AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honganasu: ಕೊನೆಗೂ ಪ್ರಪೋಸ್ ಮಾಡಲು ನಿರ್ಧರಿಸಿದ ರಿಷಿ; ಒಪ್ಪಿಕೊಳ್ತಾಳಾ ವಸುಧರಾ?

Honganasu Serial Update: ವಸುಧರಾಳಿಗೆ ಪ್ರಪೋಸ್ ಮಾಡಲು ಗಿಫ್ಟ್ ತೆಗೆದುಕೊಂಡು ಅವಳ ನೆನಪಲ್ಲೇ ಮತ್ತೆ ಕಾಲೇಜು ಕಡೆ ಹೊರಟ ರಿಷಿ. ಎಕ್ಸಾಮ್ ಮುಗಿಸಿ ಹೊರಬರುತ್ತಿದ್ದಂತೆ ವಸುಧರಾ ರಿಷಿಗೆ ಫೋನ್ ಮಾಡಿದಳು.

Honganasu: ಕೊನೆಗೂ ಪ್ರಪೋಸ್ ಮಾಡಲು ನಿರ್ಧರಿಸಿದ ರಿಷಿ; ಒಪ್ಪಿಕೊಳ್ತಾಳಾ ವಸುಧರಾ?
ಹೊಂಗನಸು ಸೀರಿಯಲ್
TV9 Web
| Edited By: |

Updated on: Dec 07, 2022 | 9:07 AM

Share

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ಸ್ಕಾಲರ್‌ಶಿಪ್ ಎಕ್ಸಾಮ್ ಬರೆಯಲು ವಸುಧರಾಳನ್ನು ಕರ್ಕೊಂಡು ಬಂದ ರಿಷಿ. ಎಕ್ಸಾಮ್ ಬರೆಯಲು ಇನ್ನೂ ಸಮಯವಿದೆ ಎಂದು ಹೋಟೆಲ್‌ನಲ್ಲೇ ತಂಗಿದರು. ವಸುಧರಾಳನ್ನು ರೂಮಿನಲ್ಲೇ ಬಿಟ್ಟು ತಾನು ಹೊರಗೆ ಕಾರಿನಲ್ಲೇ ಮಲಗಿದ ರಿಷಿ. ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಲವ್ ಪ್ರೋಗ್ರಾಮ್ ಕೇಳಿ ಕರೆಮಾಡಿ ತನ್ನ ಪ್ರೀತಿಯನ್ನು ಬಹಿರಂಗ ಪಡಿಸಿದ ರಿಷಿ. ಮೊದಲ ಬಾರಿಗೆ ವಸುಧರಾ ಮೇಲಿನ ಪ್ರೀತಿಯನ್ನು ಬಿಚ್ಚಿಟ್ಟ ರಿಷಿ. ರಿಷಿಯ ಮಾತುಗಳನ್ನು ಕೇಳಿ ಮಹೇಂದ್ರ ಮತ್ತು ಜಗತಿ ಇಬ್ಬರೂ ಶಾಕ್ ಆದರು.

ಜೊತೆಯಲ್ಲೇ ಇದ್ದು ಎಕ್ಸಾಮ್ ಸೆಂಟರ್​ವರೆಗೂ ವಸುಧರಾಳನ್ನು ಕರ್ಕೊಂಡು ಹೋದ ರಿಷಿ. ಇತ್ತ ವಸುಧರಾ ಎಕ್ಸಾಮ್ ಬರೆಯದಂತೆ ತಡೆಯಲು ಕಾಲೇಜು ಆವರಣದಲ್ಲೇ ಕಾಯುತ್ತಾ ನಿಂತಿರುವ ಸಾಕ್ಷಿ. ರೊಮ್ಯಾಂಟಿಕ್ ಆಗಿ ಮಾತನಾಡುತ್ತಿರುವ ರಿಷಿ ನೋಡಿ ವಸುಗೆ ಅಚ್ಚರಿಯಾಯಿತು. ರಿಷಿಯಲ್ಲಿ ಏನೋ ಬದಲಾವಣೆ ಕಾಣುತ್ತಿದೆ ಎಂದು ಮನಸ್ಸಲ್ಲೇ ಆಕೆ ಅಂದುಕೊಂಡಳು. ಎಕ್ಸಾಮ್ ಮುಗಿದ ಬಳಿಕ ಸರ್ಪ್ರೈಸ್ ಕೊಡುವುದಾಗಿ ಹೇಳಿದ ರಿಷಿ. ಏನಿರಬಹುದು ಎಂದು ಮತ್ತಷ್ಟು ಎಕ್ಸಾಯಿಟ್ ಆದ ವಸುಧರಾ ಬೇಗ ಎಕ್ಸಾಮ್ ಬರೆದು ಬರುವುದಾಗಿ ಹೇಳಿದಳು. ತನ್ನ ಬಳಿ ಇದ್ದ ದುಬಾರಿ ಪೆನ್ ತೆಗೆದು ವಸುಧರಾಳಿಗೆ ನೀಡಿ ಇದರಲ್ಲೇ ಎಕ್ಸಾಮ್ ಬರೆಯಬೇಕು ಎಂದು ಹೇಳಿದ ರಿಷಿ. ವಸುಧರಾ ಖುಷಿಯಲ್ಲೇ ಪೆನ್ ತೆಗೆದುಕೊಂಡು ಹೊರಟಳು. ಹೊರಡುವ ಮುನ್ನ ರಿಷಿ ಸರ್‌ಗೆ ಧನ್ಯಾವಾದ ಹೇಳಿದಳು. ವಸುಧರಾ ಮಾತಿನ ಗುಂಗಲ್ಲೇ ತೇಲುತ್ತಾ ನಿಂತ ರಿಷಿ.

