ಬಿಗ್ ಬಾಸ್ ಮನೆಯಲ್ಲಿ ಲ್ಯಾಗ್ ಮಂಜು ತುಲಾಭಾರ! ತಕ್ಕಡಿಯ ಮತ್ತೊಂದು ತುದಿಯಲ್ಲಿ ದಿವ್ಯಾ ಸುರೇಶ್?
ಬಿಗ್ ಬಾಸ್ ಮನೆಯಲ್ಲಿ ವಾರದ ಕತೆ ಕಿಚ್ಚನ ಜೊತೆ ನಡೆಯುತ್ತಿದೆ. ಈ ವೇಳೆ ಸುದೀಪ್ ಮಂಜುಗೆ ತುಲಾಭಾರ ಮಾಡಿಸುವ ಬಗ್ಗೆ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಜತೆ ಬೆರೆಯವ ಸ್ಪರ್ಧಿ ಎಂದರೆ ಅದು ಮಂಜು ಪಾವಗಡ. ಮನೆಯಲ್ಲಿ ಅವರ ಮೇಲೆ ಯಾರಿಗೂ ದ್ವೇಷವಿಲ್ಲ. ಪ್ರೇಕ್ಷಕರೂ ಅಷ್ಟೇ, ಬಿಗ್ ಬಾಸ್ ಸೀಸನ್ 8 ವಿನ್ನರ್ ಮಂಜು ಅವರೇ ಎನ್ನುತ್ತಿದ್ದಾರೆ. ಮನೆಯವರ ಪ್ರೀತಿ ಸಂಪಾದಿಸಿದ ಮಂಜುಗೆ ಇಂದು ಬಿಗ್ ಬಾಸ್ ಮನೆಯಲ್ಲಿ ತುಲಾಭಾರ ಕಾರ್ಯಕ್ರಮ ನಡೆಯುತ್ತಿದೆ! ಆದರೆ, ಸುದೀಪ್ ಒಂದು ಬಿಗ್ ಟ್ವಿಸ್ಟ್ ನೀಡುತ್ತಿದ್ದಾರೆ? ಏನದು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ಬಿಗ್ ಬಾಸ್ ಮನೆ ಪ್ರವೇಶಿಸಿದಾಗಿನಿಂದಲೂ ಮಂಜು ಎಲ್ಲರಿಗೂ ಹತ್ತಿರವಾಗಿದ್ದಾರೆ. ಇಡೀ ದಿನ ಅವರು ಮನೆಯವರನ್ನು ನಗಿಸುತ್ತಿರುತ್ತಾರೆ. ಇತ್ತೀಚೆಗೆ ಮಂಜು ತಮ್ಮ ನೋವಿನ ಕತೆ ಹೇಳಿಕೊಂಡಿದ್ದರು. ‘ಊಟ ಇಲ್ಲ, ತಿಂಡಿ ಇಲ್ಲ.. ಹುಟ್ಟಿದರೆ ಶ್ರೀಮಂತರ ಹೊಟ್ಟೆಯಲ್ಲಿ ಹುಟ್ಟಬೇಕು. ಇಲ್ಲಾಂದ್ರೆ ಹುಟ್ಟಲೇ ಬಾರದು’ ಎಂದು ಅವರು ಕಣ್ಣೀರು ಹಾಕುತ್ತ ಮಾತನಾಡಿದ್ದರು. ಇದಾದ ನಂತರ ಅವರು ಮನೆಯವರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಇಂದು, ಬಿಗ್ ಬಾಸ್ ಮನೆಯಲ್ಲಿ ವಾರದ ಕತೆ ಕಿಚ್ಚನ ಜೊತೆ ನಡೆಯುತ್ತಿದೆ. ಈ ವೇಳೆ ಸುದೀಪ್ ಮಂಜುಗೆ ತುಲಾಭಾರ ಮಾಡಿಸುವ ಬಗ್ಗೆ ಮಾತನಾಡಿದ್ದಾರೆ. ಮನೆಯಲ್ಲಿ ಎಲ್ಲರೂ ಹೆಚ್ಚು ಪ್ರೀತಿಸುವವ್ಯಕ್ತಿ ಯಾರು ಎಂದು ಕಿಚ್ಚ ಸುದೀಪ್ ಕೇಳಿದ್ದಾರೆ. ಇದಕ್ಕೆ ಮನೆಯಲ್ಲಿ ಬಹುತೇಕರು ಮಂಜು ಅವರ ಹೆಸರನ್ನು ಹೇಳಿದ್ದಾರೆ. ಹೀಗಾಗಿ, ತುಲಾಭಾರಕ್ಕೆ ಮಂಜು ಅವರನ್ನು ಸುದೀಪ್ ಆಯ್ಕೆ ಮಾಡಿಕೊಂಡಿದ್ದಾರೆ.
ಒಂದು ಕಡೆ ಮಂಜು ಕೂರುತ್ತಾರೆ. ಮತ್ತೊಂದು ಕಡೆ ನಿಮಗೆ ಏನು ಪ್ರೀತಿನೋ ಆ ವಸ್ತುವನ್ನು ಇಡಬೇಕು. ನೀವು ಹಾಕಿರೋ ವಸ್ತುವನ್ನು ಬಿಗ್ ಬಾಸ್ ಪಡೆದುಕೊಳ್ಳುತ್ತದೆ. ಆದರೆ, ಅದನ್ನು ಹಿಂದಿರುಗಿ ನೀಡುವುದಿಲ್ಲ ಎಂದು ಹೇಳಿದೆ. ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಸುರೇಶ್ ಅವರನ್ನು ಕಂಡರೆ ಮಂಜುಗೆ ಎಲ್ಲಿಲ್ಲದ ಪ್ರೀತಿ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಈಗ ತಕ್ಕಡಿಯಲ್ಲಿ ಮಂಜು ಯಾವುದಾದರೂ ವಸ್ತುವನ್ನು ತಂದು ಇಡ್ತಾರಾ ಅಥವಾ ದಿವ್ಯಾ ಅವರನ್ನೇ ಕೂರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
View this post on Instagram
ಇದನ್ನೂ ಓದಿ: ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಂಭಾವ್ಯ ಸ್ಪರ್ಧಿ ಇವರೇ…