ಜಾಮೀನು ಸಿಕ್ಕರೂ ರೀಲ್ಸ್ ರಾಣಿ ಸೋನುಗೌಡಗೆ ಇಂದು ಸಹ ಜೈಲೇ ಗತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 05, 2024 | 9:13 PM

ಕಾನೂನುಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಮಂಜೂರು ಆಗಿದ್ದರು ಕೂಡ ಬಿಡುಗಡೆಯ ಭಾಗ್ಯ ದೊರಕಿಲ್ಲ. ಹೀಗಾಗಿ ಇಂದು ಸಹ ಜೈಲೇ ಗತಿ ಆಗಿದೆ. 

ಜಾಮೀನು ಸಿಕ್ಕರೂ ರೀಲ್ಸ್ ರಾಣಿ ಸೋನುಗೌಡಗೆ ಇಂದು ಸಹ ಜೈಲೇ ಗತಿ
ಸೋನುಗೌಡ
Follow us on

ಬೆಂಗಳೂರು, ಏಪ್ರಿಲ್​ 05: ಕಾನೂನುಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda)ಗೆ ಜಾಮೀನು ಮಂಜೂರು ಆಗಿದ್ದರು ಕೂಡ ಬಿಡುಗಡೆಯ ಭಾಗ್ಯ ದೊರಕಿಲ್ಲ. ಹೀಗಾಗಿ ಇಂದು ಸಹ ಜೈಲೇ ಗತಿ ಆಗಿದೆ.  ಸಂಜೆ 7 ಗಂಟೆಯೊಳಗೆ ಜಾಮೀನು ಪ್ರತಿ ತಲುಪಬೇಕಿತ್ತು. ಆದರೆ ಇನ್ನೂ ಸಹ ಜೈಲಧಿಕಾರಿಗಳಿಗೆ ಜಾಮೀನು ಪ್ರತಿ ತಲುಪಿಲ್ಲ. ಹಾಗಾಗಿ ನಾಳೆಯವರೆಗೂ ಸೋನುಗೌಡ ಜೈಲಿನಲ್ಲೇ ಇರಲಿದ್ದು, ಪ್ರಕ್ರಿಯೆ ಪೂರ್ಣಗೊಂಡು ನಾಳೆ ಸಂಜೆ ವೇಳೆಗೆ ರಿಲೀಸ್ ಸಾಧ್ಯತೆ ಇದೆ.

ಬಿಗ್‌ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡಗೆ ನಿನ್ನೆ ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಈ ಕುರಿತಾಗಿ ಆದೇಶ ಸಹ ಹೊರಡಿಸಲಾಗಿತ್ತು. ಜೈಲಿನಿಂದ ಇಂದು ಬಿಡುಗಡೆ ಸಾಧ್ಯತೆ ಎಂದು ಹೇಳಲಾಗಿತ್ತು. ಆದರೆ ಜಾಮೀನಿನ ಷರತ್ತುಗಳು ಪೂರೈಕೆಯಾಗದ ಹಿನ್ನೆಲೆ ಇಂದು ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಳಿಯುವಂತಾಗಿದೆ.

ಸೋನು ಶ್ರೀನಿವಾಸ್ ಗೌಡಗೆ ವಿಧಿಸಿದ ಜಾಮೀನು ಷರತ್ತುಗಳೇನು?

1 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ ಮೇಲೆ ಸೋನು ಶ್ರೀನಿವಾಸ್ ಗೌಡಗೆ ಜಾಮೀನು ನೀಡಲು ಕೋರ್ಟ್ ಒಪ್ಪಿಗೆ ಸೂಚಿಸಿದೆ. ಈ ಷರತ್ತುಗಳನ್ನು ಪಾಲಿಸಿದ ಬಳಿಕ ಅವರು ಬಿಡುಗಡೆ ಆಗಲಿದ್ದಾರೆ.

ಇದನ್ನೂ ಓದಿ: ಮಗು ದತ್ತು ಪಡೆದ ಪ್ರಕರಣ: ಸೋನು ಶ್ರೀನಿವಾಸ್ ಗೌಡಗೆ ಕೋರ್ಟ್ ಬಿಗ್ ರಿಲೀಫ್

ಸೋನು ಶ್ರೀನಿವಾಸ್ ಗೌಡ ವಿರುದ್ಧ ಗೀತಾ ಎನ್ನುವವರು ದೂರು ನೀಡಿದ್ದರು. ಸೋನು ಅಕ್ರಮವಾಗಿ ಮಗುವನ್ನ ದತ್ತು ಪಡೆದಿದ್ದಾರೆ. ದತ್ತು ಪಡೆಯೋವಾಗ ರೂಲ್ಸ್ ಫಾಲೋ ಮಾಡ್ಬೇಕು. ಪೋಷಕರಿಂದ ನೇರವಾಗಿ ಮಗುವನ್ನ ಪಡೆಯಲು ಆಗಲ್ಲ. ಪೋಷಕರು ಕೂಡ ಮಗುವನ್ನ ಕೊಡೋಕೆ ಬರೋದಿಲ್ಲ. ಒಂದು ವೇಳೆ ಮಗು ಪಡೆದ್ರೆ, ಅದು ಕಾನೂನು ಬಾಹಿರ ಎಂದು ಹೇಳಿದ್ದರು.

ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅರೆಸ್ಟ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ಆರೋಪದ ಬಗ್ಗೆ ಮಾತನಾಡಿದ್ದ ಸೋನು ಶ್ರೀನಿವಾಸ್ ಗೌಡ, ಕಾನೂನು ಬಾಹಿರವಾಗಿ ಮಗು ದತ್ತು ಪಡೆದಿದ್ದೇನೆ ಅಂತಿದ್ದಾರೆ. ನನ್ನ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡೋ ಕೆಲಸ ಆಗ್ತಿದೆ. ಬಡ ಹೆಣ್ಣು ಮಗುವನ್ನ ಯೂಸ್​ ಮಾಡಿಕೊಳ್ತಿದ್ದಾರೆ ಅಂತಿದ್ದಾರೆ ಕಿಡಿಕಾರಿದ್ದರು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:55 pm, Fri, 5 April 24