಡುವುದ್ರೊಳಗೆ ಡಿಲೀಟ್ ಮಾಡಿದ. ನಾನ್ಯಾಕೆ ಅವಳ ಮೇಲೆ ಕಾಳಜಿ ತೋರಿಸಬೇಕೆಂದು ಹಾಗೆ ಹೊರಟು ಹೋದ. ಅಷ್ಟೊತ್ತಿಗೆ ಮನೆಯಿಂದ ಊಟ ತೆಗುಕೊಂಡು ಬಂದ ಗೌತಮ್, ಜೊತೆಯಲ್ಲೇ ಊಟ ಮಾಡೋಣ ಬಾ ಎಂದು ವಸುಧರಾಳನ್ನು ಕರೆದ. ಆದರೆ ತಾನು ಬರಲ್ಲ ನೀವೆಲ್ಲ ಊಟ ಮಾಡಿ ಎಂದಳು ವಸು. ಊಟ ತೆಗೆದುಕೊಂಡು ರಿಷಿ ಬಳಿ ಹೋಗುತ್ತಿದ್ದ ಗೌತಮ್‌ಗೆ ಒಬ್ಬ ವ್ಯಕ್ತಿ ಡಿಕ್ಕಿ ಹೊಡೆದ ಕಾರಣ ಊಟ ಕೆಳಗೆ ಬಿತ್ತು. ಬಳಿಕ ವಸುಧರಾ ತನ್ನ ಊಟವನ್ನೇ ಕೊಟ್ಟು ರಿಷಿ‌ಗೆ ತಾನು ಕೊಟ್ಟಿದ್ದು ಎಂದು ಹೇಳಬೇಡಿ ಎಂದಳು.

ವಸುಧರಾ ಕೊಟ್ಟ ಊಟವನ್ನು ರಿಷಿಗೆ ನೀಡಿದ ಗೌತಮ್. ಆದರೆ ಬಾಕ್ಸ್ ನೋಡುತ್ತಿದ್ದಂತೆ ಇದು ಮನೆಯಿಂದ ಬಂದ ಊಟ ಅಲ್ಲಾ ಎಂದು ಹೇಳಿದ ರಿಷಿ. ಆದರೆ ಗೌತಮ್ ಏನೇನೋ ಹೇಳಿ ಊಟ ಮಾಡುವಂತೆ ಮಾಡಿದ. ಸ್ವಲ್ಪ ಊಟ ಮಾಡಿ ಈ ಬಾಕ್ಸ್ ಅನ್ನು ಯಾರ ಬಳಿ ತಂದಿದ್ದಿಯಾ ಅವರಿಗೆ ವಾಪಾಸ್ ಕೊಡು ಎಂದು ಹೇಳಿದ. ಇಬ್ಬರೂ ಒಬ್ಬರಿಗೊಬ್ಬರು ಇಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಮನಸಲ್ಲೇ ಅಂದುಕೊಂಡ ಗೌತಮ್. ಊಟ ಸ್ವಲ್ಪ ಮಾಡಿ ಉಳಿದ ಊಟವನ್ನು ವಸುಧರಾಗೆ ಬಿಟ್ಟು ಹೊರಟ ರಿಷಿ. ಅಷ್ಟೊತ್ತಿಗೆ ವಸು ಕೂಡ ಎಂಟ್ರಿ ಕೊಟ್ಟಳು. ರಿಷಿ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳಾ ವಸುಧರಾ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.