ಐಶ್ವರ್ಯಾ ರೈ ಪುತ್ರಿ ಆರಾಧ್ಯಾಳ ಹುಟ್ಟುಹಬ್ಬ ಪಾರ್ಟಿಯಲ್ಲಿ ಭಾಗವಹಿಸಿ ಶುಭಕೋರಿದ ಬಾಲಿವುಡ್​ ಸೆಲಿಬ್ರಿಟಿಗಳು

ಆರಾಧ್ಯಾ ಬಚ್ಚನ್ ಹುಟ್ಟುಹಬ್ಬ ಪಾರ್ಟಿಗೆ ಬಾಲಿವುಡ್​ನ ಕೆಲ ನಟ, ನಟಿಯರು ಭಾಗವಹಿಸಿ ಶುಭಹಾರೈಸಿದ್ದಾರೆ.

ಐಶ್ವರ್ಯಾ ರೈ ಪುತ್ರಿ ಆರಾಧ್ಯಾಳ ಹುಟ್ಟುಹಬ್ಬ ಪಾರ್ಟಿಯಲ್ಲಿ ಭಾಗವಹಿಸಿ ಶುಭಕೋರಿದ ಬಾಲಿವುಡ್​ ಸೆಲಿಬ್ರಿಟಿಗಳು
ಆರಾಧ್ಯಾಳ ಹುಟ್ಟುಹಬ್ಬ ಪಾರ್ಟಿಯಲ್ಲಿ ಭಾಗವಹಿಸಿದ ಸೆಲಿಬ್ರಿಟಿಗಳು
Edited By:

Updated on: Nov 20, 2022 | 9:19 AM

ನಟಿ ಐಶ್ವರ್ಯಾ ರೈ (Aishwarya Rai Bachchan) ಹಾಗೂ ನಟ ಅಭಿಷೇಕ್​ ಬಚ್ಚನ್​ ದಂಪತಿಯ ಪುತ್ರಿ ಆರಾಧ್ಯಾ ಬಚ್ಚನ್​ (Aaradhya Bachchan) ನ.16 ರಂದು ತಮ್ಮ 11ನೇ ವರ್ಷದ ಹುಟ್ಟುಹಬ್ಬವನ್ನು ಮುಂಬೈನ ನಿವಾಸದಲ್ಲಿ ಬಹಳ ಸಡಗರದಿಂದ ಆಚರಿಸಿಕೊಂಡಿದ್ದಾರೆ. ಆರಾಧ್ಯಾ ಬಚ್ಚನ್ ಹುಟ್ಟುಹಬ್ಬ ಪಾರ್ಟಿಗೆ ಬಾಲಿವುಡ್​ನ ಕೆಲ ನಟ, ನಟಿಯರು ಭಾಗವಹಿಸಿ ಆರಾಧ್ಯಾಳಿಗೆ ಶುಭಹಾರೈಸಿದ್ದಾರೆ. ಸದ್ಯ ಹುಟ್ಟುಹಬ್ಬ ಪಾರ್ಟಿಯಲ್ಲಿ ಹಾಜರಾದ ಸೆಲಿಬ್ರಿಟಿಗಳ ವಿಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪಾಪರಾಜಿಗಳಿಂದ ವಿಡಿಯೋಗಳನ್ನು ಹಂಚಿಕೊಂಡಿದ್ದು, ನಟಿ ಐಶ್ವರ್ಯಾ ರೈ ಅವರ ತಾಯಿ ಬೃಂದ್ಯಾ ರೈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಬೃಂದ್ಯಾ ರೈ ವಾಪಸ್​​ ಮನೆಗೆ ಹೋಗುವಾಗ ಐಶ್ವರ್ಯಾ ರೈ ಮತ್ತು ಅಭಿಷೇಕ್​ ಬಚ್ಚನ್ ಅವರನ್ನು ಕಾರಿನವರೆಗೆ ಕರೆದುಕೊಂಡು ಬಂದರು. ಬಳಿಕ ಐಶ್ವರ್ಯಾ ಅವರನ್ನು ತಬ್ಬಿಕೊಂಡು ಚುಂಬಿಸಿದರು. ಅಭಿಷೇಕ್ ಅವರಿಗೂ ಕೂಡ ಅತ್ತೆ ಬೃಂದ್ಯಾ ರೈ ಮುತ್ತು ನೀಡಿದರು. ನಂತರ ಅವರನ್ನು ಕಳುಹಿಸಿಕೊಡಲಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ಆರಾಧ್ಯಾಳ ಹುಟ್ಟುಹಬ್ಬ ಪಾರ್ಟಿಯಲ್ಲಿ ನಟಿ ಜೆನಿಲಿಯಾ ದೇಶಮುಖ್ ಮತ್ತು ಅವರ ಮಕ್ಕಳಾದ ರಿಯಾನ್ ಮತ್ತು ರಹಿಲ್ ಕೂಡ ಭಾಗವಹಿಸಿದ್ದರು. ಇವರು ಕೂಡ ಮನೆಯಿಂದ ನಿರ್ಗಮಿಸುವಾಗ ಜೆನಿಲಿಯಾ ಅವರನ್ನು ಐಶ್ವರ್ಯಾ ರೈ ತಬ್ಬಿಕೊಂಡರು. ಬಳಿಕ ಅವರನ್ನು ಕಳುಹಿಸಿಕೊಟ್ಟರು. ನಟಿ ಸೋನಾಲಿ ಬೇಂದ್ರೆ ಮತ್ತು ಪತಿ ಗೋಲ್ಡಿ ಬೆಹ್ಲ್ ಕೂಡ ಕಾಣಿಸಿಕೊಂಡರು. ಬಂಟಿ ವಾಲಿಯಾ ಹಾಗೂ ಪತ್ನಿ ವನೆಸ್ಸಾ ಪರ್ಮಾರ್ ಮತ್ತು ಅವರ ಮಕ್ಕಳು ಸಹ ಹುಟ್ಟುಹಬ್ಬ ಪಾರ್ಟಿಯಲ್ಲಿ ಕಾಣಿಸಿಕೊಂಡರು. ಹೀಗೆ ವೈರಲ್​ ಆದ ಒಂದು ಫೋಟೋದಲ್ಲಿ ನಟ ಅಮಿತಾಭ್ ಬಚ್ಚನ್​​ ಪುತ್ರಿ ಶ್ವೇತಾ ಬಚ್ಚನ್ ಕೂಡ ಮನೆಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ.

