ಎಲಿಮಿನೇಷನ್​ ಬಳಿಕ ಕಿಚ್ಚನ ಎದುರು ಚಂದ್ರಕಲಾ ಸಂದರ್ಶನ; 5 ನೇರ ಪ್ರಶ್ನೆಗೆ ಖಡಕ್​ ಉತ್ತರ ನೀಡಿದ ನಟಿ!

|

Updated on: Mar 29, 2021 | 12:03 PM

Bigg Boss Kannada: ಬಿಗ್​ ಬಾಸ್​ ಕನ್ನಡ ಸೀಸನ್​ 8ರ ನಾಲ್ಕನೇ ವಾರದ ಎಲಿಮಿನೇಷನ್​ನಲ್ಲಿ ಕಿರುತೆರೆ ನಟಿ ಚಂದ್ರಕಲಾ ಮೋಹನ್​ ಔಟ್​ ಆಗಿದ್ದಾರೆ. ಮನೆಯಿಂದ ಹೊರಬಂದ ಅವರಿಗೆ ಸುದೀಪ್​ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಎಲಿಮಿನೇಷನ್​ ಬಳಿಕ ಕಿಚ್ಚನ ಎದುರು ಚಂದ್ರಕಲಾ ಸಂದರ್ಶನ; 5 ನೇರ ಪ್ರಶ್ನೆಗೆ ಖಡಕ್​ ಉತ್ತರ ನೀಡಿದ ನಟಿ!
ಚಂದ್ರಕಲಾ ಮೋಹನ್​ - ಕಿಚ್ಚ ಸುದೀಪ್​
Follow us on

ಕಿರುತೆರೆಯ ಅನುಭವಿ ನಟಿ ಚಂದ್ರಕಲಾ ಮೋಹನ್​ ಅವರು ನಾಲ್ಕನೇ ವಾರ ದೊಡ್ಮನೆಯಿಂದ ಹೊರಬಿದ್ದಿದ್ದಾರೆ. ಇದ್ದಷ್ಟು ದಿನ ಅವರು ಎಲ್ಲ ಟಾಸ್ಕ್​ನಲ್ಲಿಯೂ ಚೆನ್ನಾಗಿ ಆಟ ಆಡಿದ್ದರು. ಆದರೆ ವೀಕ್ಷಕರಿಂದ ಹೆಚ್ಚಿನ ವೋಟ್​ ಪಡೆಯುವಲ್ಲಿ ಅವರು ವಿಫಲರಾದರು. ನಾಲ್ಕು ವಾರಗಳ ಅವರ ಬಿಗ್​ ಬಾಸ್​ ಜರ್ನಿ ಬಗ್ಗೆ ಸುದೀಪ್​ ಒಂದು ಸಣ್ಣ ಮಾತುಕತೆ ನಡೆಸಿದ್ದಾರೆ. ಕಿಚ್ಚ ಕೇಳಿದ ಪ್ರಶ್ನೆಗಳಿಗೆ ಚಂದ್ರಕಲಾ ನೇರ ಉತ್ತರ ನೀಡಿದ್ದಾರೆ. ಆ ಸಂಭಾಷಣೆ ವಿವರ ಇಲ್ಲಿದೆ…

ಸುದೀಪ್​: ಈ ಮನೆಯಲ್ಲಿ ನಾಲ್ಕು ದಿನ ಉಳಿಯೋದು ಕಷ್ಟ. ಅಂಥದ್ದರಲ್ಲಿ ನಾಲ್ಕು ವಾರ ಚಿಕ್ಕದಲ್ಲ. ನಿಮ್ಮ ಸಾಮರ್ಥ್ಯಕ್ಕೆ ಈ ಅವಧಿ ಕಡಿಮೆ ಆಯ್ತು ಎನಿಸಿತು. ಯಾಕೆ ಹೀಗಾಯ್ತು?
ಚಂದ್ರಕಲಾ: ಇನ್ನೂ ನನಗೆ ಟೈಮ್​ ಬೇಕಿತ್ತು. ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಿದ್ದೆ. ನಾನು ಮುಂದಕ್ಕೆ ಹೋಗುತ್ತಿದ್ದಾಗ ಕೆಲವೊಬ್ಬರು ಹಿಂದಕ್ಕೆ ತಳ್ಳುತ್ತಿದ್ದರು.

