Jothe Jotheyali: ಆರ್ಯ ಯಾವಾಗ ಬರ್ತಾನೆ? ಝೇಂಡೆ ಮಾತು ಕೇಳಿ ಮೀರಾ ಶಾಕ್

Jothe Jotheyali Serial Update: ಝೇಂಡೆ ಮಾಸ್ಟರ್​ ಪ್ಲ್ಯಾನ್ ಮಾಡಿದ್ದಾನೆ. ವರ್ಧನ್ ಕಂಪನಿಯ ಎಲ್ಲಾ ಆಸ್ತಿಯನ್ನು ತಾನು ಪಡೆದುಕೊಳ್ಳಬೇಕು ಎಂಬ ಆಲೋಚನೆಯಲ್ಲಿ ಆತ ಇದ್ದಾನೆ.

Jothe Jotheyali: ಆರ್ಯ ಯಾವಾಗ ಬರ್ತಾನೆ? ಝೇಂಡೆ ಮಾತು ಕೇಳಿ ಮೀರಾ ಶಾಕ್
‘ಜೊತೆ ಜೊತೆಯಲಿ’ ಧಾರಾವಾಹಿ
Follow us
TV9 Web
| Updated By: ಮದನ್​ ಕುಮಾರ್​

Updated on: Dec 13, 2022 | 6:30 AM

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಇದನ್ನೂ ಓದಿ
Image
ವಿಷ ಇರುವ ಪಾಯಸ ಕುಡಿದು ಆಸ್ಪತ್ರೆ ಸೇರಿದ ಸಂಜು; ಅನುಗೆ ಸಂಕಟ
Image
ಝೇಂಡೆಯ ಅಸಲಿ ಮುಖ ರಿವೀಲ್​; ವಿಲನ್ ಆದ ರಮ್ಯಾ
Image
ಅನು ಸಿರಿಮನೆ-ಸಂಜುನಿಂದ ಮುರಿದು ಬಿತ್ತು ರಮ್ಯಾ ಎಂಗೇಜ್​ಮೆಂಟ್
Image
ಎಲ್ಲರ ಎದುರು ಸಂಜುಗೆ ಆರ್ಯ ಎಂದು ಕರೆದ ಝೇಂಡೆ; ಸಿಟ್ಟಾದ ಅನು ಸಿರಿಮನೆ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಸಂಜುಗೆ ತಾನೇ ಆರ್ಯವರ್ಧನ್ ಎನ್ನುವ ವಿಚಾರ ಗೊತ್ತಿಲ್ಲ. ಆತನಿಗೆ ವಿಶ್ವ ಎಂದು ಹೇಳಿ ನಂಬಿಸಲಾಗಿದೆ. ಆತನಿಗೆ ನಿಜ ವಿಚಾರ ಹೇಳಿಲ್ಲ. ಈಗ ಅಪಘಾತ ನಡೆದ ಸ್ಥಳದಲ್ಲಿ ಬರುವಾಗ ಆತನಿಗೆ ಹಳೆಯ ನೆನಪು ಕಾಡಿದೆ. ಯಾರೋ ಬುಲೆಟ್ ಹಾರಿಸಿದಂತೆ, ಕಾರು ಅಪಘಾತ ಆದಂತೆ ಆತನಿಗೆ ಅನಿಸಿದೆ. ಈ ಘಟನೆ ಏಕೆ ನೆನಪಾಯಿತು ಎನ್ನುವ ಪ್ರಶ್ನೆ ಆತನನ್ನು ಕಾಡಿದೆ.

ಸಂಜುಗೆ ಕಾಡಿದೆ ಪ್ರಶ್ನೆ

ಸಂಜುಗೆ ತಾನು ಯಾರು ಎನ್ನುವ ಪ್ರಶ್ನೆ ಕಾಡಿದೆ. ಆತನಿಗೆ ತಾನು ಯಾರು ಎನ್ನುವ ಪ್ರಶ್ನೆ ಈ ಮೊದಲಿನಿಂದಲೂ ಕಾಡುತ್ತಿದೆ. ಈಗ ಸವದತ್ತಿಯಿಂದ ಬರುವಾಗ ಸಂಜುಗೆ ಅಪಘಾತದ ಘಟನೆ ಹಾದು ಹೋಗಿದೆ. ಈ ಕಾರಣಕ್ಕೆ ಆತನಿಗೆ ತಾನು ಯಾರು ಎನ್ನುವ ಪ್ರಶ್ನೆ ಮೂಡಿದೆ. ಹೀಗಾಗಿ, ಶಾರದಾದೇವಿ ಬಳಿ ಬಂದ ಆತ ತನ್ನ ಮನದಾಳದ ಮಾತನ್ನು ಕೇಳಿಕೊಂಡಿದ್ದಾನೆ. ‘ಅಮ್ಮ ಒಂದು ಸಹಾಯ ಮಾಡ್ತೀರಾ? ನಾನು ಯಾರು ಎನ್ನುವ ಪ್ರಶ್ನೆಗೆ ಉತ್ತರ ನೀಡಿ. ನಿಮಗೆಲ್ಲರಿಗೂ ನನ್ನ ಬಗ್ಗೆ ಗೊತ್ತಿದೆ. ಆದರೆ, ನನಗೆ ನನ್ನ ಬಗ್ಗೆ ಗೊತ್ತಿಲ್ಲ. ದಯವಿಟ್ಟು ನಾನು ಯಾರು ಎಂಬುದನ್ನು ಹೇಳಿ ಪ್ಲೀಸ್​’ ಎಂದು ಬೇಸರ ತೋಡಿಕೊಂಡಿದ್ದಾನೆ.

