ಪ್ರಿಯಾಂಕಾ ಕೋಪಕ್ಕೆ ಬೆಚ್ಚಿದ ಬಿಗ್​ ಬಾಸ್​ ಮಂದಿ; ಚಂದ್ರಚೂಡ್​ಗೆ ಖಡಕ್​ ವಾರ್ನಿಂಗ್​

Priyanka Thimmesh: ಪ್ರಿಯಾಂಕಾ ತಿಮ್ಮೇಶ್​ ಅವರ ಕೋಪವನ್ನು ಕಂಡು ಬಿಗ್​ ಬಾಸ್​ ಮನೆಯ ಸದಸ್ಯರಿಗೆ ನಿಜಕ್ಕೂ ಶಾಕ್​ ಆಗಿದೆ. ಇದೇ ಮೊದಲ ಬಾರಿಗೆ ಅವರು ಉಗ್ರಾವತಾರ ತಾಳಿದ್ದಾರೆ.

ಪ್ರಿಯಾಂಕಾ ಕೋಪಕ್ಕೆ ಬೆಚ್ಚಿದ ಬಿಗ್​ ಬಾಸ್​ ಮಂದಿ; ಚಂದ್ರಚೂಡ್​ಗೆ ಖಡಕ್​ ವಾರ್ನಿಂಗ್​
ಪ್ರಿಯಾಂಕಾ ತಿಮ್ಮೇಶ್​
Updated By: ಮದನ್​ ಕುಮಾರ್​

Updated on: Jul 04, 2021 | 2:09 PM

ಇಷ್ಟು ದಿನಗಳ ಕಾಲ ನಟಿ ಪ್ರಿಯಾಂಕಾ ತಿಮ್ಮೇಶ್​ ಅವರು ಬಿಗ್​ ಬಾಸ್​ ಮನೆಯಲ್ಲಿ ಸಾಧ್ಯವಾದಷ್ಟು ಸೈಲೆಂಟ್​ ಆಗಿದ್ದರು. ಯಾರು ಏನೇ ಹೇಳಿದರೂ ಅದನ್ನು ತಾಳ್ಮೆಯಿಂದ ನಿಭಾಯಿಸಿಕೊಂಡು ಸಾಗುತ್ತಿದ್ದರು. ಆದರೆ ಅವರ ತಾಳ್ಮೆಗೂ ಒಂದು ಮಿತಿ ಇದೆ. ಇದೇ ಮೊದಲ ಬಾರಿಗೆ ಪ್ರಿಯಾಂಕಾ ತಿಮ್ಮೇಶ್​ ಅವರು ದೊಡ್ಮನೆಯೊಳಗೆ ಉಗ್ರಾವತಾರ ತೋರಿದ್ದಾರೆ. ಸಿಟ್ಟಿನಿಂದ ಇಡೀ ಮನೆಯನ್ನೇ ಬೆಚ್ಚಿಬೀಳಿಸಿದ್ದಾರೆ. ತಮ್ಮ ಬಗ್ಗೆ ಇಲ್ಲಸಲ್ಲದ ಮಾತನಾಡಿದ ಚಕ್ರವರ್ತಿ ಚಂದ್ರಚೂಡ್​ಗೆ ಖಡಕ್​ ಆಗಿ ವಾರ್ನಿಂಗ್​ ನೀಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಹೊಸ ಪ್ರೋಮೋದಲ್ಲಿ ಈ ಎಲ್ಲ ಅಂಶಗಳು ಬಯಲಾಗಿವೆ. ಇಂದು (ಜು.4) ಪ್ರಸಾರ ಆಗಲಿರುವ ಎಪಿಸೋಡ್​ನಲ್ಲಿ ಅದರ ವಿವರಣೆ ಸಿಗಲಿದೆ. ಅಷ್ಟಕ್ಕೂ ಹೀಗೆ ಪ್ರಿಯಾಂಕಾ ತಿಮ್ಮೇಶ್​ ಕೋಪಗೊಳ್ಳಲು ಕಾರಣವೇನು? ಚಕ್ರವರ್ತಿ ಚಂದ್ರಚೂಡ್​ ಮಾತು! ಹೌದು, ಬಿಗ್​ ಬಾಸ್​ನಲ್ಲಿ ಇರುವ ಎಲ್ಲರ ಬಗ್ಗೆಯೂ ಚಂದ್ರಚೂಡ್​ ಕಮೆಂಟ್​ ಮಾಡುತ್ತಾರೆ. ಇತ್ತೀಚೆಗೆ ಪ್ರಿಯಾಂಕಾ ಬಗ್ಗೆಯೂ ಅವರು ಮಾತನಾಡಿದ್ದಾರೆ. ಅದರಿಂದ ಪ್ರಿಯಾಂಕಾಗೆ ವಿಪರೀತ ಕೋಪ ಬಂದಿದೆ.

