Kannadathi Serial: ವರುಧಿನಿಗೆ ಬುದ್ಧಿ ಕಲಿಸಲು ಮುಂದಾದ ಹರ್ಷ; ಇದು 15 ದಿನಗಳ ಮಿಷನ್
Kannadathi Serial Update: ಸಾನಿಯಾಗೆ ವೇದಿಕೆ ಮೇಲೆಯೇ ಮುಖಭಂಗ ಆಗಿದೆ. ಭುವಿ ಮಾಡಿದ ಪ್ಲ್ಯಾನ್ಗೆ ಸಾನಿಯಾ ಸಂಚು ವಿಫಲವಾಗಿದ್ದು, ಆಕೆ ಬೇರೆ ದಾರಿ ಕಾಣದೆ ಕ್ಷಮೆ ಕೇಳಿದ್ದಾಳೆ.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ತನಗೆ ಅಧಿಕಾರ ಬೇಕು ಎಂದು ಸಾನಿಯಾ ಹಠ ಹಿಡಿದಿದ್ದಳು. ಇದಕ್ಕಾಗಿ ಆಕೆ ಸಾಕಷ್ಟು ಪ್ಲ್ಯಾನ್ ಮಾಡಿದ್ದಳು. ಆದರೆ, ಈ ಪ್ಲ್ಯಾನ್ ಉಲ್ಟಾಪಲ್ಟಾ ಆಗಿದೆ. ಇದಕ್ಕೆ ಕಾರಣ ಭುವಿ. ಆಕೆ ಎಲ್ಲವನ್ನೂ ತಲೆಕೆಳಗೆ ಮಾಡಿದ್ದಳು. ಸಾನಿಯಾಗೆ ಅಧಿಕಾರ ಕೈ ತಪ್ಪಿ ಹೋಗಿದೆ. ಇದರಿಂದ ಆಕೆ ನೊಂದುಕೊಂಡಿದ್ದಾಳೆ. ಮತ್ತೊಂದು ಕಡೆ ವರುಧಿನಿ ಬಗ್ಗೆ ಹರ್ಷನಿಗೆ ಅನುಮಾನ ಬಂದಿದೆ. ಆಕೆ ಏನೋ ಮಸಲತ್ತು ಮಾಡುತ್ತಿದ್ದಾಳೆ ಎಂಬ ಬಗ್ಗೆ ಹರ್ಷನಿಗೆ ಅನುಮಾನ ಶುರುವಾಗಿದೆ.
15 ದಿನಗಳ ಮಿಷನ್
‘ಕನ್ನಡತಿ’ ಧಾರಾವಾಹಿ ಪೂರ್ಣಗೊಳ್ಳಲಿದೆ ಎನ್ನುವ ಸುದ್ದಿ ಹರಿದಾಡುತ್ತಲೇ ಇದೆ. ಆದರೆ, ಈ ಬಗ್ಗೆ ಖಚಿತತೆ ಸಿಕ್ಕಿಲ್ಲ. ಹೀಗಿರುವಾಗಲೇ ಧಾರಾವಾಹಿಯಲ್ಲಿ ಈ ಬಗ್ಗೆ ಹಿಂಟ್ ನೀಡಲಾಗಿದೆ. ವರುಧಿನಿಗೆ ಪಾಠ ಕಲಿಸಲು ಹರ್ಷ 15 ದಿನಗಳ ಮಿಷನ್ ಆರಂಭಿಸಿದ್ದಾನೆ. ಈ ಮಿಷನ್ ಪೂರ್ಣಗೊಳ್ಳುತ್ತಿದ್ದಂತೆ ಧಾರಾವಾಹಿ ಪೂರ್ಣಗೊಳ್ಳಬಹುದು ಎನ್ನಲಾಗುತ್ತಿದೆ.
ವರುಧಿನಿ ಬಗ್ಗೆ ಹರ್ಷನಿಗೆ ಈ ಮೊದಲು ಅನುಮಾನ ಇರಲೇ ಇಲ್ಲ. ಇದಕ್ಕೆ ಕಾರಣ ಆಕೆ ನಡೆದುಕೊಳ್ಳುತ್ತಿದ್ದ ರೀತಿ. ಹರ್ಷ ಹಾಗೂ ಭುವಿ ಒಟ್ಟಾಗಿ ಸಮಯ ಕಳೆಯಬೇಕು ಎಂಬಂತೆ ವರುಧಿನಿ ನಾಟಕ ಮಾಡುತ್ತಿದ್ದಳು. ಆದರೆ, ಹಿಂದಿನಿಂದ ಇಬ್ಬರನ್ನೂ ಬೇರೆ ಮಾಡುವ ಪ್ಲ್ಯಾನ್ ಮಾಡುತ್ತಿದ್ದಳು. ಈ ವಿಚಾರ ಹರ್ಷನಿಗೆ ತಿಳಿದು ಹೋಗಿದೆ. ಈ ಕಾರಣಕ್ಕೆ ಆತ ಬೇರೆಯದೇ ಪ್ಲ್ಯಾನ್ ಮಾಡಿದ್ದಾನೆ.
