ಭುವಿಯಿಂದ ಬಂತು ಡಿವೋರ್ಸ್​ ನೋಟಿಸ್​; ಇದು ಸಾಧ್ಯವಿಲ್ಲ ಎಂದು ಕೂಗಿದ ಹರ್ಷ

Kannadathi Serial Update: ಹರ್ಷ ಮತ್ತು ಭವಿಯನ್ನು ಬೇರೆ ಮಾಡಬೇಕು ಎಂದು ವರುಧಿನಿ ಹಲವು ಸಂಚು ರೂಪಿಸುತ್ತಲೇ ಇದ್ದಾಳೆ. ಇದರಲ್ಲಿ ಡಿವೋರ್ಸ್ ನೋಟಿಸ್ ಪ್ಲ್ಯಾನ್ ಕೂಡ ಒಂದು.

ಭುವಿಯಿಂದ ಬಂತು ಡಿವೋರ್ಸ್​ ನೋಟಿಸ್​; ಇದು ಸಾಧ್ಯವಿಲ್ಲ ಎಂದು ಕೂಗಿದ ಹರ್ಷ
ಕನ್ನಡತಿ ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 13, 2022 | 7:00 AM

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
ಹರ್ಷ ಅರೆಸ್ಟ್ ಆಗುವ ಸಂದರ್ಭದಲ್ಲಿ ಕಾಣೆಯಾದ ಭುವಿ; ವೈರಿಗಳದ್ದೇ ಮೇಲುಗೈ
Image
‘ನಿನ್ನ ಹೆಸರಿಗೆ ಆಸ್ತಿ ಇರುವ ವಿಚಾರ ಹರ್ಷನಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ’; ಭುವಿಯ ದಾರಿ ತಪ್ಪಿಸಿದ ವರು
Image
‘5 ವರ್ಷಗಳ ಕಾಲ ಆಸ್ತಿಯನ್ನು ಯಾರ ಹೆಸರಿಗೂ ಬರೆಯುವಂತಿಲ್ಲ’; ರತ್ನಮಾಲಾ ಕಂಡೀಷನ್ ನೋಡಿ ಭುವಿ ಕಂಗಾಲು
Image
ಹರ್ಷನ ಪಡೆಯಲು ಡಬಲ್ ಗೇಮ್ ಆರಂಭಿಸಿದ ವರುಧಿನಿ; ದಡ್ಡಿ ಆಗುತ್ತಿದ್ದಾಳೆ ಭುವಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಭುವಿ ಹೆಸರಿಗೆ ರತ್ನಮಾಲಾ ಸಂಪೂರ್ಣ ಆಸ್ತಿ ಬರೆದು ಹೋಗಿದ್ದಾಳೆ. ಇದನ್ನು ಸಹಿಸಿಕೊಳ್ಳೋದು ಹಾಗೂ ಅರಗಿಸಿಕೊಳ್ಳೋದು ಹರ್ಷನಿಗೆ ಕಷ್ಟ ಆಗುತ್ತಿದೆ. ಆದರೆ, ರತ್ನಮಾಲಾ ತೆಗೆದುಕೊಂಡ ನಿರ್ಧಾರದ ಹಿಂದೆ ದೂರಾಲೋಚನೆ ಇದೆ ಅನ್ನೋದು ಹರ್ಷನಿಗೆ ಮನವರಿಕೆ ಆಗಿದೆ. ಈ ಕಾರಣಕ್ಕೆ ಆತ ಇದನ್ನು ಒಪ್ಪಿ ಮುಂದೆ ನಡೆಯಲು ನಿರ್ಧರಿಸಿದ್ದಾನೆ. ಈ ಕಾರಣಕ್ಕೆ ಭುವಿಗೆ ಅದ್ದೂರಿ ಸ್ವಾಗತ ನೀಡಿದ್ದಾನೆ. ಕಚೇರಿಗೆ ಬಂದ ಭುವಿಯನ್ನು ಹೂವಿನಿಂದ ಅಲಂಕರಿಸಿದ್ದಾನೆ. ಇದು ಭುವಿಗೆ ಖುಷಿ ನೀಡಿದೆ. ಹರ್ಷನ ಮೇಲಿನ ಪ್ರೀತಿ ಆಕೆಗೆ ಇನ್ನೂ ಹಾಗೆಯೇ ಇದೆ ಎಂಬುದಕ್ಕೆ ಇದು ಸಾಕ್ಷಿಯಂತಿತ್ತು.

