Kannadathi Serial: ‘ನಾನು ಶೂಟ್ ಮಾಡ್ಕೋತೀನಿ’; ಎಂ.ಡಿ. ಪಟ್ಟಕ್ಕಾಗಿ ವೇದಿಕೆ ಮೇಲೆ ಭುವಿಗೆ ಸಾನಿಯಾ ಬೆದರಿಕೆ

Kannadathi Serial Update: ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಭುವಿ ಜತೆಗೆ ಸಾನಿಯಾ ಕೂಡ ಇದ್ದಳು. ಆಕೆ ಅಧಿಕಾರ ಪಡೆಯಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಳು. ಹೀಗಾಗಿ, ಗನ್ ತೋರಿಸಿದ್ದಾಳೆ.

Kannadathi Serial: ‘ನಾನು ಶೂಟ್ ಮಾಡ್ಕೋತೀನಿ’; ಎಂ.ಡಿ. ಪಟ್ಟಕ್ಕಾಗಿ ವೇದಿಕೆ ಮೇಲೆ ಭುವಿಗೆ ಸಾನಿಯಾ ಬೆದರಿಕೆ
ಕನ್ನಡತಿ ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 14, 2022 | 7:00 AM

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
ಹರ್ಷ ಅರೆಸ್ಟ್ ಆಗುವ ಸಂದರ್ಭದಲ್ಲಿ ಕಾಣೆಯಾದ ಭುವಿ; ವೈರಿಗಳದ್ದೇ ಮೇಲುಗೈ
Image
‘ನಿನ್ನ ಹೆಸರಿಗೆ ಆಸ್ತಿ ಇರುವ ವಿಚಾರ ಹರ್ಷನಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ’; ಭುವಿಯ ದಾರಿ ತಪ್ಪಿಸಿದ ವರು
Image
‘5 ವರ್ಷಗಳ ಕಾಲ ಆಸ್ತಿಯನ್ನು ಯಾರ ಹೆಸರಿಗೂ ಬರೆಯುವಂತಿಲ್ಲ’; ರತ್ನಮಾಲಾ ಕಂಡೀಷನ್ ನೋಡಿ ಭುವಿ ಕಂಗಾಲು
Image
ಹರ್ಷನ ಪಡೆಯಲು ಡಬಲ್ ಗೇಮ್ ಆರಂಭಿಸಿದ ವರುಧಿನಿ; ದಡ್ಡಿ ಆಗುತ್ತಿದ್ದಾಳೆ ಭುವಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಹರ್ಷನಿಗೆ ಡಿವೋರ್ಸ್ ನೋಟಿಸ್ ಬಂದಿದೆ. ವರುಧಿನಿ ಪ್ಲ್ಯಾನ್ ಯಶಸ್ಸು ಕಾಣುವ ಸೂಚನೆ ಸಿಕ್ಕಿದೆ. ಮದುವೆ ನೋಂದಣಿ ಸಂದರ್ಭದಲ್ಲಿ ಆಕೆ ವಿಚ್ಛೇದನಕ್ಕೆ ಸಹಿ ಹಾಕಿಸಿಕೊಂಡಿದ್ದಳು. ಈಗ ಈ ನೋಟಿಸ್ ಹರ್ಷನ ಕೈ ಸೇರಿದೆ. ಈ ಸಂಚಿನ ಹಿಂದೆ ಯಾರದ್ದೋ ಕೈವಾಡ ಇದೆ ಎನ್ನುವ ಅನುಮಾನ ಆತನಿಗೆ ಮೂಡಿದೆ. ಹರ್ಷನ ಮೇಲೆ ಭುವಿಗೆ ಅಪಾರ ಪ್ರೀತಿ ಇದೆ. ಅವಳು ಈ ರೀತಿ ಮಾಡಲ್ಲ ಎಂಬುದು ಹರ್ಷನಿಗೆ ಖಚಿತವಾಗಿದೆ.

