AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಾಂತ್ ಸಂಬರ್ಗಿಗೆ ಹೊಸ ಬಿರುದು ಕೊಟ್ಟ ಕಿಚ್ಚ ಸುದೀಪ್​; ಮನೆಯವರಿಗೆ ನಗುವೋ ನಗು

ಕಿಚ್ಚ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳಿಗೆ ಸರ್​ಪ್ರೈಸ್ ನೀಡಿದ್ದರು. ವಿವಿಧ ರೀತಿಯ ಅಡುಗೆ ಮಾಡಿ ಸ್ಪರ್ಧಿಗಳಿಗೆ ಕಳುಹಿಸಿದ್ದರು. ಇದನ್ನು ನೋಡಿ ಮನೆ ಮಂದಿ ಸಖತ್ ಖುಷಿ ಆದರು.

ಪ್ರಶಾಂತ್ ಸಂಬರ್ಗಿಗೆ ಹೊಸ ಬಿರುದು ಕೊಟ್ಟ ಕಿಚ್ಚ ಸುದೀಪ್​; ಮನೆಯವರಿಗೆ ನಗುವೋ ನಗು
ಸುದೀಪ್-ಪ್ರಶಾಂತ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Nov 19, 2022 | 9:32 PM

Share

‘ಕನ್ನಡ ಬಿಗ್ ಬಾಸ್ ಸೀಸನ್ 9’ (BBK 9) 50 ದಿನ ಪೂರ್ಣಗೊಳಿಸಿ ಮುಂದೆ ಸಾಗುತ್ತಿದೆ. ಸದ್ಯ ಮನೆಯಲ್ಲಿ 12 ಸ್ಪರ್ಧಿಗಳು ಇದ್ದಾರೆ. ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ಇದೆ. ಕಿಚ್ಚ ಸುದೀಪ್ ಅವರು ಎಂದಿನಂತೆ ತಮ್ಮ ಸ್ಟೈಲ್​​ನಲ್ಲಿ ನಿರೂಪಣೆ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ಕೆಲ ಸ್ಪರ್ಧಿಗಳಿಗೆ ನಿಕ್​ ನೇಮ್​ ಇಟ್ಟಿದ್ದಾರೆ. ಈಗ ಪ್ರಶಾಂತ್ ಸಂಬರ್ಗಿಗೆ (Prashanth Sambargi) ಕಿಚ್ಚ ಸುದೀಪ್ ಅವರು ಹೊಸ ಹೆಸರು ಇಟ್ಟಿದ್ದಾರೆ. ಇದನ್ನು ಕೇಳಿ ಮನೆ ಮಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಕಿಚ್ಚ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳಿಗೆ ಸರ್​ಪ್ರೈಸ್ ನೀಡಿದ್ದರು. ವಿವಿಧ ರೀತಿಯ ಅಡುಗೆ ಮಾಡಿ ಸ್ಪರ್ಧಿಗಳಿಗೆ ಕಳುಹಿಸಿದ್ದರು. ಇದನ್ನು ನೋಡಿ ಮನೆ ಮಂದಿ ಸಖತ್ ಖುಷಿ ಆದರು. ವಿಶೇಷ ಎಂದರೆ ಎಲ್ಲಾ ಸ್ಪರ್ಧಿಗಳಿಗೆ ಒಂದು ಚಿಕ್ಕ ನೋಟ್ ಕೂಡ ಕಳುಹಿಸಿದ್ದರು ಸುದೀಪ್. ಇದರಲ್ಲಿ ಕೆಲವರಿಗೆ ಕಿವಿಮಾತು ಕೂಡ ಹೇಳಿದ್ದರು.

ಪ್ರಶಾಂತ್ ಸಂಬರ್ಗಿ ಅವರಿಗೆ ಸುದೀಪ್ ಅವರು ‘ಗಂಟಲ್​​​ಮ್ಯಾನ್​’ ಎಂದು ಬಿರುದು ನೀಡಿದ್ದಾರೆ. ಕಳೆದ ವಾರ ಪ್ರಶಾಂತ್ ಸಂಬರ್ಗಿ ಅವರು ತುಂಬಾನೇ ಕೂಗಾಡಿದ್ದರು. ರೂಪೇಶ್ ಶೆಟ್ಟಿ ವಿರುದ್ಧ ಸಾಕಷ್ಟು ಸಿಟ್ಟಾಗಿದ್ದರು. ಅವರ ನಡುವೆ ನಡೆದ ವಾಗ್ವಾದ ಮನೆ ಮಂದಿಯಲ್ಲಿ ಭಯ ಮೂಡಿಸಿತ್ತು. ಪ್ರಶಾಂತ್ ಸಂಬರ್ಗಿ ಅವರ ಧ್ವನಿ ಕೂಡ ಬಿದ್ದು ಹೋಗಿದೆ. ಈ ಕಾರಣಕ್ಕೆ ಕಿಚ್ಚ ಸುದೀಪ್ ಅವರು ‘ಗಂಟಲ್​​​ಮ್ಯಾನ್​’ ಎಂಬ ಬಿರುದು ನೀಡಿದ್ದಾರೆ.

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಅಡುಗೆ ಮಾಡಿದ ಕಿಚ್ಚ 

ಕಿಚ್ಚ ಸುದೀಪ್ ಅವರು ಕಿಚನ್​ನಲ್ಲಿ ಅಡುಗೆ ಮಾಡುತ್ತಿರುವುದು, ಮಾಡಿದ ಅಡುಗೆಯನ್ನು ಮನೆಯವರಿಗೆ ಕಳುಹಿಸಿದ್ದು, ಮನೆ ಮಂದಿ ಅದನ್ನು ಸವಿದು ಖುಷಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸ್ಪರ್ಧಿಗಳಂತೂ ಕಿಚ್ಚನ ಕೈರುಚಿ ಸವಿದು ಸಖತ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ ಮನೆಯಲ್ಲಿ ಒಪ್ಪಂದಗಳಿಗಿಲ್ಲ ಬೆಲೆ; ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ತೆಗೆದುಕೊಳ್ಳಲಿದ್ದಾರೆ ಕ್ಲಾಸ್?

ಈ ವಾರ ಗೊಂಬೆ ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಆಟದಿಂದ ಎಲ್ಲರೂ ದಣಿದಿದ್ದಾರೆ. ಅಲ್ಲದೆ, ಮನೆಯಲ್ಲಿ ದಿನಸಿ ಕಡಿಮೆ ಇತ್ತು. ಇದು ಸ್ಪರ್ಧಿಗಳ ಚಿಂತೆ ಹೆಚ್ಚಿಸಿತ್ತು. ವಾರಾಂತ್ಯಕ್ಕೆ ಉಪವಾಸ ಇರುವ ಪರಿಸ್ಥಿತಿ ಬಂದೊದಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ಕಿಚ್ಚ ಸುದೀಪ್ ಅವರ ಕೈರುಚಿ ಸವಿಯುವ ಅವಕಾಶ ಸ್ಪರ್ಧಿಗಳಿಗೆ ಸಿಕ್ಕಿದೆ.