AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರುಧಿನಿಗೆ ಮಾತಲ್ಲೇ ಎಚ್ಚರಿಕೆ ಕೊಟ್ಟ ಹರ್ಷ; ಸೈಲೆಂಟ್ ಆಗೋ ನಿರ್ಧಾರಕ್ಕೆ ಬಂದ ವರುಧಿನಿ?

ಹರ್ಷನನ್ನು ವರುಧಿನಿ ಮೊದಲಿನಿಂದಲೂ ಪ್ರೀತಿಸುತ್ತಿದ್ದಾಳೆ. ಆದರೆ, ಆಕೆಯ ಬಗ್ಗೆ ಹರ್ಷನಿಗೆ ಯಾವುದೇ ಪ್ರೀತಿ ಇಲ್ಲ. ಇದನ್ನು ಆತ ಎಷ್ಟೋಬಾರಿ ಹೇಳಿದ್ದಾನೆ. ಆದರೂ ಇದನ್ನು ಆಕೆ ಗಂಭೀರವಾಗಿ ಪರಿಗಣಿಸಿಲ್ಲ.

ವರುಧಿನಿಗೆ ಮಾತಲ್ಲೇ ಎಚ್ಚರಿಕೆ ಕೊಟ್ಟ ಹರ್ಷ; ಸೈಲೆಂಟ್ ಆಗೋ ನಿರ್ಧಾರಕ್ಕೆ ಬಂದ ವರುಧಿನಿ?
ವರು-ಹರ್ಷ
TV9 Web
| Edited By: |

Updated on: Oct 25, 2022 | 6:30 AM

Share

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ
Image
ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
Image
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು

ಶೈಲಿ: ಫ್ಯಾಮಿಲಿ ಡ್ರಾಮಾ. ರತ್ನಮಾಲಾ ಮಾಲಾ ಸಂಸ್ಥೆಯ ಒಡತಿ. ಆಕೆಯ ಆಸ್ತಿ ಹೊಡೆಯಬೇಕು ಎಂದು ಹಿರಿ ಸೊಸೆ ಸಾನಿಯಾ ಕಣ್ಣು ಹಾಕಿದ್ದಾಳೆ. ಆದರೆ, ಈ ಆಸ್ತಿಯನ್ನು ಆಕೆ ಬರೆದಿದ್ದು ಭುವಿಗೆ. ಮಗ ಹರ್ಷ ಹಾಗೂ ಸೊಸೆ ಎಂದರೆ ರತ್ನಮಾಲಾಗೆ ಅಚ್ಚುಮೆಚ್ಚು.

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು? ತಾನೇ ಎಲ್ಲಾ ಎಂದು ಮೆರೆಯುತ್ತಿದ್ದ ಸಾನಿಯಾಳ ಎಂ.ಡಿ. ಪಟ್ಟ ಹೊರಟೇ ಹೋಗಿದೆ. ಸಾನಿಯಾಳನ್ನು ಎಂಡಿ ಪಟ್ಟದಿಂದ ಹರ್ಷ ತೆಗೆದಿದ್ದಾನೆ. ಮತ್ತೊಂದೆಡೆ ಹರ್ಷ ಹಾಗೂ ಭುವಿಗೆ ಡಿವೋರ್ಸ್ ಕೊಡಿಸಬೇಕು ಎಂದು ವರುಧಿನಿ ಪ್ಲ್ಯಾನ್ ಮಾಡಿಕೊಂಡಿದ್ದಳು.

‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿ ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಇವರ ಸಂಸಾರಕ್ಕೆ ಹುಳಿ ಹಿಂಡಬೇಕು ಎಂದು ಅನೇಕರು ಕಾದು ಕೂತಿದ್ದಾರೆ. ಅದರಲ್ಲೂ ವರುಧಿನಿ ಈ ಬಗ್ಗೆ ಹೆಚ್ಚು ಆಲೋಚಿಸುತ್ತಿದ್ದಾಳೆ. ಆಕೆ ನಡೆದುಕೊಳ್ಳುವ ರೀತಿಯ ಬಗ್ಗೆ ಹರ್ಷನಿಗೆ ಮೊದಲಿನಿಂದಲೂ ಅನುಮಾನ ಇದೆ. ಈ ಕಾರಣಕ್ಕೆ ವರುಧಿನಿಗೆ ಮಾತಿನಲ್ಲೇ ಎಚ್ಚರಿಕೆ ನೀಡಿದ್ದಾನೆ. ಇದರಿಂದ ಆಕೆಗೆ ಭಯವಾಗಿದೆ. ಹೀಗಾಗಿ ತಾನು ಮಾಡಬೇಕು ಎಂದುಕೊಂಡಿದ್ದ ಸಂಚಿನಿಂದ ಆಕೆ ಹಿಂದೆ ಸರಿಯಬಹುದು. ಹಾಗಾದಲ್ಲಿ  ತನ್ನ ಕೈಯ್ಯಾರೆ ಹರ್ಷ ಹಾಗೂ ಭುವಿಯ ಮದುವೆ ನೋಂದಣಿ ಮಾಡಿಸಿದಂತೆ ಆಗುತ್ತದೆ.

ಹರ್ಷನನ್ನು ವರುಧಿನಿ ಮೊದಲಿನಿಂದಲೂ ಪ್ರೀತಿಸುತ್ತಿದ್ದಾಳೆ. ಆದರೆ, ಆಕೆಯ ಬಗ್ಗೆ ಹರ್ಷನಿಗೆ ಯಾವುದೇ ಪ್ರೀತಿ ಇಲ್ಲ. ಇದನ್ನು ಆತ ಎಷ್ಟೋಬಾರಿ ಹೇಳಿದ್ದಾನೆ. ಆದರೂ ಇದನ್ನು ಆಕೆ ಗಂಭೀರವಾಗಿ ಪರಿಗಣಿಸಿಲ್ಲ. ಬದಲಿಗೆ ಆತನ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಲೇ ಇದ್ದಳು. ಇದು ಹರ್ಷನಿಗೆ ಬೇಸರ ಮೂಡಿಸಿತ್ತು. ಹೀಗಾಗಿ ಈ ವಿಚಾರದಲ್ಲಿ ವರುಗೆ ನೇರವಾಗಿ ಬೈದಿದ್ದಾನೆ. ಆದರೆ, ಈ ವಿಚಾರದಲ್ಲಿ ಆಕೆ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಬದಲಿಗೆ ಹರ್ಷನನ್ನು ಪಡೆಯಲೇಬೇಕು ಎಂಬ ಹಠ ಹೆಚ್ಚುತ್ತಿದೆ. ಇದಕ್ಕಾಗಿ ಆಕೆ ಪ್ಲ್ಯಾನ್ ಒಂದನ್ನು ಮಾಡಿದ್ದಳು.

ಹರ್ಷ ಹಾಗೂ ಭುವಿಯ ಮದುವೆ ನೋಂದಣಿ ಪ್ರಕ್ರಿಯೆಯನ್ನು ವರುಧಿನಿ ಮಾಡುತ್ತಿದ್ದಾಳೆ. ಈ ಪತ್ರಗಳ ಮಧ್ಯೆ ಡಿವೋರ್ಸ್ ಲೆಟರ್ ಇಟ್ಟು ಅದಕ್ಕೆ ಸಹಿ ಹಾಕಿಸಬೇಕು ಎಂಬುದು ವರುಧಿನಿಯ ಪ್ಲ್ಯಾನ್ ಆಗಿತ್ತು. ಆದರೆ, ಅವಳಿಗೆ ಸಿಕ್ಕಾಪಟ್ಟೆ ಭಯ ಕಾಡುತ್ತಿದೆ. ಈ ಭಯದಿಂದಲೇ ಹರ್ಷನ ಎದುರು ಬಂದಿದ್ದಾಳೆ. ಹರ್ಷ ಏನಂದುಕೊಳ್ಳುತ್ತಾನೋ ಎಂದುಕೊಳ್ಳುತ್ತಲೇ ವರುಧಿನಿ ಯೋಚನೆ ಮಾಡುತ್ತಾ ನಿಂತಿದ್ದಳು. ಆಗ ವರುಧಿನಿಗೆ ಹರ್ಷ ಒಂದು ಎಚ್ಚರಿಕೆ ನೀಡಿದ್ದಾನೆ.

