Kannadathi Serial: ಭುವಿ ಆಡಿದ ಮಾತಿಗೆ ಸಾನಿಯಾಗೆ ಚಳಿ-ಜ್ವರ; ಹಾಸಿಗೆ ಸೇರಿದ ವಿಲನ್
Kannadathi Serial Update: ಭುವಿಯನ್ನು ನೋಡಿದಾಗೆಲ್ಲ ಸಾನಿಯಾಗೆ ರತ್ನಮಾಲಾ ನೆನಪಾಗುತ್ತಿದ್ದಾಳೆ. ರತ್ನಮಾಲಾ ಕೂಡ ಹೀಗೆಯೇ ಮಾಡುತ್ತಿದ್ದಳು. ಸೈಲೆಂಟ್ ಆಗಿದ್ದವಳು ಬೇಕಾದ ಸಮಯಕ್ಕೆ ವೈಲೆಂಟ್ ಆಗುತ್ತಿದ್ದಳು.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ರತ್ನಮಾಲಾಳನ್ನು ಕೊಲ್ಲಲು ಹೋಗಿದ್ದಳು ಸಾನಿಯಾ. ಅದನ್ನು ರತ್ನಮಾಲಾ ವಿಡಿಯೋ ಮಾಡಿ ಇಟ್ಟುಕೊಂಡಿದ್ದಳು. ಆ ವಿಡಿಯೋ ಈಗ ಭುವಿಗೆ ಸಿಕ್ಕಿದೆ. ಅದನ್ನೇ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದಾಳೆ ಭುವಿ. ಹರ್ಷನನ್ನು ಸಾನಿಯಾ ಅರೆಸ್ಟ್ ಮಾಡಿಸಿದ್ದಳು. ಭುವಿ ವಿಡಿಯೋ ತೋರಿಸಿದ ನಂತರದಲ್ಲಿ ಸಾನಿಯಾಗೆ ನಡುಕ ಶುರುವಾಗಿದೆ. ಹೀಗಾಗಿ, ಹೇಗಾದರೂ ಮಾಡಿ ಹರ್ಷನನ್ನು ಬಿಡಿಸಿ ತರಬೇಕು ಎಂಬ ಹಠಕ್ಕೆ ಆಕೆ ಬಿದ್ದಿದ್ದಾಳೆ.
ವಿಡಿಯೋ ಮಾಡಿದ ಭುವಿ
ಭುವಿ ಆಡಿದ ಮಾತುಗಳೆಲ್ಲವೂ ಸಾನಿಯಾಗೆ ಚುಚ್ಚುವಂತಿದ್ದವು. ಈ ವಿಚಾರದಲ್ಲಿ ಸಾನಿಯಾಗೆ ನಡುಕ ಶುರುವಾಗಿದೆ. ಒಂದು ಕಡೆ ಹರ್ಷನನ್ನು ಬಿಡಿಸಬೇಕು ಎಂದುಕೊಂಡರೆ ಅದು ಆಗುತ್ತಿಲ್ಲ. ಈ ಕಾರಣಕ್ಕೆ ಆಕೆ ಭುವಿ ಬಳಿ ಕ್ಷಮೆ ಕೇಳಲು ಶುರು ಮಾಡಿದ್ದಾಳೆ. ‘ನನ್ನಿಂದ ತಪ್ಪಾಯಿತು, ಹೇಗಾದರೂ ಮಾಡಿ ತಪ್ಪನ್ನು ಕ್ಷಮಿಸು’ ಎಂದು ಕೋರಿದ್ದಾಳೆ. ಆದರೆ, ಇದನ್ನು ಭುವಿ ಒಪ್ಪುತ್ತಿಲ್ಲ. ಸಾನಿಯಾಳ ತಪ್ಪೊಪ್ಪಿಗೆಯನ್ನು ವಿಡಿಯೋ ಮಾಡಲು ಶುರು ಮಾಡಿದ್ದಾಳೆ ಭುವಿ. ಇದನ್ನು ನೋಡಿ ಸಾನಿಯಾಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: Kannadathi: ‘ಆಸ್ತಿ ಭುವಿ ಬಳಿ ಇದ್ದರೇನು, ನನ್ನ ಬಳಿ ಇದ್ದರೇನು?’; ಹರ್ಷನ ಮಾತಿನಿಂದ ಸಾನಿಯಾ-ವರು ಶಾಕ್