ವರುಧಿನಿ ಪ್ಲ್ಯಾನ್ ಸಕ್ಸಸ್

ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎಂಬುದು ವರುಧಿನಿ ಪ್ಲ್ಯಾನ್. ಇದಕ್ಕಾಗಿ ಆಕೆ ಹಲವು ಪ್ಲ್ಯಾನ್ ಮಾಡಿದ್ದಳು. ಅದರಲ್ಲಿ ಎಲ್ಲವೂ ವಿಫಲವಾಗಿದೆ. ಹರ್ಷನನ್ನು ಮದುವೆ ಆಗುವಾಗ ಭುವಿಯನ್ನು ತಡೆಯಲು ತೆರಳಿದ್ದಳು. ಆದರೆ, ಹರ್ಷನನ್ನು ಬಿಟ್ಟುಕೊಡಲು ಭುವಿ ಸಿದ್ಧಳಿರಲಿಲ್ಲ. ಇದು ವರುಧಿನಿಗೆ ಶಾಕ್ ನೀಡಿತ್ತು. ಮದುವೆ ಆಗಿ ಈಗ ಹಲವು ತಿಂಗಳು ಕಳೆದಿದೆ. ಈ ಕಾರಣಕ್ಕೆ ಇಬ್ಬರನ್ನೂ ಬೇರೆ ಮಾಡಬೇಕು ಎಂದು ಹಲವು ಸಂಚು ರೂಪಿಸುತ್ತಲೇ ಇದ್ದಾಳೆ. ಇದರಲ್ಲಿ ಡಿವೋರ್ಸ್ ನೋಟಿಸ್ ಪ್ಲ್ಯಾನ್ ಕೂಡ ಒಂದು.

ಇದನ್ನೂ ಓದಿ: Kannadathi: ಭುವಿಗೆ ಸರ್​ಪ್ರೈಸ್ ನೀಡಲು ಹರ್ಷನ ಸಿದ್ಧತೆ; ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಲು ಹೊರಟ ಹೀರೋ

ಡಿವೋರ್ಸ್​ ನೀಡಲು ವರುಧಿನಿ ಹೊಸ ಪ್ಲ್ಯಾನ್ ಮಾಡಿದ್ದಳು. ಮದುವೆ ರಿಜಿಸ್ಟ್ರೇಷನ್​ ಸಂದರ್ಭದಲ್ಲಿ ಡಿವೋರ್ಸ್​ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಳು. ಇದು ಭುವಿ ಹಾಗೂ ಹರ್ಷ ಇಬ್ಬರಿಗೂ ಗೊತ್ತಿಲ್ಲ. ಈಗ ನೋಟಿಸ್ ಹರ್ಷನಿಗೆ ತಲುಪಿಸುವಂತೆ ಮಾಡಿದ್ದಾಳೆ.

ಸಾನಿಯಾ ಹಾಗೂ ವರು ಮಾತುಕತೆ

ಸಾನಿಯಾ ಹಾಗೂ ವರುಧಿನಿ ಡಿವೋರ್ಸ್​ ಪತ್ರದ ಬಗ್ಗೆ ಮಾತನಾಡಿದ್ದಾರೆ. ತೆರೆ ಹಿಂದೆ ನಿಂತು ವರುಧಿನಿ ಇಷ್ಟೆಲ್ಲ ಪ್ಲ್ಯಾನ್ ಮಾಡಿದ್ದಾಳೆ ಎಂಬುದು ಸಾನಿಯಾಗೆ ಗೊತ್ತಿರಲಿಲ್ಲ. ಈಗ ವರು ಪ್ಲ್ಯಾನ್ ಬಗ್ಗೆ ಕೇಳಿ ಸಾನಿಯಾಗೆ ಅಚ್ಚರಿ ಆಗಿದೆ. ನನಗೆ ಗೊತ್ತಿಲ್ಲದೆ ವರುಧಿನಿ ಇಷ್ಟೆಲ್ಲ ಮಾಡಿದ್ದಾಳೆ ಎಂಬುದನ್ನು ಕೇಳಿ ಖುಷಿ ಪಟ್ಟಿದ್ದಾಳೆ. ಈ ಪ್ಲ್ಯಾನ್ ವರ್ಕೌಟ್ ಆದರೆ ಖಂಡಿತವಾಗಿಯೂ ದೊಡ್ಡ ಯಶಸ್ಸು ಸಿಗಲಿದೆ ಎಂದು ಸಾನಿಯಾ ಖುಷಿಯಲ್ಲಿದ್ದಾಳೆ.

