Jothe Jotheyali Serial: ಆರ್ಯನಿಗಾಗಿ ಸಂಜು ಸಹಾಯ ಪಡೆಯಲು ಮುಂದಾದ ಅನು

Jothe Jotheyali Kannada Serial: ಸಂಜು ಹಾಗೂ ಆರ್ಯವರ್ಧನ್​ ನಡುವೆ ಹಲವು ವಿಚಾರಗಳಲ್ಲಿ ಸಾಮ್ಯತೆ ಇದೆ ಎಂಬುದು ಅನು ಅಭಿಪ್ರಾಯ. ಆದರೆ, ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರ ಆಕೆಗೆ ಗೊತ್ತಿಲ್ಲ.

Jothe Jotheyali Serial: ಆರ್ಯನಿಗಾಗಿ ಸಂಜು ಸಹಾಯ ಪಡೆಯಲು ಮುಂದಾದ ಅನು
ಜೊತೆ ಜೊತೆಯಲಿ ಧಾರಾವಾಹಿ
Follow us
TV9 Web
| Updated By: ಮದನ್​ ಕುಮಾರ್​

Updated on: Dec 15, 2022 | 6:30 AM

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಇದನ್ನೂ ಓದಿ
Image
ವಿಷ ಇರುವ ಪಾಯಸ ಕುಡಿದು ಆಸ್ಪತ್ರೆ ಸೇರಿದ ಸಂಜು; ಅನುಗೆ ಸಂಕಟ
Image
ಝೇಂಡೆಯ ಅಸಲಿ ಮುಖ ರಿವೀಲ್​; ವಿಲನ್ ಆದ ರಮ್ಯಾ
Image
ಅನು ಸಿರಿಮನೆ-ಸಂಜುನಿಂದ ಮುರಿದು ಬಿತ್ತು ರಮ್ಯಾ ಎಂಗೇಜ್​ಮೆಂಟ್
Image
ಎಲ್ಲರ ಎದುರು ಸಂಜುಗೆ ಆರ್ಯ ಎಂದು ಕರೆದ ಝೇಂಡೆ; ಸಿಟ್ಟಾದ ಅನು ಸಿರಿಮನೆ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಅನು ಸಿರಿಮನೆಗೆ ಜೋಗ್ತವ್ವ ಎದುರಾಗಿದ್ದಾಳೆ. ಆರ್ಯವರ್ಧನ್ ಬದುಕಿದ್ದಾನೆ ಎನ್ನುವ ಅನುಮಾನ ಅನುಗೆ ಈ ಮೊದಲಿನಿಂದಲೂ ಇತ್ತು. ಆಸ್ಪತ್ರೆಗೆ ತೆರಳಿ ಆರ್ಯನ ಡೆತ್​ ಸರ್ಟಿಫಿಕೇಟ್ ಕೇಳಿದರೆ ಯಾರೊಬ್ಬರೂ ಅದನ್ನು ನೀಡಿಲ್ಲ. ಈ ಕಾರಣಕ್ಕೆ ಅನುಗೆ ಅನುಮಾನ ಹೆಚ್ಚಿತ್ತು. ಇದೇ ಸಂದರ್ಭಕ್ಕೆ ಕಣ್ಣೆದುರು ಬಂದ ಜೋಗ್ತವ್ವ ‘ನಿನ್ನ ಗಂಡ ಬದುಕಿದ್ದಾನೆ. ಕಣ್ಣೆದುರೇ ಇದ್ದಾನೆ. ಆತನನ್ನು ಕಳೆದುಕೊಳ್ತೀಯಾ’ ಎಂದು ಎಚ್ಚರಿಕೆ ನೀಡಿದ್ದಳು. ಇದನ್ನು ಕೇಳಿ ಅನುಗೆ ಖುಷಿ ಹಾಗೂ ಅಚ್ಚರಿ ಎರಡೂ ಒಟ್ಟೊಟ್ಟಿಗೆ ಆಗಿದೆ.