ಸುದೀಪ್​: ಹಾಗೆ ಹಿಡಿದು ಹಿಂದಕ್ಕೆ ತಳ್ಳುವವರು ಯಾರು?
ಚಂದ್ರಕಲಾ: ಕೆಲವರ ಬಗ್ಗೆ ನನಗೆ ಹಾಗೆ ಅನಿಸಿತು. ಅವರ ಬಗ್ಗೆ ಮಾತನಾಡೋಕೆ ಇಷ್ಟ ಇಲ್ಲ. ಯಾಕೆಂದರೆ ಎಲ್ಲರೂ ನನ್ನ ಫ್ರೆಂಡ್ಸ್​ ಆಗಿದ್ದಾರೆ. ಒಬ್ಬೊಬ್ಬರು ಒಂದೊಂದು ಥರ ನಡೆದುಕೊಳ್ಳುತ್ತಾರೆ. ಎಲ್ಲರ ಥರ ನಾನು ಇರಬೇಕು ಎಂದೇನಿಲ್ಲ. ನಾನು ಬದಲಾಗೋಕೆ ಆಗಲ್ಲ. ನನಗೆ ಕೆಲವು ಮಾತು ಇಷ್ಟ ಆಗಲ್ಲ. ಅತಿಯಾಗಿ ಪ್ರತಿಕ್ರಿಯೆ ನೀಡೋದು ಕೂಡ ಇಷ್ಟ ಆಗಲ್ಲ.

ಸುದೀಪ್​: ಬಿಗ್​ ಬಾಸ್​ ಮನೆಯಲ್ಲಿ ವಯಸ್ಸು ಮತ್ತು ಅನುಭವ ಮುಖ್ಯ ಆಗುತ್ತಾ? ಯಾಕೆಂದರೆ ಶಂಕರ್​ ಅಶ್ವತ್ಥ್​ ಬಿಟ್ಟರೆ ನೀವೇ ಹಿರಿಯರಾಗಿದ್ರಿ..
ಚಂದ್ರಕಲಾ: ವಯಸ್ಸು ಮುಖ್ಯವಾಗುವುದಿಲ್ಲ. ನಮ್ಮ ಬುದ್ಧಿ ಶಕ್ತಿ ಮತ್ತು ಯೋಚನೆ ಮಾಡುವ ರೀತಿ ಮುಖ್ಯವಾಗುತ್ತದೆ.

ಸುದೀಪ್​: ಒಂದು ವಾರ ನೀವು ಕಿಚನ್​ನಿಂದ ಹೊರಗಿದ್ರಿ. ಅದು ನಿಮ್ಮ ಆಟಕ್ಕೆ ಬೇಕಿತ್ತು ಅನಿಸುತ್ತಾ?
ಚಂದ್ರಕಲಾ: ನನಗೆ ಅದು ಬೇಡವಾಗಿತ್ತು. ಬಿಗ್​ ಬಾಸ್​ ಮನೆಯೊಳಗೆ ಬರುವಾಗಲೇ ನಾನು ನನ್ನ ಟ್ಯಾಲೆಂಟ್​ ಚೆನ್ನಾಗಿ ಬಳಕೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ. ಬರುತ್ತಿದ್ದಂತೆಯೇ ನನ್ನನ್ನು ಕಿಚನ್​ಗೆ ಹಾಕಿದರು. 2 ಮತ್ತು 3ನೇ ವಾರವೂ ಅದು ಮುಂದುವರಿಯಿತು. ಅದರಿಂದ ನನಗೆ ತೊಂದರೆ ಆಯಿತು.

ಸುದೀಪ್​: ಎಷ್ಟೋ ಸಂದರ್ಭಗಳಲ್ಲಿ ನಿಮ್ಮ ವಯಸ್ಸು 15 ವರ್ಷ ಕಡಿಮೆ ಆದಂತೆ ಅನಿಸಿತು. ನೀವು ಇರುವುದೇ ಹಾಗೆನಾ? ಅಥವಾ ಸಂದರ್ಭ ಹಾಗೆ ಮಾಡಿಸಿತಾ?
ಚಂದ್ರಕಲಾ: ನಾನು ಇರುವುದೇ ಹಾಗೆ. ಎಲ್ಲವನ್ನೂ ನಾನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಯಾಕೆಂದರೆ ಜೀವನದಲ್ಲಿ ತುಂಬ ಕಷ್ಟ ನೋಡಿಕೊಂಡು ಬಂದಿರುವುದರಿಂದ ಮತ್ತೆ ಮತ್ತೆ ಅದೇ ವಿಚಾರಗಳನ್ನು ಹೇಳಿಕೊಂಡು ಗೋಳಾಡೋಕೆ ಇಷ್ಟ ಇಲ್ಲ. ನಾನಿರೋದೇ ಹಾಗೆ. ಬಿಗ್​ ಬಾಸ್​ಗಾಗಿ ಬದಲಾಗಿಲ್ಲ. ಇನ್ನೂ ಹೆಚ್ಚಿನ ಎನರ್ಜಿ ನನಗಿದೆ.

ಇದನ್ನೂ ಓದಿ: ‘ಸ್ಕರ್ಟ್​ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್​ ಬಾಸ್​ ಚಂದ್ರಕಲಾ ಬದುಕಿನ ಕಹಿ ಘಟನೆ!

13ನೇ ವಯಸ್ಸಿಗೆ ಮದುವೆ, 14ಕ್ಕೆ ಮಗು! ಇದು ಬಿಗ್​ ಬಾಸ್​ ಚಂದ್ರಕಲಾ ರಿಯಲ್​ ಲೈಫ್​ ಕಷ್ಟದ ಕಥೆ!