ಅಶ್ವಿನಿ vs ರಕ್ಷಿತಾ ಶೆಟ್ಟಿ ಜಗಳ: ವಿವರವಾಗಿ ವಿಶ್ಲೇಷಿಸಿದ ಸುದೀಪ್ ಕೊಟ್ಟ ತೀರ್ಪೇನು?
Bigg Boss Kannada 12: ಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವೆ ಮನಸ್ಥಾಪ, ಜಗಳಗಳು ನಡೆಯುತ್ತಲೇ ಇವೆ. ಕಳೆದ ವಾರ, ರಕ್ಷಿತಾಗೆ ಪತ್ರ ಕೊಡಲು ಅಶ್ವಿನಿ ಸುತಾರಾಂ ಒಪ್ಪಲಿಲ್ಲ. ರಾಶಿಕಾಗೆ ಏಕೆ ಪತ್ರ ದೊರೆಯಬೇಕು ಎಂಬ ವಿಷಯ ಮಂಡಿಸದೆ, ರಕ್ಷಿತಾ ಮೇಲೆ ವೈಯಕ್ತಿಕ ಸಿಟ್ಟು ತೀರಿಸಿಕೊಳ್ಳಲು ತಾನು ಪತ್ರ ನೀಡುವುದಿಲ್ಲ ಎಂದರು. ಇಂದು (ಶನಿವಾರ) ಸುದೀಪ್ ಅವರು ಅಶ್ವಿನಿ ಮತ್ತು ರಕ್ಷಿತಾ ನಡುವೆ ನಡೆದ ಜಗಳವನ್ನು ಅತ್ಯಂತ ವಿವರವಾಗಿ ವಿಶ್ಲೇಷಣೆ ಮಾಡಿ ಅಂತಿಮವಾಗಿ ತೀರ್ಪು ನೀಡಿದರು.

ಬಿಗ್‌ಬಾಸ್ ಕನ್ನಡ ಸೀಸನ್ 12 (Bigg Boss Kannada) ರಲ್ಲಿ ಅಶ್ವಿನಿ ಗೌಡ, ಮನೆಯ ಕೆಲವರೊಟ್ಟಿಗೆ ವೈಯಕ್ತಿಕ ವಿರೋಧವನ್ನು ಹೊಂದಿದ್ದಾರೆ. ಗಿಲ್ಲಿ, ಕಾವ್ಯಾ ಮತ್ತು ವಿಶೇಷವಾಗಿ ರಕ್ಷಿತಾ ಶೆಟ್ಟಿ. ಬಿಗ್‌ಬಾಸ್ ಮನೆಗೆ ರಕ್ಷಿತಾ ಶೆಟ್ಟಿ ಬಂದಾಗಿನಿಂದಲೂ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವೆ ಮನಸ್ಥಾಪ, ಜಗಳಗಳು ನಡೆಯುತ್ತಲೇ ಇವೆ. ಕಳೆದ ವಾರ, ರಕ್ಷಿತಾಗೆ ಪತ್ರ ಕೊಡಲು ಅಶ್ವಿನಿ ಸುತಾರಾಂ ಒಪ್ಪಲಿಲ್ಲ. ರಾಶಿಕಾಗೆ ಏಕೆ ಪತ್ರ ದೊರೆಯಬೇಕು ಎಂಬ ವಿಷಯ ಮಂಡಿಸದೆ, ರಕ್ಷಿತಾ ಮೇಲೆ ವೈಯಕ್ತಿಕ ಸಿಟ್ಟು ತೀರಿಸಿಕೊಳ್ಳಲು ತಾನು ಪತ್ರ ನೀಡುವುದಿಲ್ಲ ಎಂದರು. ಇಂದು (ಶನಿವಾರ) ಸುದೀಪ್ ಅವರು ಅಶ್ವಿನಿ ಮತ್ತು ರಕ್ಷಿತಾ ನಡುವೆ ನಡೆದ ಜಗಳವನ್ನು ಅತ್ಯಂತ ವಿವರವಾಗಿ ವಿಶ್ಲೇಷಣೆ ಮಾಡಿ ಅಂತಿಮವಾಗಿ ತೀರ್ಪು ನೀಡಿದರು.
