ಸ್ಯಾಂಡಲ್ವುಡ್ ನಟಿ ದಿವ್ಯಾ ಉರುಡುಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ನಲ್ಲಿ ಭಾಗವಹಿಸಿದ ಬಳಿಕ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡರು. ಕೊರೊನಾ ವೈರಸ್ ಕಾರಣದಿಂದಾಗಿ ಈ ಸೀಸನ್ ತಾತ್ಕಾಲಿಕವಾಗಿ ಅರ್ಧಕ್ಕೆ ನಿಂತ ಸಂದರ್ಭದಲ್ಲಿ ದಿವ್ಯಾ ಅವರಿಗೆ ಅನಾರೋಗ್ಯ ಕಾಡಿತ್ತು. ಆಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಎರಡನೇ ಇನ್ನಿಂಗ್ ಆರಂಭಿಸಲು ಕಲರ್ಸ್ ಕನ್ನಡ ವಾಹಿನಿ ನಿರ್ಧರಿಸಿದ್ದು, ಅದರಲ್ಲಿ ದಿವ್ಯಾ ಉರುಡುಗ ಕೂಡ ಭಾಗವಹಿಸುತ್ತಿದ್ದಾರೆ. ಈ ನಡುವೆ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 5 ಲಕ್ಷ ಮಂದಿ ಫಾಲೋವರ್ಸ್ ಆಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಜನರನ್ನು ಸಂಪಾದಿಸಿಕೊಳ್ಳುವುದು ಸೆಲೆಬ್ರಿಟಿಗಳಿಗೆ ತುಂಬ ಅನಿವಾರ್ಯ. ಆ ವಿಚಾರದಲ್ಲಿ ದಿವ್ಯಾಗೆ ಈಗ ಸಖತ್ ಖುಷಿ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಬರೋಬ್ಬರಿ 5 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ. ಅವರೆಲ್ಲರ ಪ್ರೀತಿಗೆ ಫಿದಾ ಆಗಿರುವ ದಿವ್ಯಾ, ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
‘ನಾನು ಏನೇ ಮಾಡಬೇಕು ಎಂದುಕೊಂಡಾಗಲೂ ನನ್ನ ಹಿಂದಿರುವ ಕುಟುಂಬವನ್ನು ನೋಡುತ್ತೇನೆ. ಇಂದು ಅದ್ಭುತವಾದ ಅರ್ಧ ಮಿಲಿಯನ್ ಹೃದಯಗಳು ನನ್ನ ಜೊತೆ ಇರುವುದಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ನಿಮ್ಮಲ್ಲಿ ಪ್ರತಿಯೊಬ್ಬರೂ ನನ್ನನ್ನು ಖುಷಿಯಾಗಿ ಇರಿಸುತ್ತೀರಿ. ಇನ್ಮುಂದೆ ಕೂಡ ನನ್ನ ಈ ಕುಟುಂಬಕ್ಕೆ ನಾನು ಹೊಸ ಸದಸ್ಯರನ್ನು ಸ್ವಾಗತಿಸುತ್ತೇನೆ’ ಎಂದು ಹೊಸ ಪೋಸ್ಟ್ ಮೂಲಕ ತಮ್ಮ ಅಭಿಮಾನಿಗಳಿಗೆ ದಿವ್ಯಾ ಉರುಡುಗ ಧನ್ಯವಾದ ತಿಳಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಶುಭಾ ಪೂಂಜಾ 2.54 ಲಕ್ಷ, ನಿಧಿ ಸುಬ್ಬಯ್ಯ 2.87 ಲಕ್ಷ, ವೈಷ್ಣವಿ ಗೌಡ 8.25 ಲಕ್ಷ, ರಘು ಗೌಡ 3.27 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಜೂ.23ರಿಂದ ಬಿಗ್ ಬಾಸ್ ಕನ್ನಡ ಸೀಸನ್ 8ರ ಎರಡನೇ ಇನ್ನಿಂಗ್ಸ್ ಆರಂಭ ಆಗಲಿದೆ. ಹೆಚ್ಚು ಫ್ಯಾನ್ ಫಾಲೋಯಿಂಗ್ ಇರುವವರಿಗೆ ಹೆಚ್ಚು ವೋಟ್ಗಳು ಸಿಗುವುದು ಸಹಜ. ಆ ಕಾರಣಕ್ಕಾಗಿ ಈ ಎಲ್ಲ ಅಂಶಗಳು ಸ್ಪರ್ಧಿಗಳಿಗೆ ಮುಖ್ಯ ಆಗಲಿದೆ.
ಇದನ್ನೂ ಓದಿ:
ದಿವ್ಯಾ ಉರುಡುಗ ನೀಡಿದ ಉಂಗುರ ಮತ್ತೆ ಕಳೆದುಕೊಂಡು ಹುಡುಕಾಡಿದ ಅರವಿಂದ್; ವಿಡಿಯೋ ವೈರಲ್