Kannadathi: ರತ್ನಮಾಲಾಳ ಕೊಲ್ಲೋಕೆ ಹೋಗಿದ್ದ ವಿಡಿಯೋ ತೋರಿಸಿದ ಭುವಿ; ನಡುಗಿಹೋದ ಸಾನಿಯಾ

Kannadathi Serial Update: ವಿಡಿಯೋ ನೋಡಿದ ಸಾನಿಯಾ ನಡುಗೆ ಹೋಗಿದ್ದಾಳೆ. ಏನು ಮಾಡಬೇಕು ಎನ್ನುವುದು ಆಕೆಗೆ ತೋಚದಂತಾಗಿದೆ. ಮುಂದೇನು ಎನ್ನುವ ಪ್ರಶ್ನೆಯೂ ಆಕೆಯನ್ನು ಕಾಡಿದೆ.

Kannadathi: ರತ್ನಮಾಲಾಳ ಕೊಲ್ಲೋಕೆ ಹೋಗಿದ್ದ ವಿಡಿಯೋ ತೋರಿಸಿದ ಭುವಿ; ನಡುಗಿಹೋದ ಸಾನಿಯಾ
ಕನ್ನಡತಿ ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 07, 2022 | 6:30 AM

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
ಹರ್ಷ ಅರೆಸ್ಟ್ ಆಗುವ ಸಂದರ್ಭದಲ್ಲಿ ಕಾಣೆಯಾದ ಭುವಿ; ವೈರಿಗಳದ್ದೇ ಮೇಲುಗೈ
Image
‘ನಿನ್ನ ಹೆಸರಿಗೆ ಆಸ್ತಿ ಇರುವ ವಿಚಾರ ಹರ್ಷನಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ’; ಭುವಿಯ ದಾರಿ ತಪ್ಪಿಸಿದ ವರು
Image
‘5 ವರ್ಷಗಳ ಕಾಲ ಆಸ್ತಿಯನ್ನು ಯಾರ ಹೆಸರಿಗೂ ಬರೆಯುವಂತಿಲ್ಲ’; ರತ್ನಮಾಲಾ ಕಂಡೀಷನ್ ನೋಡಿ ಭುವಿ ಕಂಗಾಲು
Image
ಹರ್ಷನ ಪಡೆಯಲು ಡಬಲ್ ಗೇಮ್ ಆರಂಭಿಸಿದ ವರುಧಿನಿ; ದಡ್ಡಿ ಆಗುತ್ತಿದ್ದಾಳೆ ಭುವಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಎಲ್ಲರ ಎದುರು ಭುವಿ ವಿಲ್ ಓದಿದ್ದಾಳೆ. ಐದು ವರ್ಷಗಳ ಕಾಲ ಈ ಆಸ್ತಿಯನ್ನು ಯಾರ ಹೆಸರಿಗೂ ವರ್ಗಾವಣೆ ಮಾಡುವಂತಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದಾಳೆ. ಇದನ್ನು ಕೇಳಿ ಸಾನಿಯಾಗೆ ಶಾಕ್ ಆಗಿದೆ. ಸುದರ್ಶನ್ ಅಂತೂ ಏನೂ ತೋಚದಂತೆ ನಿಂತಿದ್ದಾನೆ. ಈ ಮಧ್ಯೆ ಹರ್ಷನ ಅರೆಸ್ಟ್ ಆಗಿದೆ.

ಅಸಲಿ ಮುಖ ತೋರಿಸಿದ ಭುವಿ

ಹರ್ಷ ಅರೆಸ್ಟ್ ಆದ ಹೊರತಾಗಿಯೂ ಭುವಿಗೆ ಯಾವುದೇ ಚಿಂತೆ ಕಾಡಿಲ್ಲ. ಹೀಗೇಕೆ ಎಂಬ ಪ್ರಶ್ನೆ ಸಾನಿಯಾ ಹಾಗೂ ವರುಧಿನಿಗೆ ಮೂಡಿತ್ತು. ಪತಿಯನ್ನು ಅರ್ಧಕ್ಕೆ ಕೈ ಬಿಡಬೇಡ ಎಂದು ವರುಧಿನಿ ಕೇಳಿಕೊಂಡಳು. ಆದರೆ, ಭುವಿ ಮುಖದಲ್ಲಿ ಕಿಂಚಿತ್ತೂ ಚಿಂತೆ ಹಾಗೂ ಭಯ ಕಾಣಲಿಲ್ಲ. ಹರ್ಷನನ್ನು ಹೇಗೆ ಬಿಡಿಸಬೇಕು ಎನ್ನುವ ಆಲೋಚನೆ ಬರಲಿಲ್ಲ. ಈ ಮಧ್ಯೆ ಭುವಿ ತನ್ನ ಅಸಲಿ ಆಟ ತೋರಿಸಿದ್ದಾಳೆ.

