Kannadathi: ‘ಆಸ್ತಿ ಭುವಿ ಬಳಿ ಇದ್ದರೇನು, ನನ್ನ ಬಳಿ ಇದ್ದರೇನು?’; ಹರ್ಷನ ಮಾತಿನಿಂದ ಸಾನಿಯಾ-ವರು ಶಾಕ್

Kannadathi Serial Update: ಹರ್ಷನಿಂದ ಬಂದ ಈ ಉತ್ತರ ಕೇಳಿ ಭುವಿ ಖುಷಿಪಟ್ಟಿದ್ದಾಳೆ. ಆದರೆ, ವರುಧಿನಿ ಹಾಗೂ ಸಾನಿಯಾಗೆ ಈ ವಿಚಾರ ಶಾಕ್ ತಂದಿದೆ.

Kannadathi: ‘ಆಸ್ತಿ ಭುವಿ ಬಳಿ ಇದ್ದರೇನು, ನನ್ನ ಬಳಿ ಇದ್ದರೇನು?’; ಹರ್ಷನ ಮಾತಿನಿಂದ ಸಾನಿಯಾ-ವರು ಶಾಕ್
ಕನ್ನಡತಿ ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 06, 2022 | 7:50 AM

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
ಹರ್ಷ ಅರೆಸ್ಟ್ ಆಗುವ ಸಂದರ್ಭದಲ್ಲಿ ಕಾಣೆಯಾದ ಭುವಿ; ವೈರಿಗಳದ್ದೇ ಮೇಲುಗೈ
Image
‘ನಿನ್ನ ಹೆಸರಿಗೆ ಆಸ್ತಿ ಇರುವ ವಿಚಾರ ಹರ್ಷನಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ’; ಭುವಿಯ ದಾರಿ ತಪ್ಪಿಸಿದ ವರು
Image
‘5 ವರ್ಷಗಳ ಕಾಲ ಆಸ್ತಿಯನ್ನು ಯಾರ ಹೆಸರಿಗೂ ಬರೆಯುವಂತಿಲ್ಲ’; ರತ್ನಮಾಲಾ ಕಂಡೀಷನ್ ನೋಡಿ ಭುವಿ ಕಂಗಾಲು
Image
ಹರ್ಷನ ಪಡೆಯಲು ಡಬಲ್ ಗೇಮ್ ಆರಂಭಿಸಿದ ವರುಧಿನಿ; ದಡ್ಡಿ ಆಗುತ್ತಿದ್ದಾಳೆ ಭುವಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ರತ್ನಮಾಲಾ ಅಸ್ಥಿ ಬಿಡಲು ಕುಟುಂಬದವರು ಒಂದೆಡೆ ಸೇರಿದ್ದಾರೆ. ಭುವಿ ಹೆಸರಿಗೆ ಆಸ್ತಿ ಬರೆದಿಟ್ಟಿರುವ ವಿಚಾರವನ್ನು ಹರ್ಷ ಹೇಳಲು ನಿರ್ಧರಿಸಿದ್ದಾನೆ. ಒಂದು ಕಡೆ ಆತನನ್ನು ಪೊಲೀಸರು ಅರೆಸ್ಟ್ ಮಾಡಲು ಬಂದಿದ್ದಾರೆ. ಮತ್ತೊಂದು ಕಡೆ ಹರ್ಷ ಅಸ್ಥಿ ಬಿಡಬೇಕಿದೆ. ಇದರ ಮಧ್ಯೆ ಹರ್ಷ ಮನೆ ಮಂದಿಗೆ ನಿಜ ವಿಚಾರ ಹೇಳುವ ನಿರ್ಧಾರಕ್ಕೆ ಬಂದಿದ್ದಾನೆ.

