Bigg Boss Kannada: ಗಗನ್​​ಗೆ ಸಿಕ್ತು ‘ಚಿನ್ನ’, ಕಿರಿ-ಕಿರಿ ಮಾಡಿದ ಕಿರಣ್​​ಗೆ ಜೈಲು

ಬಿಗ್​​ಬಾಸ್ ಮನೆಯಲ್ಲಿ ಹಲವು ರೀತಿಯ ಎಮೋಷನ್​​ಗಳು ಕಾಣಲು ಸಿಕ್ಕವು. ನಗು, ಕೋಪ, ಆಟ, ಬದಲಾವಣೆ, ಸ್ನೇಹ, ಪ್ರೀತಿ, ಅಳು ಎಲ್ಲವೂ ಇತ್ತು. ವಾರಾಂತ್ಯ ಬಂದಿದ್ದು, ಶುಕ್ರವಾರದ ಎಪಿಸೋಡಿನಲ್ಲಿ ಈ ವಾರದ ಅತ್ಯುತ್ತಮ ಆಟಗಾರ ಮತ್ತು ಈ ವಾರದ ಅತ್ಯಂತ ಕಳಪೆ ಆಟಗಾರನ ಆಯ್ಕೆ ಮಾಡುವ ಸವಾಲು ಮನೆಯವರ ಮುಂದೆ ಇತ್ತು. ಈ ವಾರ ಕಳಪೆ ಆಯ್ಕೆಗೆ ಸಾಕಷ್ಟು ಆಯ್ಕೆಗಳೇ ಮನೆಯ ಸದಸ್ಯರ ಮುಂದೆ ಇತ್ತು.

Bigg Boss Kannada: ಗಗನ್​​ಗೆ ಸಿಕ್ತು ‘ಚಿನ್ನ’, ಕಿರಿ-ಕಿರಿ ಮಾಡಿದ ಕಿರಣ್​​ಗೆ ಜೈಲು
Kiran Gagan

Updated on: Sep 25, 2026 | 11:15 PM

ಮುಖ್ಯಾಂಶಗಳು

  • ಬಿಗ್​​ಬಾಸ್ ಮನೆಯ ಹೊಸ ಎಪಿಸೋಡ್
  • ವಾರದ ಉತ್ತಮ ಮತ್ತು ಕಳಪೆ ಆಯ್ಕೆ ಮಾಡಲಾಯ್ತು
  • ಗಗನ್ ಅವರಿಗೆ ಚಿನ್ನ ಸಿಕ್ಕರೆ, ಕಿರಣ್​​ಗೆ ಜೈಲು ಸಿಕ್ತು

ಬಿಗ್​​ಬಾಸ್ ಮನೆಯಲ್ಲಿ ಮೂರನೇ ವಾರ ಹಲವಾರು ಘಟನೆಗಳು ನಡೆದವು. ಮೂರನೇ ವಾರದಲ್ಲಿ ಬಿಗ್​​ಬಾಸ್ ಮನೆಯಲ್ಲಿ ಹಲವು ರೀತಿಯ ಎಮೋಷನ್​​ಗಳು ಕಾಣಲು ಸಿಕ್ಕವು. ನಗು, ಕೋಪ, ಆಟ, ಬದಲಾವಣೆ, ಸ್ನೇಹ, ಪ್ರೀತಿ, ಅಳು ಎಲ್ಲವೂ ಇತ್ತು. ವಾರಾಂತ್ಯ ಬಂದಿದ್ದು, ಶುಕ್ರವಾರದ ಎಪಿಸೋಡಿನಲ್ಲಿ ಈ ವಾರದ ಅತ್ಯುತ್ತಮ ಆಟಗಾರ ಮತ್ತು ಈ ವಾರದ ಅತ್ಯಂತ ಕಳಪೆ ಆಟಗಾರನ ಆಯ್ಕೆ ಮಾಡುವ ಸವಾಲು ಮನೆಯವರ ಮುಂದೆ ಇತ್ತು. ಈ ವಾರ ಕಳಪೆ ಆಯ್ಕೆಗೆ ಸಾಕಷ್ಟು ಆಯ್ಕೆಗಳೇ ಮನೆಯ ಸದಸ್ಯರ ಮುಂದೆ ಇತ್ತು.

ಮೊದಲಿಗೆ ಈ ವಾರದ ಅತ್ಯುತ್ತಮ ಆಟಗಾರನ ಆಯ್ಕೆ ನಡೆಯಬೇಕಿತ್ತು. ಈ ವಾರ ಹಲವು ಸ್ಪರ್ಧಿಗಳು ಗಗನ್ ಅವರನ್ನು ಅತ್ಯುತ್ತಮ ಆಟಗಾರ ಎಂದು ಆಯ್ಕೆ ಮಾಡಿದರು. ಕಳೆದ ವಾರ ಆಸಿಯಾ ಅವರಿಗೆ ಚಿನ್ನದ ಮೆಡಲ್​​ಗಳು ಸಿಕ್ಕಿತ್ತು. ಆದರೆ ಈ ವಾರ ಯಾರೊಬ್ಬರೂ ಸಹ ಆಸಿಯಾ ಹೆಸರನ್ನು ಒಳ್ಳೆಯ ಆಟಗಾರರ ಪಟ್ಟಿಯಲ್ಲಿ ತೆಗೆದುಕೊಳ್ಳದೇ ಇರುವುದು ಅಚ್ಚರಿ. ಗಗನ್ ಅವರ ಜೊತೆಗೆ, ಕಾವ್ಯಾ, ಸಂಗೀತಾ, ಧನುಶ್ ಅವರ ಹೆಸರುಗಳು ಸಹ ಕೇಳಿ ಬಂತು. ಅಂತಿಮವಾಗಿ ಹೆಚ್ಚು ಮತ ಪಡೆದ ಗಗನ್ ಅವರಿಗೆ ಚಿನ್ನದ ಪದಕ ಸಿಕ್ಕಿತು. ಆ ಪದಕವನ್ನು ಅವರು ಮನೆಯಿಂದ ಹೊರಗೆ ಹೋದ ಗೆಳೆಯ ತಾಂಡವ್ ಅವರಿಗೆ ಡೆಡಿಕೇಟ್ ಮಾಡಿದರು.