ಇದನ್ನೂ ಓದಿ: Honganasu: ವಸುಧರಾ ಜತೆ ರಿಷಿಯ ಪ್ರೀತಿ ರಹಸ್ಯ ಬಯಲಿಗೆಳೆದ ಸಾಕ್ಷಿ: ದೇವಯಾನಿಗೆ ಖುಷಿ

ಮಹೇಂದ್ರ ಡಿಸೈನ್ ಮಾಡಿದ್ದ ವೆಡ್ಡಿಂಗ್ ಕಾರ್ಡ್ ಅನ್ನು ರಿಷಿಗೆ ಸೆಂಡ್ ಮಾಡಿದಳು ದೇವಯಾನಿ. ದೊಡ್ಡಮ್ಮನ ಮೆಸೇಜ್ ನೋಡಿ ರಿಷಿ ಶಾಕ್ ಆದ. ವೆಡ್ಡಿಂಗ್ ಕಾರ್ಡ್​ನಲ್ಲಿ ರಿಷಿ ಮತ್ತು ಸಾಕ್ಷಿ ಹೆಸರು ಇತ್ತು. ಫೋನ್ ಮಾಡಿ ದೇವಯಾನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ರಿಷಿ. ಬಳಿಕ ವಸುಧರಾಳನ್ನು ನೆನಪಿಸಿಕೊಂಡು ಮತ್ತೆ ಕೂಲ್ ಆದ. ವಸುಧರಾಳಿಗೆ ಪ್ರಪೋಸ್ ಮಾಡಲು ಗಿಫ್ಟ್ ತೆಗೆದುಕೊಂಡು ಅವಳ ನೆನಪಲ್ಲೇ ಮತ್ತೆ ಕಾಲೇಜು ಕಡೆ ಹೊರಟ ರಿಷಿ. ಎಕ್ಸಾಮ್ ಮುಗಿಸಿ ಹೊರಬರುತ್ತಿದ್ದಂತೆ ವಸುಧರಾ ರಿಷಿಗೆ ಫೋನ್ ಮಾಡಿದಳು. ಖುಷಿಯಿಂದ ಫೋನ್ ರಿಸೀವ್ ಮಾಡಿ ಮಾತನಾಡಿದ ರಿಷಿ. ಎಕ್ಸಾಮ್ ಬಗ್ಗೆ ವಿಚಾರಿಸಿ, ಬಳಿಕ ಗಿಫ್ಟ್ ಬಗ್ಗೆ ಹೇಳಿದ. ಏನಿರಬಹುದು ಎಂದು ವಸುಗೆ ಕುತೂಹಲ ಹೆಚ್ಚಾಯಿತು.

ಇದನ್ನೂ ಓದಿ: Honganasu: ಸಾಕ್ಷಿ ಮಾತಿನಿಂದ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ದ ವಸುಧರಾಳನ್ನು ದೂರ ಮಾಡಿದ ರಿಷಿ

ಕಾಲೇಜು ಬಳಿ ಬಂದು ವಸುಧರಾಗೆ ರಿಷಿ ಫೋನ್ ಮಾಡಿದ. ಆದರೆ ವಸು ಫೋನ್ ಸ್ವಿಚ್ ಆಫ್​ ಆಗಿತ್ತು. ಎಲ್ಲಿ ಹೋದಳು ಎಂದು ಆತಂಕದಲ್ಲೇ ಹುಡುಕಿದ. ಆದರೆ ವಸು ಕಾಲೇಜಿನ ಒಂದು ಮೂಲೆಯಲ್ಲಿ ಸಪ್ಪೆ ಮುಖ ಮಾಡಿ ಕುಳಿತಿದ್ದಳು. ಏನಾಯಿತು ಎಂದು ರಿಷಿ ವಿಚಾರಿಸಿದ. ಸುಸ್ತಾಗಿದೆ ಅಂತ ಹೇಳಿ ಸೈಲೆಂಟ್ ಆದಳು ವಸು. ಲವ್ ಪ್ರಪೋಸ್ ಮಾಡುವ ತವಕದಲ್ಲಿದ್ದ ರಿಷಿ, ವಸುಧರಾ ಸಪ್ಪೆಯಾಗಿದ್ದನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಪೆನ್ನು ಅನ್ನು ರಿಷಿಗೆ ವಾಪಸ್ ಮಾಡಿದಳು ವಸು. ವಾಪಸ್ ಕೊಡಬೇಕು ಅಂತ ಕೊಟ್ಟಿದ್ದಲ್ಲ ಎಂದ ರಿಷಿ. ಆದರೆ ಇಷ್ಟು ದುಬಾರಿ ಪೆನ್ ಬೇಡ ಎಂದಳು ವಸು. ಬಳಿಕ ‘ಏನೋ ಗಿಫ್ಟ್ ಕೊಡಬೇಕು, ನಿನ್ನ ಜೊತೆ ಮಾತನಾಡಬೇಕು ಹೋಗೋಣ’ ಎಂದು ಕರ್ಕೊಂಡು ಹೊರಟ ರಿಷಿ.

ಏನಿರಬಹುದು ಎಂದು ವಸುಧರಾಗೆ ಕುತೂಹಲ ಹೆಚ್ಚಾಯಿತು. ರಿಷಿ ಪ್ರೀತಿಯನ್ನು ಒಪ್ಪಿಕೊಳ್ತಾಳಾ ವಸುಧರಾ? ಸಾಕ್ಷಿ ಮುಂದಿನ ನಡೆ ಏನು? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
TV9 Web
TV9 Web

TV9 Kannada

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್