ಭುವಿಯಲ್ಲಿ ಅಮ್ಮಮ್ಮನ ಕಂಡ ಹರ್ಷ

ವೇದಿಕೆ ಮೇಲೆ ಭುವಿಯನ್ನು ಹರ್ಷ ಸ್ವಾಗತಿಸುವವನಿದ್ದ. ರತ್ನಮಾಲಾ ಜಾಗಕ್ಕೆ ಭುವಿಯನ್ನು ಕೂರಿಸುವ ಕಾರ್ಯಕ್ರಮ ಅದಾಗಿತ್ತು. ಈ ಕಾರ್ಯಕ್ರಮದಲ್ಲಿ ವೇದಿಕೆ ಏರುವುದಕ್ಕೂ ಮೊದಲು ಹರ್ಷನಿಗೆ ಡಿವೋರ್ಸ್ ನೋಟಿಸ್ ಬಂದಿತ್ತು. ಈ ನೋಟಿಸ್ ನೋಡಿ ಇದು ಸಾಧ್ಯವೇ ಇಲ್ಲ ಎಂದು ಕೂಗಿದ್ದ. ಇದನ್ನು ನೋಡಿದ ಅನೇಕರಿಗೆ ಅಚ್ಚರಿ ಆಗಿತ್ತು. ಆದರೆ, ಪ್ಲೇಟ್ ಬದಲಿಸಿದ್ದ ಹರ್ಷ. ‘ನಾನು ಹೀಗೆ ಹೇಳ್ತೀನಿ ಎಂದು ಎಲ್ಲರೂ ಅಂದುಕೊಂಡಿದ್ದೀರಾ? ಆದರೆ, ಆ ರೀತಿ ಇಲ್ಲ. ಭುವಿಯಲ್ಲಿ ಅಧಿಕಾರ ಮಾಡುವ ತಾಕತ್ತು ಇದೆ ಎಂಬುದನ್ನು ಯಾವಾಗಲೋ ಅರಿತಿದ್ದರು ಅಮ್ಮಮ್ಮ. ಈ ಕಾರಣಕ್ಕೆ ಭುವಿ ಅವರಿಗೆ ಅಧಿಕಾರ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಭುವಿ ಜೂನಿಯರ್ ಅಮ್ಮಮ್ಮ’ ಎಂದು ಹೇಳಿದ್ದಾನೆ. ಇದನ್ನು ಕೇಳಿ ಮನೆ ಮಂದಿಗೆ ಖುಷಿ ಆಗಿದೆ.

ಹರ್ಷನಿಗೆ ಗೊತ್ತಾಯ್ತು ಅಸಲಿ ವಿಚಾರ

ವೇದಿಕೆ ಇಳಿದ ನಂತರದಲ್ಲಿ ಹರ್ಷ ಗೊಂದಲಕ್ಕೆ ಬಿದ್ದಿದ್ದಾನೆ. ಆ ಸಮಯಕ್ಕೆ ಸರಿಯಾಗಿ ತಂಗಿ ಸುಚಿ ಸಿಕ್ಕಿದ್ದಾಳೆ. ‘ನನ್ನ ಹಾಗೂ ಭುವಿನ ಬೇರೆ ಮಾಡೋಕೆ ಯಾರೋ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಹರ್ಷ ಹೇಳಿದ್ದಾನೆ. ಇದಕ್ಕೆ ತಕ್ಷಣಕ್ಕೆ ಸುಚಿ, ವರುಧಿನಿಯ ಹೆಸರನ್ನು ತೆಗೆದುಕೊಂಡಿದ್ದಾಳೆ. ಸುಚಿ ಉತ್ತರ ಹರ್ಷನಿಗೆ ಅಚ್ಚರಿ ತಂದಿದೆ.

ಇದನ್ನೂ ಓದಿ: Kannadathi Serial: ಭುವಿ ಆಡಿದ ಮಾತಿಗೆ ಸಾನಿಯಾಗೆ ಚಳಿ-ಜ್ವರ; ಹಾಸಿಗೆ ಸೇರಿದ ವಿಲನ್

