ಬಿಗ್ ಬಾಸ್ ಫಿನಾಲೆ ಹೊತ್ತಲ್ಲಿ ಪ್ರಸಾರ ಸಮಯ ಬದಲಾವಣೆ; ರಾತ್ರಿ 9 ಗಂಟೆಗೆ ಬರಲಿದೆ ಎಪಿಸೋಡ್

ಬಿಗ್ ಬಾಸ್ ಕನ್ನಡ ಫಿನಾಲೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ವೀಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರದ ಸಮಯ ಬದಲಾಗಿದೆ. ಇನ್ನು ಮುಂದೆ ರಾತ್ರಿ 9:30ರ ಬದಲು ರಾತ್ರಿ 9 ಗಂಟೆಗೆ ಎಪಿಸೋಡ್ ಪ್ರಾರಂಭವಾಗಲಿದೆ ಎಂದು ಕಿಚ್ಚ ಸುದೀಪ್ ಪ್ರಕಟಿಸಿದ್ದಾರೆ. ವೀಕ್ಷಕರು ಯಾವಾಗ ಬೇಕಾದರೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಎಪಿಸೋಡ್ ನೋಡಬಹುದು.

ಬಿಗ್ ಬಾಸ್ ಫಿನಾಲೆ ಹೊತ್ತಲ್ಲಿ ಪ್ರಸಾರ ಸಮಯ ಬದಲಾವಣೆ; ರಾತ್ರಿ 9 ಗಂಟೆಗೆ ಬರಲಿದೆ ಎಪಿಸೋಡ್
ಬಿಗ್ ಬಾಸ್

Updated on: Nov 29, 2026 | 1:08 PM

ಮುಖ್ಯಾಂಶಗಳು

  • ಫಿನಾಲೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಗ್ ಬಾಸ್ ಪ್ರಸಾರ ಸಮಯದಲ್ಲಿ ಬದಲಾವಣೆ
  • ಇನ್ನು ಮುಂದೆ ರಾತ್ರಿ 9:30ರ ಬದಲು ರಾತ್ರಿ 9 ಗಂಟೆಗೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಶುರು
  • ನಿಗದಿತ ಸಮಯದ ಜೊತೆಗೆ ಯಾವಾಗ ಬೇಕಾದರೂ ಎಪಿಸೋಡ್ ನೋಡುವ ಸೌಲಭ್ಯ

ಬಿಗ್ ಬಾಸ್ ಕನ್ನಡ ಫಿನಾಲೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಪ್ರೇಕ್ಷಕರಿಗೆ ಹೊಸ ಅಪ್‌ಡೇಟ್ ಸಿಕ್ಕಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರವಾಗುವ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತು ಕಿಚ್ಚ ಸುದೀಪ್ ಅವರು ಪ್ರೋಮೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಶನಿವಾರದ ಎಪಿಸೋಡ್​​ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ.

9:30ರ ಬದಲು 9 ಗಂಟೆಗೆ ಪ್ರಾರಂಭ

ಇದುವರೆಗೂ ಟಿವಿ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಆಗುತ್ತಿತ್ತು. ವೀಕೆಂಡ್‌ನಲ್ಲಿ 9 ಗಂಟೆಗೆ ಶೋ ಪ್ರಸಾರ ಆಗುತ್ತಿತ್ತು. ಈಗ ವಾರದ ದಿನಗಳಲ್ಲಿನ ಒಟಿಟಿ ಪ್ರಸಾರ ಸಮಯ ಬದಲಿಸಲಾಗಿದೆ ರಾತ್ರಿ 9:30ರ ಬದಲು ರಾತ್ರಿ 9 ಗಂಟೆಗೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಗ್ ಬಾಸ್ ಪ್ರಸಾರ ಶುರುವಾಗಲಿದೆ. ಸುದೀಪ್ ಅವರು ಈ ಸಮಯವನ್ನು ಗಮನಿಸುವಂತೆ ವೀಕ್ಷಕರಿಗೆ ತಿಳಿಸಿದ್ದಾರೆ.

Loading...

ಇದನ್ನೂ ಓದಿ: ಸೇಡು ತೀರಿಸಿಕೊಂಡ ಯಶಸ್; ಇಡೀ ಸೀಸನ್ ನಾಮಿನೇಟ್ ಆದ ಗಗನ್

ಯಾವಾಗ ಬೇಕಾದರೂ ವೀಕ್ಷಣೆಗೆ ಅವಕಾಶ

ನಿಗದಿತ ಸಮಯದ ಜೊತೆಗೆ ವೀಕ್ಷಕರಿಗೆ ಮತ್ತೊಂದು ಅನುಕೂಲವೂ ಇದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ತಮಗೆ ಅನುಕೂಲವಾದಾಗ ಯಾವಾಗ ಬೇಕಾದರೂ ಎಪಿಸೋಡ್ ನೋಡುವ ಅವಕಾಶವಿದೆ ಎಂದು ಪ್ರೋಮೋದಲ್ಲಿ ತಿಳಿಸಲಾಗಿದೆ. ಫಿನಾಲೆ ಹತ್ತಿರವಾಗುತ್ತಿರುವುದರಿಂದ ಈ ಬದಲಾವಣೆ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ.

ಈ ಮೊದಲು ವೂಟ್ ಇದ್ದಾಗ ಟಿವಿಗಿಂತ ಮೊದಲು ಒಟಿಟಿಯಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಕಾಣುತ್ತಿತ್ತು. ಹಾಟ್​​ಸ್ಟಾರ್ ಬಂದ ಬಳಿಕ ಈ ವಿಷಯ ಬದಲಾಗಿತ್ತು. ಟಿವಿ ಹಾಗೂ ಒಟಿಟಿಯಲ್ಲಿ ಒಂದೇ ಸಮಯಕ್ಕೆ ಪ್ರಸಾರ ಕಾಣುತ್ತಿತ್ತು. ಈಗ ಹೊಸ ನಿರ್ಧಾರಕ್ಕೆ ಬರಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us