AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ ಮನೆಯಲ್ಲಿ ಒಪ್ಪಂದಗಳಿಗಿಲ್ಲ ಬೆಲೆ; ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ತೆಗೆದುಕೊಳ್ಳಲಿದ್ದಾರೆ ಕ್ಲಾಸ್?

ಈ ರೂಲ್ಸ್ ಮಾಡಿದ ಕೆಲವೇ ನಿಮಿಷಕ್ಕೆ ಇದನ್ನು ಬ್ರೇಕ್ ಮಾಡಿದರು ರಾಕೇಶ್ ಅಡಿಗ. ಎದುರಾಳಿ ತಂಡದ ದಿವ್ಯಾ ಉರುಡುಗ ಬಳಿ ಹೋಗಿ ಗೊಂಬೆಯನ್ನು ಕದ್ದು ತಂದರು. ಇದರಿಂದ ರೂಪೇಶ್ ಶೆಟ್ಟಿ ಮೊದಲಾದವರು ಸಿಟ್ಟಾದರು.

ಬಿಗ್ ಬಾಸ್​ ಮನೆಯಲ್ಲಿ ಒಪ್ಪಂದಗಳಿಗಿಲ್ಲ ಬೆಲೆ; ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ತೆಗೆದುಕೊಳ್ಳಲಿದ್ದಾರೆ ಕ್ಲಾಸ್?
ಸುದೀಪ್
TV9 Web
| Edited By: |

Updated on:Nov 16, 2022 | 7:25 AM

Share

ಬಿಗ್ ಬಾಸ್ (Bigg Boss) ಆಗಾಗ ರಣರಂಗ ಆಗುತ್ತಲೇ ಇರುತ್ತದೆ. ಅನೇಕ ಸ್ಪರ್ಧಿಗಳ ಮಧ್ಯೆ ಕಿತ್ತಾಟಗಳು ನಡೆಯುತ್ತಲೇ ಇರುತ್ತವೆ. ಕೆಲವು ಬಾರಿ ಒಪ್ಪಂದ ಮಾಡಿಕೊಂಡ ಮರುಕ್ಷಣವೇ ಬ್ರೇಕ್ ಆಗುತ್ತದೆ. ಈ ವಿಚಾರದಲ್ಲಿ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಅನೇಕ ಬಾರಿ ಕ್ಲಾಸ್ ತೆಗೆದುಕೊಂಡಿದ್ದೂ ಇದೆ. ಈ ವಾರ ಸ್ಪರ್ಧಿಗಳು ಮತ್ತದೇ ತಪ್ಪು ಮಾಡಿದ್ದಾರೆ. ಇದರಿಂದ ವೀಕೆಂಡ್ ಸಂದರ್ಭದಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳುವುದು ಪಕ್ಕಾ ಆಗಿದೆ.

ಈ ವಾರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಒಂದನ್ನು ನೀಡಲಾಗಿದೆ. ಈ ಸ್ಪರ್ಧೆಯ ಪ್ರಕಾರ ಎರಡು ಟೀಂ ಮಾಡಲಾಗಿದೆ. ಪ್ರತೀ ಟೀಂನವರು ಬಿಗ್ ಬಾಸ್ ನೀಡಿದ ವಸ್ತುಗಳನ್ನು ಬಳಸಿ ಗೊಂಬೆ ತಯಾರಿಸಬೇಕು. ಈ ಟಾಸ್ಕ್​ ಆರಂಭ ಆಗುವುದಕ್ಕೂ ಮುನ್ನ ಮನೆಯವರೇ ಕೆಲ ನಿಯಮಗಳನ್ನು ಹಾಕಿಕೊಂಡಿದ್ದರು. ಟೀಂನ ಒಬ್ಬರು ಕಾಯಲು ಇದ್ದಾಗ ಗೊಂಬೆಯನ್ನು ಕದಿಯಬಾರದು ಎಂದು ರೂಲ್ಸ್ ಮಾಡಿಕೊಂಡರು.

ಈ ರೂಲ್ಸ್ ಮಾಡಿದ ಕೆಲವೇ ನಿಮಿಷಕ್ಕೆ ಇದನ್ನು ಬ್ರೇಕ್ ಮಾಡಿದರು ರಾಕೇಶ್ ಅಡಿಗ. ಎದುರಾಳಿ ತಂಡದ ದಿವ್ಯಾ ಉರುಡುಗ ಬಳಿ ಹೋಗಿ ಗೊಂಬೆಯನ್ನು ಕದ್ದು ತಂದರು. ಇದರಿಂದ ರೂಪೇಶ್ ಶೆಟ್ಟಿ ಮೊದಲಾದವರು ಸಿಟ್ಟಾದರು. ಇದಾದ ನಂತರ ಮಾಡಿದ ರೂಲ್ಸ್ ಎಲ್ಲವನ್ನೂ ಬ್ರೇಕ್ ಮಾಡುವ ನಿರ್ಧಾರಕ್ಕೆ ಬರಲಾಯಿತು.

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

‘ಬಿಗ್ ಬಾಸ್ ಮನೆಯಲ್ಲಿ ಯಾವುದೇ ರೂಲ್ಸ್​ ಇಲ್ಲ’ ಎಂದು ಘೋಷಿಸಿದರು ಒಂದು ತಂಡದ ಕ್ಯಾಪ್ಟನ್ ಅರುಣ್ ಸಾಗರ್. ಇದರಿಂದ ಮನೆಯಲ್ಲಿ ಕಿತ್ತಾಟ ಶುರುವಾಯಿತು. ಪ್ರಶಾಂತ್ ಸಂಬರ್ಗಿ ಹಾಗೂ ವಿನೋದ್ ಗೊಬ್ಬರಗಾಲ ಮಧ್ಯೆ ಕಿತ್ತಾಟ ಶುರುವಾಯ್ತು. ಅನುಪಮಾ ಗೌಡ ಅವರು ‘ನನ್ನ ಕೂದಲನ್ನು ಗೊಬ್ಬರ ಎಳೆದ. ನಾನು ಎಲ್ಲರ ಹಾಗೆ ಮಾಡ್ತೀನಿ’ ಎಂದು ಎಚ್ಚರಿಕೆ ನೀಡಿದರು. ಅಮೂಲ್ಯ ಗೌಡ ಕೂಡ ಇದೇ ರೀತಿಯ ಆರೋಪ ಮಾಡಿದರು. ಇದರಿಂದ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ವೈಲೆಂಟ್ ಆದರು.

ಇದನ್ನೂ ಓದಿ: ಹೀಗೆ ಮುಂದುವರಿದ್ರೆ ರಾಕೇಶ್ ಅಡಿಗ ಬಿಗ್ ಬಾಸ್ ವಿನ್ನರ್? ಸ್ಪರ್ಧಿಗಳಿಗೆ ಶುರುವಾಯ್ತು ಭಯ

ವೀಕೆಂಡ್​ ವೇಳೆ ಈ ವಿಚಾರದಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳಬಹುದು. ಶಾಂತ ರೀತಿಯಿಂದ ನಡೆಯಬೇಕಿದ್ದ ಸ್ಪರ್ಧೆಯನ್ನು ರಣರಂಗ ಮಾಡಿದ್ದಕ್ಕೆ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಬಹುದು.

Published On - 10:03 pm, Tue, 15 November 22

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?