ಬಳಿಕ ಇದ್ದಿದ್ದು ವಾರದ ಕಳಪೆಯನ್ನು ಆಯ್ಕೆ ಮಾಡುವ ಟಾಸ್ಕ್. ಬಿಗ್​​ಬಾಸ್ ಸ್ಪಷ್ಟವಾಗಿ ಹೇಳಿದ್ದರು, ಕಳಪೆಯನ್ನು ಕೇವಲ ಟಾಸ್ಕ್ ಒಂದನ್ನೇ ಮಾನದಂಡವಾಗಿ ಇರಿಸಿಕೊಂಡು ಆಯ್ಕೆ ಮಾಡುವಂತಿಲ್ಲ, ಬದಲಿಗೆ ವಾರದಲ್ಲಿ ಅವರ ಒಟ್ಟಾರೆ ವರ್ತನೆಯನ್ನು ಪರಿಗಣಿಸಬೇಕು ಎಂದಿದ್ದರು. ಅದರಂತೆ ಹಲವಾರು ಮಂದಿ ಬೇರೆ ಬೇರೆ ಹೆಸರುಗಳನ್ನು ಹೇಳಿದರು. ಆದರೆ ಹೆಚ್ಚಿನ ಸದಸ್ಯರು ತೆಗೆದುಕೊಂಡಿದ್ದು ಕಿರಣ್ ಶಾಸ್ತ್ರಿಯ ಹೆಸರು.

ಇದನ್ನೂ ಓದಿ:ಇನ್​​ಸ್ಟಾಗ್ರಾಂನಲ್ಲಿ ಕ್ಯೂಟ್ ವಿಡಿಯೋ ಹಂಚಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ರಾಶಿಕಾ

ತಾಂಡವ್ ಹೋಗುವಾಗ ಕಿರಣ್ ವರ್ತಿಸಿದ ರೀತಿ, ಮನೆಯಲ್ಲಿ ನಿಯಮಗಳನ್ನು ಮುರಿದಿದ್ದು, ಅಕ್ಕ ಎನ್ನುತ್ತಿದ್ದ ಸೌಂದರ್ಯಾ ಅವರನ್ನೇ ಮನೆಯಿಂದ ಹೊರಗೆ ಹಾಕಲು ಯತ್ನಿಸಿದ್ದು, ಸುಖಾ ಸುಮ್ಮನೆ ಜಗಳ ಮಾಡಿದ್ದು, ಬದಲಾವಣೆಗೆ ಯತ್ನಿಸದೇ ಇದ್ದಿದ್ದು ಹೀಗೆ ಹಲವು ಕಾರಣಗಳನ್ನು ನೀಡಲಾಯ್ತು. ಅದರಲ್ಲೂ ಸೌಂದರ್ಯಾ ನೀಡಿದ ಕಾರಣ ಮಜವಾಗಿತ್ತು, ‘ಅಣ್ಣ ಕಿರಣ್​​ಗೆ ಗ್ಯಾಸ್ಟ್ರಿಕ್ ಆಗಿದೆ, ಗಂಜಿ ಕುಡಿದು ಅವರ ಗ್ಯಾಸ್ಟ್ರಿಕ್ ಸರಿ ಆಗಲಿ ಎಂದು ಅವರನ್ನು ಜೈಲಿಗೆ ಕಳಿಸುತ್ತಿದ್ದೇನೆ. ನನ್ನ ಅಣ್ಣ ಹೇಗಾದರೂ ಮಾಡಿ ಜೈಲಿನಿಂದ ಹೊರಗೆ ಬರುತ್ತಾನೆ ಎನ್ನುವ ನಂಬಿಕೆ ನನಗೆ ಇದೆ’ ಎಂದು ವ್ಯಂಗ್ಯವಾಗಿ ಹೇಳಿದರು. ಕಿರಣ್ ಸಹ ಇದೇ ರೀತಿಯ ಕಾರಣಗಳನ್ನು ನೀಡಿ ಸೌಂದರ್ಯಾ ಅವರ 50% ಮತವನ್ನು ತೆಗೆದುಕೊಂಡಿದ್ದರು.

ಆಸಿಯಾ, ಸಂಗೀತಾ ಇನ್ನೂ ಕೆಲವರು ಲಿಖಿತ್ ಹೆಸರನ್ನು ಸಹ ತೆಗೆದುಕೊಂಡರು. ಗಗನ್ ಅವರು ಧನುಶ್ ಹೆಸರನ್ನು ತೆಗೆದುಕೊಂಡರು. ಕಿರಣ್ ಶಾಸ್ತ್ರಿ, ಹಾಗೂ ಧನುಶ್ ಮಂಜನ ಹೆಸರು ತೆಗೆದುಕೊಂಡರು. ಅಂತಿಮವಾಗಿ ಕಿರಣ್​​ಗೆ ಹೆಚ್ಚಿನ ಮತ ಸಿಕ್ಕು ಕಿರಣ್ ಜೈಲು ಸೇರಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:14 pm, Fri, 25 September 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us