ಈ ಮೊದಲು ಹಸಿರುಪೇಟೆಗೆ ತೆರಳಿದ್ದಾಗ ಒಂದು ಘಟನೆ ನಡೆದಿತ್ತು. ರತ್ನಮಾಲಾ, ವರುಧಿನಿ, ಭುವಿ ಗುಡ್ಡ ಏರಿದ್ದರು. ಭುವಿಯನ್ನು ಕೊಲ್ಲಿಸಲು ಸಾನಿಯಾ ಸುಪಾರಿ ನೀಡಿದ್ದಳು. ಇದಕ್ಕೆ ವರುಧಿನಿ ಕೂಡ ಸಹಾಯ ಮಾಡಿದ್ದಳು. ಇದು ಕೂಡ ಭುವಿಗೆ ಅರಿವಾಗಿದೆ. ಈ ಕಾರಣಕ್ಕೆ ಆಕೆ ನೇರವಾಗಿ ಈ ಬಗ್ಗೆ ಸಾನಿಯಾ ಬಳಿ ಪ್ರಶ್ನೆ ಮಾಡಿದ್ದಾಳೆ. ಇದನ್ನು ಕೇಳಿ ಸಾನಿಯಾಗೆ ಶಾಕ್ ಆಗಿದೆ. ‘ಭುವಿ ನೀನು ಮಾತನಾಡುವುದನ್ನು ನಿಲ್ಲಿಸು ಪ್ಲೀಸ್. ನೀನು ಮಾತನಾಡುತ್ತಿದ್ದರೆ ಚಳಿ-ಜ್ವರ ಬಂದಂತೆ ಆಗುತ್ತದೆ. ದಯವಿಟ್ಟು ನೀನು ಮಾತನಾಡಬೇಡ. ನನಗೆ ಭಯ ಆಗುತ್ತದೆ. ಬೇಕಿದ್ದರೆ ಕೈ ಮುಗಿದು ಕೋರಿಕೊಳ್ಳುತ್ತೇನೆ’ ಎಂದು ಸಾನಿಯಾ ಅಂಗಲಾಚಿದ್ದಾಳೆ.
ಇದನ್ನೂ ಓದಿ: ‘ನಿನ್ನ ಹೆಸರಿಗೆ ಆಸ್ತಿ ಇರುವ ವಿಚಾರ ಹರ್ಷನಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ’; ಭುವಿಯ ದಾರಿ ತಪ್ಪಿಸಿದ ವರು
ರಿಲೀಸ್ ಆದ ಹರ್ಷ
ಹರ್ಷನನ್ನು ಜೀಪ್ನಲ್ಲಿ ಪೊಲೀಸರು ಕರೆದುಕೊಂಡು ಹೋಗುತ್ತಿದ್ದರು. ಆಗ ಬಂದ ಸಾನಿಯಾ ಹರ್ಷನನ್ನು ರಿಲೀಸ್ ಮಾಡುವಂತೆ ಕೋರಿದರು. ಅಷ್ಟೇ ಅಲ್ಲ, ವೈದ್ಯರಿಂದ ತನಗೆ ಇರುವ ಖಿನ್ನತೆ ರಿಪೋರ್ಟ್ ತೋರಿಸಿ ಪೊಲೀಸರ ಬಳಿ ಡ್ರಾಮಾ ಮಾಡಿದ್ದಾಳೆ. ‘ನೋಡಿ ಪೊಲೀಸರೇ ನನಗೆ ಖಿನ್ನತೆ ಇದೆ. ಖಿನ್ನತೆ ಅಂದ್ರೆ ಗೊತ್ತಲ್ಲ, ತಲೆ ಕೆಟ್ಟಿದೆ ಅಂತ. ತಲೆ ಕೆಟ್ಟವರು ಕೇಸ್ ಹಾಕಿದ್ರೆ ಹೇಗೆ ಅದನ್ನು ಪರಿಗಣಿಸುತ್ತೀರಿ? ಕೋರ್ಟ್ ನನಗೂ ದಂಡ ಹಾಕುತ್ತೆ, ನಿಮಗೂ ದಂಡ ಹಾಕುತ್ತೆ. ಇದೆಲ್ಲ ಬೇಕಾ? ಹೀಗಾಗಿ ಹರ್ಷನ ರಿಲೀಸ್ ಮಾಡಿ’ ಎಂದು ಸಾನಿಯಾ ಕೋರಿದ್ದಾಳೆ. ಪೊಲೀಸರು ಕೂಡ ಸಾನಿಯಾ ಕಾಟ ತಾಳಲಾರದೇ ಆತನನ್ನು ರಿಲೀಸ್ ಮಾಡಿದ್ದಾರೆ.
