Kannadathi: ಭುವಿಗೆ ಸರ್ಪ್ರೈಸ್ ನೀಡಲು ಹರ್ಷನ ಸಿದ್ಧತೆ; ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಲು ಹೊರಟ ಹೀರೋ
Kannadathi Serial Update: ಹರ್ಷ ಹಾಗೂ ಭುವಿ ಮಧ್ಯೆ ಅಂತರ ಉಂಟಾಗಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಅದಕ್ಕೆ ತದ್ವಿರುದ್ಧವಾಗಿ ಎಲ್ಲವೂ ಆಗಿದೆ. ಪ್ರೀತಿಯಿಂದ ಭುವಿಯನ್ನು ಗೆಲ್ಲಲು ಹರ್ಷ ಹೊರಟಿದ್ದಾನೆ.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು.
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಸಾನಿಯಾಗೆ ಚಳಿ-ಜ್ವರ ಬಂದಿದೆ. ಇದಕ್ಕೆ ಕಾರಣ ಭುವಿ ನಡೆದುಕೊಂಡ ರೀತಿ. ಸಾನಿಯಾ ಮಾಡಿದ ಉಪಾಯ ವಿಫಲವಾಗಿತ್ತು. ಆಕೆ ಹರ್ಷನನ್ನು ಅರೆಸ್ಟ್ ಮಾಡಿಸಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದಳು. ಆದರೆ, ಅದಕ್ಕೆ ಕೌಂಟರ್ ಕೊಟ್ಟಿದ್ದಳು ಭುವಿ. ಸಾನಿಯಾ ಮಾಡಿದ್ದ ಹಳೆಯ ವಿಡಿಯೋವನ್ನು ತೆರೆದಿಟ್ಟಳು. ಅದು ರತ್ನಮಾಲಾಳ ಕೊಲ್ಲಲು ಹೊರಟ ವಿಡಿಯೋ. ಇದರಿಂದ ಸಾನಿಯಾಗೆ ಶಾಕ್ ಆಗಿದೆ. ಭುವಿ ಹೇಳಿದಂತೆ ನಡೆದುಕೊಳ್ಳಲು ಆಕೆ ಒಪ್ಪಿದ್ದಾಳೆ.
ಭುವಿಗೆ ಕಾಡಿದೆ ಅನುಮಾನ
ಹರ್ಷ ಹಾಗೂ ಭುವಿ ಮಧ್ಯೆ ಅಂತರ ಉಂಟಾಗಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಅದಕ್ಕೆ ತದ್ವಿರುದ್ಧವಾಗಿ ಎಲ್ಲವೂ ಆಗಿದೆ. ಪ್ರೀತಿಯಿಂದ ಭುವಿಯನ್ನು ಹರ್ಷ ಗೆಲ್ಲಲು ಹೊರಟಿದ್ದಾನೆ. ಭುವಿ ಹೆಸರಿಗೆ ರತ್ನಮಾಲಾ ಆಸ್ತಿ ಬರೆದಿದ್ದಾಳೆ. ಇದು ಹರ್ಷನಿಗೆ ಮೊದಲೇ ತಿಳಿದಿರಲಿಲ್ಲ. ಆದರೆ, ಕೆಲವು ಘಟನೆಗಳು ಹರ್ಷನಿಗೆ ಈ ವಿಚಾರ ಮೊದಲೇ ತಿಳಿದಿತ್ತು ಎನ್ನುವ ರೀತಿ ಬಿಂಬಿಸಿದವು. ಇದು ಭುವಿಗೆ ಸಾಕಷ್ಟು ಅನುಮಾನ ಮೂಡಿಸಿದೆ.
ಭುವಿ ತಂಗಿ ಬಿಂದು ಬಳಿ ಈ ವಿಚಾರವನ್ನು ಹೇಳಿಕೊಂಡಿದ್ದಾಳೆ. ‘ರತ್ನಮಾಲಾ ನನ್ನ ಹೆಸರಿಗೆ ಆಸ್ತಿ ಬರೆದಿಟ್ಟ ವಿಚಾರ ಹರ್ಷ ಅವರಿಗೆ ಮೊದಲೇ ತಿಳಿದಿತ್ತು. ಈ ವಿಚಾರದಲ್ಲಿ ನನಗೆ ಅನುಮಾನ ಇದೆ’ ಎಂದು ಬಿಂದು ಜತೆ ಹೇಳಿಕೊಳ್ಳುವಾಗಲೇ ಹರ್ಷ ಅಲ್ಲಿಗೆ ಬಂದಿದ್ದ. ಈ ಮಾತನ್ನು ಕೇಳಿದ ನಂತರದಲ್ಲಿ ಆತ ಅಲ್ಲಿಂದ ತೆರಳಿದ್ದ.