ಸಾನಿಯಾ ಶಾಕ್

ಅಸ್ಥಿ ಬಿಡುವ ಸಂದರ್ಭದಲ್ಲೇ ಪೊಲೀಸರು ಬಂದಿದ್ದಾರೆ. ಅವರ ಬಳಿ ಸ್ವಲ್ಪ ಹೊತ್ತು ನಿಲ್ಲುವಂತೆ ಕೋರಿದ ಹರ್ಷ, ಅಸಲಿ ವಿಚಾರ ಹೇಳಿದ್ದಾನೆ. ‘ಸುದರ್ಶನ್​ ಮಾವ ನಿನಗೆ ಆಸ್ತಿ ಕೊಡೋಕೆ ನಾನು ಅರ್ಹನಲ್ಲ, ಸಾನಿಯಾಳನ್ನು ಕೆಲಸದಿಂದ ತೆಗೆಯಲು ನನಗೆ ಅಧಿಕಾರವೂ ಇಲ್ಲ’ ಎಂದು ಅಸಲಿ ವಿಚಾರ ಹೇಳಿದ್ದಾನೆ. ಇದರ ಜತೆಗೆ ವಿಲ್ ವಿಚಾರ ಓದುವಂತೆ ಭುವಿಗೆ ಹರ್ಷ ಸೂಚಿಸಿದ್ದಾನೆ.

ಭುವಿ ವಿಲ್ ಓದುತ್ತಿದ್ದಂತೆ ಮನೆ ಮಂದಿಗೆ ಶಾಕ್ ಆಗಿದೆ. ಎಲ್ಲಾ ಆಸ್ತಿ ಸೌಪರ್ಣಿಕಾ (ಭುವನೇಶ್ವರಿ) ಹೆಸರಿಗೆ ರತ್ನಮಾಲಾ ಬರೆದಿದ್ದಾಳೆ. ಅಷ್ಟೇ ಅಲ್ಲ, ಐದು ವರ್ಷಗಳ ಕಾಲ ಈ ಆಸ್ತಿಯನ್ನು ಯಾರ ಹೆಸರಿಗೂ ವರ್ಗಾವಣೆ ಮಾಡುವಂತಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದಾಳೆ. ಇದನ್ನು ಕೇಳಿದ ಸಾನಿಯಾ ಹಾಗೂ ಸುದರ್ಶನ್​​ಗೆ ಶಾಕ್ ಆಗಿದೆ.

ಅಸ್ಥಿ ಬಿಡುವ ಸಂದರ್ಭದಲ್ಲೇ ಆಸ್ತಿ ವಿಚಾರ ಇತ್ಯರ್ಥ ಮಾಡಿಕೊಳ್ಳಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದ ಸುದರ್ಶನ್. ಆದರೆ, ಈಗ ಐದು ವರ್ಷಗಳ ಕಾಲ ಆಸ್ತಿಯಲ್ಲಿ ಯಾರೂ ಪಾಲು ಕೇಳುವಂತಿಲ್ಲ ಎಂದು ವಿಲ್​ನಲ್ಲೇ ಬರೆಯಲಾಗಿದೆ. ಇದರಿಂದ ಆತನಿಗೆ ಮುಂದೇನು ಮಾಡಬೇಕು ಎಂದು ದಿಕ್ಕು ತೋಚದಂತೆ ಆಗಿದೆ. ಇನ್ನು, ಸಾನಿಯಾ ಪ್ಲ್ಯಾನ್ ಕೂಡ ವಿಫಲವಾಗಿದೆ. ಹೇಗಾದರೂ ಮಾಡಿ ಎಂಡಿ ಪಟ್ಟವನ್ನು ತಾನು ಗಿಟ್ಟಿಸಿಕೊಳ್ಳಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಳು. ಆದರೆ, ಅದು ವಿಫಲವಾಗಿದೆ. ಭುವಿಯೇ ಮುಂದಿನ ಎಂಡಿ ಎಂದು ರತ್ನಮಾಲಾ ಘೋಷಣೆ ಮಾಡಿ ಆಗಿದೆ. ಈ ಕಾರಣಕ್ಕೆ ಸಾನಿಯಾ ಹಾಗೂ ಸುದರ್ಶನ್ ಇಬ್ಬರೂ ಸಂಕಷ್ಟ ಎದುರಿಸುವಂತೆ ಆಗಿದೆ. ಮುಂದೇನು ಎನ್ನುವ ಪ್ರಶ್ನೆ ಇಬ್ಬರನ್ನೂ ಕಾಡುತ್ತಿದೆ.