ಇದನ್ನೂ ಓದಿ: Kannadathi: ‘ಆಸ್ತಿ ಭುವಿ ಬಳಿ ಇದ್ದರೇನು, ನನ್ನ ಬಳಿ ಇದ್ದರೇನು?’; ಹರ್ಷನ ಮಾತಿನಿಂದ ಸಾನಿಯಾ-ವರು ಶಾಕ್

ರತ್ನಮಾಲಾಳ ಅಸ್ಥಿ ಬಿಟ್ಟು ಭುವಿ ಹಾಗೂ ಸಾನಿಯಾ ಬೆಂಗಳೂರಿಗೆ ಮರಳುತ್ತಿದ್ದರು. ಮತ್ತೊಂದು ಕಡೆ ಹರ್ಷನನ್ನು ಪೊಲೀಸರು ಅರೆಸ್ಟ್ ಮಾಡಿಕೊಂಡು ಜೀಪ್​ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಕಾರನ್ನು ರಸ್ತೆ ಮಧ್ಯೆ ನಿಲ್ಲಿಸಿದ್ದಾಳೆ ಭುವಿ. ಅಷ್ಟೇ ಅಲ್ಲ, ಕಾರಿನ ಡ್ಯಾಶ್​ಬೋರ್ಡ್​ನಲ್ಲಿರುವ ಮೊಬೈಲ್ ತರುವಂತೆ ಸಾನಿಯಾಗೆ ಸೂಚಿಸಿದ್ದಾಳೆ. ಭುವಿ ಹೇಳಿದಂತೆ ಸಾನಿಯಾ ನಡೆದುಕೊಂಡಿದ್ದಾಳೆ.

ನಡುಗಿ ಹೋದ ಸಾನಿಯಾ

ಭುವಿ ತರುವಂತೆ ಸೂಚಿಸಿದ್ದು ರತ್ನಮಾಲಾ ಮೊಬೈಲ್ ಅನ್ನು​. ಈ ಮೊದಲು ರತ್ನಮಾಲಾಗೆ ಅನಾರೋಗ್ಯ ಉಂಟಾದಾಗ ಆಕೆಯನ್ನು ಕೊಲ್ಲಲು ಸಾನಿಯಾ ಪ್ರಯತ್ನಿಸಿದ್ದಳು. ಇದನ್ನು ರತ್ನಮಾಲಾ ವಿಡಿಯೋ ಮಾಡಿ ಇಟ್ಟುಕೊಂಡಿದ್ದಳು. ಆ ವಿಡಿಯೋನ ಸಾನಿಯಾಗೆ ಭುವಿ ತೋರಿಸಿದ್ದಾಳೆ. ವಿಡಿಯೋ ನೋಡಿದ ಸಾನಿಯಾ ನಡುಗೆ ಹೋಗಿದ್ದಾಳೆ. ಏನು ಮಾಡಬೇಕು ಎನ್ನುವುದು ಆಕೆಗೆ ತೋಚದಂತಾಗಿದೆ. ಮುಂದೇನು ಎನ್ನುವ ಪ್ರಶ್ನೆಯೂ ಆಕೆಯನ್ನು ಕಾಡಿದೆ.

ಇದನ್ನೂ ಓದಿ: ವರುಧಿನಿಗೆ ಮಾತಲ್ಲೇ ಎಚ್ಚರಿಕೆ ಕೊಟ್ಟ ಹರ್ಷ; ಸೈಲೆಂಟ್ ಆಗೋ ನಿರ್ಧಾರಕ್ಕೆ ಬಂದ ವರುಧಿನಿ?

