Bigg Boss Kannada: ಮಂಜು ಪಾವಗಡ ಅಲ್ಲ, ಬಿಗ್​ ಬಾಸ್​ ಗೆಲ್ಲೋದು ಇವರು!

ಮಂಜು ಅವರನ್ನು ಕುಗ್ಗಿಸಬೇಕು ಎಂದು ಪ್ರಶಾಂತ್​ ಸಂಬರಗಿ ಸಾಕಷ್ಟು ಪ್ಲ್ಯಾನ್​ ಮಾಡಿದ್ದಾರೆ. ಇದು ವರ್ಕ್​ ಆಗಿದೆ ಕೂಡ. ದಿವ್ಯಾ ಸುರೇಶ್​ ಕೂಡ ನಿಧಾನವಾಗಿ ಮಂಜು ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ.

Bigg Boss Kannada: ಮಂಜು ಪಾವಗಡ ಅಲ್ಲ, ಬಿಗ್​ ಬಾಸ್​ ಗೆಲ್ಲೋದು ಇವರು!
ಬಿಗ್​ ಬಾಸ್​ ಕನ್ನಡ
Edited By:

Updated on: Apr 18, 2021 | 8:22 AM

ಬಿಗ್​ ಬಾಸ್​ ಆರಂಭವಾದಾಗ ಮಂಜು ಪಾವಗಡ ಸ್ಟ್ರಾಂಗ್​ ಸ್ಪರ್ಧಿ​ ಎಂದು ಹೇಳಲಾಗಿತ್ತು. ಆದರೆ, ದಿನ ಕಳೆದಂತೆ ಅದು ಬದಲಾಗುತ್ತಾ ಬಂದಿದೆ. ಮಂಜುಗೆ ಕಾಂಪಿಟೇಷನ್​ ಕೊಡೋಕೆ ಮನೆಯಲ್ಲಿ ಸಾಕಷ್ಟು ಸ್ಪರ್ಧಿಗಳು ರೆಡಿ ಆಗಿದ್ದಾರೆ. ಹೀಗಾಗಿ ಈ ಬಾರಿ ಬಿಗ್​ ಬಾಸ್​ ಗೆಲ್ಲೋದು ಯಾರು ಎಂದು ಕೇಳಿದರೆ ಅದಕ್ಕೆ ಉತ್ತರ ಬೇರೆಯದೇ ಸಿಗುತ್ತದೆ.

ಮಂಜು ಅವರನ್ನು ಕುಗ್ಗಿಸಬೇಕು ಎಂದು ಪ್ರಶಾಂತ್​ ಸಂಬರಗಿ ಸಾಕಷ್ಟು ಪ್ಲ್ಯಾನ್​ ಮಾಡಿದ್ದಾರೆ. ಇದು ವರ್ಕ್​ ಆಗಿದೆ ಕೂಡ. ದಿವ್ಯಾ ಸುರೇಶ್​ ಕೂಡ ನಿಧಾನವಾಗಿ ಮಂಜು ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇನ್ನು, ಅರವಿಂದ್ ಸಾಕಷ್ಟು ಶೈನ್​ ಆಗುತ್ತಿದ್ದಾರೆ. ಈ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಚರ್ಚೆ ಆಗಿದೆ. ರಘು ಗೌಡ ಹೀಗೊಂದು ಅಭಿಪ್ರಾಯ ಹೊರ ಹಾಕಿದ್ದಾರೆ.

ಶಮಂತ್​ ಅವರ ಜತೆಗೆ ಮಾತನಾಡುತ್ತಾ ಬಿಗ್​ ಬಾಸ್​ ಮನೆಯಲ್ಲಿ ಟಫ್​ ಕಾಂಪಿಟೇಷನ್​ ಎಂದರೆ ಯಾರು ಎಂದು ನಿನಗೆ ಅನಿಸುತ್ತದೆ ಎಂಬ ಬಗ್ಗೆ ರಘು ಚರ್ಚೆ ಮಾಡಿದ್ದಾರೆ. ಆಗ ಇಬ್ಬರೂ ಅರವಿಂದ್​ ಕೆ.ಪಿ. ಹೆಸರು ಹೇಳಿದ್ದಾರೆ. ‘ನನಗೆ ಹಾಗೆ ಅನಿಸುತ್ತದೆ. ಅವನು ಸ್ಟ್ರಾಂಗ್​ ಇದಾನೆ. ಸುದೀಪ್​ ಅವರು ಏನಾದರೂ ತಪ್ಪು ಹೇಳಿದರೆ ಅದನ್ನು ತಿದ್ದಿಕೊಂಡು ಮುಂದಿನ ವಾರಕ್ಕೆ ಬದಲಾಗುತ್ತಾನೆ. ಸ್ಟ್ರಾಂಗ್​ ಕೂಡ ಇದಾನೆ. ಅರವಿಂದ್​ ಬಿಗ್​ ಬಾಸ್​ ಮನೆಯಲ್ಲಿ ಗೆಲ್ಲೋ ಚಾನ್ಸ್​ ಇದೆ’ ಎಂದು ರಘು ಹೇಳಿದ್ದಾರೆ.

ಅರವಿಂದ್ ಮನೆಯಲ್ಲಿ ತುಂಬಾನೇ ಹೈಲೈಟ್​ ಆಗುತ್ತಿದ್ದಾರೆ. ದಿವ್ಯಾ ಉರುಡುಗ ಜತೆಗಿನ ಪ್ರೀತಿ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಹಾಗಂತ ಇದೊಂದೇ ವಿಚಾರಕ್ಕೆ ಅವರು ಹೈಲೈಟ್​ ಆಗಿಲ್ಲ. ಆಟದಲ್ಲೂ ಅರವಿಂದ್​ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಎರಡನೇ ಬಾರಿ ಕ್ಯಾಪ್ಟನ್​ ಕೂಡ ಆಗಿದ್ದಾರೆ.

ಇದನ್ನೂ ಓದಿ: Kichcha Sudeep: ಬಿಗ್​ ಬಾಸ್​ ನಿರೂಪಣೆ ಬಗ್ಗೆ ಹರಡಿದ ಅಂತೆಕಂತೆಗೆ ಸುದೀಪ್​ ಸ್ಪಷ್ಟನೆ

Kannada Bigg Boss 8 Elimination: ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us