AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಟಫ್ ಟಾಸ್ಕ್; ಹೈರಾಣಾದ ಸ್ಪರ್ಧಿಗಳು

ಬಿಗ್ ಬಾಸ್ ಮನೆಯಲ್ಲಿ ಟಫ್ ಟಾಸ್ಕ್; ಹೈರಾಣಾದ ಸ್ಪರ್ಧಿಗಳು

ರಾಜೇಶ್ ದುಗ್ಗುಮನೆ
|

Updated on: Oct 14, 2026 | 8:52 AM

Share

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ನೀಡಲಾದ ಕಠಿಣವಾದ ಒಗಟಿನ ಟಾಸ್ಕ್‌ನಿಂದಾಗಿ ಆಟಗಾರರು ಹೈರಾಣಾಗಿದ್ದಾರೆ. ಮುಳ್ಳಿನ ಗೋಳಿನ ಅಡೆತಡೆಗಳನ್ನು ದಾಟುತ್ತಾ, ಈಜುಪೂಲ್ ದಾಟಿ ಪಝಲ್ ತುಂಡುಗಳನ್ನು ಜೋಡಿಸುವ ಈ ಸವಾಲಿನ ಆಟವು ಮನೆಯಲ್ಲಿ ರೋಚಕತೆ ಹಾಗೂ ಕುತೂಹಲವನ್ನು ಸೃಷ್ಟಿಸಿದೆ. ಈ ಪ್ರೋಮೋ ಇಲ್ಲಿದೆ.

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸ್ಪರ್ಧಿಗಳಿಗೆ ಈ ಬಾರಿ ಅತ್ಯಂತ ಕಠಿಣವಾದ ಟಾಸ್ಕ್ ಒಂದನ್ನು ನೀಡಲಾಗಿದೆ. ಹಗ್ಗದ ಮೂಲಕ ಪಜಲ್ ಪೀಸ್ ಹಿಡಿದು ಅಡೆತಡೆಗಳನ್ನು ದಾಟುತ್ತಾ, ಸಮತೋಲನ ಕಾಯ್ದುಕೊಂಡು ಸಾಗುವುದು ಈ ಆಟದ ಮುಖ್ಯ ಸವಾಲಾಗಿದೆ.

ಎದುರಾಳಿ ತಂಡದ ಸದಸ್ಯರು ನೀಡುವ ಅಡೆತಡೆಗಳನ್ನು ತಪ್ಪಿಸಿಕೊಂಡು ಸ್ಪರ್ಧಿಗಳು ಸಾಗಬೇಕಿದೆ. ಈ ಕಠಿಣವಾದ ಟಾಸ್ಕ್‌ನಲ್ಲಿ ಈಜುಕೊಳದಲ್ಲಿ ಪಜಲ್ ಪೀಸ್ ಅನ್ನು ಜೋಡಿಸುವುದು ಕೂಡ ಕಷ್ಟಕರ ಆಗಿದೆ. ಒಂದರ ಹಿಂದೆ ಒಂದರಂತೆ ಎದುರಾಗುವ ಈ ಕಠಿಣ ಸವಾಲುಗಳಿಂದಾಗಿ ಮನೆಯ ಸ್ಪರ್ಧಿಗಳು ಹೈರಾಣಾಗಿದ್ದಾರೆ. ಯಾರು ಈ ಟಾಸ್ಕ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More