ಝೇಂಡೆಯ ಸ್ಪಷ್ಟನೆ

ಆರ್ಯ ಬದುಕಿದ್ದಾನೆ ಎನ್ನುವ ವಿಚಾರ ಝೇಂಡೆಗೆ ಗೊತ್ತಾಗಿದೆ. ಆರ್ಯನೇ ಸಂಜು ಎನ್ನುವ ವಿಚಾರ ತಿಳಿದು ಹೋಗಿದೆ. ಹೇಗಾದರೂ ಮಾಡಿ ಸಂಜುನ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂಬುದು ಝೇಂಡೆಯ ಪ್ಲ್ಯಾನ್. ಈ ಕಾರಣಕ್ಕೆ ಆತ ಹಲವು ಪ್ಲ್ಯಾನ್ ಮಾಡಿದ್ದಾನೆ. ವರ್ಧನ್ ಕಂಪನಿಗೆ ಮರಳಿದ್ದಾನೆ. ಈ ವೇಳೆ ಮೀರಾ ಹೆಗಡೆಗೆ ಝೇಂಡೆ ಮಾತುಗಳ ಬಗ್ಗೆ ಅನುಮಾನ ಮೂಡಿದೆ. ಆರ್ಯ ನಿಜಕ್ಕೂ ಬದುಕಿದ್ದಾನಾ ಎಂದು ಪ್ರಶ್ನೆ ಮಾಡಿದ್ದಾಳೆ.

ಇದನ್ನೂ ಓದಿ: Jothe Jotheyali: ಸಂಜುಗೆ ಹಳೇ ನೆನಪು ಮರಳಿಸಲು ಝೇಂಡೆ ಪ್ರಯತ್ನ; ಆರ್ಯನ ಸಾವಿನ ರಹಸ್ಯ ಬೆನ್ನತ್ತಿ ಹೊರಟ ಅನು

‘ಆರ್ಯವರ್ಧನ್​ ಬದುಕಿದ್ದಾನೆ. ಅವನನ್ನು ಹುಡುಕುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಆತ ಎಲ್ಲಿದ್ದಾನೆ ಎನ್ನುವ ವಿಚಾರ ಗೊತ್ತಿದ್ದರೆ ನಾನು ಸುಮ್ಮನೆ ಇರುತ್ತಿದ್ದೆನಾ? ನಾನೇ ಹುಡುಕಲು ಹೋಗುತ್ತಿದ್ದೆ. ಈ ಸಂಚಿನ ಹಿಂದೆ ಅನು ಕೈವಾಡ ಇದೆ. ಪೊಲೀಸರು ಈ ವಿಚಾರವನ್ನು ತುಂಬಾ ಕಾನ್ಫಿಡೆನ್ಷಿಯಲ್ ಆಗಿ ಇಟ್ಟಿದ್ದಾರೆ. ಅನುನ ಅರೆಸ್ಟ್ ಮಾಡಿದ್ದು ಇದೇ ಕಾರಣಕ್ಕೆ ಆಗಿತ್ತು’ ಎಂದು ಝೇಂಡೆ ಸುಳ್ಳು ಹೇಳಿದ್ದಾನೆ. ಝೇಂಡೆಯ ಮಾತುಗಳ ಮೇಲೆ ಮೀರಾಗೆ ಅನುಮಾನ ಬಂದಿದೆ. ಆತನನ್ನು ನಂಬಬೇಕೋ ಅಥವಾ ಬೇಡವೋ ಎನ್ನುವ ಗೊಂದಲ ಮೂಡಿದೆ.