ಚಳಿ ಜ್ವರ ಬಂದು ಮಲಗಿದ ಸಾನಿಯಾ
ಭುವಿ ಆಡಿದ ಮಾತಿಗೆ ಸಾನಿಯಾ ನಡುಗಿ ಹೋಗಿದ್ದಾಳೆ. ರತ್ನಮಾಲಾ ಕೂಡ ಹೀಗೆಯೇ ಮಾತನಾಡುತ್ತಿದ್ದಳು. ಸಾನಿಯಾನ ಸಂಪೂರ್ಣವಾಗಿ ಕಟ್ಟಿ ಹಾಕುತ್ತಿದ್ದಳು. ಈಗ ಆ ಕೆಲಸವನ್ನು ಭುವಿ ಮಾಡುತ್ತಿದ್ದಾಳೆ. ಭುವಿಯನ್ನು ನೋಡಿದಾಗೆಲ್ಲ ಸಾನಿಯಾಗೆ ರತ್ನಮಾಲಾ ನೆನಪಾಗುತ್ತಿದ್ದಾಳೆ. ರತ್ನಮಾಲಾ ಕೂಡ ಹೀಗೆಯೇ ಮಾಡುತ್ತಿದ್ದಳು. ಸೈಲೆಂಟ್ ಆಗಿರುತ್ತಿದ್ದಳು. ಆದರೆ, ಬೇಕಾದ ಸಮಯಕ್ಕೆ ವೈಲೆಂಟ್ ಆಗಿ ಸರಿಯಾಗಿ ಕಟ್ಟಿ ಹಾಕುತ್ತಿದ್ದಳು. ಇದೇ ಕಲೆ ಭುವಿಗೂ ಬಂದಿದೆ. ಈ ಕಾರಣಕ್ಕೆ ಸಾನಿಯಾ ಹೆದರಿದ್ದಾಳೆ. ಅದರಲ್ಲೂ ಭುವಿ ತನ್ನನ್ನು ಕಟ್ಟಿಹಾಕಿದ ರೀತಿಗೆ ಸಾನಿಯಾ ನಡುಗಿ ಹೋಗಿದ್ದಾಳೆ. ಅವಳಿಗೆ ಚಳಿ ಜ್ವರ ಬಂದಿದೆ. ಹೀಗಾಗಿ, ಸಾನಿಯಾ ಮನೆಯ ಹಾಸಿಗೆಯಲ್ಲಿ ಮಲಗಿದ್ದಾಳೆ. ಇದನ್ನು ನೋಡಿ ಆಕೆಯ ಗಂಡ ಆದಿಗೆ ಅಚ್ಚರಿ ಆಗಿದೆ. ಸಾನಿಯಾಗೆ ಚಳಿ ಜ್ವರ ಬರುವಂತೆ ಮಾಡಿದ್ದು ಯಾರು ಎಂಬ ಅಚ್ಚರಿಯೂ ಆತನಿಗೆ ಮೂಡಿದೆ.
ಶ್ರೀಲಕ್ಷ್ಮಿ ಎಚ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.