ಇದನ್ನೂ ಓದಿ: ‘ನಿನ್ನ ಹೆಸರಿಗೆ ಆಸ್ತಿ ಇರುವ ವಿಚಾರ ಹರ್ಷನಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ’; ಭುವಿಯ ದಾರಿ ತಪ್ಪಿಸಿದ ವರು

ಸಾನಿಯಾ ಎಂಡಿ ಆಗಿರುವ ವಿಚಾರ ಸುದರ್ಶನ್ ಪತ್ನಿ, ದೇವ್​ ಹಾಗೂ ಸಾನಿಯಾ ಪತಿ ಆದಿಗೆ ಖುಷಿ ನೀಡಿದೆ. ಅವರೆಲ್ಲರೂ ಭುವಿಗೆ ಶುಭಾಶಯ ತಿಳಿಸಿದ್ದಾರೆ. ಜತೆಗೆ ಮುಂದಿರುವ ಅಡೆತಡೆಗಳ ಬಗ್ಗೆ ಆಕೆಗೆ ಎಚ್ಚರಿಸಿದ್ದಾರೆ.

ಈ ವೇಳೆ ಸಾನಿಯಾ ಚುಚ್ಚಿ ಮಾತನಾಡುವ ಕೆಲಸ ಮಾಡಿದಳು. ಹರ್ಷನ ಬಳಿ ಏನೂ ಇಲ್ಲ ಎಂದು ಹಂಗಿಸಿದಳು. ಇದಕ್ಕೆ ಉತ್ತರಿಸಿದ ಹರ್ಷ, ‘ಭುವಿ ಜೂನಿಯರ್ ಅಮ್ಮಮ್ಮ. ಆಕೆ ಮಾತನಾಡುತ್ತಿದ್ದರೆ ಅಮ್ಮಮ್ಮನೇ ಮಾತನಾಡಿದಂತೆ ಅನಿಸುತ್ತದೆ. ಹೀಗಾಗಿ, ಅಮ್ಮಮ್ಮ ಅವಳ ಹೆಸರಿಗೆ ಆಸ್ತಿ ಬರೆದಿದ್ದಾಳೆ. ಆಸ್ತಿ ಅವಳ ಹೆಸರಲ್ಲಿದ್ದರೇನು, ನನ್ನ ಹೆಸರಲ್ಲಿದ್ದರೇನು’ ಎಂದು ಪ್ರಶ್ನೆ ಮಾಡಿದ್ದಾನೆ. ಹರ್ಷನಿಂದ ಬಂದ ಈ ಉತ್ತರ ಕೇಳಿ ಭುವಿ ಖುಷಿಪಟ್ಟಿದ್ದಾಳೆ. ಆದರೆ, ವರುಧಿನಿ ಹಾಗೂ ಸಾನಿಯಾಗೆ ಈ ವಿಚಾರ ಶಾಕ್ ತಂದಿದೆ.

ಇದನ್ನೂ ಓದಿ: Kannadathi Serial: ಸೌಪರ್ಣಿಕಾ ಹೆಸರಿನ ಚರ್ಚೆಯಿಂದ ಬೇಸರಗೊಂಡ ಭುವಿ; ಹರ್ಷನ ಬಗ್ಗೆ ಬಂತು ಕೋಪ

ವರುಧಿನಿ ಪ್ಲ್ಯಾನ್ ಉಲ್ಟಾ

ಆಸ್ತಿ ವಿಚಾರದಲ್ಲಿ ಭುವಿ ಹಾಗೂ ಹರ್ಷನ ಮಧ್ಯೆ ದೊಡ್ಡ ಕಂದಕ ಸೃಷ್ಟಿ ಆಗುತ್ತದೆ ಎಂದು ವರು ಆಲೋಚಿಸಿದ್ದಳು. ಆದರೆ, ಆ ರೀತಿ ಆಗಿಲ್ಲ. ಭುವಿ ಹೆಸರಿಗೆ ಆಸ್ತಿ ಬರೆದ ವಿಚಾರವನ್ನು ಹರ್ಷ ಒಪ್ಪಿಕೊಂಡಿದ್ದಾನೆ. ಅರೆಸ್ಟ್ ಆಗುವುದಕ್ಕೂ ಮೊದಲು ಭುವಿಯನ್ನು ತಬ್ಬಿದ್ದಾನೆ. ಇದೆಲ್ಲವನ್ನೂ ನೋಡಿ ವರುಧಿನಿಗೆ ಪ್ಲ್ಯಾನ್ ಉಲ್ಟಾ ಆಗಿರೋದು ಮನವರಿಕೆ ಆಗಿದೆ.

ಶ್ರೀಲಕ್ಷ್ಮಿ ಎಚ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