ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಂಭಾವ್ಯ ಸ್ಪರ್ಧಿ ಇವರೇ…
ಈ ಬಾರಿ ನಾಮಿನೇಷನ್ ಲಿಸ್ಟ್ನಲ್ಲಿ ಶಮಂತ್ ಬ್ರೋ ಗೌಡ, ನಿಧಿ ಸುಬ್ಬಯ್ಯ, ಗೀತಾ ಭಾರತಿ ಭಟ್, ರಘು ಗೌಡ, ಅರವಿಂದ್ ಕೆ.ಪಿ., ವಿಶ್ವನಾಥ್, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ ಇದ್ದಾರೆ.

ನೋಡ ನೋಡುತ್ತಿದ್ದಂತೆ ಬಿಗ್ ಬಾಸ್ ಮನೆಯಲ್ಲಿ ಮೂರನೇ ವಾರದ ಎಲಿಮಿನೇಷನ್ ಬಂದೇ ಬಿಟ್ಟಿದೆ. ಇಂದು ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಸೇಫ್ ಆದ ಕೆಲ ಸ್ಪರ್ಧಿಗಳ ಹೆಸರು ಹೊರ ಬೀಳಲಿದೆ. ನಾಳೆ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಅಭ್ಯರ್ಥಿ ಯಾರು ಎನ್ನುವುದು ಗೊತ್ತಾಗಲಿದೆ. ಹಾಗಾದರೆ, ಮೂರನೇವಾರ ಎಲಿಮಿನೇಟ್ ಆಗುವ ಸಂಭಾವ್ಯ ಸ್ಪರ್ಧಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಈ ಬಾರಿ ನಾಮಿನೇಷನ್ ಲಿಸ್ಟ್ನಲ್ಲಿ ಶಮಂತ್ ಬ್ರೋ ಗೌಡ, ನಿಧಿ ಸುಬ್ಬಯ್ಯ, ಗೀತಾ ಭಾರತಿ ಭಟ್, ರಘು ಗೌಡ, ಅರವಿಂದ್ ಕೆ.ಪಿ., ವಿಶ್ವನಾಥ್, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ ಇದ್ದಾರೆ. 9 ಸ್ಪರ್ಧಿಗಳ ಪೈಕಿ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಹೋಗಲಿದ್ದಾರೆ. ಈ ವಾರ ಮನೆಯಿಂದ ಹೊರ ಹೋಗೋ ಅಭ್ಯರ್ಥಿ ಯಾರು ಎನ್ನುವ ಕೂತುಹಲ ಪ್ರೇಕ್ಷಕರದ್ದು.
ಈ ಬಾರಿಯ ಎಲಿಮಿನೇಷನ್ಗೆ ನಾಮಿನೇಟ್ ಮಾಡುವಾಗ ಶಮಂತ್ ಹಾಗೂ ನಿಧಿಗೆ ಅತಿ ಹೆಚ್ಚು ಮತಗಳು ಬಿದ್ದಿದ್ದವು. ಇವರು ಮನೆಯಲ್ಲಿ ಅಷ್ಟಾಗಿ ಆ್ಯಕ್ಟಿವ್ ಆಗಿಲ್ಲ ಎನ್ನುವ ಮಾತಿದೆ. ಆದರೆ, ನಿಧಿ ಸಿನಿಮಾ ಮೂಲಕ ಮೊದಲಿನಿಂದಲೂ ಪ್ರೇಕ್ಷಕರಿಗೆ ಚಿರಪರಿಚತರಾಗಿದ್ದಾರೆ. ಹೀಗಾಗಿ ಅವರಿಗೆ ಅಭಿಮಾನಿ ಬಳಗ ದೊಡ್ಡದಿದೆ. ಎರಡು ವಾರ ಎಲಿಮಿನೇಷನ್ನಿಂದ ದೂರವೇ ಇದ್ದ ಬ್ರೋ ಗೌಡ ಮೊದಲನೇ ಬಾರಿ ಎಲಿಮಿನೇಷನ್ ಎದುರಿಸುತ್ತಿದ್ದಾರೆ. ಇಬ್ಬರೂ ಪ್ರೇಕ್ಷಕರಿಗೆ ಇಷ್ಟವಾಗಿದ್ದರಿಂದ ಇವರು ಮನೆಯಿಂದ ಹೊರ ಹೋಗೋದು ಅನುಮಾನ.
ಇನ್ನು ಪ್ರಶಾಂತ್ ಸಂಬರಗಿ ಗೇಮ್ಗಳಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಅರವಿಂದ್ ಕೆ.ಪಿ., ದಿವ್ಯಾ ಉರುಡುಗ, ದಿವ್ಯಾ ಸುರೇಶ್, ರಘು ಗೌಡ ಬಿಗ್ ಬಾಸ್ ಮನೆಯಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಹೀಗಾಗಿ ಇವರು ಮನೆಯಿಂದ ಹೊರ ಹೋಗೋದು ಅನುಮಾನ ಎನ್ನಲಾಗುತ್ತಿದೆ.
View this post on Instagram
ಇನ್ನು, ಗೀತಾ ಬಿಗ್ ಬಾಸ್ ಮನೆಯಲ್ಲಿ ತುಂಬಾನೇ ಎಮೋಷನಲ್ ನಾಟಕ ಮಾಡುತ್ತಾರೆ ಎನ್ನುವ ಮಾತಿದೆ. ಹೀಗಾಗಿ, ಇವರ ಬಗ್ಗೆ ಪ್ರೇಕ್ಷಕರು ಮುನಿಸಿಕೊಂಡರೂ ಮುನಿಸಿಕೊಳ್ಳಬಹುದು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿದೆ. ಇನ್ನು, ವಿಶ್ವ ಅವರು ಬಿಗ್ ಬಾಸ್ ಮನೆಯಲ್ಲಿ ಸಣ್ಣ ಸ್ಪರ್ಧಿ. ಇವರನ್ನು ಪ್ರೇಕ್ಷಕರು ಕೈ ಹೀಡಿತಾರಾ ಎಂಬುದನ್ನು ಕಾದು ನೋಡಬೇಕಿದೆ. ಸೋಶಿಯಲ್ ಮೀಡಿಯಾದಲ್ಲಿ ಗೀತಾ ಅಥವಾ ವಿಶ್ವ ಇವರಲ್ಲಿ ಒಬ್ಬರು ಮನೆಯಿಂದ ಹೊರ ಹೋಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: Bigg Boss Kannada: ಕಾಯಿಲೆ ಬಿದ್ದ ತಂದೆ ಜೊತೆ 2 ವರ್ಷದಿಂದ ಮಾತನಾಡಿಲ್ಲ ಬಿಗ್ ಬಾಸ್ ರಾಜೀವ್! ಕಾರಣ ಏನು?
Published On - 4:56 pm, Sat, 20 March 21




