ಕನ್ನಡ ಬಿಗ್ ಬಾಸ್ ಎಂಟನೇ ಸೀಸನ್ನ ಮೊದಲೇ ವಾರದಲ್ಲಿ ಧನುಶ್ರೀ ,ಎರಡನೇ ವಾರದಲ್ಲಿ ನಿರ್ಮಲಾ ಎಲಿಮಿನೇಷ್ ಆಗಿ ಮನೆಯಿಂದ ಹೊರಹೋಗಿದ್ದಾರೆ. ಈಗ ಮೂರನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ಈ ವಾರ 9 ಸದಸ್ಯರು ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆಗಿದ್ದಾರೆ. ಅವರ ಹೆಸರುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಶಮಂತ್, ನಿಧಿ ಸುಬ್ಬಯ್ಯ, ಗೀತಾ, ರಘು, ಅರವಿಂದ್, ವಿಶ್ವನಾಥ್, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ ನಾಮಿನೇಟ್ ಆದರು. ಶಂಕರ್ ಅಶ್ವತ್ಥ್ ನಾಮಿನೇಟ್ ಆಗಿದ್ದರೂ ಮನೆಯ ಕ್ಯಾಪ್ಟನ್ ಸೇವ್ ಮಾಡಿದ್ದಾರೆ.
ಶಮಂತ್ ಹಾಗೂ ನಿಧಿಗೆ ಅತಿ ಹೆಚ್ಚು ಮತ ಬಿದ್ದಿತ್ತು. ಶಮಂತ್ ಎರಡು ವಾರ ಸರಿಯಾಗಿ ಆಟವಾಡಿಲ್ಲ. ಕ್ಯಾಪ್ಟನ್ಸಿಯಿಂದ ಅವರು ಸೇವ್ ಆಗಿದ್ದಾರೆ. 20ರ ಹುಡುಗನ ತರ ಆಡ್ತಾರೆ. ಉದ್ದೇಶ ಮರೆತಿದಾರೆ ಎಂದು ಮನೆ ಸದಸ್ಯರು ದೂರಿದರು. ನಿಧಿ ಮನಸ್ಸಿನಿಂದ ಆಡಿಲ್ಲ. ನಿಧಿ ಎಲ್ಲರನ್ನೂ ಇಗ್ನೋರ್ ಮಾಡ್ತಾ ಇದಾರೆ ಎನ್ನುವ ದೂರನ್ನು ಹೇಳಿದರು.
ಈ ವಾರ ಜೋಡಿಗಳು ನಾಮಿನೇಟ್ ಮಾಡಬೇಕಿತ್ತು. ಹಾಗಾದರೆ ಯಾವ ಜೋಡಿ ಯಾರನ್ನು ನಾಮಿನೇಟ್ ಮಾಡಿದರು ಎನ್ನುವ ಬಗ್ಗೆ ಇಲ್ಲಿದೆ ವಿವರ.
ಪ್ರಶಾಂತ್-ಶುಭಾ: ಶಮಂತ್-ನಿಧಿ
ದಿವ್ಯಾ-ವಿಶ್ವ: ಶಮಂತ್-ನಿಧಿ
ರಘು-ವೈಷ್ಣವಿ: ಶಮಂತ್-ಗೀತಾ
ಅಶ್ವತ್ಥ್-ಗೀತಾ: ರಘು-ನಿಧಿ
ಗೀತಾ-ಮಂಜು: ಅರವಿಂದ್ -ಶಮಂತ್
ಶಮಂತ್-ನಿಧಿ: ವಿಶ್ವ-ದಿವ್ಯ
ಅರವಿಂದ್-ದಿವ್ಯ: ದಿವ್ಯ ಸುರೇಶ್-ಶಂಕರ್
ಶಮಂತ್ ಅವರನ್ನು ಮನೆಯಿಂದ ಹೊರಗೆ ಕಳಿಸೋ ಬೇಡಿಕೆ:
ಮೈಕ್ ಇದ್ದ ಹೊರತಾಗಿಯೂ ಬ್ರೋ ಗೌಡ ಎಲ್ಲರ ಕಿವಿಯಲ್ಲಿ ಹೋಗಿ ಮಾತನಾಡುತ್ತಿದ್ದರು. ಇದಕ್ಕೆ ಸುದೀಪ್ ಸಿಟ್ಟಾಗಿದ್ದರು. ಲಕ್ಷಾಂತರ ರೂಪಾಯಿ ಖರ್ಚುಮಾಡಿ ಮೈಕ್ ನೀಡುತ್ತೇವೆ. ಆದರೆ, ಕಿವಿಯಲ್ಲಿ ಹೋಗಿ ಮಾತನಾಡುವ ಮೂಲಕ ಶಮಂತ್ ಅವರು ಬಿಗ್ ಬಾಸ್ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದಿದ್ದ ಸುದೀಪ್, ಇದಕ್ಕೆ ಶಿಕ್ಷೆ ನೀಡುವುದಾಗಿಯೂ ಹೇಳಿದರು.
