ಬಿಗ್​ ಬಾಸ್​ ಬಗ್ಗೆ ಕಿಚ್ಚ ಸುದೀಪ್​ ಉತ್ಸಾಹದ ಮಾತು; ಹೆಚ್ಚು ಖುಷಿ ಆಗಿದ್ದು ನಟಿ ಜೆನಿಲಿಯಾ

|

Updated on: Jun 22, 2021 | 5:06 PM

Bigg Boss Kannada Season 8: ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ರ ಎರಡನೇ ಇನ್ನಿಂಗ್ಸ್​ಗಾಗಿ ಕಾಯುತ್ತಿದ್ದಾರೆ. ಅಂಥವರ ಸಾಲಿನಲ್ಲಿ ಮೊದಲು ಇರುವುದು ನಟಿ ಜೆನಿಲಿಯಾ ದೇಶಮುಖ್​!

ಬಿಗ್​ ಬಾಸ್​ ಬಗ್ಗೆ ಕಿಚ್ಚ ಸುದೀಪ್​ ಉತ್ಸಾಹದ ಮಾತು; ಹೆಚ್ಚು ಖುಷಿ ಆಗಿದ್ದು ನಟಿ ಜೆನಿಲಿಯಾ
ಕಿಚ್ಚ ಸುದೀಪ್​, ಜೆನಿಲಿಯಾ
Follow us on

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಅರ್ಧಕ್ಕೆ ನಿಂತಾಗ ಬೇಜಾರು ಮಾಡಿಕೊಂಡಿದ್ದವರೆಲ್ಲ ಜೂ.23ಕ್ಕಾಗಿ ಕಾಯುತ್ತಿದ್ದಾರೆ. ಅಂದರೆ, ಬುಧವಾರ ಸಂಜೆ 6 ಗಂಟೆಗೆ ಅದ್ದೂರಿಯಾಗಿ ಬಿಗ್​ ಬಾಸ್​ ಎರಡನೇ ಇನ್ನಿಂಗ್ಸ್​ ಶುರು ಆಗಲಿದೆ. 12 ಸ್ಪರ್ಧಿಗಳು ಹಣಾಹಣಿ ನಡೆಸುತ್ತಿರುವಾಗಲೇ ಅರ್ಧಕ್ಕೆ ನಿಂತಿದ್ದ ಈ ಕಾರ್ಯಕ್ರಮವನ್ನು ಮತ್ತೆ ಶುರು ಮಾಡುತ್ತಿದೆ ಕಲರ್ಸ್​ ಕನ್ನಡ ವಾಹಿನಿ. ಈ ಖುಷಿಯ ಕ್ಷಣಕ್ಕಾಗಿ ಪ್ರೇಕ್ಷಕರು ಮಾತ್ರವಲ್ಲದೇ ಕಿಚ್ಚ ಸುದೀಪ್​ ಕೂಡ ಕಾಯುತ್ತಿದ್ದಾರೆ. ಈ ಬಗ್ಗೆ ಅವರು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಕೆಲವು ವಿಚಾರ ಹಂಚಿಕೊಂಡಿದ್ದಾರೆ.

‘ಬಿಗ್​ ಬಾಸ್​ ಪುನರಾರಂಭಗೊಳ್ಳುತ್ತಿದೆ. ಶೀಘ್ರದಲ್ಲೇ ವೇದಿಕೆ ಏರಲಿದ್ದೇನೆ. ಸ್ಪರ್ಧಿಗಳೆಲ್ಲರೂ ಬ್ರೇಕ್​ ತೆಗೆದುಕೊಂಡಿದ್ದರು. ಹೊರಗೆ ಹೋಗಿದ್ದರು. ಅವರವರ ಸ್ಥಾನ ಮತ್ತು ಜನಪ್ರಿಯತೆ ಏನು ಎಂಬುದನ್ನು ತಿಳಿದುಕೊಂಡಿದ್ದಾರೆ. ಎಲ್ಲ ಎಪಿಸೋಡ್​ಗಳನ್ನು ನೋಡಿಕೊಂಡಿದ್ದಾರೆ. ಒಬ್ಬರು ಇನ್ನೊಬ್ಬರ ಬಗ್ಗೆ ಏನು ಮಾತನಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ. ಈಗ ಮರುಪ್ರವೇಶ ಪಡೆಯುತ್ತಿದ್ದಾರೆ. ಇದು ಹೊಸತು. ಇದೇ ಮೋಜು’ ಎಂದು ಸುದೀಪ್​ ಟ್ವೀಟ್​ ಮಾಡಿದ್ದಾರೆ.