ಮಗಳ ತುಟಿಗೆ ಸಿಹಿ ಮುತ್ತು ನೀಡುವ ಮೂಲಕ ವಿಶೇಷವಾಗಿ ಶುಭ ಕೋರಿದ ಐಶ್ವರ್ಯಾ ರೈ 

ಮಗಳು ಆರಾಧ್ಯಾ ಬಚ್ಚನ್​​ 11ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ನಟಿ ಐಶ್ವರ್ಯಾ ರೈ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ವಿಶೇಷವಾಗಿ ಶುಭಕೋರಿದ್ದರು. ಮಗಳ ತುಟಿಗೆ ಸಿಹಿ ಮುತ್ತು ನೀಡುವ ಮೂಲಕ ಅವರು ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ‘ನನ್ನ ಪ್ರೀತಿ.. ನನ್ನ ಜೀವನ.. ನನ್ನ ಆರಾಧ್ಯ.. ಐ ಲವ್​ ಯೂ’ ಎಂದು ಈ ಫೋಟೋಗೆ ಐಶ್ವರ್ಯಾ ರೈ ಕ್ಯಾಪ್ಷನ್​ ಕೂಡ ನೀಡಿದ್ದರು. ಆ ಫೋಟೋ ಎಲ್ಲೆಡೆ ವೈರಲ್​ ಆಗಿತ್ತು. ಅಭಿಮಾನಿಗಳು ಆ ಫೋಟೋವನ್ನು ಇಷ್ಟಪಟ್ಟರೆ, ಒಂದು ವರ್ಗದ ನೆಟ್ಟಿಗರು ತಕರಾರು ತೆಗೆದಿದ್ದರು. ಈ ರೀತಿ ಕಿಸ್ ಮಾಡುವುದು ಸರಿಯಲ್ಲ ಎಂದು ಒಂದಷ್ಟು ಮಂದಿ ಕೊಂಕು ನುಡಿದ್ದರು. ಈ ವಿಚಾರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಕೂಡ ಆಗಿದೆ. ಅಭಿಮಾನಿಗಳು ಮಾತ್ರ ಐಶ್ವರ್ಯಾ ರೈ ಪರ ನಿಂತಿದ್ದರು.

Published On - 9:18 am, Sun, 20 November 22