AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kannadathi: ಶೀಘ್ರವೇ ಮುಗಿಯಲಿದೆ ‘ಕನ್ನಡತಿ’ ಧಾರಾವಾಹಿ; ಪ್ರಸಾರ ಆಗೋದು ಕೆಲವೇ ದಿನ ಮಾತ್ರ

Colors Kannada | Kannadathi Serial: ಇನ್ನು ಕೆಲವೇ ದಿನಗಳು ಮಾತ್ರ ‘ಕನ್ನಡತಿ’ ಧಾರಾವಾಹಿಯ ಸಂಚಿಕೆಗಳು ಪ್ರಸಾರ ಆಗಲಿವೆ. 2023ರ ಜನವರಿ ವೇಳೆಗೆ ಈ ಸೀರಿಯಲ್​ ಅಂತ್ಯವಾಗುವುದು ಬಹುತೇಕ ಖಚಿತವಾಗಿದೆ.

Kannadathi: ಶೀಘ್ರವೇ ಮುಗಿಯಲಿದೆ ‘ಕನ್ನಡತಿ’ ಧಾರಾವಾಹಿ; ಪ್ರಸಾರ ಆಗೋದು ಕೆಲವೇ ದಿನ ಮಾತ್ರ
ಕನ್ನಡತಿ ಧಾರಾವಾಹಿ
TV9 Web
| Edited By: |

Updated on:Dec 14, 2022 | 4:55 PM

Share

ಬೇರೆ ಎಲ್ಲ ಸೀರಿಯಲ್​ಗಳಿಗಿಂತಲೂ ‘ಕನ್ನಡತಿ ಸೀರಿಯಲ್’ (Kannadathi Serial)​ ಭಿನ್ನವಾಗಿ ಮೂಡಿಬರುತ್ತಿದೆ. ಇದರಲ್ಲಿನ ಕಥೆ ನೋಡಿ ಕಿರುತೆರೆ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಇತ್ತೀಚಿನ ಎಪಿಸೋಡ್​ಗಳಲ್ಲಿ ಹಲವು ಟ್ವಿಸ್ಟ್​ಗಳನ್ನು ನೀಡಲಾಗಿದೆ. ವೀಕ್ಷಕರು ಇಷ್ಟಪಟ್ಟಿದ್ದ ಅಮ್ಮಮ್ಮನ ಪಾತ್ರ ಅಂತ್ಯವಾಯ್ತು. ಅದರಿಂದ ಕೆಲವರಿಗೆ ಬೇಸರ ಆಗಿದ್ದುಂಟು. ಅದಕ್ಕಿಂತಲೂ ಬೇಸರದ ವಿಚಾರ ಏನೆಂದರೆ, ‘ಕನ್ನಡತಿ’ (Kannadathi) ಧಾರಾವಾಹಿ ಶೀಘ್ರದಲ್ಲೇ ಅಂತ್ಯವಾಗಲಿದೆ. ಇನ್ನೇನು ಕೆಲವೇ ದಿನಗಳು ಮಾತ್ರ ಈ ಸೀರಿಯಲ್​ ಪ್ರಸಾರ ಆಗಲಿದೆ. ನಂತರ ‘ಕಲರ್ಸ್​ ಕನ್ನಡ’ (Colors Kannada) ವಾಹಿನಿಯಲ್ಲಿ ಹೊಸ ಧಾರಾವಾಹಿ ಬಿತ್ತರ ಆಗಲಿದೆ. ‘ಕನ್ನಡತಿ’ ಕಹಾನಿ ದಿ ಎಂಡ್​ ಆಗುತ್ತಿದೆ ಎಂಬುದನ್ನು ಮೂಲಗಳು ಖಚಿತ ಪಡಿಸಿವೆ.

ರಂಜನಿ ರಾಘವನ್​ ಅವರು ‘ಕನ್ನಡತಿ’ ಸೀರಿಯಲ್​ನಲ್ಲಿ ಭುವಿ ಎಂಬ ಪಾತ್ರ ಮಾಡಿದ್ದಾರೆ. ನಟ ಕಿರಣ್​ ರಾಜ್​ ಅವರು ಹರ್ಷನಾಗಿ ಜನಮೆಚ್ಚುಗೆ ಪಡೆದುಕೊಂಡಿದ್ದಾರೆ. ಇವರಿಬ್ಬರ ಜೋಡಿಗೆ ಪ್ರತ್ಯೇಕ ಅಭಿಮಾನಿವರ್ಗವಿದೆ. ಟಿಆರ್​ಪಿ ವಿಚಾರದಲ್ಲಿಯೂ ಈ ಧಾರಾವಾಹಿ ಸಮತೋಲನ ಕಾಯ್ದುಕೊಳ್ಳುತ್ತಾ ಬಂದಿದೆ. ಹಾಗಿದ್ದರೂ ಕೂಡ ಸೀರಿಯಲ್​ ಅಂತ್ಯ ಮಾಡಬೇಕು ಎಂಬ ನಿರ್ಧಾರವನ್ನು ‘ಕಲರ್ಸ್​ ಕನ್ನಡ’ ವಾಹಿನಿ ತೆಗೆದುಕೊಂಡಿದೆ.