ಇದನ್ನೂ ಸರಿ: ಮೀರಾ ಮಾಡಿದ ಮಸಲತ್ತಿನ ಬಗ್ಗೆ ಸಂಜುಗೆ ಬಂತು ಅನುಮಾನ; ಝೇಂಡೆಗೆ ಆರ್ಯನೇ ವಿಲನ್

ಆರಾಧನಾ ಹೆಂಡತಿ ಎಂದು ಹೇಳಿಕೊಂಡು ಬಂದು ಸಂಜುಗೆ ತೊಂದರೆ ಕೊಡುತ್ತಿದ್ದಾಳೆ. ಸಂಜುಗೆ ಆಕೆ ಹೆಂಡತಿ ಎಂಬುದನ್ನು ಒಪ್ಪಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಆಕೆ ಬೇರೆ ಯಾರೋ ಎಂದು ಅನಿಸುತ್ತಿದೆ. ಈ ಬಗ್ಗೆಯೂ ಸಂಜು ಮಾತನಾಡಿದ್ದಾನೆ. ‘ನನಗೆ ಆರಾಧನಾ ಕನೆಕ್ಟ್ ಆಗುತ್ತಿಲ್ಲ. ಆಕೆ ಹೆಂಡತಿ ಎಂದು ನನಗೆ ಅನ್ನಿಸುತ್ತಲೇ ಇಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ’ ಎಂದು ಕೋರಿದ್ದಾನೆ.

ಬ್ಲಾಕ್​ಮೇಲ್ ಮಾಡಿದ ಆರಾಧನಾ

ಆರಾಧನಾಳಿಂದ ದೂರ ಹೋಗಬೇಕು ಎಂದು ಸಂಜು ಪ್ರಯತ್ನ ಮಾಡುತ್ತಲೇ ಇದ್ದಾನೆ. ಇದನ್ನು ನೋಡಿ ನೋಡಿ ಆರಾಧನಾಗೆ ಬೇಸರ ಬಂದಿದೆ. ಈ ಕಾರಣಕ್ಕೆ ಆಕೆ ಒಂದು ಪ್ಲ್ಯಾನ್ ಮಾಡಿದ್ದಾಳೆ. ಸಂಜು ಎದುರು ಬಂದು ಬ್ಲ್ಯಾಕ್​ಮೇಲ್ ಮಾಡಿದ್ದಾಳೆ. ‘ನೀನು ನನ್ನ ವಿಷ್​. ನೀನು ನನ್ನಿಂದ ದೂರ ಹೋಗೋಕೆ ನಾನು ಬಿಡಲ್ಲ. ನನ್ನಿಂದ ನೀನು ದೂರ ಹೋಗುವ ಪ್ರಯತ್ನ ಮಾಡಿದರೆ ನಾನು ಆತ್ಮಹತ್ಯೆ ಮಾಡಿಕೊಳ್ತೀನಿ’ ಎಂದು ಬೆದರಿಕೆ ಹಾಕಿದ್ದಾಳೆ. ಇದನ್ನು ಕೇಳಿ ಸಂಜುಗೆ ಶಾಕ್ ಆಗಿದೆ.

ಮತ್ತೆ ಮರಳಿದ ಝೇಂಡೆ

ಝೇಂಡೆ ಮಾಸ್ಟರ್​ ಪ್ಲ್ಯಾನ್ ಮಾಡಿದ್ದಾನೆ. ವರ್ಧನ್ ಕಂಪನಿಯ ಎಲ್ಲಾ ಆಸ್ತಿಯನ್ನು ತಾನು ಪಡೆದುಕೊಳ್ಳಬೇಕು ಎಂಬ ಆಲೋಚನೆಯಲ್ಲಿ ಆತ ಇದ್ದಾನೆ. ಇದಕ್ಕೆ ಆರ್ಯನನ್ನು ಮೆಟ್ಟಿಲನ್ನಾಗಿ ಮಾಡಿಕೊಳ್ಳಬೇಕು ಎಂಬುದು ಆತನ ಆಲೋಚನೆ. ಇದಕ್ಕಾಗಿ ಝೇಂಡೆ ಮಾಸ್ಟರ್​ ಪ್ಲ್ಯಾನ್ ಮಾಡಿದ್ದಾನೆ. ಆತ ವರ್ಧನ್ ಕಂಪನಿಗೆ ಮರಳಿದ್ದಾನೆ.

