ಝೇಂಡೆಯ ಅಕ್ರಮದ ಜಾಡು ಹಿಡಿದು ಹೊರಟ ಸಂಜು; ಆತನಿಗೆ ಇದೆ ಪ್ರಾಣಾಪಾಯ
ಸಂಪಿಗೆಪುರದಲ್ಲಿರುವ ಒಂದು ಪ್ರಾಪರ್ಟಿ ಕಳೆದ ವರ್ಷ ವರ್ಧನ್ ಕಂಪನಿಗೆ ಸೇರಿತ್ತು. ಆದರೆ, ಈ ಬಾರಿ ಅದು ವರ್ಧನ್ ಕಂಪನಿಗೆ ಸೇರಿಲ್ಲ. ಇದು ಯಾರಿಗೆ ಮಾರಾಟವಾಗಿದೆ ಎನ್ನುವ ವಿಚಾರದಲ್ಲಿ ಸಂಜುಗೆ ಕುತೂಹಲ ಮೂಡಿದೆ.
ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಇನ್ಕಮ್ ಟ್ಯಾಕ್ಸ್ಗೆ ಸಂಬಂಧಿಸಿದ ಫೈಲ್ಗಳನ್ನು ನೀಡಿ ಅದನ್ನು ಪರಿಶೀಲಿಸುವಂತೆ ಸಂಜುಗೆ ಮೀರಾ ಹೆಗ್ಡೆ ಸೂಚನೆ ನೀಡಿದ್ದಳು. ಈ ಫೈಲ್ಗಳನ್ನು ಆತ ಕೂಲಂಕುಶವಾಗಿ ವಿಚಾರಣೆ ಮಾಡಿದ್ದ. ಈ ವೇಳೆ ಆತನಿಗೆ ಕೆಲವು ಹಗರಣಗಳು ಗಮನಕ್ಕೆ ಬಂದಿದ್ದವು. ಇದನ್ನು ಅನು ಬಳಿ ಹೇಳಿದ್ದ ಸಂಜು. ಈ ವಿಚಾರ ತಿಳಿದು ಅನು ಶಾಕ್ ಆಗಿದ್ದಾಳೆ. ಇದನ್ನು ನಂಬೋಕೆ ಆಕೆಗೆ ಸಾಧ್ಯವೇ ಆಗುತ್ತಿಲ್ಲ.
ಕಳ್ಳರ ಜಾಡು ಹಿಡಿದು ಹೊರಟ ಸಂಜು
ಸಂಜು ಈಗ ಫೀಲ್ಡ್ಗೆ ಇಳಿದಿದ್ದಾನೆ. ವರ್ಧನ್ ಕಂಪನಿಯಲ್ಲಿ ಏನೋ ಹಗರಣ ಆಗಿದೆ ಎಂಬುದು ಆತನಿಗೆ ಗೊತ್ತಾಗಿದೆ. ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ಗೆ ಸಂಬಂಧಿಸಿದ ಫೈಲ್ಗಳನ್ನು ಪರಿಶೀಲಿಸಿದಾಗ ಈ ವಿಚಾರ ಬಯಲಿಗೆ ಬಂದಿತ್ತು. ಇದರ ಜಾಡು ಹಿಡಿದು ಹೊರಟಿದ್ದಾನೆ ಸಂಜು.
ಸಂಪಿಗೆಪುರದಲ್ಲಿರುವ ಒಂದು ಪ್ರಾಪರ್ಟಿ ಕಳೆದ ವರ್ಷ ವರ್ಧನ್ ಕಂಪನಿಗೆ ಸೇರಿತ್ತು. ಆದರೆ, ಈ ಬಾರಿ ಅದು ವರ್ಧನ್ ಕಂಪನಿಗೆ ಸೇರಿಲ್ಲ. ಇದು ಯಾರಿಗೆ ಮಾರಾಟವಾಗಿದೆ ಎನ್ನುವ ವಿಚಾರದಲ್ಲಿ ಸಂಜುಗೆ ಕುತೂಹಲ ಮೂಡಿದೆ. ಹೀಗಾಗಿ ಅದನ್ನು ಹುಡುಕಿ ಸಂಜು ಹೊರಟಿದ್ದಾನೆ.
ಅರ್ಧದಾರಿಯಲ್ಲಿ ಎದುರಾದ ಝೇಂಡೆ
ಸಂಪಿಗೆಪುರ ಬಳಿ ತೆರಳಿ ಅಲ್ಲಿರುವ ಪ್ರಾಪರ್ಟಿ ಯಾವುದು ಎಂಬುದನ್ನು ಸಂಜು ಹುಡುಕುತ್ತಿದ್ದ. ಆ ಸಮಯಕ್ಕೆ ಸರಿಯಾಗಿ ಝೇಂಡೆ ಆಗಮನ ಆಗಿದೆ. ತಾನು ಯಾರು? ತನ್ನ ಹಿನ್ನೆಲೆ ಏನು ಎಂಬುದನ್ನು ಆತ ಹೇಳಿಕೊಂಡಿದ್ದ. ‘ನಾನು ಆರ್ಯವರ್ಧನ್ಗೆ ತುಂಬಾನೇ ಕ್ಲೋಸ್ ಆಗಿದ್ದೆ. ಆದರೆ, ವರ್ಧನ್ ಕುಟುಂಬದವರು ಆರ್ಯನ ಸಾಯಿಸಿದರು. ಈಗ ಕೇಸ್ ಮುಚ್ಚಿ ಹಾಕುತ್ತಿದ್ದಾರೆ. ಆತನ ಜತೆ ನಾನು 10 ವರ್ಷ ಇದ್ದಾಗಿನಿಂದ ಅವನ ಜತೆ ಇದ್ದೆ. ಈಗ ನನ್ನನ್ನೇ ಕಂಪನಿಯಿಂದ ಹೊರಗೆ ಇಟ್ಟಿದ್ದಾರೆ’ ಎಂದು ಝೇಂಡೆ ಬೆಣ್ಣೆ ಹಚ್ಚುವ ಮಾತುಗಳನ್ನು ಆಡಿದ್ದಾನೆ.
