Bigg Boss Kannada: ಮನುಷ್ಯತ್ವ ಮರೆತರಾ ಬಿಗ್​ ಬಾಸ್​ ಸ್ಪರ್ಧಿಗಳು? ಎರಡೇ ವಾರಕ್ಕೆ ಅಸಲಿ ಮುಖಗಳು ಬಹಿರಂಗ!

ಇಷ್ಟು ದಿನ ಶಾಂತವಾಗಿದ್ದ ಬಿಗ್​ ಬಾಸ್​ ಮನೆ ಈಗ ರಣಾಂಗಣ ಆಗಿದೆ. ಒಬ್ಬರ ಮೇಲೆ ಇನ್ನೊಬ್ಬರು ಆಕ್ರಮಣ ಮಾಡಿದ್ದು, ಪರಿಸ್ಥಿತಿ ಬೇರೆ ಮಟ್ಟಕ್ಕೆ ಹೋಗಿದೆ.

Bigg Boss Kannada: ಮನುಷ್ಯತ್ವ ಮರೆತರಾ ಬಿಗ್​ ಬಾಸ್​ ಸ್ಪರ್ಧಿಗಳು? ಎರಡೇ ವಾರಕ್ಕೆ ಅಸಲಿ ಮುಖಗಳು ಬಹಿರಂಗ!
ಬಿಗ್​ ಬಾಸ್​ ಕನ್ನಡ ಸೀಸನ್​ 8
Edited By:

Updated on: Mar 10, 2021 | 11:24 AM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ದೊಡ್ಡ ಟ್ವಿಸ್ಟ್​ ಸಿಕ್ಕಿದೆ. 16 ಸ್ಪರ್ಧಿಗಳ ನಡುವೆ ನಡೆಯುತ್ತಿರುವ ಪೈಪೋಟಿಯು ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮನ್ನು ತಾವು ಉಳಿಸಿಕೊಳ್ಳಲು ಇತರೆ ಸ್ಪರ್ಧಿಗಳ ಮೇಲೆ ಆಕ್ರಮಣ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಇದಕ್ಕೆಲ್ಲ ಕಾರಣ ಆಗಿದ್ದು ಆತಂಕಕಾರಿ ವೈರಸ್​!

9ನೇ ದಿನ ಮನೆಯ ಸದಸ್ಯರಿಗೆ ವೈರಸ್​ ವರ್ಸಸ್​ ಮನುಷ್ಯರು ಎಂಬ ಟಾಸ್ಕ್​ ನೀಡಲಾಯಿತು. ವೈರಸ್​ ಮತ್ತು ಮನುಷ್ಯರು ಎಂದು 2 ತಂಡ ಮಾಡಲಾಯಿತು. ವೈರಸ್​ ಟೀಮ್​ನವರು ಮನುಷ್ಯರ ಮೇಲೆ ದಾಳಿ ಮಾಡಬೇಕು. ಅದರಿಂದ ತಪ್ಪಿಸಿಕೊಳ್ಳಲು ಮನುಷ್ಯರು ಪ್ರಯತ್ನಿಸಬೇಕು. ಒಂದು ವೇಳೆ ವೈರಸ್​ ತಗುಲಿಸಿಕೊಂಡರೆ ಕ್ವಾರಂಟೈನ್​ ಆಗಬೇಕು. ಕ್ವಾರಂಟೈನ್​ ಸಮಯದಲ್ಲಿ ವೈರಸ್​ಗಳು ನೀಡುವ ಶಿಕ್ಷೆಯನ್ನು ಮನುಷ್ಯರು ಅನುಭವಿಸಬೇಕು. ಇದು ಆಟದ ರೂಲ್ಸ್​.

ವೈರಸ್​ ಹೆಸರು ಕೇಳುತ್ತಿದ್ದಂತೆಯೇ ಮನೆಯ ಎಲ್ಲ ಸದಸ್ಯರೂ ಅಲರ್ಟ್ ಆದರು. ಆಟವನ್ನು ಕೂಡ ಅಷ್ಟೇ ಗಂಭೀರವಾಗಿ ತೆಗೆದುಕೊಂಡರು. ಆಟ ಆಡುವ ಭರದಲ್ಲಿ ಕೊಂಚ ಅತಿರೇಕ ಎಂಬಂತೆ ಎಲ್ಲರೂ ವರ್ತಿಸಿದ್ದಾರೆ. ವೈರಸ್​ ವರ್ಸಸ್​ ಮನುಷ್ಯರ ಯುದ್ಧದಲ್ಲಿ ನಿರ್ಮಲಾ ಚೆನ್ನಪ್ಪ ಅವರ ಕುತ್ತಿಗೆಗೆ ನೋವಾಯಿತು. ಶಮಂತ್​ಗೆ ಉಸಿರಾಡಲು ಕಷ್ಟ ಆಗುವ ರೀತಿಯಲ್ಲಿ ಪ್ರಶಾಂತ್​ ಸಂಬರಗಿ ನಡೆದುಕೊಂಡರು. ಆಟ ಮುಖ್ಯವೇ ಹೊರತು ಮನೆಯ ಸದಸ್ಯರ ಸುರಕ್ಷೆ ಮುಖ್ಯವಲ್ಲ ಎಂಬ ಮನೋಭಾವದಲ್ಲಿ ಎಲ್ಲರೂ ದಾಳಿ ಮಾಡಿದರು!

ಕ್ವಾರಂಟೈನ್​ ಶಿಕ್ಷೆ ಅನುಭವಿಸಿದ ಗೀತಾ ಭಾರತಿ ಭಟ್​ ಅವರ ಮುಖಕ್ಕೆ ಡಂಬೆಲ್​ ತಾಗಿ ನೋವಾಯಿತು. ದಿವ್ಯಾ ಉರುಡುಗ ಮುಂತಾದವರಿಗೆ ಪರಚಿದ ಗಾಯಗಳಾಗಿವೆ. ಎಲ್ಲರೂ ಆಟ ಆಡಿದ ರೀತಿ ನೋಡಿದರೆ ಅಲ್ಲೇನೋ ರಿಯಲ್​ ಹೊಡೆದಾಟ ನಡೆಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಇದೆಲ್ಲವನ್ನೂ ವೀಕ್ಷಕರು ಉಸಿರು ಬಿಗಿ ಹಿಡಿದು ನೋಡಬೇಕಾಯಿತು! ಈ ಟಾಸ್ಕ್​ನಿಂದಾಗಿ ಒಳಗಿರುವವರ ಅಸಲಿ ಮುಖಗಳು ಅನಾವರಣ ಆಗಿವೆ. ಇಷ್ಟು ದಿನ ಟಾಸ್ಕ್​ ಮುಗಿದ ಬಳಿಕ ಒಂದಾಗುತ್ತಿದ್ದ ಎಲ್ಲರೂ 9ನೇ ದಿನ ಮಾತ್ರ ಟಾಸ್ಕ್​ ನಂತರವೂ ಮುಖ ಗಂಟು ಹಾಕಿಕೊಂಡಿದ್ದರು!

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಆತಂಕಕಾರಿ ವೈರಸ್​? ನಿರ್ಮಲಾ ಚೆನ್ನಪ್ಪ ಅಸ್ವಸ್ಥ

Bigg Boss Kannada: ಮಂಜುಗೆ ‘ಐ ಲವ್​ ಯೂ’ ಎಂದ ದಿವ್ಯಾ ಉರುಡುಗ! ಬಿಗ್​ ಬಾಸ್​ನಲ್ಲಿ ಏನು ನಡೀತಾ ಇದೆ?

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us