ಇದನ್ನೂ ಓದಿ: Kannadathi: ರತ್ನಮಾಲಾಳ ಕೊಲ್ಲೋಕೆ ಹೋಗಿದ್ದ ವಿಡಿಯೋ ತೋರಿಸಿದ ಭುವಿ; ನಡುಗಿಹೋದ ಸಾನಿಯಾ
ವಕೀಲರ ಬಳಿ, ತಂಗಿ ಸುಚಿ ಬಳಿ, ಭುವಿ ತಂಗಿ ಬಿಂದು ಬಳಿ ವಿಚಾರಿಸಿದಾಗ ವರುಧಿನಿ ಬಗ್ಗೆ ಕೆಟ್ಟ ಅಭಿಪ್ರಾಯವೇ ಮೂಡಿದೆ. ಇದರಿಂದ ಆತನಿಗೆ ಅಸಲಿ ವಿಚಾರ ಗೊತ್ತಾಗಿದೆ. ‘ವರುಧಿನಿ ಎದುರಿನಿಂದ ಮಾತ್ರ ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಾಳೆ. ಆದರೆ, ನಾವಿಬ್ಬರೂ ಒಟ್ಟಿಗೆ ಇರೋದು ಆಕೆಗೆ ಬೇಕಿಲ್ಲ. ನಾವಿಬ್ಬರೂ ಬೇರೆ ಆಗಬೇಕು. ಆಗ ನನ್ನನ್ನು ಮದುವೆ ಆಗಬಹುದು ಅನ್ನೋದು ಅವಳ ಆಲೋಚನೆ’ ಎಂದು ಹರ್ಷ ಹೇಳಿದ್ದಾನೆ. ಇದಕ್ಕೆ ಸುಚಿ ಹಾಗೂ ಬಿಂದು ಹೌದೆಂದು ಉತ್ತರಿಸಿದ್ದಾರೆ. ಈ ವೇಳೆ ಹರ್ಷ ಶಪಥ ಮಾಡಿದ್ದಾನೆ.
ಇದನ್ನೂ ಓದಿ: Kannadathi Serial: ‘ನಾನು ಶೂಟ್ ಮಾಡ್ಕೋತೀನಿ’; ಎಂ.ಡಿ. ಪಟ್ಟಕ್ಕಾಗಿ ವೇದಿಕೆ ಮೇಲೆ ಭುವಿಗೆ ಸಾನಿಯಾ ಬೆದರಿಕೆ
‘ನಾನು ವರುಧಿನಿಗೆ ಪಾಠ ಕಲಿಸಬೇಕಿದೆ. ಅವಳು ಎಷ್ಟು ಆಟ ಆಡುತ್ತಾಳೋ ಆಡಲಿ. ನಾನು ನಂತರ ಆಡುತ್ತೇನೆ. ಈಗ ‘ಮಿಷನ್ ಹರ್ಷ’ ಆರಂಭಿಸಿದ್ದೇನೆ. ಇದು ಕೇವಲ 15 ದಿನಗಳ ಮಿಷನ್. ಆ ಬಳಿಕ ನಾನು ಭುವಿ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತೇವೆ’ ಎಂದು ಹರ್ಷ ಹೇಳಿದ್ದಾನೆ. ಈ ಮೂಲಕ 15 ದಿನಗಳಲ್ಲಿ ಧಾರಾವಾಹಿ ಪೂರ್ಣಗೊಳ್ಳಬಹುದು ಎನ್ನುವ ಸೂಚನೆಯನ್ನು ನಿರ್ದೇಶಕರು ಪರೋಕ್ಷವಾಗಿ ನೀಡಿದಂತಿದೆ. ಈ ವಿಚಾರ ಕೇಳಿ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ.
ಸಾನಿಯಾಗೆ ಮುಖಭಂಗ
ಸಾನಿಯಾಗೆ ವೇದಿಕೆ ಮೇಲೆಯೇ ಮುಖಭಂಗ ಆಗಿದೆ. ಭುವಿ ಮಾಡಿದ ಪ್ಲ್ಯಾನ್ಗೆ ಸಾನಿಯಾ ಸಂಚು ವಿಫಲವಾಗಿದೆ. ಭುವಿ ಬ್ಲಾಕ್ಮೇಲ್ ಮಾಡಿದ ಕಾರಣ ಆಕೆ ಬೇರೆ ದಾರಿ ಕಾಣದೆ ಕ್ಷಮೆ ಕೇಳಿದ್ದಾಳೆ. ಮೈಕ್ ಎದುರು ಬಂದು ಭುವಿ ಕೊಟ್ಟ ಪತ್ರ ಓದಿದ್ದಾಳೆ. ‘ನಾನು ಎಂಡಿ ಪಟ್ಟದಿಂದ ಹಿಂದೆ ಸರಿಯುತ್ತಿದ್ದೇನೆ. ಭುವಿ ಅವರಿಗೆ ಎಂಡಿ ಪಟ್ಟ ನೀಡುತ್ತಿದ್ದೇನೆ. ಅವರಿಗೆ ಯಾವುದೇ ಸಹಾಯ ಬೇಕಿದ್ದರೂ ನಾನು ನೀಡೋಕೆ ಸಿದ್ಧಳಿದ್ದೇನೆ’ ಎಂದು ಪತ್ರ ಓದಿದ್ದಾಳೆ ಸಾನಿಯಾ. ಈ ಮೂಲ ಅವಳು ತನ್ನ ಹುದ್ದೆ ಕಳೆದುಕೊಂಡು ಸೈಡಿಗೆ ಹೋಗಿದ್ದಾಳೆ. ಇನ್ಮುಂದೆ ಆಕೆಯ ಆಟಗಳು ನಡೆಯೋದು ಅನುಮಾನವೇ.
ಶ್ರೀಲಕ್ಷ್ಮಿ ಎಚ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.