ಇದನ್ನೂ ಸರಿ: ಆರ್ಯ ಸತ್ತಿದಾನೆ ಅನ್ನೋದಕ್ಕೆ ಸಾಕ್ಷಿ ಕೇಳಿದ ಝೇಂಡೆ; ಮೀರಾಗೆ ಶುರುವಾಯ್ತು ಅನುಮಾನ

ವರ್ಧನ್ ಕಂಪನಿಗೆ ಬಂದ ಝೇಂಡೆಗೆ ಭವ್ಯ ಸ್ವಾಗತ ನೀಡಿದ್ದಾಳೆ ಮೀರಾ ಹೆಗಡೆ. ಇದನ್ನು ನೋಡಿ ಝೇಂಡೆ ಖುಷಿ ಪಟ್ಟಿದ್ದಾನೆ. ಸಂಜು ಯಾವಾಗ ಕಚೇರಿಗೆ ಮರಳುತ್ತಾರೆ ಅನ್ನೋ ಪ್ರಶ್ನೆ ಮೂಡಿದೆ. ಹೀಗಾಗಿ, ಮೀರಾ ಬಳಿ ಹೋಗಿ ನೇರವಾಗಿ ಪ್ರಶ್ನೆ ಮಾಡಿದ್ದಾನೆ. ‘ಮೀರಾ ಜೀ, ಎನೋ ಕೇಳಬೇಕಿತ್ತು. ಆರ್ಯ ಯಾವಾಗ ಬರ್ತಾನೆ?’ ಎಂದು ಕೇಳಿದ್ದಾನೆ. ಇದನ್ನು ಕೇಳಿ ಮೀರಾಗೆ ಶಾಕ್ ಆಗಿದೆ. ಒಂದೊಮ್ಮೆ ಝೇಂಡೆ, ‘ಸಾರಿ, ಆರ್ಯ ಅಲ್ಲ ಸಂಜು’ ಎಂದು ಹೇಳಿದರೆ ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರ ಮೀರಾಗೆ ತಿಳಿದು ಹೋಗಲಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀಲಕ್ಷ್ಮಿ ಎಚ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್
ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್
ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದು ಹೇಳಿರುವ ಡಿಕೆ ಶಿವಕುಮಾರ್
ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದು ಹೇಳಿರುವ ಡಿಕೆ ಶಿವಕುಮಾರ್
ಸಿದ್ದರಾಮಯ್ಯ, ಮೋದಿ ಹಣ ಹಾಕ್ತಾರೆಂದು ಅಂಚೆ ಕಚೇರಿಯಲ್ಲಿ ಜನವೋ ಜನ..!
ಸಿದ್ದರಾಮಯ್ಯ, ಮೋದಿ ಹಣ ಹಾಕ್ತಾರೆಂದು ಅಂಚೆ ಕಚೇರಿಯಲ್ಲಿ ಜನವೋ ಜನ..!
ರಸ್ತೆಯಲ್ಲೇ ಲೇಡಿ ಕಾನ್​ಸ್ಟೆಬಲ್​ ಕೆನ್ನೆಗೆ ಹೊಡೆದು, ಚುಂಬಿಸಿದ ಬೈಕ್ ಸವಾರ
ರಸ್ತೆಯಲ್ಲೇ ಲೇಡಿ ಕಾನ್​ಸ್ಟೆಬಲ್​ ಕೆನ್ನೆಗೆ ಹೊಡೆದು, ಚುಂಬಿಸಿದ ಬೈಕ್ ಸವಾರ
ಮುಡಾ ಹಗರಣದ ತನಿಖೆ ಚುರುಕು: ವಿಧಾನಸೌಧ ತಲುಪಿದ ಇಡಿ ತನಿಖೆ!
ಮುಡಾ ಹಗರಣದ ತನಿಖೆ ಚುರುಕು: ವಿಧಾನಸೌಧ ತಲುಪಿದ ಇಡಿ ತನಿಖೆ!
ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ; ಕೊಚ್ಚಿಹೋದ ಬಸ್​ಗಳು
ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ; ಕೊಚ್ಚಿಹೋದ ಬಸ್​ಗಳು
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ CM ಶಂಕುಸ್ಥಾಪನೆ
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ CM ಶಂಕುಸ್ಥಾಪನೆ
ಯಡಿಯೂರಪ್ಪ ಒಂದು ಸ್ಪೆಂಟ್ ಫೋರ್ಸ್, ಲಿಂಗಾಯತರಿಗೂ ಬೇಡವಾಗಿದ್ದಾರೆ: ಯತ್ನಾಳ್
ಯಡಿಯೂರಪ್ಪ ಒಂದು ಸ್ಪೆಂಟ್ ಫೋರ್ಸ್, ಲಿಂಗಾಯತರಿಗೂ ಬೇಡವಾಗಿದ್ದಾರೆ: ಯತ್ನಾಳ್
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ, ಪೊಲೀಸ್ ಎಂಟ್ರಿ
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ, ಪೊಲೀಸ್ ಎಂಟ್ರಿ
ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ
ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