‘ವರುಧಿನಿ ಈ ರೀತಿಯ ಕೆಲಸ ಮಾಡುತ್ತಾಳೆ ಅನ್ನೋದನ್ನು ನನಗೆ ಈಗಲೂ ನಂಬೋಕೆ ಆಗುತ್ತಿಲ್ಲ. ಅವಳು ಈ ರೀತಿ ಮಾಡಲ್ಲ ಅನಿಸುತ್ತದೆ’ ಎಂದು ಹರ್ಷ ಹೇಳಿದ್ದಾನೆ. ಇದಕ್ಕೆ ಸುಚಿ ಸ್ಪಷ್ಟನೆ ನೀಡಿದ್ದಾಳೆ. ‘ನೀನು ವೇದಿಕೆ ಏರಿದ್ದಾಗ ವರುಧಿನಿ ನಮ್ಮ ಜತೆ ನಿಂತು ನಿಮ್ಮ ಬಗ್ಗೆ ಲೂಸ್ ಟಾಕ್​ ಮಾತನಾಡುತ್ತಿದ್ದಳು. ಈ ಕಾರಣಕ್ಕೆ ಅನುಮಾನ ಬಂತು. ಅವಳೇ ಈ ಕೆಲಸ ಮಾಡುತ್ತಿದ್ದಾಳೆ’ ಎಂದು ಸುಚಿ ಹೇಳಿದ್ದಾಳೆ. ಹರ್ಷನಿಗೆ ಈ ಬಗ್ಗೆ ಅನುಮಾನ ಮೂಡಿದೆ.

ಸಾನಿಯಾ ಬ್ಲಾಕ್​ಮೇಲ್

ಸಾನಿಯಾ ಅಧಿಕಾರಕ್ಕಾಗಿ ಯಾವ ಹಂತಕ್ಕೆ ಹೋಗೋಕೂ ರೆಡಿ. ಇದು ಭುವಿಯ ಅನುಭವಕ್ಕೆ ಬಂದಿದೆ. ಆಕೆ ರತ್ನಮಾಲಾಳನ್ನು ಕೊಲ್ಲೋಕೆ ಹೋಗಿದ್ದಳು ಎನ್ನುವ ವಿಚಾರದಲ್ಲಿ ಸಾಕ್ಷಿ ಸಿಕ್ಕಿದೆ. ಹೀಗಾಗಿ, ಆಕೆ ಹೆಚ್ಚು ಎಚ್ಚರಿಕೆಯಿಂದ ಇರೋಕೆ ಮುಂದಾಗಿದ್ದಾಳೆ.

ಇದನ್ನೂ ಓದಿ: ಭುವಿಯಿಂದ ಬಂತು ಡಿವೋರ್ಸ್​ ನೋಟಿಸ್​; ಇದು ಸಾಧ್ಯವಿಲ್ಲ ಎಂದು ಕೂಗಿದ ಹರ್ಷ

ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಭುವಿ ಜತೆಗೆ ಸಾನಿಯಾ ಕೂಡ ಇದ್ದಳು. ಆಕೆ ಅಧಿಕಾರ ಪಡೆಯಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಳು. ಹೀಗಾಗಿ, ಗನ್ ತೋರಿಸಿ ‘ನೀವು ನನಗೆ ಅಧಿಕಾರ ನೀಡಿಲ್ಲ ಎಂದರೆ ಈ ಗನ್​ನ ತೆಗೆದುಕೊಂಡು ಶೂಟ್ ಮಾಡಿಕೊಳ್ಳುತ್ತೇನೆ. ನನಗೆ ಅಧಿಕಾರ ಮುಖ್ಯ ಅಷ್ಟೇ’ ಎಂದು ಹೇಳಿದ್ದಾಳೆ. ರತ್ನಮಾಲಾ ಇರುವ ಸಂದರ್ಭದಲ್ಲೂ ಇದೇ ರೀತಿ ಮಾಡಿದ್ದಳು ಸಾನಿಯಾ. ಈ ಕಾರಣಕ್ಕೆ ರತ್ನಮಾಲಾ ಅಧಿಕಾರ ನೀಡಿದ್ದಳು. ಈಗ ಭುವಿ ಕೂಡ ಇದೇ ರೀತಿ ಮಾಡುತ್ತಾಳಾ ಅಥವಾ ಬೇರೆಯದೇ ರೀತಿಯ ಪ್ಲ್ಯಾನ್ ಮಾಡುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀಲಕ್ಷ್ಮಿ ಎಚ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