Kannadathi Serial: ವರುಧಿನಿಗೆ ಕಾಟ ಕೊಡೋಕೆ ಶುರು ಮಾಡಿದ ಹರ್ಷ; ಭುವಿ ಗೆಳತಿಗೆ ಶುರುವಾಗಿದೆ ತಳಮಳ
Kannadathi Serial Update: ಹರ್ಷ ಹಾಗೂ ಭುವಿ ಒಟ್ಟಾಗಿ ಇರಬಾರದು ಎಂಬುದು ವರುಧಿನಿ ಉದ್ದೇಶ. ಇದನ್ನು ತಿಳಿದುಕೊಂಡ ಹರ್ಷ ಈಗ ಹೊಸ ಪ್ಲ್ಯಾನ್ ಮಾಡಿದ್ದಾನೆ. ಮುಂಜಾನೆಯೇ ವರುಧಿನಿ ಮನೆಗೆ ತೆರಳಿದ್ದಾನೆ.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ವರಧಿನಿ ಗಿಮಿಕ್ ಮಾಡೋಕೆ ಶುರು ಮಾಡಿದ್ದಾಳೆ ಎಂಬ ವಿಚಾರ ಹರ್ಷನಿಗೆ ಗೊತ್ತಾಗಿದೆ. ವರುಧಿನಿ ಸರಿ ಇಲ್ಲ ಎನ್ನುವ ಅಭಿಪ್ರಾಯ ಎಲ್ಲರಿಂದ ಬಂತು. ಈ ಕಾರಣಕ್ಕೆ ಹರ್ಷ ಹೊಸ ಮಿಷನ್ ಶುರು ಮಾಡಿದ್ದಾನೆ. ಇದಕ್ಕೆ ‘ಮಿಷನ್ ಹರ್ಷ’ ಎಂದು ಆತ ಹೆಸರು ಇಟ್ಟಿದ್ದಾನೆ. ಈ ಮೂಲಕ ವರುಗೆ ಬೆವರು ಇಳಿಸಲು ಹರ್ಷ ಮುಂದಾಗಿದ್ದಾನೆ. ಮತ್ತೊಂದು ಕಡೆ ಸಾನಿಯಾ ಸೊಕ್ಕನ್ನು ಭುವಿ ಮುರಿದಿದ್ದಾಳೆ. ಆಕೆಯನ್ನು ಭುವಿ ಅನಾಯಾಸವಾಗಿ ಮಣಿಸಿ ಹಾಕಿದ್ದಾಳೆ. ಎಂ.ಡಿ. ಪಟ್ಟದಿಂದ ಆಕೆ ಕೆಳಗೆ ಇಳಿದಿದ್ದಾಳೆ.
ವರುಧಿನಿಗೆ ಶುರುವಾಗಿದೆ ನಡುಕ
ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎಂದು ವರುಧಿನಿ ಪ್ಲ್ಯಾನ್ ಮಾಡಿದ್ದಳು. ಮದುವೆ ನೋಂದಣಿ ಮಾಡಿಸುವಾಗ ಹರ್ಷ ಹಾಗೂ ಭುವಿ ಬಳಿ ವಿಚ್ಛೇದನ ಪತ್ರಕ್ಕೆ ಗೊತ್ತಿಲ್ಲದೆ ಸಹಿ ಹಾಕಿಸಿಕೊಂಡಿದ್ದಳು. ಈ ಕಾರಣಕ್ಕೆ ಹರ್ಷನಿಗೆ ವಿಚ್ಛೇದನ ನೋಟಿಸ್ ಬಂದಿದೆ. ಇದು ಭುವಿ ಕಡೆಯಿಂದ ಬಂದಿಲ್ಲ ಎನ್ನುವ ಕಾನ್ಫಿಡೆನ್ಸ್ ಹರ್ಷನಿಗೆ ಇತ್ತು. ಇದರ ತನಿಖೆ ನಡೆಸಿದಾಗ ಇದು ವರುಧಿನಿ ಕೆಲಸ ಎಂದು ಹರ್ಷನಿಗೆ ಖಚಿತವಾಗಿತ್ತು. ಈ ಕಾರಣಕ್ಕೆ ವರುಧಿನಿಗೆ ಪಾಠ ಕಲಿಸಲು ಹರ್ಷ ಮುಂದಾಗಿದ್ದಾನೆ.
ಇದನ್ನೂ ಓದಿ: ಭುವಿಯಿಂದ ಬಂತು ಡಿವೋರ್ಸ್ ನೋಟಿಸ್; ಇದು ಸಾಧ್ಯವಿಲ್ಲ ಎಂದು ಕೂಗಿದ ಹರ್ಷ
ಹರ್ಷ ಹಾಗೂ ಭುವಿ ಒಟ್ಟಾಗಿ ಇರಬಾರದು ಎಂಬುದು ವರುಧಿನಿ ಉದ್ದೇಶ. ಇದನ್ನು ತಿಳಿದುಕೊಂಡ ಹರ್ಷ ಈಗ ಹೊಸ ಪ್ಲ್ಯಾನ್ ಮಾಡಿದ್ದಾನೆ. ಮುಂಜಾನೆಯೇ ವರುಧಿನಿ ಮನೆಗೆ ತೆರಳಿದ್ದಾನೆ. ‘ಭುವಿ ನನಗೆ ವಿಚ್ಛೇದನ ಕೊಡೋಕೆ ನಿರ್ಧರಿಸಿದ್ದಾರೆ. ನನಗೆ ಲಾಯರ್ ಕಡೆಯಿಂದ ವಿಚ್ಛೇದನದ ನೋಟಿಸ್ ಬಂದಿದೆ. ನನ್ನ ಬಗ್ಗೆ ಅವರಿಗೆ ಅಪನಂಬಿಕೆ ಬಂದಿದೆ. ಈ ಕಾರಣಕ್ಕೆ ಅವರು ಡಿವೋರ್ಸ್ ನೋಟಿಸ್ ನೀಡಿರಬಹುದು. ಈ ಬಗ್ಗೆ ನಿಮಗೇನಾದರೂ ಮಾಹಿತಿ ಇದೆಯೇ’ ಎಂದು ಪ್ರಶ್ನೆ ಮಾಡಿದ್ದಾನೆ ಹರ್ಷ. ಇದನ್ನು ಕೇಳಿ ವರುಧಿನಿಗೆ ಭಯ ಶುರುವಾಗಿದೆ.