‘ನಾನು ಆಗ ಮಾತನಾಡಿಸುವಾಗ ನೀವು ನಿಮ್ಮದೇ ಲೋಕದಲ್ಲಿ ಇದ್ದಿರಿ. ಅದು ತಪ್ಪು. ನೀವು ನನ್ನನ್ನ ಪೂರ್ತಿಯಾಗಿ ಮರೆತಿದ್ದೀರೋ ಅದು ನನಗೆ ಗೊತ್ತಿಲ್ಲ. ಆದರೆ, ನನ್ನ ಹಾಗೂ ನಿಮ್ಮ ಮಧ್ಯೆ ಈಗ ಏನೂ ಇಲ್ಲ. ಹಾಗಂತ ಮೊದಲು ಇತ್ತು ಎಂದರ್ಥವಲ್ಲ. ಮೊದಲು ಫ್ರೆಂಡ್​ಶಿಪ್​ ಇತ್ತು. ಆದರೆ, ಈಗ ಆ ಆಪ್ತತೆ ಕಡಿಮೆ ಆಗಿದೆ. ಭುವಿ ನಾನು ಗಂಡ ಹೆಂಡತಿ ಆಗಿದ್ದೀವಿ’ ಎಂದು ಮಾತಿನಲ್ಲೇ ಹೇಳಿದ್ದಾನೆ. ಅಷ್ಟೇ ಅಲ್ಲ ನಮ್ಮ ಸುದ್ದಿಗೆ ಬರದೆ ಇರುವಂತೆ ಎಚ್ಚರಿಕೆ ನೀಡಿದ್ದಾನೆ.

ಇದರಿಂದ ವರುಧಿನಿಗೆ ಶಾಕ್ ಆಗಿದೆ. ಹರ್ಷನ ಕಂಡರೆ ಆಕೆಗೆ ಭಯ ಇದೆ. ಒಂದೊಮ್ಮೆ ಅದನ್ನೂ ಮೀರಿ ಹರ್ಷ ಹಾಗೂ ಭುವಿಗೆ ವಿಚ್ಛೇದನ ಕೊಡಿಸಲು ಪ್ರಯತ್ನಿಸಿ ಅದು ಉಲ್ಟಾ ಹೊಡೆದರೆ ಎಂಬ ಆತಂಕ ಆಕೆಯನ್ನು ಕಾಡುತ್ತಿದೆ. ಈ ಕಾರಣಕ್ಕೆ ಆಕೆಯೇ ಮುಂದಾಗಿ ನೋಂದಣಿಕಾರ್ಯ ಮಾಡಿಸಬೇಕಾಗಿ ಬರಬಹುದು. ಹಾಗಾದಲ್ಲಿ ಆಕೆಗೆ ತೀವ್ರ ಮುಖಭಂಗ ಆಗಲಿದೆ.

ಇದನ್ನೂ ಓದಿ: ಕನ್ನಡತಿ ಧಾರಾವಾಹಿ: ಸಾನಿಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾಸ್ಟರ್​ಪ್ಲ್ಯಾನ್ ಮಾಡಿದ ಹರ್ಷ

ಮದುವೆ ಸಂದರ್ಭದಲ್ಲಿ ಅದನ್ನು ತಡೆಯಲು ವರು ಸಾಕಷ್ಟು ಪ್ರಯತ್ನ ಮಾಡಿದ್ದಳು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಇಬ್ಬರೂ ನೆಮ್ಮದಿ ಇಂದ ಇರಲು ಬಿಡುವುದಿಲ್ಲ ಎಂಬುದು ವರುಧಿನಿಯ ಶಪಥ ಆಗಿತ್ತು. ಆದರೆ, ಆಕೆ ಅಂದುಕೊಂಡಂತೆ ಇಲ್ಲಿ ಯಾವುದೂ ನಡೆಯುತ್ತಿಲ್ಲ.

ಶ್ರೀಲಕ್ಷ್ಮಿ ಎಚ್.

ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್