ಬಿಗ್ ಬಾಸ್ ಮೂರನೇ ವಾರದ ಎಲಿಮಿನೇಷನ್ಗೆ ಶಮಂತ್ ನೇರವಾಗಿ ನಾಮಿನೇಟ್ ಆಗಬೇಕು ಅಥವಾ ಮನೆಯವರೆಲ್ಲರೂ ಬೆಡ್ರೂಂ ಏರಿಯಾವನ್ನು ಬಿಟ್ಟುಕೊಡಬೇಕು ಎನ್ನುವ ಕಂಡೀಷನ್ ಹಾಕಿದರು ಸುದೀಪ್. ಬ್ರೋ ಗೌಡ ಅವರನ್ನು ಉಳಿಸಲು ಮನೆಯಲ್ಲಿ ಕೆಲವರು ಸಮ್ಮತಿ ಸೂಚಿಸಿದರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದರು. ಆದರೆ, ಶಮಂತ್ ಎಮೋಷನಲ್ ಆಗಿ ಡೈಲಾಗ್ ಹೊಡೆದರು. ನನ್ನ ಅಪ್ಪ-ಅಮ್ಮ ಉಸಿರಾಡ್ತಿರೋದು ನನ್ನ ಹೆಸರಿಂದ ಎಂದು ಹೇಳಿ ಭಾವುಕರಾದರು. ಹೀಗಾಗಿ ಮನೆಯವರೆಲ್ಲರೂ ಬೆಡ್ ರೂಂ ಬಿಡೋಕೆ ಒಪ್ಪಿಕೊಂಡರು. ಈ ಮೂಲಕ ಶಮಂತ್ ಸೇಫ್ ಆದರು.
ಶಮಂತ್ ಅವರನ್ನು ಉಳಿಸೋಕೆ ಹೋಗಿ ಈಗ ಮನೆಮಂದಿಯೆಲ್ಲ ಲಿವಿಂಗ್ ಏರಿಯಾದಲ್ಲಿ ಉಳಿದುಕೊಳ್ಳುವಂತಾಗಿದೆ. ಯಾರಿಗೂ ನಿದ್ರೆ ಕೂಡ ಬರುತ್ತಿಲ್ಲ. ಇದು ಮನೆಯವರ ಕೋಪಕ್ಕೆ ಕಾರಣವಾಗಿದೆ. ಎಲ್ಲರೂ ಶಮಂತ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಷ್ಟೇ ಅಲ್ಲ ಶಮಂತ್ ಸ್ವಾರ್ಥ ಜೀವಿ ಎಂದು ಕಿಡಿಕಾರುತ್ತಿದ್ದಾರೆ. ಇಂದು ಬಿಗ್ ಬಾಸ್ ಎದುರು ಮನೆ ಮಂದಿ ಹೊಸ ಬೇಡಿಕೆ ಇಟ್ಟಿದ್ದಾರೆ. ಶಮಂತ್ ಅವರನ್ನು ಬೇಕಿದ್ದರೆ ಮನೆಯಿಂದ ಹೊರಗೆ ಕಳುಹಿಸಿ. ನಮಗೆ ನಮ್ಮ ಬೆಡ್ ರೂಂ ಮತ್ತೆ ಬೇಕು ಎಂದಿದ್ದಾರೆ.
ಇದನ್ನೂ ಓದಿ: ಶಮಂತ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ; ಬಿಗ್ ಬಾಸ್ ಎದುರು ಸ್ಪರ್ಧಿಗಳ ಹೊಸ ಬೇಡಿಕೆ