ಸಂಜು ಸಹಾಯ ಕೇಳಲು ಮುಂದಾದ ಅನು

ಆರ್ಯವರ್ಧನ್ ಹುಡುಕಲು ಸಂಜುನ ಸಹಾಯ ಅನು ಕೇಳಲು ಮುಂದಾಗಿದ್ದಾಳೆ. ಇದಕ್ಕೆ ಕಾರಣ ಆತ ನಡೆದುಕೊಳ್ಳುವ ರೀತಿ. ಸಂಜುಗೆ ಹಾಗೂ ಆರ್ಯವರ್ಧನ್​ಗೆ ಹಲವು ವಿಚಾರಗಳಲ್ಲಿ ಸಾಮ್ಯತೆ ಇದೆ ಎಂಬುದು ಅನು ಅಭಿಪ್ರಾಯ. ಆದರೆ, ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರ ಆಕೆಗೆ ಗೊತ್ತಿಲ್ಲ. ಈಗ ಆರ್ಯ ಬದುಕಿದ್ದಾನೆ ಎನ್ನುವ ವಿಚಾರವನ್ನು ಜೋಗ್ತವ್ವ ಹೇಳಿದ್ದಾಳೆ. ಈ ಕಾರಣದಿಂದ ಆಕೆ ಆರ್ಯನ ಹುಡುಕಲು ಹೊರಟಿದ್ದಾಳೆ. ಇದಕ್ಕೆ ಸಂಜುನ ಸಹಾಯ ಪಡೆಯುವ ಬಗ್ಗೆ ಗೆಳತಿ ರಮ್ಯಾ ಜತೆ ಮಾತನಾಡಿದ್ದಾಳೆ.

ಇದನ್ನೂ ಓದಿ: Jothe Jotheyali: ಆರ್ಯ ಯಾವಾಗ ಬರ್ತಾನೆ? ಝೇಂಡೆ ಮಾತು ಕೇಳಿ ಮೀರಾ ಶಾಕ್

‘ಆರ್ಯ ಸರ್ ಬದುಕಿದ್ದಾರೆ. ಈ ವಿಚಾರದಲ್ಲಿ ನನಗೆ ಇನ್ನೂ ಅನುಮಾನ ಇದೆ. ಈಗ ಈ ವಿಚಾರವನ್ನು ಜೋಗ್ತವ್ವ ಕೂಡ ಹೇಳಿದ್ದಾಳೆ. ಈಗ ಆರ್ಯನ ಹುಡುಕೋಕೆ ಸರಿಯಾದ ವ್ಯಕ್ತಿ ಸಂಜು ಎಂದು ನನಗೆ ಅನಿಸುತ್ತಿದೆ. ಆತನ ಸಹಾಯ ನಾನು ಪಡೆಯುತ್ತೇನೆ’ ಎಂದು ಅನು ಹೇಳಿದ್ದಾಳೆ.

ಮಾನ್ಸಿ ಅನುಮಾನ

ಮಾನ್ಸಿಗೆ ಸಂಜು ಬಗ್ಗೆ ಅನುಮಾನ ಶುರುವಾಗಿದೆ. ಆತ ಅನುನ ಕೇರ್ ಮಾಡುವ ವಿಚಾರದಲ್ಲಂತೂ ಸಾಕಷ್ಟು ಗೊಂದಲ ಇದೆ. ಈ ವಿಚಾರವನ್ನು ಶಾರದಾದೇವಿ ಬಳಿ ನೇರವಾಗಿ ಹೇಳಿದ್ದಾಳೆ. ‘ಸಂಜು ನಡೆ ನನಗೆ ಸಾಕಷ್ಟು ಅನುಮಾನ ಮೂಡಿಸಿದೆ. ಆತನಿಗೆ ವರ್ಧನ್ ಕಂಪನಿ ಬೇಕು ಅಥವಾ ಕಂಪನಿಯ ಒಡತಿ ಅನು ಬೇಕು’ ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿ ಶಾರದಾದೇವಿಗೆ ಸಿಟ್ಟಾಗಿದೆ. ಆಕೆ ಮಾನ್ಸಿ ವಿರುದ್ಧ ಕೂಗಾಡಿದ್ದಾಳೆ. ಈ ರೀತಿಯ ಮಾತುಗಳನ್ನು ಮಾನ್ಸಿ ಹೇಳುತ್ತಿದ್ದಾಳೆ ಎಂಬ ವಿಚಾರದಿಂದ ಆಕೆಗೆ ಬೇಸರ ಆಗಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀಲಕ್ಷ್ಮಿ ಎಚ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