ಮೊದಲಿಗೆ ಈ ವಾರದ ಅಂದರೆ ಪತ್ರದ ವಿಚಾರ ಮಾತನಾಡಿ, ‘ನೀವು ರಾಶಿಕಾಗೆ ಏಕೆ ಪತ್ರ ಸಿಗಬೇಕು ಎಂದು ಚರ್ಚಿಸಲೇ ಇಲ್ಲ. ಬದಲಿಗೆ ರಕ್ಷಿತಾ ಇಂದ ನಿಮಗೆ ಆಗಿದೆ ಎಂದು ನೀವೇ ಊಹಿಸಿಕೊಂಡ ಕೆಲವು ಕಾರಣಗಳನ್ನು ಹೇಳಿದಿರಿ, ಮನೆಯ ನೆಮ್ಮದಿ ಹಾಳಾಗಿದೆ, ವ್ಯಕ್ತಿತ್ವ ಚಿಂದಿ ಆಗಿದೆ. ಆದರೆ ನಿಖರವಾಗಿ ನೋಡಿದರೆ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬರುವಂತೆ ರಕ್ಷಿತಾ ವಿಷಯದಲ್ಲಿ ನೀವೇ ನಡೆದುಕೊಂಡಿದ್ದಲ್ಲವೆ? ಎಂದು ಸುದೀಪ್ ಹೇಳಿದರು. ಮೊದಲು ವಿತಂಡ ವಾದ ಮಾಡಿದ ಅಶ್ವಿನಿ, ಆ ನಂತರ ಹೌದು, ನಾನು ಕೋಪದಲ್ಲಿ, ನನಗೆ ಹಿಂದೆ ಆಗಿದ್ದ ಅವಮಾನವನ್ನು ಪರಿಗಣಿಸಿ ರಕ್ಷಿತಾ ವಿರುದ್ಧ ಮಾತನಾಡದೆ, ರಕ್ಷಿತಾಗೆ ಪತ್ರ ಸಿಗದಂತೆ ಮಾಡಿದೆ ಎಂದು ಒಪ್ಪಿಕೊಂಡರು.
ಅದರ ಬಳಿಕ ಕಳೆದವಾರಕ್ಕಿಂತಲೂ ಮುಂಚೆ ನಡೆದ ಜಗಳದ ವಿಷಯವನ್ನು ಸುದೀಪ್ ಸ್ಪರ್ಧಿಗಳ ಮುಂದೆ ಹರಡಿದರು. ರಕ್ಷಿತಾ ತಮಗೆ ಚಪ್ಪಲಿ ತೋರಿಸಿದರು, ಇಡೀ ಕಲಾವಿದರಿಗೆ ಅವಮಾನ ಮಾಡಿದರು ಎಂದು ಅಶ್ವಿನಿ ಗೌಡ ಹೇಳಿದ್ದರು. ಅಸಲಿಗೆ ಕಳೆದ ವಾರ ಈ ಬಗ್ಗೆ ಸುದೀಪ್ ಮಾತನಾಡಿರಲಿಲ್ಲ ಆದರೆ ಈ ವಾರ ಮಾತನಾಡಿದರು. ಬರೀ ಮಾತನಾಡಿದ್ದು ಮಾತ್ರವಲ್ಲ ವಿವರವಾಗಿ ವಿಶ್ಲೇಷಣೆಯನ್ನೇ ಮಾಡಿದರು.