ಹರ್ಷನಿಗೆ ಡಿವೋರ್ಸ್ ನೋಟಿಸ್

ಭುವಿ ಕೊಟ್ಟ ಡಿವೋರ್ಸ್ ನೋಟಿಸ್ ಹರ್ಷನಿಗೆ ಸೇರಿದೆ. ಈ ಡಿವೋರ್ಸ್ ನೋಟಿಸ್ ನೋಡಿ ಹರ್ಷನಿಗೆ ಶಾಕ್ ಆಗಿದೆ. ಭುವಿ ಆಗತಾನೇ ಎಂಡಿ ಆಗಿ ಅಧಿಕಾರ ಸ್ವೀಕರಿಸುವವಳಿದ್ದಳು. ಅದೇ ಸಂದರ್ಭಕ್ಕೆ ಹರ್ಷನಿಗೆ ಡಿವೋರ್ಸ್ ನೋಟಿಸ್ ಸಿಕ್ಕಿದೆ. ಇದನ್ನು ನೋಡುತ್ತಿದ್ದಂತೆ ಆತನಿಗೆ ಶಾಕ್ ಆಗಿದೆ.

ಇದನ್ನೂ ಓದಿ: Kannadathi: ರತ್ನಮಾಲಾಳ ಕೊಲ್ಲೋಕೆ ಹೋಗಿದ್ದ ವಿಡಿಯೋ ತೋರಿಸಿದ ಭುವಿ; ನಡುಗಿಹೋದ ಸಾನಿಯಾ

ಭುವಿಯನ್ನು ಸ್ವಾಗತಿಸಲು ಆತ ವೇದಿಕೆ ಏರಿದ್ದ. ಆತನಿಗೆ ವಿಚ್ಛೇದನ ನೋಟಿಸ್​ನ ಬಗ್ಗೆಯೇ ಚಿಂತೆ ಕಾಡುತ್ತಿತ್ತು. ‘ಭುವಿ ಈ ನೋಟಿಸ್ ಕಳುಹಿಸಲು ಸಾಧ್ಯವಿಲ್ಲ. ಅವರು ಈ ರೀತಿ ಮಾಡುವುದೇ ಇಲ್ಲ. ಸಾನಿಯಾ ಈ ಪ್ಲ್ಯಾನ್ ಮಾಡುತ್ತಿದ್ದಾಳಾ?’ ಎಂದು ಹರ್ಷ ತನಗೆ ತಾನೇ ಪ್ರಶ್ನೆ ಮಾಡಿಕೊಂಡಿದ್ದಾನೆ. ಅಲ್ಲದೆ ‘ನೋ’ ಎಂದು ಕೂಗಿದ್ದಾನೆ.

ಹರ್ಷನ ಬಗ್ಗೆ ಭುವಿಗೆ ಸಾಕಷ್ಟು ಪ್ರೀತಿ ಇದೆ. ಈ ವಿಚಾರ ಹರ್ಷನಿಗೂ ಗೊತ್ತಿದೆ. ಈ ಕಾರಣಕ್ಕೆ ಭುವಿ ವಿಚ್ಛೇದನ ನೀಡುವುದಿಲ್ಲ ಎನ್ನುವ ಕಾನ್ಫಿಡೆನ್ಸ್ ಆತನಿಗೆ ಇತ್ತು. ಆದಾಗ್ಯೂ ನೋಟಿಸ್ ಬಂದಿರುವ ವಿಚಾರದಿಂದ ಆತನಿಗೆ ಚಿಂತೆ ಶುರುವಾಗಿದೆ. ಹೀಗಾಗಿ, ಆತನಿಗೆ ಇದರ ಹಿಂದೆ ಯಾವುದೋ ಸಂಚು ಇದೆ ಎಂಬ ಅನುಮಾನ ಮೂಡಿದೆ. ಹೀಗಾಗಿ ವೇದಿಕೆ ಮೇಲೆ ‘ಇದು ಸಾಧ್ಯವಿಲ್ಲ’ ಎಂದು ಕೂಗಿದ್ದಾನೆ.

ಶ್ರೀಲಕ್ಷ್ಮಿ ಎಚ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.