ಚಂದ್ರಚೂಡ್​ ಅವರ ಮಾತುಗಳಿಂದ ಮೊದಲಿಗೆ ಪ್ರಿಯಾಂಕಾ ಕಣ್ಣೀರು ಹಾಕಿದರು. ‘ನಾನು ಮತ್ತು ಶಮಂತ್​ ಏನೇ ಮಾಡಿದರೂ ಅದನ್ನು ಕೇಳೋಕೆ ಇವರು ಯಾರು’ ಎಂದು ಅಳುತ್ತಲೇ ತಮ್ಮ ನೋವು ತೋಡಿಕೊಂಡರು. ಆದರೆ ಅವರ ಮಾತಿಗೆ ಚಂದ್ರಚೂಡ್​ ಮತ್ತೆ ಪ್ರತ್ಯುತ್ತರ ನೀಡಲು ಬಂದಾಗ ಅವರ ತಾಳ್ಮೆಯ ಕಟ್ಟೆ ಒಡೆದಿದೆ.

‘ಕಣ್ಣಲ್ಲಿ ನೀರು ಹಾಕಿಕೊಂಡು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದೆಲ್ಲ ನಿಜವಾಗುವುದಿಲ್ಲ’ ಎಂದು ಚಕ್ರವರ್ತಿ ಏರು ಧ್ವನಿಯಲ್ಲಿ ಮಾತನಾಡಿದರು. ಅದಕ್ಕೆ ತಿರುಗೇಟು ನೀಡಿದ ಪ್ರಿಯಾಂಕಾ, ‘ನಾನು ಕಣ್ಣೀರು ಹಾಕಿಕೊಂಡು ನಾಟಕ ಮಾಡುತ್ತಿಲ್ಲ. ಬಾಯಿ ಮುಚ್ಚಿದರೆ ಸರಿ’ ಎಂದು ಕಿರುಚಾಡಿದರು.

ಅವರ ಕೋಪವನ್ನು ಕಂಡು ಬಿಗ್​ ಬಾಸ್​ ಮನೆಯ ಸದಸ್ಯರಿಗೆ ನಿಜಕ್ಕೂ ಶಾಕ್​ ಆಗಿದೆ. ಇದೇ ಮೊದಲ ಬಾರಿಗೆ ಅವರು ಉಗ್ರಾವತಾರ ತಾಳಿದ್ದಾರೆ.

ಇದನ್ನೂ ಓದಿ:

‘ಪತ್ರವಳ್ಳಿ ಪದಕ್ಕೆ ನೀವು ಹೇಳಿದ ಅರ್ಥ ಯಾವ ಡಿಕ್ಷನರಿಯಲ್ಲೂ ಸಿಕ್ಕಿಲ್ಲ’; ಚಕ್ರವರ್ತಿಗೆ ಸುದೀಪ್​ ತಿರುಗೇಟು

ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ರನ್ನು ಸಿಟ್ಟಿನಿಂದ ತಳ್ಳಿದ ಚಕ್ರವರ್ತಿ; ಇಬ್ಬರ ನಡುವೆ ಮೂಡಿತು ವೈಮನಸ್ಸು