ಇದಾದ ನಂತರ ಸಂಜು ವರ್ಧನ್ ಕಂಪನಿಗೆ ಸೇರಿದ್ದ ಪ್ರಾಪರ್ಟಿಯನ್ನು ಹುಡುಕಿದ್ದಾನೆ. ಆ ಪ್ರಾಪರ್ಟಿಯ ಫೋಟೋಗಳನ್ನು ಆತ ಕ್ಲಿಕ್ಕಿಸಿಕೊಂಡಿದ್ದಾನೆ. ಇದನ್ನು ಝೇಂಡೆ ದೂರದಲ್ಲೇ ನಿಂತು ವೀಕ್ಷಿಸಿದ್ದಾನೆ. ಈತನಿಂದ ಉಳಿಗಾಲ ಇಲ್ಲ ಎಂಬುದು ಆತನಿಗೆ ಖಚಿತವಾಗಿದೆ. ಸಂಜು ಪ್ರಾಣಕ್ಕೆ ಸಂಚಕಾರ ಬರೋದು ಪಕ್ಕಾ ಆಗಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಆರಾಧನಾಗೆ ಬಂತು ಅನುಮಾನ
ಆರಾಧನಾಳನ್ನು ಆಕೆಯ ವಿಶ್ವ ತುಂಬಾನೇ ಪ್ರೀತಿ ಮಾಡುತ್ತಿದ್ದ. ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಮುಖದ ಚರ್ಮವನ್ನು ಆರ್ಯವರ್ಧನ್ಗೆ (ಸಂಜು) ಹಾಕಲಾಗಿದೆ. ಹೀಗಾಗಿ, ಆರ್ಯವರ್ಧನ್ ವಿಶ್ವನ ರೀತಿಯೇ ಕಾಣುತ್ತಿದ್ದಾನೆ. ಎಲ್ಲರೂ ಆತನೇ ವಿಶ್ವ ಎಂದು ಭಾವಿಸಿದ್ದಾರೆ. ಈ ವಿಚಾರದಲ್ಲಿ ವಿಶ್ವನ ಪತ್ನಿ ಆರಾಧನಾಳಿಗೆ ಅನುಮಾನ ಬಂದಿದೆ.
ರಾಜ ನಂದಿನಿ ವಿಲಾಸಕ್ಕೆ ಆರಾಧನಾ ಬಂದಿದ್ದಾಳೆ. ಅಲ್ಲಿ ವಿಶ್ವ (ಸಂಜು) ಆಕೆಯನ್ನು ಅವಾಯ್ಡ್ ಮಾಡುತ್ತಿದ್ದಾನೆ. ಹೀಗೇಕೆ ಎನ್ನುವ ಪ್ರಶ್ನೆ ಆಕೆ ತನಗೆ ತಾನೇ ಕೇಳಿಕೊಂಡಿದ್ದಾಳೆ. ವಿಶ್ವನ ತಾಯಿ ಪ್ರಿಯಾ ಈ ವಿಚಾರದಲ್ಲಿ ಏನನ್ನೋ ಮುಚ್ಚಿಡುತ್ತಿದ್ದಾಳೆ ಎಂಬುದು ಆಕೆಗೆ ಖಚಿತವಾಗಿದೆ.
ಅನು ಗೆಳತಿಗೆ ಗೊತ್ತಾಯ್ತು ಝೇಂಡೆ ವಿಚಾರ
ಸಂಪಿಗೆಪುರದ ಪ್ರಾಪರ್ಟಿ ಯಾರ ಹೆಸರಿಗೆ ವರ್ಗಾವಣೆ ಆಗಿದೆ ಎಂಬ ವಿಚಾರದಲ್ಲಿ ಅನು ಗೆಳೆತಿ ತನಿಖೆ ಮಾಡಿದ್ದಾಳೆ. ಆಗ ಆಕೆಗೆ ಅಸಲಿ ವಿಚಾರ ಗೊತ್ತಾಗಿದೆ. ಝೇಂಡೆ ಹೆಸರಲ್ಲಿ ಪ್ರಾಪರ್ಟಿ ಇದೆ ಎಂಬುದು ಆಕೆಗೆ ತಿಳಿದು ಹೋಗಿದೆ. ಈ ವಿಚಾರವನ್ನು ಅನು ಬಳಿ ಹೇಳಲು ಆಕೆ ನಿರ್ಧರಿಸಿದ್ದಾಳೆ.
ಶ್ರೀಲಕ್ಷ್ಮಿ ಎಚ್.