ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ಅಷ್ಟೇ ವಿವಾದಾತ್ಮಕ ರಿಯಾಲಿಟಿ ಶೋ ‘ಬಿಗ್ ಬಾಸ್ 18′ ರ ಗ್ರ್ಯಾಂಡ್ ಫಿನಾಲೆ ಭಾನುವಾರ (ಜನವರಿ 19) ನಡೆದಿದೆ. ಈ ಪ್ರದರ್ಶನದ ವಿಜೇತನನ್ನು105 ದಿನಗಳ ನಂತರ ಘೋಷಿಸಲಾಗಿದೆ. ಕರಣ್ ವೀರ್ ಮೆಹ್ರಾ ಅವರು ಶೋನ ಗೆದ್ದಿದ್ದಾರೆ. ಈ ಫಿನಾಲೆಯಲ್ಲಿ ಬಿಗ್ ಬಾಸ್‌ನ ಮಾಜಿ ಸ್ಪರ್ಧಿಗಳೂ ಭಾಗವಹಿಸಿದ್ದರು. ಅದೇ ರೀತಿ ದೊಡ್ಡ ಸೆಲೆಬ್ರಿಟಿಗಳೂ ತಮ್ಮ ಸಿನಿಮಾಗಳ ಪ್ರಚಾರಕ್ಕೆ ಬರುತ್ತಾರೆ. ನಟ ಅಕ್ಷಯ್ ಕುಮಾರ್ ಬಂದು ಶೂಟ್ ಮಾಡದೆ ಹಾಗೆಯೇ ತೆರಳಿದ್ದಾರೆ.
ಅಕ್ಷಯ್ ಕುಮಾರ್ ತಮ್ಮ ಮುಂಬರುವ ಚಿತ್ರ ‘ಸ್ಕೈ ಫೋರ್ಸ್’ ಪ್ರಚಾರಕ್ಕಾಗಿ ಬಿಗ್ ಬಾಸ್‌ನ ಸೆಟ್‌ಗಳನ್ನು ತಲುಪಿದ್ದರು. ಭಾನುವಾರ ಮಧ್ಯಾಹ್ನವೇ ಗ್ರ್ಯಾಂಡ್ ಫಿನಾಲೆಯ ಚಿತ್ರೀಕರಣ ಆರಂಭವಾಗಿದೆ. 2:30ರ ಸುಮಾರಿಗೆ ಅಕ್ಷಯ್ ಕುಮಾರ್ ಸೆಟ್‌ಗೆ ಬಂದರು. ಇವರೊಂದಿಗೆ ‘ಸ್ಕೈ ಫೋರ್ಸ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟ ವೀರ್ ಪಹಾಡಿಯಾ ಕೂಡ ಫಿನಾಲೆಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಆದರೆ ಫಿನಾಲೆ ಚಿತ್ರೀಕರಣ ಮಾಡದೆ ಅಕ್ಷಯ್ ತೆರಳಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದೆ.
ವರದಿ ಪ್ರಕಾರ ‘ಬಿಗ್ ಬಾಸ್ 18′ ನಿರ್ದೇಶಕ ಸಲ್ಮಾನ್ ಖಾನ್ ಸೆಟ್‌ಗೆ ತಡವಾಗಿ ತಲುಪಿದ ಕಾರಣ ಅಕ್ಷಯ್ ಕುಮಾರ್ ಶೂಟಿಂಗ್ ಇಲ್ಲದೆ ತೆರಳಿದರು. ಅಕ್ಷಯ್ ತಮ್ಮ ವೇಳಾಪಟ್ಟಿಯ ಬಗ್ಗೆ ತುಂಬಾ ಜಾಗರೂಕರಾಗಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ಸೆಟ್‌ಗಳಲ್ಲಿ ಸಮಯಪ್ರಜ್ಞೆಯನ್ನು ಒತ್ತಾಯಿಸುತ್ತಾರೆ. ಇದರ ಪ್ರಕಾರ ಶೂಟಿಂಗ್ಗಾಗಿ ಮಧ್ಯಾಹ್ನ 2.15ಕ್ಕೆ ಬಿಗ್ ಬಾಸ್ ಸೆಟ್‌ಗೆ ಬಂದರು. ಆದರೆ ಆಗ ಸಲ್ಮಾನ್ ಸೆಟ್‌ನಲ್ಲಿ ಇರಲಿಲ್ಲ. ಸುಮಾರು ಒಂದು ಗಂಟೆ ಕಾಲ ಅಕ್ಷಯ್ ಸಲ್ಮಾನ್ಗಾಗಿ ಕಾಯುತ್ತಿದ್ದರು. ಆದರೆ ಇನ್ನೂ ಸಲ್ಮಾನ್ ಸೆಟ್‌ಗೆ ಬರದ ಕಾರಣ ಅಲ್ಲಿಂದ ಹೊರಟರು.
ಇದನ್ನೂ ಓದಿ: ಹಿಂದಿ ಬಿಗ್ ಬಾಸ್ ಟ್ರೋಫಿ ಗೆದ್ದ ಕರಣ್ ವೀರ್ ಮೆಹ್ರಾ; ಇವರಿಗೆ ಸಿಕ್ಕ ಹಣ ಎಷ್ಟು?
ಅಕ್ಷಯ್ ಕುಮಾರ್ ಮುಂಬರುವ ಚಿತ್ರ ‘ಜಾಲಿ ಎಲ್ಎಲ್ಬಿ 3′ ಚಿತ್ರೀಕರಣಕ್ಕೆ ಹೋಗಲು ಬಯಸಿದ್ದರು. ಹಾಗಾಗಿ ಅವರು ಬಿಗ್ ಬಾಸ್ ಸೆಟ್‌ನಲ್ಲಿ ಹೆಚ್ಚು ಸಮಯ ಕಾಯಲು ಸಾಧ್ಯವಾಗಲಿಲ್ಲ. ನಂತರ, ಅಕ್ಷಯ್ ಕುಮಾರ್ ಅವರನ್ನು ಮತ್ತೆ ಸೆಟ್‌ಗೆ ಆಹ್ವಾನಿಸಲು ಬಿಗ್ ಬಾಸ್ ತಂಡದಿಂದ ಹಲವಾರು ಫೋನ್ ಕರೆಗಳು ಮಾಡಲ್ಪಟ್ಟವು. ಆದರೆ ಅಕ್ಷಯ್ ಚಿತ್ರೀಕರಣಕ್ಕೆ ನಿರಾಕರಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.