ಇದನ್ನೂ ಓದಿ: Kannadathi: ‘ಆಸ್ತಿ ಭುವಿ ಬಳಿ ಇದ್ದರೇನು, ನನ್ನ ಬಳಿ ಇದ್ದರೇನು?’; ಹರ್ಷನ ಮಾತಿನಿಂದ ಸಾನಿಯಾ-ವರು ಶಾಕ್
ಇಷ್ಟಕ್ಕೆ ಹರ್ಷ ನಿಂತಿಲ್ಲ. ತನಗೆ ವಿಚಾರ ಗೊತ್ತಾಗಿದೆ ಎಂಬುದನ್ನು ಪರೋಕ್ಷವಾಗಿ ಅನೇಕ ಬಾರಿ ಹೇಳಿದ್ದಾನೆ. ಈ ಮಾತನ್ನು ಕೇಳಿ ವರುಧಿನಿಗೆ ಭಯ ಶುರುವಾಗಿದೆ. ಮುಂದೇನು ಮಾಡಬೇಕು ಎಂಬುದು ತಿಳಿಯದೇ ಆಕೆ ಕಂಗಾಲಾಗಿದ್ದಾಳೆ.
ಇನ್ನು ಕಚೇರಿಯಲ್ಲೂ ವರುಧಿನಿಗೆ ತೊಂದರೆ ಕೊಡುವ ಕೆಲಸವನ್ನು ಹರ್ಷ ಮುಂದುವರಿಸಿದ್ದಾನೆ. ಭುವಿ ಎದುರು ನಿಂತ ಹರ್ಷ, ‘ವರು ಅವರೇ ನಾನು ಭುವಿ ಇನ್ಮುಂದೆ ಗಂಡ-ಹೆಂಡತಿ ಅಲ್ಲ. ಯಾಕೆ ಹೇಳಿ? ಅದು ನಿಮಗೆ ಗೊತ್ತಿಲ್ಲದೆ ಇರುತ್ತದೆಯೇ?’ ಎಂದು ಮಾತು ಶುರು ಮಾಡಿದ್ದಾನೆ. ಇದನ್ನು ಕೇಳಿ ವರುಧಿನಿಗೆ ನಡುಕ ಹೆಚ್ಚಿದೆ.
ಭುವಿಗೆ ಬಂತು ಸೆಕ್ಯುರಿಟಿ
ಭುವಿ ಈಗ ಮಾಲಾ ಸಂಸ್ಥೆಯ ಒಡತಿ ಆಗಿದ್ದಾಳೆ. ಆಕೆಗೆ ಸಾಕಷ್ಟು ಜವಾಬ್ದಾರಿ ಇದೆ. ಈ ಕಾರಣಕ್ಕೆ ಆಕೆಗೆ ಯಾವ ಕ್ಷಣದಲ್ಲಿ ಬೇಕಿದ್ದರೂ ತೊಂದರೆ ಎದುರಾಗಬಹುದು. ಈ ಕಾರಣಕ್ಕೆ ಭುವಿಗೆ ಹರ್ಷ ಸೆಕ್ಯುರಿಟಿ ನೀಡಿದ್ದಾನೆ. ಈ ಸೆಕ್ಯುರಿಟಿ ನೋಡಿ ಆಕೆಗೆ ಮುಜುಗರ ಆಗಿದೆ. ಹರ್ಷನಿಗೆ ಕರೆ ಮಾಡಿ ಇದೆಲ್ಲ ಯಾಕೆ ಬೇಕಿತ್ತು ಎಂದು ಪ್ರಶ್ನೆ ಮಾಡಿದ್ದಾಳೆ.
ಭುವಿಯ ಒಳ್ಳೆತನ
ಭುವಿಯ ಒಳ್ಳೆತನದ ಬಗ್ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನೆಲ ಒರೆಸುವ ಮಹಿಳೆಗೆ ಮೇಲಾಧಿಕಾರಿ ಬಯ್ಯುತ್ತಿದ್ದ. ಇದು ಭುವಿ ಕಣ್ಣಿಗೆ ಬಿದ್ದಿದೆ. ಮೇಲಾಧಿಕಾರಿಗೆ ಬೈದು, ಮಹಿಳೆಯನ್ನು ಕುರ್ಚಿ ಮೇಲೆ ಕೂರಿಸಿ ಉಭಯ ಕುಶಲೋಪರಿ ಮಾತನಾಡಿದ್ದಾಳೆ. ಇದನ್ನು ಕಂಡು ಎಲ್ಲರೂ ಭೇಷ್ ಎಂದಿದ್ದಾರೆ. ಹರ್ಷನಿಗೂ ಇದನ್ನು ಕಂಡು ಖುಷಿ ಆಗಿದೆ.
ಶ್ರೀಲಕ್ಷ್ಮಿ ಎಚ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.