ಸ್ಪಷ್ಟನೆ ನೀಡಲು ಹರ್ಷ ನಿರಾಕರಣೆ
ತಂಗಿ ಸುಚಿತ್ರಾ ಬಳಿ ಬಂದ ಹರ್ಷ ಬೇಸರ ಮಾಡಿಕೊಂಡಿದ್ದಾನೆ. ‘ಭುವಿಗೆ ನನ್ನ ಬಗ್ಗೆ ಅನುಮಾನ ಮೂಡಿದೆ. ಆಸ್ತಿಗಾಗಿ ಅವಳನ್ನು ಮದುವೆ ಆದೆ ಎಂದು ಅವಳಿಗೆ ಅನಿಸುತ್ತಿದೆ. ಏನು ಮಾಡಬೇಕು ಎನ್ನುವುದೇ ತಿಳಿಯಯುತ್ತಿಲ್ಲ’ ಎಂಬ ಮಾತನ್ನು ಹೇಳಿದ್ದಾನೆ ಹರ್ಷ. ಆಗ ಸ್ಪಷ್ಟನೆ ನೀಡಿ ಎಲ್ಲಾ ವಿಚಾರವನ್ನು ಕ್ಲಿಯರ್ ಮಾಡುವಂತೆ ಕೋರಿದ್ದಾಳೆ ಸುಚಿ. ಆದರೆ, ಹರ್ಷ ಇದಕ್ಕೆ ಒಪ್ಪಿಲ್ಲ. ಪ್ರೀತಿ ಮೂಲಕ ಎಲ್ಲವನ್ನೂ ಗೆಲ್ಲುವ ಆಲೋಚನೆಯಲ್ಲಿದ್ದಾನೆ. ಈ ವಿಚಾರದಲ್ಲಿ ಆತನಿಗೆ ಗೆಲುವು ಸಿಗುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಹರ್ಷ ಅರೆಸ್ಟ್ ಆಗುವ ಸಂದರ್ಭದಲ್ಲಿ ಕಾಣೆಯಾದ ಭುವಿ; ವೈರಿಗಳದ್ದೇ ಮೇಲುಗೈ
ಭುವಿಗೆ ಸರ್ಪ್ರೈಸ್
ಭುವಿಗೆ ಸರ್ಪ್ರೈಸ್ ನೀಡಬೇಕು ಎಂಬುದು ಹರ್ಷನ ಉದ್ದೇಶ. ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದಾನೆ. ಚಿತ್ರಮಂದಿರ ಒಂದರಲ್ಲಿ ಇದಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾನೆ ಹರ್ಷ. ಈ ಬಗ್ಗೆ ಭುವಿಗೆ ಗೊತ್ತಿಲ್ಲ. ಆಕೆ ಇದ್ದ ಜಾಗಕ್ಕೆ ಕಾರನ್ನು ಹರ್ಷ ಕಳುಹಿಸಿದ್ದಾನೆ. ಭುವಿಯನ್ನು ಸ್ವಾಗತಿಸಲು ಹೂವಿನಿಂದ ಅಲಂಕಾರ ಮಾಡಿಕೊಂಡಿದ್ದಾನೆ. ಈ ಮೂಲಕ ಭುವಿಗೆ ಸರ್ಪ್ರೈಸ್ ನೀಡಬೇಕು ಎಂಬುದು ಆತನ ಉದ್ದೇಶ. ಇದನ್ನು ನೋಡಿದರೆ ವರುಧಿನಿ ಸಿಟ್ಟಾಗಬಹುದು.
ಇದನ್ನೂ ಓದಿ: ಕೈ ಕೊಟ್ಟ ವರುಧಿನಿಯ ಮೊದಲ ಸಂಚು; ದೊಡ್ಡ ಅಪಾಯದ ಸೂಚನೆ?
ಭುವಿಗೆ ಪ್ರೀತಿ ಮೂಡಿದ್ದು ಹೀಗೆಯೇ
ಈ ಮೊದಲು ಹರ್ಷನ ಮೇಲೆ ಭುವಿಗೆ ಪ್ರೀತಿ ಮೂಡಿತ್ತು. ಇದಕ್ಕೆ ಕಾರಣ ಆತ ನಡೆದುಕೊಂಡ ರೀತಿ. ಭುವಿ ಬಗ್ಗೆ ಆತ ತುಂಬಾನೇ ಪ್ರೀತಿ ತೋರಿದ್ದ. ಆಕೆಗೆ ಪ್ರಪೋಸ್ ಮಾಡುವಾಗಲೂ ಹರ್ಷ ಅದ್ದೂರಿಯಾಗಿ ಸಿದ್ಧತೆ ಮಾಡಿಕೊಂಡಿದ್ದ. ಈಗ ಹರ್ಷ ಮತ್ತೆ ಸರ್ಪ್ರೈಸ್ ನೀಡಲು ರೆಡಿ ಆಗಿದ್ದಾನೆ. ಈ ಮೂಲಕ ಭುವಿಯನ್ನು ಪ್ರೀತಿಯಿಂದ ಗೆಲ್ಲಬೇಕು ಎಂದುಕೊಂಡಿದ್ದಾನೆ.
ಸಾನಿಯಾಗೆ ಕಾಡಿದೆ ಚಿಂತೆ
ಸಾನಿಯಾಗೆ ಚಿಂತೆ ಕಾಡಿದೆ. ಕಾರಣ, ಭುವಿ. ಅವಳ ಬಳಿ ಸಾನಿಯಾಳ ಕರ್ಮಕಾಂಡದ ವಿಡಿಯೋ ಇದೆ. ಈ ವಿಡಿಯೋವನ್ನು ಇಟ್ಟುಕೊಂಡು ಸಾನಿಯಾಳನ್ನು ಹೇಗೆ ಬೇಕಿದ್ದರೂ ಆಡಿಸಬಹುದು. ಈ ಕಾರಣಕ್ಕೆ ಭುವಿ ಹೇಳಿದಂತೆ ಆಕೆ ಕೇಳಲೇಬೇಕಿದೆ. ಈ ವಿಚಾರದಲ್ಲಿ ಭುವಿ ಸಾನಿಯಾಳ ಅಡಿಯಾಳು ಆಗಬಹುದು.
ಶ್ರೀಲಕ್ಷ್ಮಿ ಎಚ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.