ಇದನ್ನೂ ಓದಿ: Ranjani Raghavan: ನಟಿ ರಂಜನಿ ರಾಘವನ್​ ಪುಸ್ತಕ ಬರೆಯೋಕೆ ಶುರು ಮಾಡಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್​ ಕಹಾನಿ

ಇದನ್ನೂ ಓದಿ
Image
ಹರ್ಷ ಅರೆಸ್ಟ್ ಆಗುವ ಸಂದರ್ಭದಲ್ಲಿ ಕಾಣೆಯಾದ ಭುವಿ; ವೈರಿಗಳದ್ದೇ ಮೇಲುಗೈ
Image
‘ನಿನ್ನ ಹೆಸರಿಗೆ ಆಸ್ತಿ ಇರುವ ವಿಚಾರ ಹರ್ಷನಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ’; ಭುವಿಯ ದಾರಿ ತಪ್ಪಿಸಿದ ವರು
Image
‘5 ವರ್ಷಗಳ ಕಾಲ ಆಸ್ತಿಯನ್ನು ಯಾರ ಹೆಸರಿಗೂ ಬರೆಯುವಂತಿಲ್ಲ’; ರತ್ನಮಾಲಾ ಕಂಡೀಷನ್ ನೋಡಿ ಭುವಿ ಕಂಗಾಲು
Image
ಹರ್ಷನ ಪಡೆಯಲು ಡಬಲ್ ಗೇಮ್ ಆರಂಭಿಸಿದ ವರುಧಿನಿ; ದಡ್ಡಿ ಆಗುತ್ತಿದ್ದಾಳೆ ಭುವಿ

ಸಾಮಾನ್ಯವಾಗಿ ಟಿಆರ್​ಪಿ ಕುಸಿದಾಗ ಸೀರಿಯಲ್​ಗಳನ್ನು ಮುಗಿಸಲಾಗುತ್ತದೆ. ಆದರೆ ‘ಕನ್ನಡತಿ’ ವಿಚಾರದಲ್ಲಿ ಹಾಗಾಗಿಲ್ಲ. ಉತ್ತಮ ಟಿಆರ್​ಪಿ ಬರುತ್ತಿದ್ದರೂ ಕೂಡ ಈ ಧಾರಾವಾಹಿ ಅಂತ್ಯವಾಗುತ್ತಿದೆ. ಆರಂಭದಲ್ಲಿ ಅಂದುಕೊಂಡ ರೀತಿಯೇ ಕಥೆ ಈಗ ಮುಕ್ತಾಯ ಹಂತಕ್ಕೆ ಬಂದಿದೆ. ಆ ಕಾರಣದಿಂದ ಸೀರಿಯಲ್​ ಮುಗಿಸಲಾಗುತ್ತಿದೆ ಎಂಬುದು ಮೂಲಗಳ ಮಾಹಿತಿ.

ಇದನ್ನೂ ಓದಿ: Kannadathi Serial: ಕನ್ನಡಿಗರಿಗೆ ಟಾಸ್ಕ್ ಕೊಟ್ಟ ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್

ಈ ಮೊದಲು ರಂಜನಿ ರಾಘವನ್​ ಅವರು ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆಗ ‘ಪುಟ್ಟಗೌರಿ ರಂಜನಿ’ ಎಂದೇ ಅವರು ಫೇಮಸ್​ ಆಗಿದ್ದರು. ಆದರೆ ಆ ಇಮೇಜ್​ ಅನ್ನು ಬದಲಿಸುವ ರೀತಿಯಲ್ಲಿ ‘ಕನ್ನಡತಿ’ ಸೀರಿಯಲ್​ ಮೂಡಿಬಂತು. ‘ಕನ್ನಡತಿ ಭುವಿ’ ಎಂದು ಅವರನ್ನು ಗುರುತಿಸುವ ಹಾಗೆ ಅವರ ಪಾತ್ರ ಜನಪ್ರಿಯತೆ ಪಡೆದುಕೊಂಡಿತು.

ಇನ್ನು ಕೆಲವೇ ದಿನಗಳು ಮಾತ್ರ ‘ಕನ್ನಡತಿ’ ಧಾರಾವಾಹಿಯ ಸಂಚಿಕೆಗಳು ಪ್ರಸಾರ ಆಗಲಿವೆ. 2023ರ ಜನವರಿ ವೇಳೆಗೆ ಈ ಸೀರಿಯಲ್​ ಅಂತ್ಯವಾಗುವುದು ಬಹುತೇಕ ಖಚಿತವಾಗಿದೆ. ಇತ್ತ ಬಿಗ್​ ಬಾಸ್​ ಕೂಡ ಶೀಘ್ರದಲ್ಲೇ ಮುಗಿಯಲಿದೆ. ಆ ಸಮಯದಲ್ಲಿ ಪ್ರಸಾರವಾಗಲು ‘ತ್ರಿಪುರ ಸುಂದರಿ’ ಹಾಗೂ ‘ಪುಣ್ಯವತಿ’ ಎಂಬ ಎರಡು ಹೊಸ ಸೀರಿಯಲ್​ಗಳು ಸಜ್ಜಾಗಿವೆ. ‘ಕನ್ನಡತಿ’ ಬದಲಿಗೆ ಯಾವ ಧಾರಾವಾಹಿ ಬರಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:55 pm, Wed, 14 December 22

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್