ಕ್ಷಮೆ ಕೇಳಿದ ಸಾನಿಯಾ

ಮೊಬೈಲ್​ ವಿಚಾರ ಬರುವುದಕ್ಕೂ ಮೊದಲು ಸಾನಿಯಾ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದಳು. ಹರ್ಷನಿಂದ ತುಂಬಾನೇ ತೊಂದರೆ ಇದೆ ಎಂಬುದನ್ನು ಎತ್ತಿ ಹೇಳುತ್ತಿದ್ದಳು. ಆದರೆ, ತನ್ನ ಕರ್ಮಕಾಂಡದ ವಿಡಿಯೋ ಬಯಲಾದ ನಂತರದಲ್ಲಿ ಸಾನಿಯಾ ಸೈಲೆಂಟ್ ಆಗಿದ್ದಾಳೆ. ಆಕೆಗೆ ನಡುಕ ಶುರುವಾಗಿದೆ. ‘ನೀವು ಮಾಡಿರೋದು ತುಂಬಾ ದೊಡ್ಡ ತಪ್ಪು. ಈ ಕಾರಣಕ್ಕೆ ನಿಮಗೆ ಶಿಕ್ಷೆ ಆಗಲೇಬೇಕು. ರತ್ನಮಾಲಾ ಅವರನ್ನು ನೀವು ಕೊಲ್ಲೋಕೆ ಹೋಗಿದ್ರಿ. ಆದರೂ ರತ್ನಮಾಲಾ ನಿಮಗೆ ಯಾವುದೇ ತೊಂದರೆ ಮಾಡಿಲ್ಲ. ನಿಮ್ಮನ್ನು ಜೈಲಿಗೆ ಹಾಕಿಲ್ಲ. ಕುಟುಂಬದ ಮರ್ಯಾದೆ ಬೀದಿಗೆ ಬರುತ್ತದೆ ಎನ್ನುವ ಕಾಳಜಿ ಅವರಿಗೆ ಇತ್ತು. ಆದರೆ, ನೀವು ಬೇರೆ ರೀತಿ ಆಲೋಚಿಸಿದಿರಿ’ ಎಂದು ಭುವಿ ಮಾತಿನಲ್ಲೇ ಸಾನಿಯಾಳನ್ನು ತಿವಿದಿದ್ದಾಳೆ. ಈ ಮಾತು ಕೇಳಿ ಸಾನಿಯಾಗೆ ನಡುಕ ಶುರುವಾಗಿದೆ. ತಾನು ಜೈಲಿಗೆ ಹೋಗೋದು ಪಕ್ಕಾ ಎಂದು ಸಾನಿಯಾಗೆ ಅನಿಸಿದೆ.

ಪ್ಲೇಟ್ ಬದಲಿಸಿದ ಸಾನಿಯಾ

ಸಾನಿಯಾ ಏಕಾಏಕಿ ಪ್ಲೇಟ್ ಬದಲಿಸಿದ್ದಾಳೆ. ಹರ್ಷನನ್ನು ಜೈಲಿಗೆ ಕಳುಹಿಸದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಆಕೆ ಹೇಳಿದ್ದಾಳೆ. ತಕ್ಷಣಕ್ಕೆ ಸಾನಿಯಾ ಪೊಲೀಸರಿಗೆ ಕರೆ ಮಾಡಿ ಹರ್ಷನನ್ನು ಲಾಕಪ್​ಗೆ ಹಾಕದಂತೆ ಕೋರಿಕೊಂಡಿದ್ದಾಳೆ. ಭುವಿಯ ಪ್ಲ್ಯಾನ್ ವರ್ಕೌಟ್ ಆಗಿದೆ.

ವರುಧಿನಿಗೆ ಟೆನ್ಷನ್

ಹರ್ಷ ಜೈಲಿಗೆ ಹೋಗುತ್ತಾನೆ ಎಂಬ ವಿಚಾರದಲ್ಲಿ ವರುಧಿನಿಗೆ ಟೆನ್ಷನ್ ಶುರುವಾಗಿದೆ. ಹೇಗಾದರೂ ಮಾಡಿ ಹರ್ಷನಿಗೆ ಜಾಮೀನು ಕೊಡಿಸಬೇಕು ಎಂದು ಆಕೆ ಅಂದುಕೊಂಡಿದ್ದಳು. ವಕೀಲರ ಬಳಿ ಕೂಡ ಮಾತನಾಡಿದ್ದಳು. ಆದರೆ, ಹರ್ಷನನ್ನು ಜೈಲಿಗೆ ಹೋಗದಂತೆ ಭುವಿ ಮಾಡಿದಳು ಎನ್ನುವ ವಿಚಾರ ಗೊತ್ತಾದರೆ ವರುಧಿನಿಗೆ ಶಾಕ್ ಆಗೋದು ಗ್ಯಾರಂಟಿ.

ಶ್ರೀಲಕ್ಷ್ಮಿ ಎಚ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