ಇದನ್ನೂ ಓದಿ:ಎಲ್ಲಾ ಸ್ಪರ್ಧಿಗಳು ಹೊರಕ್ಕೆ: ಖಾಲಿ ಖಾಲಿಯಾಗಿರುವ ಬಿಗ್‌ಬಾಸ್ ಮನೆ ಹೇಗಿದೆ ನೋಡಿ
ರಕ್ಷಿತಾ, ಅಶ್ವಿನಿ ಜೊತೆ ಜಗಳ ಆಡುತ್ತಾ ಅವರಿಗೆ ಕಾಲು ತೋರಿಸಿದ್ದರು. ‘ನಿಮ್ಮ ಓಟನ್ನು ಹೀಗೆ ಮಾಡಿ ಬಿಡುತ್ತೇನೆ’ ಎನ್ನುತ್ತಾ ಕಾಲು ಆಡಿಸಿದ್ದರು. ಅಂದರೆ ಓಟನ್ನು ಕಾಲಿನ ಕೆಳಗೆ ಹಾಕಿ ಹೊಸಕುತ್ತೇನೆ ಎಂಬುದು ಅವರ ಅರ್ಥವಾಗಿತ್ತು. ಆದರೆ ಅಶ್ವಿನಿ ಅದನ್ನು ತಪ್ಪಾಗಿ ತಿಳಿದುಕೊಂಡು, ತನಗೆ ರಕ್ಷಿತಾ ಚಪ್ಪಲಿ ತೋರಿಸಿದರು ಎಂದುಕೊಂಡರು. ಈ ಬಗ್ಗೆ ಮಾತನಾಡಿದ ಸುದೀಪ್, ಕಾರಣ ಏನೇ ಇರಲಿ, ನಿಮಗಿಂತಲೂ ದೊಡ್ಡವರಿಗೆ ಚಪ್ಪಲಿ ತೋರಿಸುವುದು ತಪ್ಪು ಎಂದರು. ರಕ್ಷಿತಾ ಅದಕ್ಕೆ ಕ್ಷಮೆ ಕೇಳಿದರು.
ಬಳಿಕ ಅಶ್ವಿನಿ ಬಗ್ಗೆ ಮಾತನಾಡಿದ ಸುದೀಪ್, ಆ ವಿಡಿಯೋವನ್ನು ಮತ್ತೆ ಎರಡೆರಡು ಬಾರಿ ಪ್ಲೇ ಮಾಡಿಸಿ, ರಕ್ಷಿತಾ ಚಪ್ಪಲಿ ತೋರಿಸಿದ್ದಲ್ಲ ಬದಲಿಗೆ ವೋಟನ್ನು ಹೊಸಕುವೆ ಎಂದಿದ್ದು ಎಂದರು. ಆದರೆ ಸುದೀಪ್ ಮತ್ತೊಂದು ವಿಡಿಯೋ ಪ್ಲೇ ಮಾಡಿದರು. ಅದರಲ್ಲಿ ರಕ್ಷಿತಾ, ‘ನಿಮ್ಮ ನಾಟಕ ಹೊರಗೆ ಇರಲಿ’ ಎಂದಿದ್ದರು. ಅದನ್ನೇ ಹಿಡಿದುಕೊಂಡ ಅಶ್ವಿನಿ, ಕಲಾವಿದರಿಗೆ ಅವಮಾನ ಮಾಡಬೇಡ, ಕಲಾವಿದರಿಗೆ ಚಪ್ಪಲಿ ತೋರಿಸಬೇಡ, ಹೀಗೆ ಮಾಡಿದರೆ ಜನ ಹೊರಗೆ ಅದೇ ಚಪ್ಪಲಿಯಲ್ಲಿ ಹೊಡೆಯುತ್ತಾರೆ ಎಂದರು. ಆದರೆ ಆ ಸಂಭಾಷಣೆಯಲ್ಲಿ ರಕ್ಷಿತಾ ಕಲಾವಿದರಿಗೆ ಏನೂ ಹೇಳಿರಲೇ ಇಲ್ಲ. ಆದರೆ ಅಶ್ವಿನಿ, ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿದ್ದಾರೆ ಎಂದು ಸುಳ್ಳು ನರೇಟಿವ್ ಕಟ್ಟಿದ್ದರು. ಇದನ್ನು ಸುದೀಪ್ ಸ್ಪಷ್ಟಪಡಿಸಿದ್ದಲ್ಲದೆ, ಬಿಗ್‌ಬಾಸ್ ಮನೆಯಲ್ಲಿ ಕಲಾವಿದರಿಗೆ ಅವಮಾನ ಆಗಿಲ್ಲವೆಂದು ಈ ಮೂಲಕ ಹೇಳುತ್ತಿದ್ದೇನೆ ಎಂದರು. ಕೊನೆಗೆ ಇಬ್ಬರಿಗೂ ಎಚ್ಚರಿಕೆ ನೀಡಿದ ಸುದೀಪ್, ಮುಂದಿನ ದಿನಗಳಲ್ಲಿ ಇಂಥಹಾ ವರ್ತನೆ ಪುನರಾವರ್ತನೆ ಆಗಬಾರದು ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