ಸುದೀಪ್​ ಅವರ ಈ ಟ್ವೀಟ್​ ಕಂಡು ಬಿಗ್​ ಬಾಸ್​ ವೀಕ್ಷಕರಿಗೆ ಖುಷಿ ಆಗಿದೆ. ಅಭಿಮಾನಿಗಳೆಲ್ಲ ತಾವು ಕೂಡ ಬಿಗ್​ ಬಾಸ್​ಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಅಷ್ಟೇ, ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಸಹ ಕಿಚ್ಚನ ಈ ಶೋಗಾಗಿ ಕಾಯುತ್ತಿದ್ದಾರೆ. ಅಂಥವರ ಸಾಲಿನಲ್ಲಿ ಮೊದಲು ಇರುವುದು ನಟಿ ಜೆನಿಲಿಯಾ ದೇಶಮುಖ್​! ಹೌದು, ಈ ಬಗ್ಗೆ ಅವರು ಟ್ವಿಟರ್​ನಲ್ಲಿ ತಮ್ಮ ಎಗ್ಸೈಟ್​ಮೆಂಟ್​ ತೋರಿಸಿದ್ದಾರೆ. ಸುದೀಪ್​ ಮಾಡಿರುವ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಅವರು, ‘ಅದ್ಭುತ.. ಈ ಸುದ್ದಿ ಸೂಪರ್​ ಎಗ್ಸೈಟಿಂಗ್​ ಆಗಿ ಕೇಳಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಬುಧವಾರ ಸಂಜೆ 6 ಗಂಟೆಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್ ಎರಡನೇ ಇನ್ನಿಂಗ್​ ಆರಂಭವಾಗಲಿದೆ. ಕಿಚ್ಚ ಸುದೀಪ್​ ವೇದಿಕೆ ಏರಿ, ಎಲ್ಲ ಸ್ಪರ್ಧಿಗಳನ್ನು ಸ್ವಾಗತಿಸಲಿದ್ದಾರೆ. ಇದನ್ನು ಮಹಾಸಂಚಿಕೆ ಎಂದು ಕಲರ್ಸ್ ಕನ್ನಡ ವಾಹಿನಿ ಕರೆದಿದ್ದು, ಭರ್ಜರಿ ಮನರಂಜನೆ ಇರಲಿದೆ. ಕೊರೊನಾ ಹಾವಳಿಯಿಂದ ಬಿಗ್ ಬಾಸ್​ ತಾತ್ಕಾಲಿಕವಾಗಿ ನಿಲ್ಲುವುದಕ್ಕಿಂತಲೂ ಕೆಲವು ವಾರ ಮೊದಲೇ ಕಿಚ್ಚ ಸುದೀಪ್​ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು. ಹಾಗಾಗಿ ಅವರು ಕೊನೆಯ ನಾಲ್ಕೈದು ವಾರಗಳ ಎಪಿಸೋಡ್​ನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಅವರನ್ನು ಮತ್ತೆ ಬಿಗ್​ ಬಾಸ್​ ವೇದಿಕೆ ಮೇಲೆ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಇದನ್ನೂ ಓದಿ:

ಬಿಗ್​ ಬಾಸ್​ 2ನೇ ಇನ್ನಿಂಗ್ಸ್ ಶುರುವಿಗೂ ಮುನ್ನ ದಿವ್ಯಾ ಉರುಡುಗಗೆ 5 ಲಕ್ಷ ಜನರ ಬೆಂಬಲ; ಏನಿದು ಲೆಕ್ಕಾಚಾರ?

Bigg Boss Kannada 8: ಬಿಗ್​ ಬಾಸ್​ ಮೊದಲ ದಿನದ ಸಂಚಿಕೆಯಲ್ಲಿ ಏನೆಲ್ಲಾ ಇರಲಿದೆ ಗೊತ್ತಾ?